ಬೆಂಗಳೂರು ವಿಶ್ವವಿದ್ಯಾನಿಲಯ” ಸರ್ಕಾರ UVCE ಗೆ ನೀಡಿರುವ 50 ಎಕರೆ ಜಮೀನು ರದ್ದು ಪಡಿಸಿ ?
ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರಿನ ಉದ್ಯಾನ ನಗರಿಗೆ ಕಳಸವಿದ್ದಂತೆ. 1964 ಜುಲೈ ರಂದು ಮೈಸೂರು ವಿಶ್ವವಿದ್ಯಾನಿಲಯದ ಒಂದು ಭಾಗವಾಗಿ ಸ್ಥಾಪಿಸಿ, ಅಂತಿಮವಾಗಿ ಪ್ರತ್ಯೇಕ ವಿಶ್ವವಿದ್ಯಾಲಯವಾಯಿತು. ಆರಂಭದಲ್ಲಿ ನಗರದ ಎರಡು ಪ್ರಮುಖ ಕಾಲೇಜುಗಳಾದ ಸೆಂಟ್ರಲ್ ಕಾಲೇಜು ಮತ್ತು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಬೆಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಬಿಂದುವಾಗಿ ರೂಪು ಗೊಂಡವು.
ಬೆಂಗಳೂರು ವಿಶ್ವವಿದ್ಯಾನಿಲಯ 1964 ರಿಂದಿಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಯೋಜಿತ ಕಾಲೇಜುಗಳು, ಪಿ.ಜಿ. ಕೇಂದ್ರಗಳು ಕಾಲಘಟ್ಟಕೆ ತಕ್ಕಂತೆ ಬದಲಾದವು 1973 ರಲ್ಲಿ, ವಿಶ್ವವಿದ್ಯಾನಿಲಯವು 1500 ಎಕರೆ ವಿಸ್ತಾರವಾದ ಭೂಮಿಯ ಹೊಂದಿದ್ದು, ‘ಜ್ಞಾನ ಭಾರತಿ’ ಎಂಬ ಹೊಸ ಹೆಸರು ಪಡೆದು ಸ್ಥಳಾಂತರಗೊಂಡು, ವಿವಿಯು ಸ್ನಾತಕೋತ್ತರ ವಿಭಾಗಗಳಾಗಿ ಹೊರಹೋಮಿತು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಾಂಧಿ ಭವನ, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ, ಮತ್ತು ಸಂಶೋಧನಾ ಕೇಂದ್ರ, ಮತ್ತು ಸಾಮಾಜಿಕ ಹೊರಗಿಡುವಿಕೆ ಮತ್ತು ಅಂತರ್ಗತ ನೀತಿಯ ಅಧ್ಯಯನ ಕೇಂದ್ರ ಸ್ಥಾಪನೆಗೊಂಡಿದ್ದು, ಬೆಂಗಳೂರು ವಿಶ್ವವಿದ್ಯಾನಿಲಯ ಸುಮಾರು ಐವತ್ತೆರಡು ವರ್ಷಗಳ ಫಲಪ್ರದ ಅಸ್ತಿತ್ವವನ್ನು ಪೂರೈಸಿ, ಏಷ್ಯಾದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದೆಂದು ಹೆಸರು ಪಡೆದಿದೆ. ಮುಂದುವರೆದು ವಿವಿಗೆ 1500 ಎಕರೆ ನೀಡಿದ್ದು ಈಗ 1000ಕ್ಕೆ ಕುಸಿದಿದೆ. ಅದರಲ್ಲಿ 395 ಎಕರೆ ಇತರೇ ಸಂಸ್ಥೆಗಳ ಪಾಲು. ಈಗ ಸ್ಕೈಡೆಕ್ 25 ಎಕರೆ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯ 50 ಎಕರೆ ಬಲಿ ಆಗುವಂತಾಗಿರುವುದು ದುರಾದೃಷ್ಟ. ವಿವಿ ಯಲ್ಲಿರುವ ಆಮ್ಲಜನಕ ಮತ್ತು ನೀರಿನಂತಹ ಪ್ರಾಣದಾಯಿ ಜ್ಞಾನ ಭಾರತಿ ಕಾಂಕ್ರೀಟು ಕಾಡಾಗುವುದು ಸನ್ನಿಹಿತವಾಗಿದೆ.
