ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದಿಂದ ಕನ್ನಡಕ್ಕೆ ಅವಮಾನ: ಕನಕಪುರ ರಸ್ತೆ ನಾಮಫಲಕದಲ್ಲಿ ತಪ್ಪು ಅಕ್ಷರ
ಬೆಂಗಳೂರು ಬಸವನಗುಡಿ, ದಿವಾನ್ ಮಾಧವ್ ರಾವ್ ರಸ್ತೆಯಿಂದ ಆರಂಭವಾಗುವ ಎನ್.ಎಚ್-209 ಕನಕಪುರ ಮಾರ್ಗವಾಗಿ ಮಂಡ್ಯ ಮೈಸೂರು, ಚಾಮರಾಜನಗರ ಜಿಲ್ಲೆಯನ್ನು ಆಯ್ದು ತಮಿಳುನಾಡಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯು ಮೈಸೂರು ಮತ್ತು ಬೆಂಗಳೂರು ನಡುವಿನ ವಾಹನ ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ನಿರ್ಮಿಸಿರುವ ಪರ್ಯಾಯ ಹೆದ್ದಾರಿಯಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಿರುವ ಕನಕಪುರ ಎನ್.ಎಚ್-209 ರಸ್ತೆ ಕನಕಪುರ, ಹಾರೋಹಳ್ಳಿ, ತಲಘಟ್ಪಪುರ ಮತ್ತು ಬೆಂಗಳೂರಿನ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ಎನ್.ಎಚ್-209 ರಸ್ತೆಗೆ ಹೊಂದಿಕೊಂಡಂತೆ ಸುತ್ತಮುತ್ತಲು ಹಲವಾರು ಹಳ್ಳಿಗಳು ಹೊಂದಿಕೊಂಡಿದು ಹೆದ್ದಾರಿಯ ಎಡ-ಬಲ ಬದಿಯಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಅಕ್ಷರಗಳು (ಹಳ್ಳಿಯ ಹೆಸರು) ತಪ್ಪಾಗಿ ಕಬ್ಬಲು (ಕಬ್ಬಾಳು) ತುಂಗಾಣಿ (ತುಂಗಣಿ) ಬರೆಯಲಾಗಿದೆ. ಈ ಹೆದ್ದಾರಿ ನಿರ್ಮಾಣ ಜವಾಬ್ಧಾರಿ ಹೊತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕನ್ನಡ ಭಾಷೆಗೆ ತಾತ್ಸಾರ ತೋರುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಲಾಗಿದೆ. ಇಂತಹ ತಪ್ಪು ನಾಮಫಲಕ ಅಳವಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ರಾಮನಗರ ಜಿಲ್ಲಾಡಳಿತ ಸೂಕ್ತ ಕ್ರಮ ತಗೆದುಕೊಂಡು ತಪ್ಪಾಗಿರುವ ಕನ್ನಡ ನಾಮಫಲಕಗಳ ಹೆಸರುಗಳನ್ನು ಶೀಘ್ರವಾಗಿ ಸರಿಪಡಿಸಿ ಮರು ನಾಮಫಲಕಗಳನ್ನು ಅಳವಡಿಸಬೇಕು ಎಂದು ಪ್ರಜಾ ಸಮಯ ಪತ್ರಿಕೆ ಆಗ್ರಹಿಸುತ್ತದೆ.
ಸಂಪುಟ :08 ಸಂಚಿಕೆ :12 ನವಂಬರ್ -2024 ವರದಿ:ಸಂ
