ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಮೈಸೂರು ಇಂಜಿನಿಯರಿಂಗ್ ವಿಭಾಗ: ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ & ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರ.
ರೂ 670 /- ಪಾವತಿಸಿದರು ಟೆಂಡರ್ ಡಾಕ್ಯೂಮೆಂಟ್, ಕಾಮಗಾರಿ ಅಂತಿಮ ಬಿಲ್ಲು ನೀಡದ ಅಧಿಕಾರಿಗಳು.
ರಾಜ್ಯದ ಜನತೆಯ ಆರೋಗ್ಯ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಮತ್ತು ಜವಾಬ್ಧಾರಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂಜಿನಿ ಯರಿಂಗ್ ಘಟಕ ಒಂದು ಭಾಗವಾಗಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವಾರು ಯೋಜನೆ ಮತ್ತು ಕಾಮಗಾರಿಗಳನ್ನು ನಿರ್ವಹಿಸ ಲಾಗುತ್ತದೆ. ಇಂಜಿನಿಯರಿಂಗ್ ಘಟಕ ವ್ಯಾಪ್ತಿಗೆ ನಾಲ್ಕು ವಿಭಾಗಗಳು ಮತ್ತು ಹದಿನೈದು ಉಪ ವಿಭಾಗ ಕಛೇರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಡುವ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ನವೀಕರಣ, ಉನ್ನತೀಕರಣ, ರಿಪೇರಿ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಹಠಾತ್ ಸಂಭವಿಸುವ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ತುರ್ತು ಸೇವೆಗಾಗಿ ಆಸ್ಪತ್ರೆಗಳ ನಿರ್ಮಾಣ, ಆಸ್ಪತ್ರೆಗಳಿಗೆ ಆಕ್ಸಿಜನ್, ಮೆಡಿಕಲ್ ಗ್ಯಾಸ್, ಪೈಪ್ಲೈನ್ ಅಳವಡಿಕೆ, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್, ಐಸಿಯು ನಿರ್ಮಾಣ, ನಮ್ಮ ಕ್ಲಿನಿಕ್ ಮುಂತಾದ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. ಆರೋಗ್ಯ ಇಲಾಖೆಯು ಕಾಮಗಾರಿಗಳನ್ನು ಪರಿವೀಕ್ಷಣೆ, ಗುಣಮಟ್ಟ ಹಾಗೂ ಪ್ರಗತಿಯನ್ನು ನಿಯಮಿತವಾಗಿ ಕಾಯ್ದುಕೊಂಡು, ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕಾಗಿ ಸಂಬಂದಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವುದು ವಿಭಾಗಗಳ ಆದ್ಯ ಕರ್ತವ್ಯವಾಗಿರುತ್ತದೆ.
ರೂ 670 /- ಪಾವತಿಸಿದರು ಟೆಂಡರ್ ಡಾಕ್ಯೂಮೆಂಟ್, ಕಾಮಗಾರಿ ಅಂತಿಮ ಬಿಲ್ಲು ನೀಡದ ಅಧಿಕಾರಿಗಳು.

ಆರೋಗ್ಯ ಮತ್ತು ಕುಂಟುಬ ಇಲಾಖೆ, ಮೈಸೂರು ವಿಭಾಗದ ವಾರ್ಷಿಕ ಲೆಕ್ಕ ಶೀರ್ಷಿಕೆಯಡಿ 2022, 2023, 2024 ಮತ್ತು 2025 ನೇ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳನ್ನು ಅಭಿವೃದ್ಧಿ ಹಿತದೃಷ್ಟಿಯಿಂದ ಬಳಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಇರುವಂತಹ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳನ್ನು ಸಾರ್ವಜನಿಕರ ಆರೋಗ್ಯದ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ.