ಏನಿದು ಜೀವ ವೈವಿಧ್ಯತೆ ಇತಿಹಾಸ & ವಿಶೇಷ
ಬೆಂಗಳೂರು ವಿಶ್ವವಿದ್ಯಾನಿಲಯ ಡಾ. ಹೆಚ್. ನರಸಿಂಹಯ್ಯನವರ ಕಾಲದಲ್ಲಿ ಶುರುವಾಗಿ, ಬಂಜರು ತುಂಬಿ ಬರಡು ಭೂಮಿಯಾಗಿದ್ದು ಅಕ್ಷರಶ:ಸತ್ಯ. ಡಾ.ಹೆಚ್. ನರಸಿಂಹಯ್ಯನವರ ನಂತರ ವಿವಿಗೆ ಮಾನ್ಯ ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯಲ್ಲಿ ಬರಡು ಭೂಮಿಗೆ ಗಿಡನೆಟ್ಟು, ನೂರಾರು ಗಿಡಮರ ನೆಡುವ ಕಾರ್ಯ ಆರಂಭಿಸಿದರು.ಕೆಲವು ವರ್ಷಗಳ ನಂತರ ಈ ಕಾರ್ಯವನ್ನು ನಿವೃತ್ತ ಪ್ರಾಧ್ಯಾಪಕ ಟಿ.ಜೆ.ರೇಣುಕಾ ಪ್ರಸಾದ್ ಮುಂದುವರಿಸಿಕೊಂಡು ಬಂದಿರುವ ಹಿನ್ನೆಲೆ ಕೇಳಿದರೆ ಒಂದು ದೊಡ್ಡ ದುರಂತವೇ ಸರಿ ಆದರೆ ಟಿ.ಜೆ. ರೇಣುಕಾ ಪ್ರಸಾದ್ ಸುಮಾರು 660 ಎಕರೆ ಪ್ರದೇಶದಲ್ಲಿ ಬೆಂಗಳೂರು ನಗರದ ಅತಿ ದೊಡ್ಡ ಜೀವ ವೈವಿಧ್ಯ ವನ ಸೃಷ್ಟಿಯಾಗಲು ಕಾರಣೀಕರ್ತರಾಗಿದ್ದು, ಇವರ ಜೊತೆ ಹಲವಾರು ಸ್ವಯಂ ಸೇವಕರು, ವಾಯು ವಿಹಾರಿಗಳು ಮತ್ತು ಸಂಘ ಸಂಸ್ಧೆಗಳು ಕೈಜೋಡಿಸಿದಾಗ ಇದಕ್ಕೆ ಒಂದು ವಿಶೇಷ ಸ್ಧಾನಮಾನ ಪಡೆಯಿತು. ಜೀವವೈವಿಧ್ಯ ವನದಲ್ಲಿ ನೂರಾರು ಜಾತಿಯ ಪಕ್ಷಿಗಳು, ದುಂಬಿಗಳು ಆಶ್ರಯ ಪಡೆದಿರುವುದು ಇದಕ್ಕೆ ಸಾಕ್ಷಿ. ಬೆಂಗಳೂರು ವಿಶ್ವವಿದ್ಯಾನಿಲಯ ದಲ್ಲಿ ಪಂಚವಟಿ, ಪಂಚವಲ್ಕಲ, ಚೆಲುವಿನ ಹಣ್ಣಿನ ತೋಟ, ಮಿಯಾವಾಕಿ, ಹಲವಾರು ಔಷಧಿ ಗಿಡಗಳು,ಪ್ರಾಣಿ ಪಕ್ಷಿ ಸಂಕುಲಗಳು ಬದುಕಿ ಜೀವ ಉಳಿಸಿಕೊಂಡಿದ್ದು ಸದಾ ಹಸಿರು ತುಂಬಿಗೊಂಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯ ಭಾರತದ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲಾ ಗಿದೆ ಇಲ್ಲಿನ ಬಯೋಡೈವರ್ಸಿಟಿ ಪಾರ್ಕ್ ಹೈಕೋರ್ಟ್ ನಿರೀಕ್ಷೆಯಂತೆ ಅಭಿವೃದ್ಧಿಯಾಗುತ್ತಿದೆ. ನೀರಿನ ಕಟ್ಟೆ, ಕಲ್ಯಾಣಿಗಳಿಂದ ತುಂಬಿ ಬಯೋ-ಜಿಯೋ-ಹೈಡ್ರೋ ಪಾರ್ಕ್ (Natural indigenous diversified Forest) ಹೊರಹೋಮ್ಮಿದೆ.
