ಜೀವನ ದೋಣಿಯಲ್ಲಿ ಬದುಕು ಭರವಸೆಯಾಗಲಿ ! ಬಾಂಧವ್ಯ ದೀರ್ಘವಾಗಲಿ !
”ಜೀವನ ಪಯಣದಲ್ಲಿ ನಮ್ಮ ಶಕ್ತಿಯನ್ನು ಅರಿಯದವರು, ನಮ್ಮನ್ನು ಬಿಟ್ಟು ಹೋದವರು, ಆಸೆಗಳಿಗೆ ಸ್ಪೂರ್ತಿಯಾಗದವರನ್ನು ಹಿಂತಿರುಗಿ ನೋಡ ಬಾರದು, ಯಾವ ಕ್ಷಣದಲೂ ನೆನ್ನಯಬಾರದು. ಆ ಸ್ಧಿತಿಯಲ್ಲಿ ನಮ್ಮನ್ನು ಅಯ್ಕೆ ಮಾಡಿಕೊಂಡವರ ಜೊತೆ ಆಹ್ವಾನ ನೀಡಿ ಆನಂದಿಸ ಬೇಕು’’!
ನಾವು ಮನುಷ್ಯರು, ಜೀವನದ ಎಲ್ಲಾ ಸಮಯದಲ್ಲಿ ನಾನಾ ರೀತಿಯಾಗಿ ಯೋಚಿಸುತ್ತಿರುತ್ತೇವೆ, ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಹೇಗಿರಬೇಕೆಂದು ಬಯಸುತ್ತಿರುತ್ತೇವೆ? ಪ್ರತಿಯೊಬ್ಬರ ಜೀವನದಲ್ಲಿ ಆಗಾಗ್ಗೆ ಬರುವ ಕೆಲವು ಘಟನೆಗಳು, ಕಲ್ಪನೆಗಳು ಸಾಮಾನ್ಯವಾಗಿ ಬಂದು ಹೋಗುತ್ತಿರುತ್ತವೆ. ವರ್ತಮಾನ ಕಾಲದ ಮೌಲ್ಯಯುತ ಕ್ಷಣಗಳನ್ನು ಪರಿಗಣಿಸದೆ, ಭೂತಕಾಲದ ಚಿಂತನೆಯಲ್ಲಿ ತೊಡಗಿ, ಭವಿಷ್ಯತ್ ಕಾಲದ ರೂಪು ರೇಷಗಳಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ವಿಫಲರಾಗುತ್ತೇವೆ.
ಬದುಕಿನ ದಿನಚರಿಯಲ್ಲಿ ನಾವು ಕೆಲವು ಕಾರ್ಯಗಳನ್ನು ಮಾಡಲೆಬೇಕೆಂದು ಬಯಸುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ಆಯ್ಕೆ, ಮನ್ನಣೆ, ಪ್ರಯೋಜನ, ಪ್ರಾಮುಖ್ಯತೆ ಮತ್ತು ಪ್ರತಿಫಲಗಳು ನಮ್ಮಿಂದಲೇ ಸಾಗುತ್ತಿರುತ್ತವೆ. ನಾವು ಪರರಿಗೆ ಸಹಾಯ ಮಾಡುವುದು, ಕಷ್ಟದ ಬದುಕಲ್ಲಿ ಉತ್ತಮ ಭರವಸೆ ಮೂಡಿಸುವುದು, ನೋವು-ನಲಿವು, ಸರಿ-ತಪ್ಪುಗಳ ಬಗ್ಗೆ ಮನಸ್ಥೈರ್ಯ ತುಂಬುವುದು, ಕಷ್ಟದಲ್ಲಿರುವವರ ನೋವಿಗೆ ಕೈಲಾದಷ್ಟು ಸಹಾಯ ಹಸ್ತ ನೀಡುವುದು, ಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸುವುದು ಇಂತಹ ಭಾವನೆಯೊಂದಿಗಿನ ಕಾರ್ಯವು ಮನುಷ್ಯ ಜನ್ಮಸಾರ್ಥಕವಾಗಿ ಸುತ್ತದೆ.
