ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ?

ನಮ್ಮ ನಾಡು, ನುಡಿ ಮತ್ತು ದೇಶ, ಪ್ರಾಕೃತಿಕ ಸೊಬಗು ಅನೇಕ ವೈಪರೀತ್ಯಗಳಿಗೆ ಸಾಕ್ಷಿಯಾಗುತ್ತಿವೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತ ಜಾಗತಿಕ ತಾಪಮಾನವನ್ನು ಎದುರಿಸಬೇಕಾದೀತೆಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಇದರಿಂದ ಪರಿಸರ, ಪ್ರಕೃತಿ ಮತ್ತು ನಮ್ಮ ಸುತ್ತಲಿನ ವಾತಾವರಣ ನಾಶವಾಗಲು ಬಹುದು. ಇಂತಹ ಪರಿಸ್ಧಿತಿ ಎಲ್ಲಿಗೆ ಹೋಗಿ ಮುಟ್ಟಬಹುದು ಎಂದು ಹೇಳಲು ಕಷ್ಟಕರ. ಇದೇ ರೀತಿ ಮುಂದುವ ರಿದರೆ ಒಂದಲ್ಲಾ ಒಂದು ದಿನ ಭೂಮಿ ಮನುಷ್ಯನ ವಾಸಕ್ಕೆ ಯೋಗ್ಯವಾಗದೇ ಇರಬಹುದು! ಭಾರತದಲ್ಲಿ ಪ್ರತಿಶತ 22 ರಷ್ಟು ಆನೆಗಳ ಆವಾಸ ಸ್ಥಾನವು ಸಂರಕ್ಷಿತ ಪ್ರದೇಶದಲ್ಲಿ ಕಂಡು ಬರುತ್ತದೆ. ಭಾರತದ ದೇಶದ ಭೌಗೋಳಿಕ ಪ್ರದೇಶದಲ್ಲಿ ಸುಮಾರು 3% ರಷ್ಟು ಅರಣ್ಯ ಪ್ರದೇಶ ವಿಸ್ತರಿ ಸಲಾಗಿದು, ರಾಜ್ಯ ಕೆಲವೇ ಭಾಗದಲ್ಲಿ ಮಾನವ –ವನ್ಯ ಜೀವಿಗಳ ಸಂಘರ್ಷಹೆಚ್ಚಾಗುತ್ತಿದೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ.
ಕರ್ನಾಟಕದಲ್ಲಿ ಆನೆ ದಾಳಿಯಿಂದ ಮಾನವ ಸಾವು-ನೋವುಗಳಿಗೆ ಸಂಬಂದಿಸಿದಂತೆ ಅರಣ್ಯ ಇಲಾಖೆ ಮಾಹಿತಿಯನ್ನು ನೀಡಿದೆ. ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ 2013 ರಿಂದ 2024 ವರೆಗೆ ಒಟ್ಟು 359 ಜನರು ಆನೆ ತುಳಿತಕ್ಕೆ / ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ. ಕಳೆದ 10 ವರ್ಷಗಳಿಂದ ಆನೆಗಳ ದಾಳಿ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಎಂದು ಕಂಡುಬಂದಿದ್ದು, ಆನೆಗಳ ದಾಳಿಯಿಂದ ಮಾನವರ ಸಾವಿಗೂ ಕಾರಣವಾಗುವುದರ ಜೊತೆಗೆ ರೈತರು ಬೆಳೆದಂತಹ ಬೆಳೆಗಳನ್ನು ನಾಶ ಮಾಡುತ್ತಿದೆ. ರಾಜ್ಯದಲ್ಲಿ ಅನೆಗಳಿಂದ ಸರಾಸರಿ 330 ಚ.ಕಿ.ಮಿ ನಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