ನಮ್ಮ ರಾಜಕಾರಣಿಗಳ ಹಿತಾಶಕ್ತಿ ಎಷ್ಟು
ಹೆಚ್. ನರಸಿಂಹಯ್ಯನವರ ಕಾಲದಲ್ಲಿ ಅಡಿಪಾಯವಿಟ್ಟ ಬೆಂಗಳೂರು ವಿಶ್ವವಿದ್ಯಾನಿಲಯ, ಇದಕ್ಕಾಗಿಯೇ ಅರಣ್ಯ ಇಲಾಖೆಯ ಜಾಗವನ್ನು ಪಡೆದುಕೊಂಡಿತು ಅದರೆ ಈಗ ಇತರೇ ಸಂಸ್ಥೆಗಳಿಗೆ ಮರು ಗುತ್ತಿಗೆ ನೋಂದಣಿ ಆಗುತ್ತಿರುವುದು ಶೋಚನಿಯ. ಇತ್ತೀಚೆಗೆ 2020 ರಲ್ಲಿ ಬೆಂಗ ಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬಯೋಪಾರ್ಕ್ ಒಂದರ ಭಾಗವನ್ನು ದಿಲ್ಲಿಯ ಯೋಗ ವಿಜ್ಞಾನ ಸಂಸ್ಥೆ , ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ , ನ್ಯಾಕ್, ಸಿಬಿಎಸ್ಸಿ ಮುಂತಾದ ಸಂಸ್ಥೆಗಳಿಗೆ ಮರು ಗುತ್ತಿಗೆ ಮಾಡಿರುವುದು ನಮ್ಮ ದುರಂತ ಅದರೆ ಇಂತಹ ಘಟನೆಯ ವಿರುದ್ದ ಸ್ದಳೀಯ ವಾಯು ವಿಹಾರಿಗಳು, ಸಂಘ-ಸಂಸ್ಧೆಗಳು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿ, ತಡೆಯಾಜ್ಞೆ ತಂದು ರಕ್ಷಿಸಲು ಮುಂದಾಗಿ ದ್ದಾರೆ. ಇಷ್ಟಾದರು ಸಹ ಇನ್ನೂ ಮರು ಗುತ್ತಿಗೆ ರದ್ದಾಗಿಲ್ಲ ಎಂದು ಸ್ಧಳೀಕರು ವಿವರಿಸಿದ್ದಾರೆ.