ಪ್ರತಿಯೊಬ್ಬರ ಜೀವನ ಸಮಾಜಕ್ಕೆ ವರದಾನ ಹಾಗೂ ಮೌಲ್ಯಯುತವಾಗಿದೆ. ನಾವು ಪಾಲಿಸಬೇಕಾದ, ತಿರಸ್ಕರಿಸಬೇಕಾದ ಮಾರ್ಗದಲ್ಲಿ ನಾವು ಬದುಕಲು ಬಯಸಿದಾಗ ಜೀವನದ ಏರಿಳಿತಗಳು, ನೋವು-ನಲಿವುಗಳು, ವೈಫಲ್ಯಗಳೊಂದಿಗೆ ಸಾಗಬೇಕಾಗುತ್ತದೆ. ಇವೆಲ್ಲವೂ ಜೀವನದ ಒಂದು ಭಾಗ. ಜೀವನವನ್ನು ಸುಂದರವಾಗಿಸುವ ಸವಾಲುಗಳಾಗಿ ನಾವು ಇತರರನ್ನು ಅರಿತುಕೊಳ್ಳುವ ಮೂಲಕ ನಮ್ಮ ಪ್ರತಿ ಹೆಜ್ಚೆಯಲ್ಲಿ ಭರವಸೆಗಳನ್ನು ಮೂಡಿಸೋಣ! ಭಾವನೆಗಳೊಟ್ಟಿಗೆ ಬದುಕು ಕಟ್ಟೋಣ ಆಗ ಮಾತ್ರ ಈ ಜಗದ ಬದುಕು ಸುಖಕರವಾಗಿರಲು, ಯೋಗ್ಯವಾಗಿರಲು ಸಾಧ್ಯವಾದೀತು.
ನಾವು ಕೇಳಿದಂತೆ ಕೆಲವೊಂದು ವೇದಿಕೆಯಲ್ಲಿ ಹಿರಿಯರು, ವಿಚಾರವಂತರು, ರಂಗ ಕರ್ಮಿಗಳು, ನಟ-ನಟಿಯರು, ವಿಮರ್ಶಕರು, ಪರ್ತಕರ್ತರು, ಚಿಂತಕರು ತಮಗಾದ ಗೆಲುವಿನ ಅನುಭವವನ್ನು ಹಂಚಿಕೊಳ್ಳುವ ಮೂಲಕ ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ವಿಷಯಗಳನ್ನು ಮುಕ್ತವಾಗಿ ಹೇಳುವು ದುಂಟು, ಅದನ್ನು ಕೇಳಿದಾಗೆಲೆಲ್ಲಾ ಗೆಲುವನ್ನು ಸ್ವೀಕರಿಸಿಲು ನಾವು ಪಟ್ಟ ಮೊದಲ ಶ್ರಮ ಹೇಗಿರುತ್ತದೆಂಬ ಪ್ರಶ್ನೆ ಯಾರಿಗೂ ತಿಳಿದಿರುವುದಿಲ್ಲ ? ಆ ಕ್ಷಣದಲ್ಲಿ ನಮ್ಮನ್ನು ಒಪ್ಪಿಕೊಂಡವರು ವಾಸ್ತವ ಬದುಕಿನ ಜೊತೆಗಿರದೇ ದೂರ ಉಳಿದು ಬಿಡುತ್ತಾರೆ, ಆಗ ಬದುಕು ಅಪೂರ್ಣ ಎಂದು ಬಿಂಬಿತವಾ ಗುತ್ತದೆ ಅದೇ ವೇಳೆಗೆ ನಮ್ಮೊಳಗೊಂದು ಕಲ್ಪನೆ, ಆಸೆ, ಬಯಕೆ ನಮ್ಮನ್ನು ಪ್ರೇರಿಪಿಸಿತ್ತದೆ ಅದರೆ ಆ ವೇಳೆಗೆ ವಾಸ್ತವ ನೆಲೆಗಟ್ಟನ್ನು ನಾವು ಇನ್ನೊಬ್ಬ ರೊಟ್ಟಿಗೆ ಹೋಲಿಸಿಕೊಂಡು ಬದುಕು ಸಾಗುತ್ತಾ, ಇನ್ನೋಬ ವ್ಯಕ್ತಿಯಲ್ಲೂ ನಮ್ಮಂತೆಯೇ ಕೆಲವು ನ್ಯೂನತೆಗಳಿರುತ್ತದೆ ಎಂಬ ಭಾವನೆ ಮೂಡಿರು ತ್ತದೆ.