ಸಾಮಾನ್ಯವಾಗಿ ಹೇಳುವುದಾದರೆ ಜಿಲ್ಲೆಗಳಲ್ಲಿ ಇರುವಂತಹ ಸರ್ಕಾರಿ ಆಸ್ಪತ್ರೆ ಕಟ್ಟಡಗಳನ್ನು ಸಾರ್ವಜನಿಕರ ಆರೋಗ್ಯ ಹಿತದಷ್ಠಿಯಿಂದ ಮತ್ತು ರೋಗಿಗಳ ಅಗತ್ಯತೆಗೆ ತಕ್ಕಂತೆ ಹಳೆಯ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯುವುದು, ಕಟ್ಟಡದ ಗುಣಮಟ್ಟ ಕನಿಷ್ಠ ಮತ್ತು ಗರಿಷ್ಠ ಅವಧಿ ಯ ಆಧಾರದ ಮೇಲೆ ಹಳೆಯ ಕಟ್ಟಡಗಳ ಮೇಲೆ ಹೊಸ ಕಟ್ಟಡಗಳನ್ನು ನಿರ್ಮಿಸುವುದು ಅಥವಾ ಗುಣಮಟ್ಟ ಕಳಪೆಯಾದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವುದು, ಈ ಕೆಲಸಗಳು ಪೂರ್ಣಗೊಂಡನಂತರ ವರ್ಷವಾರು ಗುತ್ತಿಗೆದಾರರಿಂದ ಬಿಡ್ ಆಧಾರದ ಮೇಲೆ ಆಸ್ಪತ್ರೆ ಗಳ ಕಟ್ಟಡಗಳನ್ನು ನಿರ್ವಹಣೆ ಮಾಡುವ ಅವಕಾಶ ಮಾಡಿಕೊಡು ವುದು. ಇದಲ್ಲದೆ ಇಲಾಖೆಯ ಅನುಮತಿ ಪಡೆಯುವ ಮೂಲಕ ತಾಂತ್ರಿಕ ಸೇವೆ, ದುರಸ್ತಿ ಅಥವಾ ಅಗತ್ಯ ಸಾಧನಗಳು, ಬೇಡಿಕೆಗೆ ತಕ್ಕಂತೆ ಉಪಕರಣ ಮತ್ತು ಯಂತ್ರೋಪಕರಣಗಳ ಪೂರೈಕೆ, ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ವ್ಯವಸ್ಧಿತ ರೀತಿಯಲ್ಲಿ ನಿರ್ವಹಿಸುವುದಾಗಿದೆ.
ಏನಿದು ಅಭಿವೃದ್ಧಿ & ನಿರ್ವಹಣೆ ?
- ಜಿಲ್ಲ್ಲೆ ಅಥವಾ ತಾಲ್ಲೂಕುಗಳಲಿ ಇರುವಂತಹ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಆಸ್ಪತ್ರೆಗಳ ನಿರ್ಮಾಣ ಮಾಡುವುದು
- ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟಲ್ ನಿರ್ಮಾಣ ಮಾಡುವುದು
- ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಪಲ್ ಗಳನ್ನು ದುರಸ್ಧಿ ಮತ್ತು ನಿರ್ವಹಣೆ ಮಾಡುವುದು.
- ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳಿಗೆ ಸುಣ್ಣ –ಬಣ್ಣ ಬಳಿಯುವುದು.
- ಸರ್ಕಾರಿ ಆಸ್ಪತ್ರೆಗಳ , ಮೆಡಿಕಲ್ ಆಸ್ಪತ್ರೆಗಳ ಗೋಡೆ ನಿರ್ಮಾಣ ಮತ್ತು ದುರಸ್ಧಿ ಮಾಡುವುದು
- ಆಸ್ಪತ್ರೆಯ ಹಾಗೂ ಹಾಸ್ಟಲ್ ಗಳ ಸ್ಯಾನಿಟರಿ ಲೈನ್ ಗಳ ದುರಸ್ತಿ- ನಿರ್ವಹಣೆ ಮಾಡುವುದು.
- ಆಸ್ಪತ್ರೆಗಳಿಗೆ ಯಂತ್ರೋಪಕರಣಗಳನ್ನು ಒದಗಿಸುವ ವ್ಯವಸ್ಧೆ ಮತ್ತು ನಿರ್ವಹಣೆ ಮಾಡುವುದು.
- ಜಿಲ್ಲಾ ಮೆಡಿಕಲ್ ಶಿಕ್ಷಣ ಸಂಸ್ಧೆಗಳ ಬೋಧಕ ಆಸ್ಪತ್ರೆ ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು.
- ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ನಿರ್ಮಾಣ ಮತ್ತು ದುರಸ್ತಿ ಮಾಡುವುದು.
- ಜಿಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್, ಮೆಡಿಕಲ್ ಗ್ಯಾಸ್ ಪೈಪ್ಲೈನ್ ಅಳವಡಿಕೆ, ಲಿಕ್ವಿಡ್ ಆಕ್ಸಿಜನ್, ಪ್ಲಾಂಟ್ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು.