ಇದಲ್ಲದೆ ಸ್ವಾಯತ್ತ ಸಂಸ್ಥೆಯಾಗಿರುವ ಯುವಿಸಿಇ ಕಾಲೇಜಿಗೆ 50 ಎಕರೆ ವಿವಿ ಯಿಂದ ಜಮೀನು ನೀಡಬಾರದೆಂದು ಸ್ಧಳೀಯ ನಿವಾಸಿಗಳು, ವಾಯುವಿಹಾರಿಗಳು, ನಡಿಗೆದಾರರು, ಪರಿಸರವಾದಿಗಳು, ಶಿಕ್ಷಕರು, ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿ, ವಿನಂತಿಸಿಕೊಂಡಿದ್ದು, ಉನ್ನತ ಶಿಕ್ಷಣ ಸಚಿವರಿಗೆ ಲಿಖಿತ ಪತ್ರ ವ್ಯವಹಾರ ಮಾಡಲಾಗಿದ್ದರು ಸಹ ಏಳು ಎಕರೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾಗೆ ಕೊಟ್ಟಿರು ವುದು ವಿಷಾದನೀಯ ಎಂಬ ಸಂಗತಿ ವಾಯು ವಿಹಾರಿಗಳು ಸಂಘ-ಸಂಸ್ಧೆಗಳನ್ನು ಕೆರಳುವಂತೆ ಮಾಡಿದೆ.ಇಷ್ಟು ಸಾಲದೇ ಎಂಬಂತೆ 200 ಎಕರೆ ಇತರರಿಗೆ ನೀಡಲೂ ಮಂತ್ರಿಗಳಿಂದ ಸೂಚನೆ ಬಂದಿರುವುದು ದುರದೃಷ್ಟಕರ. ಇತರೇ ಸಂಸ್ಥೆಗಳ ನೆಪವೊಡ್ಡಿ ಕಾಂಕ್ರೀಟೀಕರಣ ಮಾಡಿ ಜೀವವೈವಿಧ್ಯ ವನವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ ಎಂದು ವಾಯು ವಿಹಾರಿಗಳು ತಮ್ಮ ನೋವನ್ನು ವ್ಯಕ್ತಿಪಡಿಸಿದ್ದಾರೆ. ‘ಬೆಂಗಳೂರು ವಿಶ್ವವಿದ್ಯಾನಿಲಯ ‘ವಾಯು ವಿಹಾರಿಗಳ ಸಂಘ’’ ಮಾರ್ಚ್ 2022 ರಂದು ಮನವಿ ಮಾಡಿದ್ದು ಈ ಸಂಬಂಧ ವಿಶ್ವವಿದ್ಯಾಲಯ ಸಮಿತಿ ರಚಿಸಿದೆ ಅದರೆ ವರದಿ ತಯಾರಾದ ಬಳಿಕ ಸಂಬಂದಪಟ್ಟ ಇಲಾಖೆಗೆ ವಿವಿ ಯ ಅಧಿಕಾರಿಗಳಿಗೆ ತಲುಪಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಕೆಲವು ಉನ್ನತ ಅಧಿಕಾರಿಗಳು ಯುವಿಸಿಇ ನೀಡುವ ಕಮಿಷನ್ ಆಸೆಗೆ ಬಲಿಯಾಗಿ ವಿವಿ ಯ ಭೂಮಿಯನ್ನು ಅನ್ಯ ಸಂಸ್ಧೆಗಳಿಗೆ ಪರಭಾರೆ ಮಾಡಲು ಮುಂದಾಗಿದ್ದಾರೆ ಎಂದು ವಾಯು ವಿಹಾರಿಗಳು, ಸಂಘ-ಸಂಸ್ಢೆಗಳ ಸದಸ್ಯರು ಹಿಡಿಶಾ ಪ ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ 150 ಕ್ಕೂ ಹೆಚ್ಚು ಕಟ್ಟಡ ಗಳು ನಿರ್ಮಾಣವಾಗಿವೆ. ಬೆಂಗಳೂರಿಗರು ನಗರದ ಸುತ್ತಮುತ್ತ ಪ್ರಾಣವಾಯು ಹಾಗೂ ಗುಟುಕು ನೀರಿಗೆ ಸಂಚಕಾರ ಉಂಟಾಗುತ್ತದೆ ಎಂಬ ಸೂಕ್ಶ್ಮ ಮಾಹಿತಿ ನಮ್ಮ ರಾಜಕಾರಿಣಿಗಳಿಲ್ಲ ಎಂದಿದ್ದಾರೆ. ಇನ್ನೂ ಮುಂದುವರೆದು ರಾಜ್ಯದಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆ ಜಗತ್ತನ್ನು ಕಾಡುತ್ತಿದೆ. ಇದರಿಂದ ಪಾರಾಗಲು ಈಗಿರುವ ಮರ, ಗಿಡ, ಜೀವವೈವಿಧ್ಯ ಗಳನ್ನು ನಾವು ಉಳಿಸಿಕೊಳ್ಳಬೇಕಿದೆ.