ಬದುಕು ಯಾರೊಂದಿಗೆ ಸಾಗಿದೆ, ನಾವು ಎಲ್ಲಿದ್ದೇವೆ? ನಾವು ಆನಂದಿಸುವ ನೆನಪುಗಳೇನು? ಬದುಕಿನ ಮುಂದಿನ ದಾರಿಗಳೇನು? ಬದುಕಿನ ಮಹತ್ವಾ ಕಾಂಕ್ಷೆಗಳೇನು? ಬದುಕನ್ನು ಹೇಗೆ ಮುನ್ನಡೆಸಬೇಕು? ನಮ್ಮ ಕನಸುಗಳೇನು? ಕಂಡಂತಹ ಕನಸುಗಳು ಯಾವ ಹಾದಿಯಲ್ಲಿ ಸಾಗಬೇಕು? ಈ ಪ್ರಶ್ನೆಗ ಳಿಗೆ ಉತ್ತರ ಯಾರಿಂದಲೂ ನೀಡಲು ಸಾಧ್ಯವಿಲ್ಲ? ಸಮಾಜದಲ್ಲಿ ಪ್ರತಿಯೊಬ್ಬರು ಅವರವರ ಸ್ವಭಾವದ ಅಧಾರದ ಮೇಲೆ ಬದುಕಿನ ಆತ್ಮ ಸೌಂದ ರ್ಯವನ್ನು ಹೆಚ್ಚಿಸಿಕೊಳ್ಳುತ್ತಾ. ‘’ನಮ್ಮ ಜೀವನದ ಮುಖ್ಯ ಗುರಿಯನ್ನು ಸಾಧಿಸಲು, ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು, ಬದುಕಿನ ಅವಧಿ, ಅಯ್ಕೆ , ಪರಿಶ್ರಮ ಹಾಗೂ ಅಧ್ಯಯನವೆ ಉತ್ತಮವೆಂದು ಪತ್ರಕರ್ತನಾಗಿ ತಿಳಿಸಬಲ್ಲೆ.
ಒಬ್ಬ ಮನುಷ್ಯ ತನ್ನ ನಡವಳಿಕೆ ವಿನಮ್ರವಾಗಿಲ್ಲದಿದ್ದರೆ ಜನರು ಅವನನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಒಬ್ಬ ಸೈನಿಕನು ಶತ್ರುವನ್ನು ಅಥವಾ ಎದುರಾಳಿಯನ್ನು ಮಣಿಸಲು ತನ್ನ ಅಭ್ಯಾಸ, ತರಬೇತಿಯಿಂದ ಜಯ ಶೀಲನಾಗಬಲ್ಲ, ಕೆಟ್ಟ ಅಭ್ಯಾಸಗಳನ್ನು ಬೆಳೆಸುವುದರಿಂದ ಉತ್ತಮನಾಗಲು ಸಾಧ್ಯವಿಲ್ಲ. ಜೀವನದಲ್ಲಿ ಪ್ರತಿ ಅಯ್ಕೆಗೂ ಅಂತ್ಯವಿದೆ, ಪ್ರತಿ ಅಯ್ಕೆಯೂ ಅಡ್ಡದಾರಿ ಹಿಡಿಯದೇ, ವೃತ್ತಿ ಬದುಕಿನಲ್ಲಿ ಪ್ರತಿಕೂಲತೆಯ ಪರಿಣಾಮ ಬೀರುತ್ತದೆ. ಜೀವನದಲ್ಲಿ ಬರುವಂತಹ ಅವಕಾಶಗಳು ಕೆಲವು ಕೈತಪ್ಪುತ್ತವೆ, ಜೀವನದ ವೈಫಲ್ಯಗಳು ಯಶಸ್ಸಿನ ಮೆಟ್ಟಿಲುಗಳನ್ನು ದೂರ ಸರಿಸುತ್ತವೆ. ಎಂತಹ ಅಸಹಾಯಕ ಪರಿಸ್ಥಿತಿಯಲ್ಲಿಯೂ ಸಹ ಹೊಸ ಬಾಗಿಲುಗಳನ್ನು ಮುಚಿರಲು ಸಾದ್ಯವಿಲ್ಲ ಏಕೆಂದರೆ ಜೀವನ ನಾನಾ ಸಾಧ್ಯತೆಗಳಿಂದ ತುಂಬಿರುತ್ತದೆ. ನಾವು ಜೀವನದಲ್ಲಿ ಒಂಟಿಯಾದಾಗ, ಧೈರ್ಯವನ್ನು ಕಳೆದುಕೊಂಡಾಗ, ನಾವು ಮಾಡಿರುವಂತಹ ಪುಣ್ಯ -ಕರ್ಮಫಲಗಳು ನಮಗೆ ಸಹಾಯ ಮಾಡಿ ಜೀವನದ ಆಶಾಗೋಪುರಕ್ಕೆ ದಾರಿತೋರುತ್ತವೆ.
ಈ ಸಮಾಜಕ್ಕೆ ಒಳ್ಳೆಯದನ್ನು ಪರಿಶೀಲಿಸಿ, ಅಯ್ಕೆ ಮಾಡಿಕೊಂಡು ಕೆಟ್ಟದ್ದನ್ನು ನಿರ್ಲಕ್ಷಿಸುವುದೇ ಜೀವನ. ಜೀವನದ ಸಕಾರಾತ್ಮಕ ಅಂಶವನ್ನು ಪ್ರತಿಬಿಂಬಿಸಿದಾಗ ನಮ್ಮ ಕನಸುಗಳನ್ನು ಪಾಲಿಸಲು ಸಾಧ್ಯವಾಗುತ್ತದೆ. ‘‘ಜೀವನ ಒಂದು ಸ್ಪರ್ಧೆಯಂತೆ ಕಂಡರೂ ಸಹ, ಜೀವನದ ಸೋಲು ಅಥವಾ ಗೆಲುವುಗಳನ್ನ ಆಟದಂತೆ ಸ್ವೀಕರಿಸಿ ಅದರಲ್ಲಿ ನಾವು ಜಾಣ್ಮೆಯ ಆಟಗಾರನಾಗಿರಬೇಕು’’ ನಾವು ಯಾವಾಗಲೂ ಸುರಕ್ಷಿತವಾಗಿ ಪ್ರಯಾಣಿಸುವುದ ರಿಂದ, ಆರಾಮದಾಯಕ ಪ್ರಯಾಣ ಮಾಡಲು ಸಾಧ್ಯವಾದೀತು ಎಂಬ ಆಲೋಚನೆ ನಮ್ಮಲಿರಬೇಕು ?
ಜೀವನದಲ್ಲಿ ಕೆಲವರು ಅಥವಾ ಕೆಲವು ವಸ್ತುಗಳು ನಮ್ಮನ್ನು ಸಂತೋಷಪಡಿಸುತ್ತವೆ. ಜೀವನದಲ್ಲಿ ನಮಗೆ ಕಷ್ಟ ಕೊಟ್ಟಂತಹವರನ್ನು ಮರೆಯುವ, ಕ್ಷಮಿಸುವ ಮೂಲಕ ಅಂತಹವರಿಂದ ದೂರು ಉಳಿದುಕೊಳ್ಳುಬೇಕು. ಬದುಕಿಗೆ ಬೇಕಾಗಿರುವುದು ನಂಬಿಕೆ ಮತ್ತು ವಿಶ್ವಾಸ ಕೂಡಿರುವ ಜನರು ಮಾತ್ರ ಅಂತವರ ಜೊತೆ ನಮ್ಮ ಕನಸುಗಳನ್ನು ನನಸಾಗಿಸಬೇಕು, ಜೀವನದಲ್ಲಿ ನಾವು ಈ ಜಗತ್ತಿಗೆ ಬಂದಿರುವುದು ಅದೃಷ್ಟವಾದರೆ, ಬಯಸಿದ ದಾರಿಯಲ್ಲಿ ಸಾಗುವುದು ಸಹಕಾರದಿಂದ ಇದು ನಮ್ಮ –ನಿಮ್ಮ ಆಯ್ಕೆ !
