ಬಿಬಿಎಂಪಿ, ಮಹದೇವಪುರ ವಲಯ: ನಗರ ಯೋಜನೆ ವಿಭಾಗ ಅಧಿಕಾರಿಗಳ ದುರಾಡಳಿತಕ್ಕೆ ಕೊನೆ ಇಲ್ಲವೇ ?
ವರದಿ: ಪ್ರ.ಸಂ.ಬಿಬಿಎಂಪಿಗೆ ಅತಿ ಹೆಚ್ಚು ತೆರಿಗೆ ಬರುವ ಮೂಲ ನಗರ ಯೋಜನೆ ಎಂಬುದು ಅಕ್ಷರ ಸಹ: ಸತ್ಯ. ಈ ವಿಭಾಗದಲ್ಲಿ ನಡೆಯುತ್ತಿರುವ ಅಕ್ರಮಗಳು ಒಂದೆರಡಲ್ಲ ಎಂಬುದು ನಿರಂತರವಾಗಿ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇಂತಹ ಅಕ್ರಮಗಳಿಗೆ ನಗರ ಯೋಜನೆ ಅಭಿಯಂತರ ಅಧಿಕಾರಿಗಳು ಕಾರಣರಾಗಿದ್ದು, ಸುತ್ತಮುತ್ತಲಿನ ಕೆಲ ವಾರ್ಡಗಳಲ್ಲಿ ಅಕ್ರಮ ಕಟ್ಟಡಗಳು ರಾಜಕಾಲುವೆ, ಕೆರೆಯ ಬಫರ್ ಜೋನ್ನಲ್ಲಿ ಇಂದಿಗೂ ನಿರ್ಮಾಣವಾಗುತ್ತಿವೆ. ಇಂತಹ ಅಕ್ರಮಗಳಿಗೆ ನಗರ ಯೋಜನೆ ಅಧಿಕಾರಿಗಳು ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದನ್ನು ಸಾರ್ವಜನಿಕರು ಅಭಿಪ್ರಾಯವನ್ನು ವ್ಯಕ್ತಪಡಿ ಸಿದ್ದಾರೆ ಹಾಗೆ ಕೆಎಂಸಿ ಕಾಯ್ಧೆಯ ಉಪವಿಧಿ, ಹಸಿರು ಪೀಠ (ಎನ್ಜಿಟಿ) ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂಬುದು ಸತ್ಯಕ್ಕೆ ಹಿಡಿದ ಕನ್ನಡಿ.
ಬಿಬಿಎಂಪಿ ವ್ಯಾಪ್ತಿಗೆ ಬರುವಂತಹ ಎಂಟು ವಲಯಗಳಲ್ಲಿ ಮಹದೇವಪುರ ವಲಯ ವಿಶೇಷವಾದ ಸ್ಧಾನ. ಬಿಬಿಎಂಪಿಗೆ ತೆರಿಗೆ ಬರುವಂತಹ ಹೆಚ್ಚು ಮೂಲವಾಗಿದ್ದು , ಐಟಿ ಕಂಪನಿ ನೆಲೆಸಿವೆ ಎಂಬುದು ವಾಸ್ತವ. ಮಹದೇವಪುರ ವಲಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಹಾಜರಾಗದೆ, ಸರ್ಕಾರಿ ಕೆಲಸ ಮಾಡಲು ವಿಳಂಬ ಮಾಡುತ್ತಿದಾರೆ ಎಂಬುದನ್ನು ಸಾರ್ವಜನಿ ಕರು ವ್ಯಕ್ತಪಡಿಸಿದ್ದಾರೆ. ಮಹದೇವಪುರ ವಲಯ ಕೆಲವು ಅಧಿಕಾರಿಗಳು ಕಾನೂನುಬಾಹಿರವಾಗಿ ಕರ್ತವ್ಯವನ್ನು ನಿರ್ವಹಿಸು ತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ವಲಯದಲ್ಲಿ ಅದರಲ್ಲೂ ನಗರ ಯೋಜನೆ ಮದ್ಯವರ್ತಿಗಳ ಕಾಟ ವಿಪರೀತವಾಗಿದ್ದು, ಮದ್ಯವ ರ್ತಿಗಳು ಅಧಿಕಾರಿಗಳಂತೆ ವರ್ತಿಸುತ್ತಾರೆ. ನಗರ ಯೋಜನೆ ವಿಭಾಗಳಲ್ಲಿ ಹಿರಿಯ ಅಭಿಯಂತರ ಅಭಿಯಂತರರು, ಕಿರಿಯ ಅಭಿ ಯಂತರರು ಮದ್ಯವರ್ತಿಗಳನ್ನು ಮುಂದಿಟ್ಟುಕೊಂಡು ಹಣ ಮಾಡುವಲ್ಲಿ ತೊಡಗಿರುವುದು ಅಕ್ಷರಶಃ ಸತ್ಯ ಎಂಬುದನ್ನು ಸಾರ್ವಜನಿಕರು ದೂರಿದಾರೆ.
ಕೆಎಂಸಿ ಕಾಯ್ಧೆಯ ಮಾನದಂಡ ಮರೆತ ಟನ್ ಪ್ಲಾನಿಂಗ್ !