ಬಿಬಿಎಂಪಿ ಬಯೋಡೈವರ್ಸಿಟಿ ಮ್ಯಾನೇಜ್ಮೆಂಟ್ ಕಮಿಟಿ ಅಧ್ಯಯನ ಮಾಡಿದ ವರದಿಯಲ್ಲಿ, ವಿವಿ ಯ ಜೈವಿಕ ಸಂಪತ್ತಿನ ಬಗ್ಗೆ ವಿವರಣೆ ನೀಡಿದೆ. ಪ್ರಮುಖವಾಗಿ ಬೆಂಗಳೂರು ವಿಶ್ವವಿದ್ಯಾನಿಲಯ ಅಂದಾಜು ಸುಮಾರು ರೂ. 16500 ಕೋಟಿ ಬಾಳುವ ಆಮ್ಲಜನಕ ಉತ್ಪಾದನಾ ಕೇಂದ್ರವಾಗಿದೆ. ಬೆಂಗಳೂರಿಗೆ ಅತಿದೊಡ್ಡ ಜೈವಿಕ ವೈವಿಧ್ಯ ವನವಾಗಿರುವ ಈ ಅಮೂಲ್ಯ ಸಂಪತ್ತನ್ನು ಕಳೆದುಕೊಳ್ಳುವ ಸ್ಥಿತಿ ಚಿಂತಾಜನಕ ಎಂದು ಸ್ಧಳೀಯ ಸಾರ್ವಜನಿಕರು ದೂರುತ್ತಿದ್ದಾರೆ.
ವಿವಿ ಯದಲ್ಲಿ ಆಗಾಗ ಅಭಿವೃದ್ಧಿ ಹೆಸರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಪ್ರಸ್ತಾವನೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸು ತ್ತಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕುಲಪತಿಗಳಿಗೆ ಸ್ಧಳೀಯ ಸಾರ್ವಜನಿಕರು ಲಿಖಿತವಾಗಿ ಜಮೀನು ನೀಡ ಬಾರದೆಂದು ದೂರು ದಾಖಲಿಸಿದ್ದಾರೆ. ಇತ್ತೀಚಿಗೆ ನಡೆದ ಸಭೆಯಲ್ಲಿ ಸ್ದಳಿಯ ವಾಯು ವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳ ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ. ವಿವಿ ಜಮೀನಿನಲ್ಲಿ ಈಗಾಗಲೇ ಪಾರಂಪರಿಕ ಪ್ರಭೇದದ ಮರಗಳು ಕುಗ್ಗಿದೆ. ವಿವಿ ಯ ಬಯೋ ಪಾರ್ಕನಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಸಾವಿರಾರು ಮರ-ಗಿಡಗಳಿವೆ. ಪ್ರತಿ ಮರ-ಗಿಡವೂ ವಿಭಿನ್ನವಾದ ಗುಣಲಕ್ಷಣಗಳನ್ನು ಒಳಗೊಂಡಿದೆ. ವಿವಿಯಲ್ಲಿ ಜಾಗ ನೀಡುವುದರಿಂದ ಇಲ್ಲಿನ ಪರಿಸರ ನಾಶವಾಗಿ, ಇಲ್ಲಿರುವ ಸಾಕಷ್ಟು ಹಕ್ಕಿ ಪಕ್ಷಿಗಳ ಜೀವ ಸಂಕುಲಕ್ಕೆ ಹಾನಿಯಾಗಲಿದೆ.
