ಜೊತೆಯಲ್ಲಿ ಯಾರು….?
ಯಾರಿಗೆ ಯಾರು
ಜೀವದ ಜೊತೆಯಲ್ಲಿ
ನಿಲ್ಲುವವರು ಯಾರು !!
ಎಲ್ಲಿಯೋ ಜನನ
ಎಲ್ಲಿಯೋ ಮರಣ
ಜೀವದ ನಂಟಿಗೆ
ಭ್ರಮನ ಗಂಟಿಗೆ
ಯಾರು ಕಾರಣ !!
ಹೆಣದ ಹಿOದೆ
ಸಾಲು ಸಾಲು ಮಂದೆ
ಕಣ್ಣಿರು ಹಾಕ್ಯಾರು
ಜನರ ಮುಂದೆ !!
ವಿಧಿಯ ಕರೆಗೆ
ಸಾವಿನ ಮೊರೆಗೆ
ಬಿದಿರಿನ ಮೇಲೆ ಮೆರವಣಿಗೆ
ಇದುವೇ ಜೀವದ ಕೊನೆಯ ತೋರಣ !!
ಜೀವದ ಜೊತೆಯಲ್ಲಿ ಯಾರು……….?
ಎಸ್.ಪಟೇಲ್
ಕವಿ.
ರಚನೆ ವರ್ಷ: ಮಾರ್ಚ-2002.
ಸಂಪಾದಕರು, ಪ್ರಜಾ ಸಮಯ ನ್ಯೂಸ್, ಬೆಂಗಳೂರು.
ಡಾ.ರವಿಶಂಕರ್. ಕನ್ನಡ ಉಪನ್ಯಾಷಕರು, ಬೆಂಗಳೂರು.
‘’ಕವಿಯ ಮೂಲಕ ವ್ಯಕ್ತಗೊಂಡ ಇಂತಹ ಪ್ರಶ್ನೆಗಳು ಸಹಜವಾಗಿ
ಎಲ್ಲರನ್ನೂ ಕಾಡಬೇಕೆಂಬ ಹಂಬಲ ದೊಂದಿಗೆ ಕವನವಾಗಿ ಮೂಡಿವೆ.”
ಇಲ್ಲಿ ಕವಿಯ ಸನ್ನಿವೇಶ ಅರ್ಥಗರ್ಭಿತ !