- ಸರ್ಕಾರಿ ಆಸ್ಪತ್ರೆಗಳಿಗೆ ಐಸಿಯು ನಿರ್ಮಾಣ, ನಮ್ಮ ಕ್ಲಿನಿಕ್, ಹಾಗೂ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದು.
ಮೈಸೂರು ಇಂಜಿನಿಯರಿಂಗ್ ವಿಭಾಗ ಕೈಗೊಂಡಿರುವ ಜಿಲ್ಲಾವಾರು ಕಾಮಗಾರಿಗಳು
(ಲೆಕ್ಕ ಶೀರ್ಷಿಕೆ 2022, 2023, 2024 ಮತ್ತು 2025)
- ಉಡುಪಿ ಜಿಲ್ಲೆ, ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿವುದು ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ವಸತಿ ಗೃಹಗಳು ಹಾಗೂ ಇತರೆ ಮೂಲಭೂತ ಸೌಕರ್ಯ ನಿರ್ವಹಣ ಕಾಮಗಾರಿಗಳ ವೆಚ್ಚ ರೂ. 11500.00 ಲಕ್ಷಗಳು.
- 2022-23ನೇ ಸಾಲಿನ ಮಿಮ್ಸ್ ಸಂಸ್ಥೆಯ ವಿದ್ಯಾರ್ಥಿಗಳ ಹಾಸ್ಟಲ್ ಕಟ್ಟಡ ದುರಸ್ಧಿ, (ಬಣ್ಣ ಬಳಿಯಲು ಮತ್ತು ಸ್ಯಾನಿಟರಿ ಲೈನ್, ಛಾವಣಿ) ಗಳ 09 ಕಾಮಗಾರಿಗಳಿಗೆ ಟೆಂಡರ್ ಅನುಮೋದನೆ ರೂ 100.00 ಲಕ್ಷ ಗಳು.
- 2022-23ನೇ ಸಾಲಿನಲ್ಲಿ ಚಾಮರಾಜನಗರ-ಗುಂಡ್ಲುಪೇಟೆ ಆಸ್ಪತ್ರೆಯ ದುರಸ್ಥಿ ಕಾಮಗಾರಿ (SDP) ರೂ /- 180.00 ಲಕ್ಷಗಳು.
- ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಮುಳ್ಳೂರು ಗ್ರಾಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಉಪ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ- 40.00 ಲಕ್ಷಗಳು.
- 2023-2024 ಲೆಕ್ಕ ಶೀರ್ಷಿಕೆ: SCSP ಹಾಸನ ಸಕಲೇಶಪುರ ತಾಲ್ಲೂಕು-ಬೆಳಗೋಡು ಆಸ್ಪತ್ರೆಗಳ ಉನ್ನತೀಕರಣ ಕಾಮಗಾರಿ ರೂ – 300 ಲಕ್ಷ.
- 2022-2023 ಲೆಕ್ಕ ಶೀರ್ಷಿಕೆ: SCSP project. PHC ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿ, ಚಿಕ್ಕಮಗಳೂರು ಜಿಲ್ಲೆ -PHC. ಗೋಣಿಬೀಡು 25.00 ಲಕ್ಷಗಳು, ಬಣಕಲ್-25.00 ಲಕ್ಷಗಳು, ನಿಡುವಾಲೆ,-25.00 ಲಕ್ಷಗಳು, ಗುತ್ತಿ- 25.00 ಲಕ್ಷಗಳು.
- 2021-22. ಲೆಕ್ಕ ಶೀರ್ಷಿಕೆ :4210-01-110-1-01-422-133. SCP Project ಆಸ್ಪತ್ರೆ ನಿರ್ಮಾಣ ಮತ್ತು ಉನ್ನತೀಕರಣ ಕಾಮಗಾರಿ.
