ಬಿಬಿಎಂಪಿ : ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮೇಲ್ಮನವಿ ಪ್ರಾಧಿಕಾರ RTA ಉತ್ತರ
ನೀಡಲು ವಿಳಂಬ, ಬೇಜವಾಬ್ಧಾರಿ !
ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಜನಸಾಮಾನ್ಯರ ನಡುವೆ ಪಾರದರ್ಶಕ ಆಡಳಿತ ನೀಡುವ ವ್ಯವಸ್ಧೆಯನ್ನು ಗಟ್ಟಿಗೊಳಿಸುವ ಮೂಲಕ ಅಧಿಕಾರಿಗಳಿಗೆ ತಮ್ಮ ಕರ್ತವ್ಯ, ಜವಾಬ್ಧಾರಿಯ ಸೇತುವೆಯಾಗಿ ಮಾಹಿತಿ ಹಕ್ಕು ಕಾಯ್ಧೆ ೨೦೦೫ ರಂದು ದೇಶಾದ್ಯಂತ ಜಾರಿಗೆ ತಂದರು. ಇಲಾಖೆಯ ಕೆಲ ಅಧಿಕಾರಿಗಳು, ಅರ್ಜಿದಾರರು ಇದನ್ನೇ ಬಂಡವಾಳ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸರ್ಕಾರ ನೀಡುವ ಅನುದಾನ, ಸವಲತ್ತು, ಸೇವೆಗಳು. ಸೌಲಭ್ಯಗಳ ಬಗ್ಗೆ ಪಾರದರ್ಶಕವಾಗಿ ಜನತೆಗೆ ಲಭ್ಯವಾಗಬೇಕೆಂದು ಕಾಯ್ಧೆಯಲ್ಲಿ ತಿಳಿಸಿದರು ಇದಕ್ಕೆ ಇನ್ನೂ ಉತ್ತರ ಸಿಗುತ್ತಿಲ್ಲ. ಅದರಲ್ಲೂ ಬಿಬಿಎಂಪಿ ವಲಯವಾರು ಕೆಲವು ಅಧಿಕಾರಿಗಳು ಬೇಜವಾಬ್ಧಾ ರಿತನದಿಂದ ಕೂಡಿದ್ದು ಅರ್ಜಿದಾರರಿಗೆ ನಿಖರ, ನಿರ್ದಿಷ್ಟ ಅಂಕಿ ಅಂಶಗಳ ಉತ್ತರ ಸಿಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಜನಸಾಮಾನ್ಯರ ನಡುವೆ ಪಾರದರ್ಶಕ ಆಡಳಿತ ವ್ಯವಸ್ಧೆಯನ್ನು ಗಟ್ಟಿಗೊಳಿಸುವ ಮೂಲಕ ಅಧಿಕಾರಿಗಳಿಗೆ ತಮ್ಮ ಕರ್ತವ್ಯ, ಜವಾಬ್ಧಾರಿಗಳನ್ನು ಸೇತುವೆಯಾಗಿದೆ ಮಾಹಿತಿ ಹಕ್ಕು. ಮಾಹಿತಿ ಹಕ್ಕು ಕಾಯ್ಧೆ ೨೦೦೫ ರಂದು ದೇಶಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅದರೆ ಸರ್ಕಾರದ ಕೆಲವು ಇಲಾಖೆಗಳು, ಕೆಲವು ಅಧಿಕಾರಿಗಳು ಕಾಯ್ಧೆ ಯನ್ನು ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಅಭಿವೃದ್ಧಿಗೋಸ್ಕರ ಬಿಡುಗಡೆ ಯಾಗುವ ಅನುದಾನ, ಸವಲತ್ತು, ಸೌಲಭ್ಯ, ಯೋಜನೆಗಳ ಬಗ್ಗೆ ಅಧಿಕಾರಿ ಮತ್ತು ಸಾರ್ವಜನಿಕರ ಮಧ್ಯೆ ಪಾರದರ್ಶಕ ವಾಗಿರಬೇಕು ಎಂದು ಕಾಯ್ಧೆಯಲ್ಲಿ ವಿವರಿಸಲಾಗಿದೆ. ಅದರೆ ಬಿಬಿಎಂಪಿ ಮಾತ್ರ ಮಾಹಿತಿ ಹಕ್ಕು ಕಾಯ್ಧೆಗೆ ಕಿಂಚಿತ್ತು ಬೆಲೆ ಕೊಡದೆ ಅರ್ಜಿದಾರರಿಗೆ ಸೂಕ್ತ ಕಾಲದಲ್ಲಿ ಮಾಹಿತಿ ನೀಡುವಾಗ ವಿಳಂಬ, ಬೇಜಾಬ್ಧಾರಿತನ ತೋರುತ್ತಿರುವುದು ವಿಪರ್ಯಾಸ.
ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರ ವಿಳಂಬ, ಬೇಜಾಬ್ಧಾರಿ !
ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಪಟ್ಟ ೮ ವಲಯಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ಧೆ ಯಡಿ ಸಲ್ಲಿಸಿದ ಅರ್ಜಿಗಳಿಗೆ ಮಾಹಿತಿಯನ್ನು ನೀಡದೆ ವಿನಾ:ಕಾರಣ ವಿಳಂಬ ಮಾಡುತ್ತಿದ್ದಾರೆ ಎಂಬುದು ಖುದ್ದು ಪರಿಶೀಲಿಸಿದಾಗ ನಮಗೂ ಈ ಅನುಭವಾಗಿದೆ ಎಂಬುದು ಸತ್ಯ. ಬಿಬಿಎಂಪಿ ಬರುವಂತಹ ೮ ವಲಯಗಳಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಅದರಲೂ ಮುಖ್ಯವಾಗಿ ಅನುದಾನ ಹಂಚಿಕೆ, ಅಭಿವೃದ್ಧಿ ಕಾಮಗಾರಿ, ಕೆರೆ ಒತ್ತುವರಿ, ಕೆರೆ ಅಭಿವೃದ್ಧಿ,ನಿರ್ವಹಣೆ, ಕಾಲುವೆ ಒತ್ತುವರಿ ಮತ್ತು ನಿರ್ವಹಣೆ, ಮಾರುಕಟ್ಟೆಗಳ ಮಳಿಗೆ ಹಂಚಿಕೆ, ಖಾತಾ ಇನ್ನೂ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿದರೆ ಅಧಿಕಾರಿಗಳು ಕಾಯ್ಧೆಗೆ ಅನುಗುಣವಾಗಿ ಕಾಲ ಮಿತಿಯಲ್ಲಿ ಉತ್ತರ ನೀಡದೆ ಅರ್ಜಿದಾರರಿಗೆ ವಿಳಂಬ, ಬೇಜಾಬ್ಧಾರಿ ಉತ್ತರ ನೀಡುವದು ಸ್ಪಷ್ಟವಾಗಿ ದಾಖಲೆಗ ಳಿಂದಲೇ ವ್ಯಕ್ತವಾಗಿದೆ. ಇನ್ನೂ ಬಿಬಿಎಂಪಿ ವ್ಯಾಪ್ತಿಗೆ ಬರುವ ಆರ್.ಆರ್ ನಗರ,ದಾಸರಹಳ್ಳಿ ದಕ್ಷಿಣ, ಪಶ್ಚಿಮ, ಪೂರ್ವ, ಯಲಹಂಕ, ಮಹದೇವಪುರ ಮತ್ತು ಬೊಮ್ಮನ ಹಳ್ಳಿ ವಲಯಗಳಲ್ಲಿ ಮೇಲ್ಮನವಿ ವಿಚಾರಣೆ ನಡೆಸದೆ, ಕಾಲ ವಿಳಂಬ ಮಾಡುತ್ತಾ ಅರ್ಜಿದಾರರಿಗೆ ಸಬೂಬು ಉತ್ತರ ಹೇಳುವ ಪ್ರಸಂಗಗಳು ನಡೆದಿವೆ ಎಂದರೆ ತಪ್ಪಾಗಲಾರದು. ಇದರಿಂದ ಬೇಸತ್ತ ಅರ್ಜಿದಾರರು ನೇರವಾಗಿ ಮಾಹಿತಿ ಆಯೋಗಕ್ಕೆ ಉತ್ತರ ಪಡೆಯಲು ಹೋಗುತ್ತಿದ್ದಾರೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಒಂದಿಷ್ಟು ಸತ್ಯ ಪರಿಶೀಲನೆ
ಬಿಬಿಎಂಪಿ ವಲಯಗಳಲ್ಲಿ ಅಧಿಕಾರಯುಕ್ತವಾಗಿ ಕರ್ತವ್ಯ ನಿರ್ವಹಿಸ ಬೇಕಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಕ್ಷಮ ಪ್ರಾಧಿಕಾರ/ಮೇಲ್ಮನವಿ ಅಧಿಕಾರಿಗಳು ಅರ್ಜಿದಾರರಿಗೆ ಮಾಹಿತಿ ನೀಡದೆ, ಸರಿಯಾಗಿ ಮೇಲ್ಮನವಿ ವಿಚಾರಣೆಯನ್ನು ಕಾಲಾವಧಿ ಯಲ್ಲಿ ನಡೆಸದೇ ಬೇಜಾಬ್ಧಾರಿ ತೋರಿರುವ ಸತ್ಯಾಸತ್ಯತೆಗಳು ಮಹದೇವಪುರ, ಯಲಹಂಕ, ದಕ್ಷಿಣ, ಬೊಮ್ಮನಹಳ್ಳಿ ವಲಯಗ ಳಲ್ಲಿ ಪರಿಶೀಲನೆ ಮಾಡಿದಾಗ ಅಧಿಕಾರಿಗಳ ಬಂಡವಾಳ ಬೆಳಕಿಗೆ ಬಂದಿದೆ.