2013 ರಿಂದ 2024 ವರೆಗೆ ರಾಜ್ಯದಲ್ಲಿರುವ ವಿವಿಧ ಅರಣ್ಯ ಇಲಾಖೆ ವೃತ್ತ ಹಾಗೂ ವಿಭಾಗಗಳಲ್ಲಿ ಆನೆ ದಾಳಿಗಳಿಂದ ಮೃತಪಟ್ಟ ವ್ಯಕ್ತಿಗಳ ಅಂಕಿ -ಅಂಶಗಳ ನ್ನು ನೋಡಿದಾಗ ಮೊದಲಿಗೆ ಕೊಡಗು-86, ಬೆಂಗಳೂರು-80, ಚಾಮರಾಜನಗರ-78, ಹಾಸನ-58, ಚಿಕ್ಕಮಂಗಳೂರು-20, ಮೈಸೂರು-11, ಮಂಗಳೂ ರು-6, ಕೆನರಾ-5, ಬಳ್ಳಾರಿ-4, ಧಾರವಾಡ-1, ಎಂಬುದಾಗಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ.. ಇತ್ತಿಚಿನ ದಿನಗಳ ಲ್ಲಿ ಅನೆ ದಾಳಿಗಳು ರೈತರ ಬೆಳೆದ ಬೆಳೆಗಳು, ಮಾನವರ ಮೇಲೆ ದಾಳಿ ಮಾಡುತ್ತಿವೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆಗೆ ಒಳಪಟ್ಟ ವೃತ್ತ ಮತ್ತು ವಿಭಾಗಗಳನ್ನು ಗಮನಿಸಿದರೆ ರಾಜ್ಯ ದಲ್ಲಿ ಮೊದಲನೇ ಸ್ಧಾನದಲ್ಲಿ ಮಾನವರ ಮೇಲೆ ಅನೆದಾಳಿ ಮಾಡಿರುವ ಬಗ್ಗೆ ನೋಡಿದಾಗ ಮೊದ ಲಿಗೆ ಕೊಡಗು, ಬೆಂಗಳೂರು, ಚಾಮರಾಜನಗರ, ಹಾಸನ, ಚಿಕ್ಕಮಂಗಳೂರು, 2 ನೇ ಸ್ಧಾನದಲ್ಲಿ ಮೈಸೂರು ಮತ್ತು ಮಂಗಳೂರು ಉಳಿದ ಜಿಲ್ಲೆ ಗಳಾದ ಕೆನರಾ,, ಬಳ್ಳಾರಿ,, ಧಾರವಾಡ, ಬೆಳಗಾವಿ ಹಾಗೂ ಕಲ್ಬುರ್ಗಿ ಮೂರನೆ ಸ್ಧಾನ ಎಂಬುದು ಅರಣ್ಯ ಇಲಾಖೆ ನೀಡಿರುವ ಅಂಕಿ-ಅಂಶ ಗಳಿಂದ ತಿಳಿದಿದೆ. ಇಂತಹ ಪ್ರಕರಣಗಳು ಅತಿಹೆಚ್ಚಾಗಿ ಕರ್ನಾಟಕಕ್ಕೆ ಸೀಮಿತವಾಗಿರದೆ ಇಡಿ ದೇಶಕ್ಕೆ ಸಂಬಂಧಿಸಿದೆ ಎಂದು ಹೇಳಬಹುದು. ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಶಮನಕ್ಕೆ ಸರ್ಕಾರ 150 ಕೋಟಿ ಮೀಸಲಿಡಲಾಗಿದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವನ್ಯಜೀವಿ ಮತ್ತು ಮಾನವ ಸಂಘರ್ಷ, ಆನೆ ದಾಳಿಯನ್ನು ನಿಯಂತ್ರಣ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರತಿ ವರ್ಷ 10 ರಿಂದ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೆವೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ವನ್ಯಜೀವಿ ದಾಳಿಯಿಂದ ಮೃತ ಪಟ್ಟವರ ಅಂಕಿ-ಅಂಶ

ವನ್ಯಜೀವಿ ದಾಳಿ ನಡೆಸುಲು ಕಾರಣ ?
ರಾಜ್ಯದಲ್ಲಿ ರೈತರು ಹಾಗೂ ರೈತರ ಬೆಳೆಯ ಮೇಲೆ ಪದೆ ಪದೇ ಆನೆ ದಾಳಿ ನಡೆಸುತ್ತಿದ್ದು ಇದಕ್ಕೆ ಸರ್ಕಾರ ಪರಿಹಾರ ಕಂಡುಹಿಡಿ ಯುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ.. ರಾಜ್ಯದಲ್ಲಿರುವ ಬನ್ನೇರುಘಟ್ಟ ವನ್ಯಜೀವಿ,, ಕಾವೇರಿ ವನ್ಯಜೀವಿ ಹಾಗೂ ನಾಗರಹೊಳೆ ವನ್ಯಜೀವಿ ವಲಯಗಳಲ್ಲಿ ಅತಿಹೆಚ್ಚು ವನ್ಯಜೀವಿಗಳಿಂದ ದಾಳಿಯಿಂದ ಸಾವು ನೋವುಗಳು ಸಂಭವಿಸುತ್ತಿವೆ ಎಂಬ ಮಾಹಿತಿ ಅರಣ್ಯ ಇಲಾಖೆ ನೀಡಿರುವ ಅಂಕಿ ಅಂಶಗಳೇ ಸಾಕ್ಷಿ. ಕಾಡಂಚಿನ ಜಿಲ್ಲೆ ಮತ್ತು ತಾಲ್ಲೂಕುಗಳ ಗಡಿ ಭಾಗದಲ್ಲಿ ರೈತರು ಬೆಳೆದ ಬೆಳೆಯನ್ನು ನಾಶ ಮಾಡುವ ಮೂಲಕ, ಮಾನವ ಮತ್ತು ವನ್ಯಜೀವಿ ಸಂಘರ್ಷಗಳಿಗೆ ದಾರಿ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಪ್ರತಿ ವರ್ಷ ಅಂದಾಜು ಸುಮಾ ರು 150 ರಿಂದ 250 ಜನರ ಮೇಲೆ ವನ್ಯಜೀವಿ ದಾಳಿ ಮಾಡುವ ಮೂಲಕ ಸಾವು ನೋವುಗಳು ಸಂಭವಿಸಿವೆ ಎಂಬ ಮಾಹಿತಿ ಲಭಿಸಿದೆ.
1. ಸುವ್ಯವಸ್ಧಿತ ಹಾಗೂ ದೀರ್ಘಕಾಲ ಬಾಳಿಕೆ ಬರುವಂತಹ ಕಬ್ಬಿಣ ತಡೆ ಬೇಲಿಯನ್ನು ನಿರ್ಮಾಣ ಮಾಡುವ ತಾಂತ್ರಿಕ ಕೊರತೆ.
2. ವನ್ಯಜೀವಿ ಹಾಗೂ ಆನೆಗಳ ಆವಾಸಸ್ಧಾನದಲ್ಲಿ ಕುಡಿಯಲು ನೀರಿನ ಗುಂಡಿ, ಟ್ಯಾಂಕು, ಚೆಕ್ ಡ್ಯಾಮ್ ಗಳನ್ನು ಸರಿಯಾಗಿ ನಿರ್ಮಾಣ ಹಾಗೂ ನಿರ್ವಹಣೆ ಮಾಡದಿರುವುದು.
3. ವನ್ಯಜೀವಿಗಳಿಗೆ ಗರಿಷ್ಟ ಪ್ರಮಾಣದ ಆಹಾರ ಅರಣ್ಯದಲ್ಲಿ ಸಿಗದಿರುವುದು.
4. ಮಾನವ ಮತ್ತು ವನ್ಯಜೀವಿ ಸಂಘರ್ಷ ತಗ್ಗಿಸುವ ಸೂಕ್ತ ತಾಂತ್ರಿಕ ಕ್ರಮಗಳ ಕೊರತೆ ಹಾಗೂ ಮೇಲ್ವಿಚಾರಣೆ ಕೊರತೆ.
5. ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪಿಸಲು ವಿನೂತ ತಾಂತ್ರಿಕತೆ ಯನ್ನು ಅಳವಡಿಸಿಕೊಳ್ಳಲು ಸರ್ಕಾರಕ್ಕೆ ಸಾದ್ಯವಾಗದಿರುವುದು.
6. ಅರಣ್ಯ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಕೊರತೆ ಹಾಗೂ ಪರಿಸರ ವಿಜ್ಞಾನದ ಸಂಶೋಧನೆ, ಪರಿಶೀಲನೆ, ಕಾರ್ಯಯೋಜನೆ ಕೊರತೆ ಮತ್ತು ಅಸಮರ್ಪಕ ನಿರ್ವಹಣೆ.
7. ಅನೆಗಳಿಗೆ ಅರಣ್ಯದಲ್ಲಿ ಅತಿ ಹೆಚ್ಚು ಬಿದಿರು ಅಧವಾ ಆನೆ ತಿನ್ನುವಂತಹ ಮರ ಗಿಡಗಳನ್ನು ಬೆಳೆಸುವ ಮೂಲಕ ಅತಿಹೆಚ್ಚು ಆಹಾರ ಸಂಗ್ರಹಣೆಯನ್ನು ಅರಣ್ಯ ಇಲಾಖೆ ಮಾಡದಿರುವುದು.
8. ಆಹಾರ , ನೀರು ಅರಸಿ ಬರುವಂತಹ ಹೊರ ರಾಜ್ಯಗಳ ಆನೆಗಳ ಆಗಮನ ಮತ್ತು ನಿರ್ಗಮನ ಬಗ್ಗೆ ಮಾಹಿತಿ ಕೊರತೆ.
9. ಖಾಸಗಿ ಸಹಭಾಗತ್ವ ಮತ್ತು ಸರ್ಕಾರ ವಿವಿಧ ಯೋಜನೆಗಳ ಬಳಕೆಗಾಗಿ ಅರಣ್ಯವನ್ನು ಒತ್ತುವರಿ ಮಾಡಿ ಯೋಜನೆಗಳನ್ನು ಜಾರಿ ಮಾಡುವುದು.
ಮಾನವನ ಮೇಲೆ ಆನೆ ದಾಳಿ


ವನ್ಯಜೀವಿ ಆವಾಸ ಸ್ಥಾನ ನಿರ್ವಹಣೆ ಪ್ರಾಥಮಿಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ದಾರಿಯಾ ಗಿದೆ. ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಮತು ಪ್ರಾಯೋಜಿತ ಯೋಜನೆಗಳನ್ನು ರೂಪಿಸುವ ಮೂಲಕ ಕಾಡು ಪ್ರಾಣಿ ಗಳ ಮತ್ತು ಅವುಗಳ ಆವಾಸ ಸ್ಥಾನಗಳನ್ನು ರಕ್ಷಣೆ ಮಾಡುವುದು ಮತ್ತು ಕಾರಿಡಾರ್ಗಳ ರಕ್ಷಣೆ ಗಾಗಿ ಆರ್ಥಿಕ & ತಾಂತ್ರಿಕ ಬೆಂಬಲವನ್ನು ಒದಗಿಸುವ ಮೂಲಕ ಮಾನವ-ಪ್ರಾಣಿ ಸಂಘ ರ್ಷವನ್ನು ತಾಂತ್ರಿಕ ಕಾರ್ಯಾಚರಣೆಯ ಮೂಲಕ ತಡೆಹಿಡಿಯಲು ಮುಂದಾಗಬೇಕು. ದೇಶದಲ್ಲಿ ನಮ್ಮನಾಳುವ ಸರ್ಕಾರಗಳು