ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸರ್ಕಾರಿ ಆಸ್ಪತ್ರೆ ಕಟ್ಟಡಗಳ ನವೀಕರಣ, ಉನ್ನತೀಕರಣ,ನಿರ್ವಹಣೆ ಹೆಸರಿನಲ್ಲಿ ಅನುದಾನ ದುರ್ಬಳಕೆ ! ಟೆಂಡರ್ ಡಾಕ್ಯುಮೆಂಟ್, MB & QC Report, ಗೋಲ್ ಮಾಲ್ !
ರಾಜ್ಯದ ಜನತೆಯ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ಧಾರಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂಜಿನಿಯ ರಿಂಗ್ ಘಟಕ ಒಂದು ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆ ಮತ್ತು ಕಾಮಗಾರಿಗಳನ್ನು ಕೈಗೊಂಡು ನಿರ್ವಹಿ ಸಲಾಗುತ್ತದೆ. ಇಂಜಿನಿಯರಿಂಗ್ ಘಟಕದ ವ್ಯಾಪ್ತಿಗೆ ನಾಲ್ಕು ವಿಭಾಗಗಳು, ಹದಿನೈದು ಉಪ ವಿಭಾಗ ಕಛೇರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಡುವ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ನವೀಕರಣ ಉನ್ನತೀಕರಣ, ರಿಪೇರಿ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ಕಾಗಿ ತುರ್ತು ಆಸ್ಪತ್ರೆಗಳ ನಿರ್ಮಾಣ, ಜಿಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಮೆಡಿಕಲ್ ಗ್ಯಾಸ್, ಪೈಪ್ಲೈನ್ ಅಳವಡಿಕೆ, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್, ಐಸಿಯು ನಿರ್ಮಾಣ, ನಮ್ಮ ಕ್ಲಿನಿಕ್ ಮುಂತಾದ ತುರ್ತು ಕಾಮಗಾರಿಗಳನ್ನು ಅಭಿವೃದ್ಧಿ & ನಿರ್ವಹಣೆ ಮಾಡಲಾಗುತ್ತದೆ. ಆರೋಗ್ಯ ಇಲಾಖೆ ಕಾಮಗಾರಿಗಳ ಗುಣಮಟ್ಟ ಹಾಗೂ ಪ್ರಗತಿಯನ್ನು ನಿಯಮಿತವಾಗಿ ಕಾಯ್ಧುಕೊಂಡು, ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಿ, ಉಪಯೋಗಿತ ಇಲಾಖೆಗಳಿಗೆ ಹಸ್ತಾಂತರಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿದೆ.
ಏನಿದು ? ನವೀಕರಣ, ಉನ್ನತೀಕರಣ & ನಿರ್ವಹಣೆ !
ಸಾಮಾನ್ಯವಾಗಿ ಹೇಳುವುದಾದರೆ ಜಿಲ್ಲೆಗಳಲ್ಲಿ ಇರುವಂತಹ ಸರ್ಕಾರಿ ಆಸ್ಪತ್ರೆ ಕಟ್ಟಡಗಳನ್ನು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ, ರೋಗಿಗಳ ಅಗತ್ಯತೆಗೆ ತಕ್ಕಂತೆ ಹಳೆಯ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯುವುದು, ಹಳೆಯ ಕಟ್ಟಡಗಳನ್ನು ವಿನ್ಯಾಸಗೊಳಿಸುವುದು, ಕಟ್ಟಡ ಗುಣಮಟ್ಟ ಅಧಾರದ ಮೇಲೆ ಹೊಸ ಕಟ್ಟಡವನ್ನು ನಿರ್ಮಿಸುವುದು, ಅವುಗಳು ಪೂರ್ಣಗೊಂಡನಂತರ ಟೆಂಡರ್ ಕರೆದು ವಾರ್ಷಿಕ ನಿರ್ವಹಣೆ ಮಾಡುವ ಮೂಲಕ ಆಸ್ಪತ್ರೆ ತಾಂತ್ರಿಕ ಸೇವೆ, ದುರಸ್ತಿ, ಅಗತ್ಯ ಸಾಧನಗಳ ಪೂರೈಕೆ, ಬೇಡಿಕೆಗೆ ತಕ್ಕಂತೆ ಉಪಕರಣ ಮತ್ತು ಯಂತ್ರೋಪಕರಣ ಪೂರೈಕೆ, ಸರ್ಕಾರಿ ಆಸ್ಪತ್ರೆಗಳಿಗೆ ಮೂಲ ಸೌಕರ್ಯ ವ್ಯವಸ್ಧಿತ ರೀತಿಯಲ್ಲಿ ಕಾಲಕಾಲಕ್ಕೆ ತಕ್ಕಂತೆ ನಿರ್ವಹಿಸುವುದಾಗಿದೆ.
ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆ ವಾರ್ಷಿಕ ಲೆಕ್ಕ ಶೀರ್ಷಿಕೆ 2022, 2023 ಮತ್ತು 2024 ನೇ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳನ್ನು ಬಳಸಿಕೊಂಡು ಜಿಲ್ಲಾ ಮತ್ತು ತಾಲೂಕುಗಳಲ್ಲಿ ಇರುವಂತಹ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳನ್ನು ಸಾರ್ವಜನಿಕರ ಆರೋಗ್ಯ ಬೇಡಿಕೆಗೆ ತಕ್ಕಂತೆ ನವೀಕರಣ,ಉನ್ನತೀಕರಣ & ನಿರ್ವಹಣೆ ಕೈಗೊಳ್ಳುತ್ತದೆ.
- ಜಿಲ್ಲ್ಲೆ ಅಥವಾ ತಾಲ್ಲೂಕುಗಳಲ್ಲಿ ಇರುವಂತಹ ಸಾರ್ವಜನಿಕ ಅನುಕೂಲ ಕ್ಕಾಗಿ ಹೊಸ ಆಸ್ಪತ್ರೆಗಳ ನಿರ್ಮಾಣ ಮಾಡುವುದು.
- ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟಲ್ ನಿರ್ಮಾಣ & ಹಾಸ್ಟಲ್ ಗಳನ್ನು ದುರಸ್ಧಿ ಮತ್ತು ನಿರ್ವಹಣೆ ಮಾಡುವುದು.
- ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳಿಗೆ ಸುಣ್ಣ –ಬಣ್ಣ ಬಳಿಯುವುದು.
- ಸರ್ಕಾರಿ ಆಸ್ಪತ್ರೆಗಳ & ಸರ್ಕಾರಿ ಮೆಡಿಕಲ್ ಹಾಸ್ಟಲ್ ಗೋಡೆಗಳ ನಿರ್ಮಾಣ ಮತ್ತು ದುರಸ್ಧಿ ಮಾಡುವುದು.
- ಜಿಲ್ಲ್ಲೆ ಅಧವಾ ತಾಲ್ಲೂಕುಗಳಲ್ಲಿ ಇರುವಂತಹ ಸಾರ್ವಜನಿಕ ಆಸ್ಪತ್ರೆಯ ಹಾಗೂ ಹಾಸ್ಟಲ್ ಗಳ ಸ್ಯಾನಿಟರಿ ಲೈನ್ ದುರಸ್ತಿ- ನಿರ್ವಹಣೆ ಮಾಡುವುದು.
- ಆಸ್ಪತ್ರೆಗಳಿಗೆ ಯಂತ್ರೋಪಕರಣಗಳನ್ನು ಒದಗಿಸುವ ವ್ಯವಸ್ಧೆ.
- ಜಿಲ್ಲಾ ಮೆಡಿಕಲ್ ಶಿಕ್ಷಣ ಸಂಸ್ಧೆಗಳ ಬೋಧಕ ಆಸ್ಪತ್ರೆ ಕಟ್ಟಡ ನಿರ್ಮಾಣ.
- ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಅಗತ್ಯತೆಗೆ ತಕ್ಕಂತೆ ಚಾವಣಿ ನಿರ್ಮಾಣ ಮತ್ತು ದುರಸ್ತಿ ಮಾಡುವುದು.
- ಜಿಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್, ಮೆಡಿಕಲ್ ಗ್ಯಾಸ್ ಪೈಪ್ಲೈನ್ ಅಳವಡಿಕೆ, ಲಿಕ್ವಿಡ್ ಆಕ್ಸಿಜನ್, ಪ್ಲಾಂಟ್ ನಿರ್ಮಾಣ ಮಾಡುವುದು.
- ಸರ್ಕಾರಿ ಆಸ್ಪತ್ರೆಗಳಿಗೆ ಐಸಿಯು ನಿರ್ಮಾಣ, ನಮ್ಮ ಕ್ಲಿನಿಕ್, ಹಾಗೂ ಜನತೆ ಆರೋಗ್ಯದ ಹಿತ ದೃಷ್ಟಿಯಿಂದ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದು.
ಕಳಪೆ ಗುಣಮಟ್ಟ ! ಅನುದಾನ ದುರ್ಬಳಕೆ !

- ಉಡುಪಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಆಸ್ಪತ್ರೆ ಕಟ್ಟಡ. ಸಿಬ್ಬಂದಿ ವಸತಿ ಗೃಹಗಳು ಹಾಗೂ ಇತರೆ ಮೂಲಭೂತ ಕಾಮಗಾರಿಗಳನ್ನು ರೂ. 1500.00 ಲಕ್ಷಗಳ. Estimated cost: Rs.115.00 Crores.
- 2022-23ನೇ ಸಾಲಿನ ಮಿಮ್ಸ್ ಸಂಸ್ಥೆಯ ಬಾಲಕ ಬಾಲಕಿಯರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟಲ್ ಗಳಿಗೆ ಕಟ್ಟಡ ದುರಸ್ಧಿ ಮತ್ತು ಬಣ್ಣ ಬಳಿಯಲು ಮತ್ತು ಸ್ಯಾನಿಟರಿ ಲೈನ್ ಗಳ ದುರಸ್ತಿ – ಮಿಮ್ಸ್ ಬೋಧಕ ಆಸ್ಪತ್ರೆಗೆ ಚಾವಣಿ ದುರಸ್ತಿ ಕಾಮಗಾರಿಗಳು- (09 Work).
- ಮಿಮ್ಸ್ ಬೋಧಕ ಆಸ್ಪತ್ರೆಗೆ ಛಾವಣಿ ದುರಸ್ತಿ ಕಾಮಗಾರಿಗಳ ಟೆಂಡರ್ಗಳಿಗೆ ಅನುಮೋದನೆ, ಪ್ರಾಧಿಕಾರ ಅಂಗೀಕರಿಸಿ- ರೂ 100.00 ಲಕ್ಷ ಬಿಡುಗಡೆ ಮಾಡಿದೆ.
- 2022-23ನೇ ಸಾಲಿನಲ್ಲಿ ರೂ.11300.00. ಲಕ್ಷಗಳು.ಆಕುಕ/ಇಂ.ಘ/ಮುಇಂ/ತಾಂ.ಸ-ಇಲಾಖೆ ಪತ್ರ ಸಂಖ್ಯೆ:1/ಸ.ಇಂ-3/ ಜಿಲ್ಲಾ ಆಸ್ಪತ್ರೆ/ಉಡುಪಿ.
- 2022-23ನೇ ಸಾಲಿನಲ್ಲಿ ಚಾಮರಾಜನಗರ-ಗುಂಡ್ಲುಪೇಟೆ ಆಸ್ಪತ್ರೆ ದುರಸ್ಥಿ ಕಾಮಗಾರಿ ಲಕ್ಷಗಳು – 180.00 ಲಕ್ಷ. ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳ ದುರಸ್ಥಿ ಕಾಮಗಾರಿ 180.00 ಲಕ್ಷಗಳು. 2021-22, (SDP) ಅಡಿಯಲ್ಲಿ ಅನುಮೋದನೆಗೊಂಡಿದೆ.
- ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಮುಳ್ಳೂರು ಗ್ರಾಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕ್ಕ ಉಪ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ- 40.00 (ಲಕ್ಷಗಳಲ್ಲಿ ) ಒಟ್ಟು ಕಾಮಗಾರಿಯ ಮೊತ್ತ ರೂ. 760.00 (ಲಕ್ಷಗಳಲ್ಲಿ ).
- 2021-22. ಲೆಕ್ಕ ಶೀರ್ಷಿಕೆ: 4210-01-110-1-01-422-133. SCP- ವಿಶೇಷ ಅಭಿವೃದ್ಧಿ ಯೋಜನೆ- ಆಸ್ಪತ್ರೆ ನಿರ್ಮಾಣ ಮತ್ತು ಉನ್ನತೀಕರಣ ಕಾಮಗಾರಿ.
- ಅರಸೀಕೆರೆ- ತಾಲ್ಲೂಕು ಅಸ್ಪತ್ರೆ,
- ಅರಕಲಗೂಡು – ತಾಲ್ಲೂಕು ಅಸ್ಪತ್ರೆ
- ಚನ್ನರಾಯಪಟ್ಟಣ- ತಾಲ್ಲೂಕು ಆಸ್ಪತ್ರೆ,
8. 2023-2024 ಲೆಕ್ಕ ಶೀರ್ಷಿಕೆ ನಂಜನಗೂಡು ತಾಲ್ಲೂಕು ಆಸ್ಪತ್ರೆಯ ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿಗಾಗಿ – 225 ಲಕ್ಷ.
- ನರಸೀಪುರ ತಾಲ್ಲೂಕು ಆಸ್ಪತ್ರೆ ರೂ. 200.00 ಲಕ್ಷಗಳು.
- ಹೆಚ್.ಡಿ.ಕೋಟೆ ತಾಲ್ಲೂಕು ಮಾದಾಪುರ ಗ್ರಾಮದಲ್ಲಿ ಪ್ರಾಥಮಿಕ
- ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ- 180.00 (ಲಕ್ಷಗಳಲ್ಲಿ)
- ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ದೊಡ್ಡಹೆಟ್ಟೂರು ಗ್ರಾಮದಲ್ಲಿ
- ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ-180.00 (ಲಕ್ಷಗಳಲ್ಲಿ)
9. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ವಾಟಾಳು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ -180.00 (ಲಕ್ಷಗಳಲ್ಲಿ)
10. 2023-2024 ಲೆಕ್ಕ ಶೀರ್ಷಿಕೆ SCP – 225 ಲಕ್ಷ. ಕೊಳ್ಳೆಗಾಲ ತಾಲ್ಲೂಕು ಆಸ್ಪತ್ರೆ ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿ ರೂ.225.00 ಲಕ್ಷಗಳು. 11. 2023-2024 ಲೆಕ್ಕ ಶೀರ್ಷಿಕೆ, SCP ಹಾಸನ ಸಕಲೇಶಪುರ ತಾಲ್ಲೂಕು-ಬೆಳಗೋಡು –PHC ಉನ್ನತೀಕರಣ ಕಾಮಗಾರಿ ರೂ – 300 ಲಕ್ಷ.