ಮಹದೇವರ ವಲಯ ನಗರ ಯೋಜನೆ ವಿಭಾಗದಲ್ಲಿ ಕಟ್ಟಡಗಳಿಗೆ ನೀಡುವ ಮುಂಜೂರಾತಿಯನ್ನು ಆನ್ಲೈನ್ ಮೂಲಕ ಸಲಿಸಿದರು ಸಹ, ಕಟ್ಟಡ ನಕ್ಷೆ ಮಂಜೂರಾತಿ ನೀಡುವಲ್ಲಿ ವಿನಾ ಕಾರಣವಿಳಂಬ,ತೊಂದರೆ ನೀಡುತ್ತಿದಾರೆ. ಈ ವಲಯ ನಗರ ಯೋಜನೆ ವಿಭಾಗದಲ್ಲಿ ಕೆಎಂಸಿ ಕಾಯ್ಧೆಯ ಹಾಗೂ ಎನ್ಜಿಟಿ ಆದೇಶವನ್ನು ಧಿಕ್ಕರಿಸಿದಾರೆ. ಪ್ರಮುಖವಾಗಿ ನಗರ ಯೋಜನೆ ವಿಭಾಗದಲ್ಲಿ ಮಾಹಿತಿ ಹಕ್ಕು ಅರ್ಜಿಗಳಿಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ, ಮುಂದುವರೆದು ಸಕ್ಷಮ ಪ್ರಾಧಿಕಾರ/ ಮೇಲ್ಮಮನವಿ ಪ್ರಾಧಿಕಾರಗಳು ಅರ್ಜಿದಾರರರಿಗೆ ವಿಳಂಬ, ಸುತ್ತಾಡಿಸುತ್ತಾರೆ ಎಂದು ಸಾರ್ವಜನಿಕರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ನಗರ ಯೋಜನೆ ವಿಭಾಗದಲ್ಲಿ ಕೆಲವೊಂದು ನಕ್ಷೆ ಮಂಜೂರಾತಿ ಕಾನೂನು ಬಾಹಿರವಾಗಿ ನೀಡಿರುವ ಪ್ರಸಂಗಗಳ ನಡೆದಿವೆ. ಇನ್ನೂ ಕೆಲವು ಕಟ್ಟಡಗಳಿಗೆ ನಕ್ಷೆ ಮಂಜೂರಾತಿಯನ್ನು ಪಡೇಯದೆ ಕಟ್ಟಡಗಳನ್ನು ನಿರ್ಮಿಸುತ್ತಿದಾರೆ. ನಗರ ಯೋಜನೆ ಅಭಿಯಂತರ ಅಧಿಕಾರಿಗಳು ಸ್ಧಳ ಪರೀಶಿಲನೆ ನಡೆಸದೆ ಕಡತಗಳಿಗೆ ಹಣ ಪಡೆದು ಸಹಿ ಹಾಕುತ್ತಾರೆ. ಕೆಲವೊಂದು ನಕ್ಷೆ ಮಂಜೂರಾತಿ ಇಲ್ಲದೆ ಇರುವ ಕಟ್ಟಡಗಳ ಬಗ್ಗೆ ಒಳ ಒಪಂದ ಮಾಡಿಕೊಳ್ಳುತ್ತಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ವಲಯದಲ್ಲಿ ಆರೋಗ್ಯ ಇಲಾಖೆ, ಕಾಮಗಾರಿ ವಿಭಾಗ, ಕಂದಾಯ, ಪರಿಸರ, ತೋಟಗಾರಿಕೆ, ಕಲ್ಯಾಣ ವಿಭಾಗಗಳು ಒಳಗೊಂಡಿದ್ದು, ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ಕಛೇರಿಗೆ ವಿಳಂಬವಾಗಿ ಬಂದು ಹಾಜರಾತಿಯಲ್ಲಿ ಸಹಿ ಸಹಿ ಮಾಡುತ್ತಾರೆಎಂಬ ಸತ್ಯವನ್ನು ಸ್ಧಳೀಯ ನಾಗರೀಕರು ನೋವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಮಹದೇವಪುರ ವಯಲ, ನಗರ ಯೋಜನೆ ವಿಭಾಗದ ಅಭಿಯಂತರ ಅಧಿಕಾರಿಗಳಂತೂ ತಮ್ಮ ಕರ್ತವ್ಯ, ಜವಾಬ್ಧಾರಿ, ಕಾನೂನು ಬಾಹಿರವಾಗಿ ಅನಧಿಕೃತ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಮಾಡಿರುವ ಪಸಂಗಗಳು ನಡೆದಿದೆ ಎಂಬುದನ್ನು ವಲಯದಲ್ಲಿರುವ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಮುಂದುವರೆದು ವಸತಿ ಬಡಾವಣೆಯಲ್ಲಿ ವಾಣಿಜ್ಯ ಕಟ್ಟಡಗಳು, ವಾಣಿಜ್ಯ ಮಳಿಗೆಗಳು ನಿರ್ಮಾಣವಾಗುತ್ತಿದರು ಸಹ ಕ್ಯಾರೆ ಎನ್ನುತ್ತಿಲ್ಲ. ಇಂತಹ ನೀಚ ಕೆಲಸಕ್ಕೆ ಮದ್ಯವರ್ತಿ ಗಳನ್ನು ಬಳಸಿಕೊಂಡು ಅಧಿಕಾರಿಗಳು ಹಣ ಮಾಡಲು ಮುಂದಾಗಿದ್ದಾರೆ. ಇದರ ಬಗ್ಗೆ ಸಾಕಷ್ಟು ದೂರು ಬಂದರು, ನಗರ ಯೋಜನೆ ವಿಭಾಗದ ಅಭಿಯಂತರ ಅಧಿಕಾರಿಗಳು ಮಾತ್ರ ಏನು ಗೊತ್ತಿಲ್ಲದ ರೀತಿ ನಾಟಕ ಮಾಡುತ್ತಿದಾರೆ. ಮಹದೇವಪುರ ವಲಯದಲ್ಲಿ ಅಧಿಕಾರಿಗಳು ತಮ್ಮ ನಿಕಟವರ್ತಿಗಳು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಧಳಿ ಸಾರ್ವಜನಿಕರು ಮಾತನಾಡುತ್ತಿದಾರೆ.