ಪುರಾವೆ ಆನಾವರ್ಣ:
ದಕ್ಷಿಣ ವಲಯ ನಗರ ಯೋಜನೆ ವಿಭಾಗದಲ್ಲಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ, ರಾಜಕಾಲುವೆ ಬಳಿ ವಸತಿ ಸಮುಚ್ಚಯ , ನಕ್ಷೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದರೂ ಸಹ ದಕ್ಷಿಣ ನಗರ ಯೋಜನೆ ವಿಭಾಗ ಜೆಡಿಟಿಪಿ ವೀಣಾ ವಿಶ್ವನಾಥ, ಸಹಾಯಕ ನಿರ್ದೇಶಕರಾದ.ಸಂದೀಪ್ ಕುಮಾರ್, ವೆಂಕಟೇಶ್ ಎಂಬ ಅಧಿಕಾರಿ ಗಳು ಕೆ.ಎಂ.ಸಿ ಕಾಯ್ಧೆಯ ಉಪವಿಧಿಗಳನ್ನು ಗಾಳಿಗೆ ತೂರಿದ್ದಾರೆ. ಮತೊಂದು ಕಡೆ ಬೃಹತ್ ನೀರುಗಾಲುವೆ ವಿಭಾಗದ ಅಧಿಕಾರಿಗಳು ಸಹ ಇದರಲ್ಲಿ ಪಾಲುದಾರರಾಗಿದ್ದಾರೆ ಎಂಬುದು ಅಧಿಕಾರಿ ವರ್ಗದಿಂದ ತಿಳಿದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡಗಳ ಬಗ್ಗೆ ಘನ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ವಲಯಗಳಲ್ಲಿ ನಕ್ಷೆ ಉಲಂಘನೆ ಮಾಡಿರುವ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗದಿರುವುದು ಶೋಚನಿಯ ಸಂಗತಿ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಮತ್ತೊಂದು ಉನ್ನತ ಅಧಿಕಾರಿಗಳ ಗಮನಕ್ಕೆ ತಂದರು ಸಹ ಜಂಟಿ ಅಯುಕ್ತರು ಸುಮನಾಗಿದ್ದಾರೆ.ಮತ್ತೋಮ್ಮೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಿ, ವಿಚಾರಣೆಯಲ್ಲಿ ಅಧಿಕಾರಿಗ ಳಿಗೆ ಲಿಖಿತ ಆದೇಶ ಮಾಡಿದರು ನಗರ ಯೋಜನೆ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎಂಬುದು ಸತ್ಯಕ್ಕೆ ಹಿಡಿದ ಕನ್ನಡಿ.ಜಂಟಿ ಅಯುಕ್ತರಾದ ಶ್ರೀಯುತ ಜಗದೀಶ್ ನಾಯಕ್ ಅಧಿಕಾರಿಗಳ ವಿರುದ್ಧ ಯಾವ ಕಾನೂನು ಕ್ರಮಕ್ಕೆ ಮುಂದಾಗುತ್ತಾರೂ ನೋಡೋಣ.
ಬಿಬಿಎಂಪಿ ವೆಬ್ಸೈಟ್ ಸ್ಪಷ್ಟ ಮಾಹಿತಿ ಕೊರತೆ?