ಬೆಂಗಳೂರು ವಿಶ್ವವಿದ್ಯಾನಿಲಯ ಬಯೋಪಾರ್ಕನಲ್ಲಿ ಹಿರಿಯರು, ಕಿರಿಯರು, ಶಿಕ್ಷಕರು, ವಿವಿ ಯ ಪ್ರಾದ್ಯಾಪಕರು ವಿದ್ಯಾರ್ಧಿಗಳು, ವಾಯು ವಿಹಾರಿಗಳು, ನಡಿಗೆದಾರರ ಸಂಘ ಇದಕ್ಕೆ ಜಮೀನು ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ಕೈ ಬೀಡಬೇಕು, ಒಂದು ವೇಳೆ ಬಯೋ ಪಾರ್ಕ್ ಜಮೀನು ಅನ್ಯ ಶಿಕ್ಷಣ ಸಂಸ್ಧೆಗ ಳಿಗೆ ಮರು ಗುತ್ತಿಗೆಗೆ ನೀಡಬಾರದು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇನ್ನೂ ಮುಂದಾದರು ಯಾವುದೇ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಅವಕಾಶ ನೀಡಬಾರದು’ ಎಂದು ಸಂಘ ಸಂಸ್ಧೆಗಳು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ರದ್ದು ಪಡಿಸಬೇಕು !
ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಯುವಿಸಿಇ ಹಾಗೂ ರಾಷ್ಟ್ರೀಯ ಕಾನೂನು ಶಾಲೆಗೆ ನೀಡಿರುವ 50 ಎಕರೆ ಜಮೀನು ನೋಂದಣಿ ರದ್ದು ಮಾಡದಿದ್ದರೆ ಬೆಂಗಳೂರು ವಿಶ್ವವಿದ್ಯಾನಿಲಯದ ಅಮೂಲ್ಯವಾದ ಜೈವಿಕ ಕಾಡನ್ನು ಸಂರಕ್ಷಿಸಲು ಸಾದ್ಯವಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ವಿವಿ ಯಲ್ಲಿ ಆಗಾಗ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಕೆಲವು ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸು ತ್ತಿರುವುದು ಶೋಚನಿಯ.
ವೈಜ್ಞಾನಿಕ ವರದಿ ನೀಡುವಂತೆ ರಾಜ್ಯಪಾಲರು ಆದೇಶ ಮಾಡಿದ್ದರೂ ಇನ್ನೂ ವರದಿ ನೀಡದ ಅಧಿಕಾರಿ ವರ್ಗ !
ಬೆಂಗಳೂರು ವಿಶ್ವವಿದ್ಯಾನಿಲಯದ ಹಸಿರು ಮತ್ತು ಉಸಿರು ಹಾಗೂ ನೀರಿನ ನೆಲೆ, ಕಣಿವೆಗಳು ಉಳಿಯಲೇ ಬೇಕಾಗಿರುವುದರಿಂದ ವಿಶ್ವವಿದ್ಯಾ ಲಯದ ಸಿಬ್ಬಂದಿ, ವಿಧ್ಯಾರ್ಧಿಗಳ ವಾಯು ವಿಹಾರಿಗಳ ಜೊತೆಗೂಡಿ ವಿವಿ ಜಾಗ ಪರಭಾರೆ ಆಗದಂತೆ ಶ್ರಮಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿ ದ್ಯಾನಿಲಯ ಜಮೀನು ನಮಗೆ ಮಾತ್ರ ಇರಲಿ, ಅನ್ಯ ಸಂಸ್ಥೆಗಳಿಗೆ ಜಮೀನು ಅತಿಯಾಗಿ ನೀಡಲಾಗುತ್ತಿದೆ ಅದರೆ ಬೆಂಗಳೂರು ವಿಶ್ವವಿದ್ಯಾನಿ ಲಯದಲ್ಲಿ ಇನ್ನಷ್ಟು ಭೂಮಿಯನ್ನು ಕಳೆದು ಕೊಳ್ಳಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2012 ರಲ್ಲಿ ಬೆಂಗಳೂರು ವಿಶ್ವವಿ ದ್ಯಾನಿಲಯ ಸಿಂಡಿಕೇಟ್ ನಲ್ಲಿ ಜಮೀನು ನೀಡದೆ ಇರುವಂತೆ ನಿರ್ಣಯ ಆಗಿದೆ. ಮುಂದುವರೆದು, ಸರ್ಕಾರ ಆದೇಶ ನೀಡದಂತೆ ಜೈವಿಕ ವೈವಿ ಧ್ಯವನವನ್ನು ಉಳಿಸಿ ಬೆಳೆಸಲು & ಯುಜಿಸಿ ಸುತ್ತೋಲೆ ಮೇರೆಗೆ ಜೈವಿಕ ವೈವಿಧ್ಯವನ ಬೆಳೆಸಲು ಆದೇಶಿಸಿದೆ.