ನಾವು ಜೀವನಕ್ಕೆ ಬೇಕಾದ ಸಕಾರಾತ್ಮಕ ಅಂಶವನ್ನು ಪ್ರತಿಬಿಂಬಿಸಿದಾಗ, ನಮ್ಮ ಕನಸುಗಳು ರಾರಾಜಿಸಲು ಸಾಧ್ಯ. ಜೀವನ ಸುಂದರವಾಗಿದೆ ಎನ್ನುವುದು. ನಮ್ಮ ಜೀವನದಲ್ಲಿ ಎದುರಿಸುವ ಸವಾಲುಗಳು ನಮ್ಮಗೆ ಶರಣಾಗಿವೆ ಎಂದರ್ಧ. ಜೀವನದ ಅನುಭವದಲ್ಲಿ ಅಂತರಿಕ ಸೌಂದರ್ಯ ಮತ್ತು ಬಾಹ್ಯ ಸೌಂದರ್ಯಕ್ಕೆ ವಿಶೇಷ ಮೌಲ್ಯವಿದೆ, ಜೀವನದ ಹಾದಿ ಯಾವಾಗಲೂ ಸುಲಭವಲ್ಲ ಸಮಾಜದ ನಡುವೆ ಕಂಡುಬರುವ ಬೆಳವಣಿಗೆ, ಸಂತೋಷ ಕ್ಷಣಗಳ ಸಾಮರ್ಥ್ಯವೆಂದು ಕರೆಯುತ್ತೇವೆ.
‘’ನಮ್ಮ ಜೀವನ ಪಯಣದಲ್ಲಿ ನಮ್ಮ ಶಕ್ತಿಯನ್ನು ಅರಿಯದವರು, ನಮ್ಮನ್ನು ಬಿಟ್ಟು ಹೋದವರು, ಆಸೆಗಳಿಗೆ ಸ್ಪೂರ್ತಿಯಾಗದವರನ್ನು ಹಿಂತಿರುಗಿ ನೋಡಬಾರದು, ಯಾವ ಕ್ಷಣಕ್ಕೂ ನೆನಯಬಾರದು. ಆ ಕೆಟ್ಟ ಪರಿಸ್ಧಿತಿಯನ್ನು ಮತ್ತೊಂದು ಹೊಸ ಅದ್ಬುತ ಅವಕಾಶವೆಂದು ಭಾವಿಸಿ, ಅಂತಹ ಪರಿಸ್ಧಿಯಲ್ಲಿ ನಮ್ಮನು ಅಯ್ಕೆ ಮಾಡಿಕೊಂಡವರ ಮಾಡಿಕೊಂಡವರ ಜೊತೆ ಆಹ್ವಾನ ನೀಡಿ, ಆನಂದಿಸಬೇಕು’’! ಕೆಲವೊಮ್ಮೆ ಜೀವನ ಕಷ್ಟಕರವಾಗಿ ರುತ್ತದೆ, ನಿಮ್ಮನ್ನು ಕೆಳಕ್ಕೆ ತುಳಿಯಲು ಬಯಸಿದವರ ಮುಂದೆ ನಿಧಾನವಾಗಿ ಚಲಿಸುವರಾಗಬೇಕು ಎಂದು ಹೇಳಲು ಬಯಸುವೆ. ಜೀವನದ ಪ್ರತಿ ಯೊಂದು ಸಮಸ್ಯೆಯೂ ಕೆಟ್ಟದೆಂದು ಭಾವಿಸಬಾರದು, ಜೀವನ ಪುಸ್ತಕದಲ್ಲಿ ಕೆಲವು ಪಾಠಗಳು ಕಷ್ಟ, ನೋವು, ಸಂತೋಷ, ಆಚರಣೆ ಮತ್ತು ಗುಣ ವಿಶೇಷಗಳಿಂದ ತುಂಬಿರುತ್ತವೆ ಅದು ಅಂತಿಮವಾಗಿ ನಮ್ಮನು ಅಗ್ರಸ್ಥಾನಕ್ಕೆ ಕರೆದೊಯ್ಯುತ್ತವೆ.