ಮಾಹಿತಿ ಹಕ್ಕು ಕಾಯ್ಧೆ ೨೦೦೫ ಕಾಯ್ಧೆ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆ ತರಲು ಉತ್ತಮ ಅಸ್ತ್ರ ಅದರೆ ಕಾಯ್ಧೆಯನ್ನು ಅರ್ಜಿದಾರರು, ಸರ್ಕಾರಿ ಅಧಿಕಾರಿಗಳು ದುರ್ಬಳಕೆ ಮಾಡಿಕೊ ಳ್ಳುತ್ತಿದು, ಮಾಹಿತಿ ಹಕ್ಕು ಅರ್ಜಿದಾರರಿಗೆ ಉತ್ತರ ನೀಡದೆ ನಿರಂತರ ಸುತ್ತಾಟ, ವಿಳಂಬ, ಮಾಡುತ್ತಾರೆ ಎಂಬುದು ಬಿಬಿಎಂಪಿ ಕಛೇರಿಯಲ್ಲಿ ಕಂಡುಬಂಡಿದೆ. ಬಿಬಿಎಂಪಿ ವೆಬ್ಸೈಟ್ನಲ್ಲಿ ವಲಯವಾರು ಮಾಹಿತಿ ಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮೇಲ್ಮನವಿ (ಸಕ್ಷನ್-೧೯) ಅಧಿಕಾರಿಗಳ ವೃತಿ, ವಯಸ್ಸು, ಅನುಭವಕ್ಕೆ ತಕ್ಕಂತೆ ಪದನ್ಮೋತ್ತಿ, ನಿವೃತ್ತಿಯಾದರು ಸಹ ಕೆಲವು ವಲಯಗಳಲ್ಲಿ ಇನ್ನೂ ಹಿಂದೆ ಇದತಂಹ ಅಧಿಕಾರಿಗಳ ಹೆಸರು, ಪದನಾಮಗಳು ಬಿಬಿಎಂಪಿ ವೆಬ್ಸೈಟ್ ಕಾಣುತ್ತಿದೆ. ಮುಂದುವರೆದು ನಮ್ಮ ಬೆಂಗಳೂರನ್ನು ’ಬ್ರಾಂಡ್ ಬೆಂಗಳೂರು ಮಾಡಲು ಸಿದ್ದವಾಗುತ್ತಿರುವ ಬಿಬಿಎಂಪಿ ಅಧಿಕಾರಿಗಳು ಇಂತಹ ಸೂಕ್ಷ್ಮ ಮಾಹಿತಿಯನ್ನು ವೆಬ್ಸೈಟ್ ತಿದ್ದುಪಡಿ ಮಾಡದಿರುವು ಆಸ್ಯಾಸ್ಪದ ಸಂಗತಿ.
ಏಜೆಂಟ್ ಹಾವಳಿ:
ದಕ್ಷಿಣ ವಲಯ ನಗರ ಯೋಜನೆ ವಿಭಾಗದಲ್ಲಿ ನಗರ ಯೋಜನೆ ಅಧಿಕಾರಿಗಳು ಏಜೆಂಟ್ ಮುಖಾಂತರ ತಮ್ಮ ವ್ಯವಹಾರ ಮಾಡಿಸಿಕೊಳುವ ಸನ್ನಿವೇಶಗಳು ನಿರಂತರವಾಗಿ ನಡೆಯುತ್ತಿದೆ. ಮತೊಂದು ಕಡೆ ಈ ಏಜೆಂಟ್ಗಳು ಕಚೇರಿಯಲ್ಲಿ ಅಧಿಕಾರಿಗಳಂತೆ ವರ್ತಿಸುತ್ತಾ, ಸರ್ಕಾರಿ ಕಡತಗಳನ್ನು ತಾವೇ ಖುದ್ದು ತಗೆದುಕೊಂಡು ಮನ ಬಂದಂತೆ ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂಬುದು ಇಂದಿಗೂ ಪ್ರಸ್ತುತ. ಒಟ್ಟಾರೆಯಾಗಿ ಹೇಳುವುದಾದರೆ ಯಾವ ಸರ್ಕಾರಗಳ ಬಂದರು, ಯಾವ ಅಧಿಕಾರಿಗಳು ನೇಮಿಸಿದರುಬಿಬಿಎಂಪಿ ಅಕ್ರಮಗಳನ್ನು ಕನಿಷ್ಠ ಮಟ್ಟದಲ್ಲಿ ತಡೆಗಟ್ಟಲು ಸಾಧ್ಯವಿಲ್ಲ. ಇಂತಹ ಪರಿಸ್ಧಿತಿ ಇರುವಾಗ ಇನ್ನೂ ಮುಂದಾ ದರೂ ಬಿಬಿಎಂಪಿ ಅಯುಕ್ತರು ಅಧಿಕಾರಿಗಳ ವಿರುದ್ಧ ಯಾವ ಕಾನೂನು ಕ್ರಮಕ್ಕೆ ಮುಂದಾಗುತ್ತಾರೂ ಕಾದು ನೋಡೋಣ.