ಈಗಾಗಲೇ ಕುಲಪತಿಗಳ ಜೊತೆ ಅನೇಕ ಸ್ಧಳಿಯರು, ಸಂಘ-ಸಂಸ್ಧೆಗಳ ಸದಸ್ಯರು ಬೇಟಿ ಮಾಡುವ ಮೂಲಕ ರದ್ದು ಪಡಿಸುವಂತೆ ಲಿಖಿತ ದೂರು ನೀಡಿದ್ದಾರೆ ಅದರೆ ಕುಲಪತಿಗಳು ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಜಮೀನು ನೀಡುವ ಪ್ರಸ್ತಾವನೆಯನ್ನು ರದ್ದು ಪಡಿಸಲು ಉತ್ಸುಕ ರಾಗಿಲ್ಲ ಎಂದು ವಿವಿ ಯ ಇತರೆ ಅಧಿಕಾರಿ ವರ್ಗ, ವಿದ್ಯಾರ್ಧಿಗಳು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಅತಿ ಶೀಘ್ರವಾಗಿ ಕಾನೂನು ಕ್ರಮ ತಗೆದುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ಸಾರ್ವಜನಿಕರು, ಸ್ಧಳೀಯ ನಿವಾಸಿ ಗಳು, ವಾಯು ವಿಹಾರಿಗಳು, ಸಂಘ ಸಂಸ್ಧೆಗಳ ಜೊತೆ ಕೈಜೋಡಿಸುತ್ತಿವೆ ಎಂದು ವಿವಿ ವಿದ್ಯಾರ್ಧಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಸ್ದಳಿಯ ವಾಯು ವಿಹಾರಿಗಳು, ವಿದ್ಯಾರ್ಧಿಗಳು ಪ್ರಾದ್ಯಾಪಕರು ಹಾಗೂ ಪರಿಸರ ಪ್ರೇಮಿಗಳು ವಿವಿ ಯಲ್ಲಿ ಭೂಮಿ ಅನ್ಯ ಸಂಸ್ದೆಗಳಿಗೆ ನೀಡಬಾರದು ಎಂಬುದೇ ಅವರ ಆಶಯವಾಗಿತ್ತು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಾರಂಪರಿಕ ವಿವಿಧ ಜಾತಿಯ ಮರಗಳು, ವಿವಿಧ ಪ್ರಭೇದದ ಸಸಿಗಳು ನಿರಂತರವಾಗಿ ದಿನೇದೀನೇ ನಸಿಸುತ್ತಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಬಯೋ ಪಾರ್ಕನಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಮರಗಿಡಗಳಿವೆ. ಪ್ರತಿ ಮರ-ಗಿಡವೂ ವಿಭಿನ್ನವಾದ ಗುಣಲಕ್ಷಣಗಳನ್ನು ಒಳಗೊಂಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯಲ್ಲಿ ಅನ್ಯ ಸಂಸ್ಧೆಗಳಿಗೆ ಜಾಗ ನೀಡುವುದರಿಂದ ಇಲ್ಲಿನ ಪರಿಸರ ನಾಶವಾಗಿ, ಇಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಕ್ಕೆ ಹಾನಿಯಾಗಲಿದೆ. ಬಯೋ ಪಾರ್ಕನಲ್ಲಿ ಹಿರಿಯರು, ಕಿರಿಯರು, ವಿದ್ಯಾರ್ಧಿಗಳು, ವಾಯು ವಿಹಾರಿಗಳು, ನಡಿಗೆದಾರರು, ಸಂಘ ಸಂಸ್ಧೆಗಳು, ಕೆಲವೂ ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳು ಜಮೀನು ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿವೆ.