ರೈತರ ವಿಚಾರ ದಲ್ಲಿ ತೀರಾ ತಾತ್ಸಾರ ಮನೋಭಾವನೆ ತಳೆದಿದ್ದೆ. ಇತ್ತೀಚೆಗೆ ಆನೆ, ಚಿರತೆ, ಜಿಂಕೆ, ಕಾಡು ಹಂದಿ, ಕೋತಿ, ನವಿಲು ಜೊತೆಗೆ ಪ್ರಾಣಿ-ಪಕ್ಷಿಗಳು, ನೀರು, ಮೇವುನ್ನು ಅರಸಿಕೊಂಡು ರೈತರ ಜಮೀನಿಗೆ ಹಾಗೂ ಹತ್ತಿರವಿರುವ ಹಳ್ಳಿಗಳಿಗೆ ನುಗ್ಗಿ ದಾಳಿ ಮಾಡುತ್ತಿವೆ ಮತ್ತೊಂದು ಕಡೆ ರೈತರು ಬೆಳೆದ ರೇಷ್ಮೆ, ಬಾಳೆ, ರಾಗಿ, ಕಡ್ಲೆಕಾಯಿ, ತೆಂಗು, ಮಾವು, ಭತ್ತ ಟಮೋಟೂ ಮುಂತಾದ ಬೆಳೆಗಳನ್ನು ನಾಶಪಡಿಸುತ್ತಿವೆ. ಮತ್ತೊಂದು ಕಡೆ ಅರಣ್ಯ ಒತ್ತುವರಿ, ಅರಣ್ಯ ನಾಶದಿಂದಾಗಿ ದಿನೆದಿನೇ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು ಅರಣ್ಯದಲ್ಲಿ ಸರಿಯಾಗಿ ನೀರಿನ ಮೂಲ ಇಲ್ಲದಿರುವುದರಿಂದ ವನ್ಯಜೀವಿಗಳ ದಾಳಿ ಕಾರಣವಾಗಿದೆ.
ಕಾಡು ಪ್ರಾಣಿಗಳು ‘ಮಾನವ ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿರುವ ಪರಿಣಾಮವಾಗಿ 1.ಶಾಶ್ವತ ಅಂಗವೈಪಲ್ಯ, 2. ಭಾಗಶ: ಅಂಗವೈಪಲ್ಯ, 3.ಮಾನವ ಗಾಯ ಎಂಬುದಾಗಿ ವಿಂಗಡಣೆಯನ್ನು ಮಾಡಿದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಆಧಾರ ಮೇಲೆ ರಾಜ್ಯದಲ್ಲಿ 2010-2024 ವರೆಗೆ ಕಾಡು ಪ್ರಾಣಿಗಳಿಂದ ಶಾಶ್ವತ ಅಂಗವೈಪಲ್ಯ-133, ಭಾಗಶ: ಅಂಗವೈಪಲ್ಯ-11, ಮಾನವ ಗಾಯ- 2,769 ಸಂಭವಿಸಿದ್ದು, ಒಟ್ಟಾರೆ ರಾಜ್ಯದಲ್ಲಿ ಕಳದ 15 ವರ್ಷಗಳಲ್ಲಿ 2,913 ಕಾಡು ಪ್ರಾಣಿಗಳು ಮಾನವ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ರೈತರು ಪ್ರಮುಖವಾಗಿ ರೇಷ್ಮೆ, ಬಾಳೆ, ರಾಗಿ, ಕಡ್ಲೆಕಾಯಿ, ತೆಂಗು, ಮಾವು, ಭತ್ತ ಬೆಳೆಗಳನ್ನು ಬೆಳೆಯುತ್ತಾರೆ ಇಲ್ಲಿ ಕೃಷಿಯೇ ಜನರ ಜೀವನಾಡಿ ದುರಂತವೆಂದರೆ ಕೆಲವೊಂದು ಕಡೆ ಮಳೆಯಾದಾರಿತ ಕೃಷಿ ಸೀಮೆಯಾ ಗಿದ್ದು ಸರಿಯಾದ ಪ್ರಮಾಣದಲ್ಲಿ ಮಳೆ ಬಂದರಷ್ಟೆ ಇವರಿಗೆ ಕೊಂಚ ನಿರಾಳ ಇಲ್ಲವಾದರೆ ಬೋರ್ವೆಲ್ ಹಾಕಬೇಕು ಅದು ನೀರು ಸಿಗುವುದ ನ್ನು ಖಚಿತವಾಗಿ ಧೃಡಪಡಿಸಲಾಗದು ಹೊಳೆ ಹತ್ತಿರವಿರುವವರು ಹೊಳೆಯಿಂದ ನೀರು ಹಾಯಿಸಿಕೊಳ್ಳುತ್ತಾರಾದರೂ, ಹತ್ತಾರು ನಿಬಂಧನೆಗಳು ಇನ್ನು ಸರ್ಕಾರ ನೀಡುವ ವಿದ್ಯುತ್ ಬಗ್ಗೆ ಕರ್ನಾಟಕದ ಜನರಿಗೆ ತಿಳಿದಿದೆ ರೈತ ಮಧ್ಯರಾತ್ರಿ ಎದ್ದು ಹೋಗಿ ನೀರು ಹಾಯಿಸ ಬೇಕಾದ ಪರಿಸ್ಥಿತಿ ಇದೆ ಇದೆಲ್ಲದರ ಮಧ್ಯೆರೈತ ಹೇಗೋ ಮಾಡಿ ಬೆಳೆ ಹಾಕಿ ಅದನ್ನು ಮಗುವಿನಂತೆ ಜೋಪಾನ ಮಾಡಿ ಬೆಳೆ ಒಂದು ಹಂತಕ್ಕೆ ಬಂದಿತೆಂದು ನಿಟ್ಟುಸಿರು ಬಿಡುವ ಸಮಯದಲ್ಲಿ ಈ ಆನೆ ದಾಳಿಯಿಂದಾಗಿ ಆತ ಸಂಪೂರ್ಣವಾಗಿ ಕುಸಿದು ಹೋಗುತ್ತಾನೆ ಕಾರಣ ನಂಬಿದ ಬೆಳೆ ಆನೆ ಪಾಲು, ಹಾಕಿದ ಶ್ರಮ ನೀರು ಪಾಲು, ಹೊಲ ಮನೆ ಸಾಲಗಾರರ ಪಾಲು.
ರೈತರ ಗೋಳು ಕೇಳುವವರು ಯಾರು ?
ರಾಜ್ಯ್ದದ ಸಣ್ಣ ಹಿಡುವಳಿ ಹೊಂದಿರುವ ರೈತರು ಸಂಘರ್ಷದಿಂದ ಉಂಟಾಗುವ ಅಪಾಯಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಕೆಲವು ತೀವ್ರತರವಾದ ಸಂದರ್ಭಗಳಲ್ಲಿ ಅವರು ತಮ್ಮ ಜಮೀನು ಬೆಳೆಯನ್ನು ಬೆಳೆಯಲು ಹಿಂಜೆರೆಯುತ್ತಿದಾರೆ. ಇದರಿಂದ ರೈತರಿಗೆ ತೀವ್ರತ್ರವಾದ ನಷ್ಟಗಳು ಭಾರೀ ಪ್ರಮಾಣದ ಲ್ಲಿವೆ. ಅರಣ್ಯ ಇಲಾಖೆಯ ಕಾಡಂಚಿನ ಜಿಲ್ಲೆಗಳಾದ ಕೊಡಗು, ಬೆಂಗಳೂರು, ಚಾಮರಾಜನಗರ ಮತ್ತು ಹಾಸನ ಶ್ರೇಣಿಕತವಾಗಿ ಮಾನವ ಹಾಗೂ ಬೆಳೆಗಳ ಮೇಲೆ ವನ್ಯಜೀವಿ ನಿರಂತರ ದಾಳಿ ನಡೆಸುತಿವೆ ವಾಸ್ತವ.
ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ ಯೋಜನೆ ರೂಪಿಸಿ ಮಾನವ ಮತ್ತು ಪ್ರಾಣಿ ಸಂಘರ್ಷ, ಮಾನವ, ಪ್ರಾಣಿಗಳ ಸಾವು ನೋವುಗ ಳ ಶೂನ್ಯ ಪ್ರಕರಣಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಗಮನ ಹರಿಸಬೇಕು, ಇದಕ್ಕಾಗಿ, ವನ್ಯಜೀವಿ ಆವಾಸಸ್ಥಾನಗಳನ್ನು ಸುಧಾರಿಸುವ ಮತ್ತು ಸಂಘರ್ಷವನ್ನು ತಗ್ಗಿಸಲು ಪರಿಹಾರಗಳನ್ನು ಕಂಡುಹಿಡಿಯಲು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮುಂದಾಗಬೇಕು. ಮತ್ತು ರಾಜ್ಯದಲ್ಲಿರುವಂತಹ ಅರಣ್ಯ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಮಾನವೀಯ ಧೋರಣೆ ತೋರುವ ಮೂಲಕ ರೈತರಿಗೆ ಅರಣ್ಯ ಅಧಿಕಾ ರಿಗಳಿಂದ ಯಾವುದೇ ಕಿರುಕುಳ ನೀಡದಂತೆ ಉನ್ನತ ಅಧಿಕಾರಿಗಳು ಇತರೆ ಅರಣ್ಯ ಅಧಿಕಾರಿಗಳಿಗೆ ತಿಳಿಸಬೇಕು.
ಒಟ್ಟಾರೆ ಅರಣ್ಯ ಇಲಾಖೆಯ ಮಾಹಿತಿ ಆಧಾರ ಮೇಲೆ ರಾಜ್ಯದಲ್ಲಿ ವನ್ಯ ಜೀವಿ ಮತ್ತು ಮಾನವ ಸಂಘರ್ಷ ತೀವ್ರವಾಗಿದು, ಅರಣ್ಯ ಪ್ರದೇಶದಲ್ಲಿ ರೆಸಾರ್ಟ್, ಬಂಗಲೆ, ಜಲಾಶಯ ನಿರ್ಮಾಣ, ಕುಡಿಯುವ ನೀರಿನ ಯೋಜನೆಗಳಿಗಾಗಿ ಅಗಾಧ ಪ್ರಮಾಣದ ಕಾಡಿನ ನಾಶ, ಭೂ ಒತ್ತುವರಿ ಇತ್ಯಾದಿ ಮೊದಲಾದ ಯೋಜನೆಕಾಮಗಾರಿಗಳ ಮೂಲಕ ವನ್ಯಜೀವಿಗಳ ವಾಸಸ್ಥಳವನ್ನು ನುಂಗುತ್ತಿದೆವೆ. ಆದ್ದರಿಂದ ನಾವು ಇಪ್ಪತ್ತೊಂದನೆಯ ಶತಮಾನದಲ್ಲಿ ವನ್ಯಜೀವಿ ಮತ್ತು ಮಾನವನ ಸಂಘರ್ಷ ಮುಖಾಮುಖಿ ತೀವ್ರವಾಗಿದು, ರಾಜ್ಯದಲ್ಲಿ ವನ್ಯಜೀವಿಗಳ ದಾಳಿಯಿಂದ ಬೆಳೆ ನಾಶವಾಗುವುದರ ಜೊತೆಗೆ ಮನುಷ್ಯರು ಸಾಯುತ್ತಿರುವುದು ರಾಜ್ಯದಲ್ಲಿ ತೀರಾ ಸಾಮಾನ್ಯ ಎನಿಸಿದೆ.
ವರದಿ; ಶಿವ ಕುಮಾರ್ ಎಂ. ಅಗರ. ಕನಕಪುರ