- ಅರಸೀಕೆರೆ- ತಾಲ್ಲೂಕು ಅಸ್ಪತ್ರೆ ಕಟ್ಟಡ ನವೀಕರಣ ಮತ್ತು ದುರಸ್ಥಿ
- ಅರಕಲಗೂಡು – ತಾಲ್ಲೂಕು ಅಸ್ಪತ್ರೆ ಕಟ್ಟಡ ನವೀಕರಣ ಮತ್ತು ದುರಸ್ಥಿ
- ಹೊಳೆನರಸೀಪುರ- ತಾಲ್ಲೂಕು ಅಸ್ಪತ್ರೆ ಕಟ್ಟಡ ನವೀಕರಣ ಮತ್ತು ದುರಸ್ಥಿ
- ಚನ್ನರಾಯಪಟ್ಟಣ- ತಾಲ್ಲೂಕು ಆಸ್ಪತ್ರೆ ಕಟ್ಟಡ ನವೀಕರಣ ಮತ್ತು ದುರಸ್ಥಿ
- 2023-2024 ಲೆಕ್ಕ ಶೀರ್ಷಿಕೆ : SCSP –ನಂಜನಗೂಡು ತಾಲ್ಲೂಕು ಆಸ್ಪತ್ರೆಯ ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿ ರೂ. 225.00 ಲಕ್ಷಗಳು.,
- ನರಸೀಪುರ ತಾಲ್ಲೂಕು ಆಸ್ಪತ್ರೆಯ ಮೂಲಭೂತ ಸೌಕರ್ಯ ಉನ್ನತೀಕರಣ ಕಾಮಗಾರಿ, ರೂ. 200.00 ಲಕ್ಷಗಳು.
- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕು ಮಾದಾಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ- .180.00 (ಲಕ್ಷಗಳಲ್ಲಿ)
- ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ದೊಡ್ಡಹೆಟ್ಟೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ-180.00 (ಲಕ್ಷಗಳಲ್ಲಿ)
- ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ವಾಟಾಳು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ -180.00 (ಲಕ್ಷಗಳಲ್ಲಿ)
- ಮೈಸೂರು ಜಿಲ್ಲೆಯ ಮೈಸೂರು ತಾಲ್ಲೂಕು ಸಿದ್ಧರಾಮನ ಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ.
”ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ & ನಿರ್ವಹಣೆ ಹೆಸರಿನಲ್ಲಿ ನಡೆದಿರುವ ಕಾಮಗಾರಿ, ಅಂತಿಮ ಬಿಲ್ಲುಗಳ ಅವ್ಯವಹಾರಗಳ ಬಗ್ಗೆ ಸ್ಧಳಿಯ ಸಾರ್ವಜನಿಕರು, ಗುತ್ತಿಗೆದಾರಾರುಗಳಿಂದ ಬಂದತಂಹ ಮೌಖಿಕ ಮಾಹಿತಿ ಆಧಾರದ ಮೇಲೆ ಲೆಕ್ಕ ಶೀರ್ಷಿಕೆ 2022, 2023, 2024 & 2025 ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಇಂಜಿನಿಯರಿಂಗ್ ವಿಭಾಗದಲ್ಲಿ ಮಾಹಿತಿ ಹಕ್ಕು ಕಾಯ್ಧೆಯಡಿ ಟೆಂಡರ್ ಡಾಕ್ಯೂಮೆಂಟ್ ಹಾಗೂ ಅಂತಿಮ ಬಿಲ್ಗಳ ಬಗ್ಗೆ ಕೋರಿದಾಗ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಜಗದೀಶ್, ಅಕೌಂಟ್ ಸೂಪರಿಡೆಂಟ್ ರಮೇಶ್, ತಾಂತ್ರಿಕ ಸಹಾಯಕ ಪ್ರವೀಣ್ ಎಂಬ ಅಧಿಕಾರಿಗಳು ಲಿಖಿತ ದಾಖಲೆಗಳನ್ನು ಪಡಯಲು 670 /- ರೂ ಪಾವತಿಸಿಕೊಂಡಿದ್ದು, ಇಲ್ಲಿಯವರೆಗೂ ಯಾವುದೇ ಲಿಖಿತ ದಾಖಲೆಗಳನ್ನು ನೀಡಿರುವು ದಿಲ್ಲ. ಈ ವಿಷಯಕ್ಕೆ ಸಂಬಂದಪಟ್ಟಂತೆ ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆ ಮುಖ್ಯ ಅಭಿಯಂತರರಾದ ಮುಕ್ಕಣ್ಣ ನಾಯಕ್ ಎಂಬ ಅಧಿಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸದೇ ತಮ್ಮ ಇಲಾಖೆಯಲ್ಲಿನ ಅವ್ಯವಹಾರಗಳನ್ನು ಮರೆಮಾಚಲು ಮುಂದಾಗಿದ್ದಾರೆ ಎಂಬುದಕ್ಕೆ ದಾಖಲೆಗಳನ್ನು ನೀಡದಿರುವುದೇ ಸಾಕ್ಷಿ.”