ಪ್ರಜಾ ಸಮಯ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಪರಿಸರ ಪ್ರೇಮಿಗಳು
ಪೋನ್ ಕರೆ ಸ್ವೀಕರಿಸದ ಕುಲಪತಿ ಜೈಕಾರ್ ಶೆಟ್ಟಿ
ಬೆಂಗಳೂರು ವಿಶ್ವವಿದ್ಯಾನಿಲಯ ಬಯೋಪಾರ್ಕ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಗೌರವಾನ್ವಿತ ರಾಜ್ಯಪಾಲರು ಆದೇಶ ಮಾಡಿದ್ದರೂ ವಿವಿ ಯ ನಾಲ್ಕು ಅಧಿಕಾರಿಗಳನ್ನೊಳಗೊಂಡ ತಂಡ ಅಧ್ಯಯನ ಮಾಡಿ ವರದಿ ಸಿದ್ದಪಡಿಸಿದ್ದು , ಈ ವರದಿ ಸರ್ಕಾರಕ್ಕೆ ಇನ್ನೂ ಸಲ್ಲಿಕೆ ಆಗಿಲ್ಲ. ಇದರ ಬಗ್ಗೆ ವಿವಿ ಯ ಕುಲಪತಿಯಾದ ಜೈಕಾರ್ ಶೆಟ್ಟಿ ಪೋನ್ ಕರೆಗೆ ಪ್ರತಿಕ್ರಿಯೆ ನೀಡದಿರುವುದು ದೊಡ್ಡ ಮಟ್ಟದ ಅನುಮಾನಗಳಿಗೆ ಕಾರಣವಾಗಿ ದ್ದು , ಯಾವುದೂ ಒತ್ತಡಕೆ ಮತ್ತು ಆಮಿಷಕೆ ಬಲಿಯಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಾಯು ವಿಹಾರಿಗಳು ಮತ್ತು ಸ್ಧಳಿ ಯ ಸಾರ್ವಜನಿಕರು ದೂರುತ್ತಿದ್ದಾರೆ. ಇಷ್ಟೆ ಅಲ್ಲದೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಮಾದ್ಯಮದವರು ಸಹ ಕುಲಪತಿ ಜೈಕಾರ್ ಶೆಟ್ಟಿ ಗೆ ಸುಮಾರು ಬಾರಿ ಪೋನ್ ಕರೆ ಮಾಡಿದಾಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಒಟ್ಟಾರೆ ಬೆಂಗಳೂರು ವಿಶ್ವವಿದ್ಯಾನಿಲಯದ ಬಯೋಪಾರ್ಕ ಬೆಂಗಳೂರಿಗೆ ಅಕ್ಸಿಜನ್ ನೀಡುವ ಬ್ಯಾಂಕ್ ಆಗಿ ಹೊರಹೊಮ್ಮಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗುತ್ತಿರುವ ವಿವಿ ಯ ವಾಯು ವಿಹಾರಿಗಳು ಶತಯಾ ಗತಾಯ ಯಾವುದೇ ಕಾರಣಕ್ಕೂ ಬಯೋ ಪಾರ್ಕ್ ಜಮೀನನ್ನು ಇತರೆ ಶೈಕ್ಶಣಿಕ ಸಂಸ್ಧೆಗಳಿಗೆ ನೀಡಬಾರದು, ಇಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದ್ದಾರೆ.