ಜೀವನದ ಪಯಣದಲ್ಲಿ ಹಲವು ಸವಾಲುಗಳನ್ನು ಸ್ವೀಕರಿಸಿದಾಗ ಮಾತ್ರ ನಮಗೆ ಧೈರ್ಯ, ಸಾಮರ್ಥ್ಯ, ದೌರ್ಬಲ್ಯಗಳು ಇತರರು ಪರೀಕ್ಷಿಸುವಂತೆ ಮಾಡುತ್ತವೆ. ದಾರಿ ಉದ್ದಕ್ಕೂ ನಡುವೆ ಬರುವ ಅಡೆತಡೆಗಳ ಮೇಲೆ ನಾವು ಎಡವಿ ಬೀಳಬಹುದು ಆ ಸಮಯಕ್ಕೆ ನಾವು ಸರಿಯಾದ ಮಾರ್ಗವನ್ನು ಅನುಸರಿಸಲು ಮುಂದಾಗಬೇಕು. ಕೆಲವೊಮ್ಮೆ ಅಡೆತಡೆಗಳು ನಿಜವಾಗಿಯೂ ಮಾರುವೇಷದಲ್ಲಿ ಬರುವಾಗ ನಮಗೆ ತಿಳಿದಿರುವುದಿಲ್ಲ. ನಮ್ಮ ಪಯಣದಲ್ಲಿ ಕೆಲ ಸಂದರ್ಭಗಳು ಎದುರಿಸುತ್ತೇವೆ, ಕೆಲವು ಸಂತೋಷದಿಂದ ತುಂಬಿರುತ್ತವೆ, ಕೆಲವು ನೋವಿನಿಂದ ತುಂಬಿರುತ್ತವೆ. ಎದುರಿಸುತ್ತಿರುವ ಸಂಗತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ. ಜೀವನದ ಉಳಿದ ಪಯಣವು ಯಾವ ರೀತಿಯ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ನಾವೇ ನಿರ್ಧರಿಕೊಳ್ಳಬೇಕು.
ಒಟ್ಟಾರೆಯಾಗಿ ನಾವು ಯಾವಾಗಲೂ ನಮ್ಮನ್ನು ನಿಯಂತ್ರಿಸಿಕೊಂಡು ಇನ್ನೊಬ್ಬರನ್ನು ಬಳಸಿಕೊಂಡು, ಊಹಿಸಿಕೊಂಡು ಬದುಕುತ್ತೇವೆ, ಕೆಲವೊಂದು ಸಂದರ್ಭದಲ್ಲಿ ಇನ್ನೊಬ್ಬರ ಅನುಭವಗಳಿಂದ ಕಲಿಯುತ್ತೇವೆ, ಕಲಿತದ್ದನ್ನು ಅರ್ಥಮಾಡಿಕೊಳ್ಳಬೇಕು. ನಾವು ಯಾರಿಗೂ ದು:ಖ ನೀಡುವ ಸಂದರ್ಭ, ಸನ್ನಿವೇಶ ಮಾಡಬಾರದು, ನಾವು ಮತ್ತೊಬ್ಬರ ಜೀವನದ ದೋಣಿಯಲ್ಲಿ ಬದುಕು ಭರವಸೆಗಳಂತೆ, ಬಾಂಧವ್ಯ ದೀರ್ಘವಾಗುವಂತೆ, ನಮ್ಮ ವರ್ತನೆ, ನಡವಳಿಕೆ, ನಂಬಿಕೆ ಇರಬೇಕಲ್ಲವೇ !