ಆರೋಗ್ಯ ಇಲಾಖೆ ಇಂಜಿನಿಯರಿಂಗ್ ಘಟಕಗಳಲ್ಲಿ ಅಧಿಕಾರಿಗಳು ಕೆಲಸವನ್ನು ನಿರ್ಲಕ್ಷ್ಯ ಮಾಡುವ ಮೂಲಕ ಕರ್ನಾಟಕ ಆರ್ಥಿಕ ಸಂಹಿತೆ 2021-22, ಕರ್ನಾಟಕ ನಾಗರೀಕ ಸೇವೆ ನಿಯಮಾವಳಿಗಳು-2021 ರ ನಿಯಮ 3(1) (i) (ii) (iii) (iv) ಉಲ್ಲಂಘನೆ ಮಾಡುವುದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕವಾಗಿ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ ಮಂಡ್ಯ, ಉಡುಪಿ, ಮೈಸೂರು, ಚಾಮರಾಜನಗರ, ಮಂಗಳೂರು, ಚಿಕ್ಕಮಗ ಳೂರು ಮತ್ತು ಹಾಸನ ಜಿಲ್ಲೆಯಲ್ಲಿರುವ ಸರ್ಕಾರಿ ಕಟ್ಟಡಗಳ ಅಭಿವೃದ್ಧಿ, ನವೀಕರಣ, ದುರಸ್ಧಿ, ಉನ್ನತೀಕರಣ ಹಾಗೂ ನಿರ್ವಹಣೆ ಹೆಸರಿನಲ್ಲಿ ಮಾಡಿರುವಂತಹ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದುಬಂದಿದೆ. ಮುಂದುವರೆದು ಕೆಲವು ಕಾಮಗಾರಿಗಳ ಎಂ.ಬಿ ಪುಸ್ತಕದಲ್ಲಿ ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿರುವ ಘಟನೆ ನಡೆದಿದೆ ಎಂಬ ಮಾಹಿತಿಯನ್ನು ಇಲಾಖೆಯ ಗುತ್ತಿಗೆದಾರರು ತಿಳಿಸಿರುತ್ತಾರೆ.
ಇನ್ನೂ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಜಗದೀಶ್, ಅಕೌಂಟ್ ಸೂಪರಿಡೆಂಟ್ ರಮೇಶ್, ತಾಂತ್ರಿಕ ಸಹಾಯಕ ಪ್ರವೀಣ್ ಹಾಗೂ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರ ಅಧಿಕಾರಿಗಳು ಗುತ್ತಿಗೆದಾರರು ನೀಡುವ ಕಮಿಷನ್ ಆಸೆಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದು ಬಂದಿದೆ. ಇಂತಹ ಮೌಖಿಕ ಆಧಾರದ ಮೇಲೆ ಪರಿಶೀಲನೆ ಮಾಡಲು ಕೆಲವು ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ನಿಯಮದಡಿ ಅರ್ಜಿಸಲ್ಲಿಸಿ, (ಆ.ಕು.ಕಾ.ಇಂ. ಮೈಸೂರು ವಿಭಾಗಕ್ಕೆ 670 /-ರೂಪಾಯಿ ಪಾವತಿ ಸಿದರು) ಸಂಬಂದಪಟ್ಟ ಕಾಮಗಾರಿ ದಾಖಲೆಗಳಾದ ಗುಣಮಟ್ಟ ವರದಿ, ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಅನುಮೋದನೆ, ಟೆಂಡರ್ ಡ್ಯಾಕ್ಯುಮೆಂಟ್, , ಅಂತಿಮ ಬಿಲ್ಲುಗಳ ಪ್ರತಿಗಳನ್ನು ನೀಡದೆ ಇರುವುದು ಸತ್ಯಾಂಶಕ್ಕೆ ಹಿಡಿದ ಕನ್ನಡಿಯಾಗಿದೆ.
ಇಂತಹ ವಿಷಯಗಳ ಬಗ್ಗೆ ಮುಖ್ಯ ಇಂಜಿನಿಯರ್ ರವರಿಗೆ ಲಿಖಿತ ದೂರು ದಾಖಲಿಸಿದರು ಯಾವುದೇ ಉತ್ತರ ನೀಡಿಲ್ಲ. ಇನ್ನು ಮೈಸೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಹಾಗೂ ಲೆಕ್ಕಾಧೀಕ್ಷಕರಾದ ರಮೇಶ್, ಈ ಇಬ್ಬರು ಅಧಿಕಾರಿಗಳೇ ಕಾಮಗಾರಿಗಳ ಅಂತಿಮ ಬಿಲ್ಲುಗಳಿಗೆ ಮೂಲ ಜವಾಬ್ಧಾರರಾಗಿದ್ದು ದಾಖಲೆಗಳನ್ನು ಮರೆ ಮಾಚಿರುವುದು ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು.
