
ಅಂತರಾಳ-ಮಹಿಳಾ ಅಂಕಣ
ಅಂತರಾಳ ಮಳೆ ಮೋಡಗಳ ಅಬ್ಬರವೆಲ್ಲ ಅಡಗಿ ಆಕಾಶ ಈಗ ತಿಳಿಯಾಗಿದೆ. ಶರದೃತುವಿನ ಈ ಸಮಯದಲ್ಲಿ ದಸರಾ ದೀಪಾವಳಿ ಹಬ್ಬಗಳಲ್ಲಿ ಮುಳುಗೇಳುವ ಜನರಿಗೆ ಇದು ಸಂಭ್ರಮಿಸುವ ಸಮಯ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆ ಯರಿಗೆ ಹಬ್ಬದ ಸಂಭ್ರಮವನ್ನು ಮತ್ತು ಕಳೆಯನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವ ಸಮಯ. ಹಬ್ಬಕ್ಕೆಂದು ಸೀರೆ, ಉಡುಪುಗಳ ಮತ್ತು ಚಿನ್ನಾಭರಣಗಳ ಖರೀದಿಗಾಗಿ ಬರುವ ಮಹಿಳೆಯರಿಂದ ಅಂಗಡಿಗಳು ತುಂಬಿವೆ. ಅರಳಿದ ಹೂಗಳಿಗೆ ದುಂಬಿ ಗಳು ಮುತ್ತುವಂತೆ ಹೊಸವಿನ್ಯಾಸದ ಆಭರಣಗಳತ್ತ ಮಹಿಳೆಯರ ದೃಷ್ಟಿ ಸರಿಯುತ್ತಿದೆ. ಉಟ್ಟು…