11. 2022-2023 ಲೆಕ್ಕ ಶೀರ್ಷಿಕೆ: SCP, PHC. ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿ- ಚಿಕ್ಕಮಗಳೂರು ಜಿಲ್ಲೆ PHC ಗೋಣಿಬೀಡು 25.00 ಲಕ್ಷಗಳು,ಬಣಕಲ್-25.00 ಲಕ್ಷಗಳು, ನಿಡುವಾಲೆ,-25.00 ಲಕ್ಷಗಳು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ವಿಭಾಗವು ಮಂಡ್ಯ, ಉಡುಪಿ, ಮೈಸೂರು, ಚಾಮರಾಜನಗರ, ಮಂಗಳೂರು ಮತ್ತು ಹಾಸನ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಅಭಿವೃದ್ಧಿ, ನವೀಕರಣ, ದುರಸ್ಧಿ, ಉನ್ನತೀಕರಣ ಹಾಗೂ ನಿರ್ವಹಣೆ ಹೆಸರಿನಲ್ಲಿ ಮಾಡಿರುವಂತಹ ಕಾಮಗಾರಿಗಳು ಕಳಪೆ ಗುಣಮಟ್ಟದಾಗಿವೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದುಬಂದಿದ್ದು ಕಾಮಗಾರಿಗಳ MB ಪುಸ್ತಕದಲ್ಲಿ ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿರುವ ಘಟನೆಯನ್ನು ಗುತ್ತಿಗೆದಾರರು ,ಸ್ದಳಿಯ ಸಾರ್ವಜನಿಕರು ವಿವರಿಸಿದ್ದಾರೆ. ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರ,ಸಹಾಯಕ ಕಾರ್ಯಪಾಲಕ ಅಭಿಯಂತರ & ಲೆಕ್ಕಾಧೀಕ್ಷಕರಾದ ರಮೇಶ್ ರವರು ಗುತ್ತಿಗೆದಾರರು ನೀಡುವ ಕಮಿಷನ್ ಆಸೆಗೆ ಬಲಿಯಾಗಿದ್ದಾರೆ ಎಂದು ಸಾರ್ವಜನಿಕ ರಿಂದ ತಿಳಿದು ಬಂದಿದೆ. ಇಂತಹ ಮಾಹಿತಿ ಆಧಾರದ ಮೇಲೆ ಪರಿಶೀಲನೆ ಮಾಡಲು ಕೆಲವು ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ಅರ್ಜಿಸಲ್ಲಿಸಿ, 690 /-ರೂಪಾಯಿ ಪಾವತಿಸಿದರೂ, ಕಾಮಗಾರಿಗಳಿಗೆ ಸಂಬಂದಪಟ್ಟ ಪ್ರಮುಖ ದಾಖಲೆಗಳಾದ ಗುಣಮಟ್ಟ ವರದಿ, ಆಡಳಿತಾತ್ಮಕ ಅನುಮೋದನೆ ಪ್ರತಿ, ತಾಂತ್ರಿಕ ಅನುಮೋದನೆ, ಟೆಂಡರ್ ಡಾಕ್ಯುಮೆಂಟ್, ಅಂತಿಮ ಬಿಲ್ಲುಗಳನ್ನು ನೀಡದೆ ಇರುವುದು ಕಂಡುಬಂದಿದೆ.
ಒಟ್ಟಾರೆ ಇಂತಹ ಘಟನೆ ಬಗ್ಗೆ ಮುಖ್ಯ ಇಂಜಿನಿಯರ್ ರವರಿಗೆ ಲಿಖಿತ ದೂರು ದಾಖಲಿಸಿದರು ಯಾವುದೆ ಉತ್ತರ ನೀಡಿಲ್ಲ. ಇನ್ನೂ ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ಮೈಸೂರು ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರರಾಗಿ ಜಗದೀಶ್ ಎಂಬವರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಲೆಕ್ಕಾಧೀಕ್ಷಕ ರಮೇಶ್ ಎಂಬವರು ಮೈಸೂರು, ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆ ವಿಭಾಗದ ಕಾಮಗಾರಿಗಳ ಅಂತಿಮ ಬಿಲ್ಲುಗಳಿಗೆ ಇವರೇ ಜವಾಬ್ಧಾರರಾಗಿದ್ದು ವಿಭಾಗ ದ ಕೆಲವು ಕಾಮಗಾರಿಗಳ ಕಡತಗಳಿಲ್ಲಿರುವ ಗುಣಮಟ್ಟ ವರದಿ, ಟೆಂಡರ್ ಡಾಕ್ಯುಮೆಂಟ್, Revised ಬಿಲ್ಲು ಮತ್ತು Final ಬಿಲ್ಲು ನೀಡದೆ ಮರೆಮಾಚಿರು ವುದು ಕಂಡುಬಂದಿದೆ ಎಂಬ ಮಾಹಿತಿ ಆಧಾರ ಸಹಿತವಾಗಿದೆ.