2022, 2023, 2024 ಮತ್ತು 2025 ರ ಅವಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಬಿಡುಗಡೆಯಾಗಿರುವ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ನವೀಕರಣ, ಉನ್ನತೀಕರಣ & ನಿರ್ವಹಣೆ ಹೆಸರಿನಲ್ಲಿ ಕೈಗೊಂಡಿರುವಂತಹ ವಿವಿಧ ಕಾಮಗಾರಿಗಳು ಕಳಪೆ ಗುಣಮಟ್ಟ ದಿಂದ ಕೂಡಿದ್ದು, MB ಪುಸ್ತಕದಲ್ಲಿ ತಪ್ಪು ಲೆಕ್ಕ ತೋರಿಸಿ, ಗುತ್ತಿಗೆದಾರರ ಜೊತೆ ಅಧಿಕಾರಿಗಳು ಸಾಮೀಲಾಗಿ ಭ್ರಷ್ಟಾಚಾರದ ಪಾಲುದಾರ ರಾಗಿವುದು ಮೇಲ್ನೋಟಕ್ಕೆ ಕಂಡು ಬಂದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ದಾಖಲಿಸಿದರು ಯಾವ ಕ್ರಮಕ್ಕೂ ಮುಂದಾಗಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಅಧಿನಿಯಮ ಹಾಗೂ ಸರ್ಕಾರ ದ ಅಧಿಸೂಚನೆ ಮೇರೆಗೆ ಇಲಾಖೆಯು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿದೆ ಆದರೆ ಮೈಸೂರು ವಿಭಾಗದ ಅಭಿಯಂತರ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ, ಖಜಾನೆಗೆ ನಷ್ಟ ಉಂಟುಮಾಡುವ ಮೂಲಕ ಗುತ್ತಿಗೆದಾರರ ಅನುಕೂಲಕ್ಕೆ ತಕ್ಕಂತೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಒಟ್ಟಾರೆ ಆ.ಕು.ಕಾ.ಇಂ. ಮೈಸೂರು ವಿಭಾಗದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ಬಂದಂತಹ ದೂರಿನ ಅಧಾರದ ಮೇಲೆ ಕಳಪೆ ಕಾಮಗಾರಿ, ಅನುದಾನ ದುರ್ಬಳಕೆ ಮತ್ತು ಕಾಮಗಾರಿಗಳ ಅವ್ಯವಹಾರದ ಬಗ್ಗೆ ಅರ್ಜಿದಾರರಿಗೆ ಕಾರ್ಯಪಾಲಕ ಅಭಿಯಂತರ ಜಗದೀಶ್ ಮತ್ತು ಅಕೌಂಟ್ ಸೂಪರ್ ಡೆಂಟ್ ರಮೇಶ್ ಅಧಿಕಾರಿಗಳು ಯಾವುದೇ ಲಿಖಿತ ದಾಖಲೆಗಳನ್ನು ಇದುವರೆವಿಗೂ ನೀಡಿರುವುದಿಲ್ಲ. ಈ ಅಧಿಕಾರಿಗಳು ಸರ್ಕಾರದ ಖಜಾನೆಗೆ ನಷ್ಟ ಉಂಟುಮಾಡಿ ತಮ್ಮ ಆಪ್ತ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು, ಸರ್ಕಾರದ ಆದೇಶ ಮತ್ತು ಸುತ್ತೋಲೆಗಳನ್ನು ಉದ್ದೇಶ ಪೂರ್ವಕವಾಗಿಯೇ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಇಂತಹ ವಿಷಯಗಳ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದರು ಸಹ ಈವರೆಗೆ ಮೈಸೂರು ಆ.ಕು.ಕಾ.ಇಂ ವಿಭಾಗದ ಅಭಿಯಂತರ ಅಧಿಕಾರಿಗಳ ಬಗ್ಗೆ ಕ್ರಮಕೈಗೊಳ್ಳದೇ ಇರುವುದು ಮತ್ತೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ವರದಿ: ಶಿವಕುಮಾರ್ ಎಂ. ಅಗರ. ಕನಕಪುರ.