‘ಬೆಂಗಳೂರು ವಿಶ್ವವಿದ್ಯಾನಿಲಯ’ ಪಾರಂಪರಿಕ ತಾಣ ಎಂದು ಘೋಷಣೆ ಆಗಲಿ !
ಬೆಂಗಳೂರು ವಿಶ್ವವಿದ್ಯಾನಿಲಯವು ಡಾ. ಹೆಚ್. ನರಸಿಂಹಯ್ಯನವರ ಕಾಲದಲ್ಲಿ ಶುರುವಾಗಿ, 1964 ಜುಲೈ ರಂದು ಮೈಸೂರು ವಿಶ್ವವಿದ್ಯಾನಿಲಯದ ಒಂದು ಭಾಗವಾಗಿದು, ಅಂತಿಮವಾಗಿ ಪ್ರತ್ಯೇಕ ವಿಶ್ವವಿದ್ಯಾಲಯವಾಯಿತು. ಆರಂಭದಲ್ಲಿ ಎರಡು ಪ್ರಮುಖ ಕಾಲೇಜುಗಳಾದ ಸೆಂಟ್ರಲ್ ಕಾಲೇಜು ಮತ್ತು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಬೆಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಬಿಂದುವಾಗಿದ್ದವು. ವಿಶ್ವವಿದ್ಯಾನಿಲಯವು ಸುಮಾರು ವರ್ಷಗಳ ಕಾಲ ಬಂಜರು ತುಂಬಿ ಬರಡು ಭೂಮಿಯಾಗಿದ್ದು ಅಕ್ಷರಶ:ಸತ್ಯ. ಡಾ. ಹೆಚ್. ನರಸಿಂಹಯ್ಯನವರ ನಂತರ ಮಾನ್ಯ ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯಲ್ಲಿ ಬರಡು ಭೂಮಿಗೆ ಗಿಡನೆಟ್ಟು, ನೂರಾರು ಗಿಡಮರ ನೆಡುವ ಕಾರ್ಯ ಆರಂಭಿಸಿದರು ಕೆಲವು ವರ್ಷಗಳ ನಂತರ ಈ ಕಾರ್ಯವನ್ನು ನಿವೃತ್ತ ಪ್ರಾಧ್ಯಾಪಕ ಟಿ.ಜೆ. ರೇಣುಕಾ ಪ್ರಸಾದ್ ಮುಂದುವರಿಸಿಕೊಂಡು ಬಂದಿದ್ದು, ಈಗ ಸುಮಾರು 660 ಎಕರೆ ಪ್ರದೇಶದಲ್ಲಿ ಬೆಂಗಳೂರು ನಗರದ ಅತಿ ದೊಡ್ಡ ಜೀವವೈವಿಧ್ಯ ವನ ಸೃಷ್ಟಿಯಾಗಿದೆ. ಇವರ ಜೊತೆ ಹಲವಾರು ಸ್ವಯಂ ಸೇವಕರು, ವಾಯು ವಿಹಾರಿಗಳು ಮತ್ತು ಸಂಘ ಸಂಸ್ಧೆಗಳು ಕೈಜೋಡಿಸಿದಾಗ ಇದಕ್ಕೆ ಒಂದು ವಿಶೇಷ ಸ್ಧಾನಮಾನ ಪಡೆಯಿತು.
ನೂರಾರು ಸಸ್ಯ & ಪಕ್ಷಿ ಸಂಕುಲ
ವಿವಿಯಲ್ಲಿರುವ ಜೀವವೈವಿಧ್ಯ ವನದಲ್ಲಿ ನೂರಾರು ಜಾತಿಯ ಪಕ್ಷಿಗಳು, ದುಂಬಿಗಳು ಆಶ್ರಯ ಪಡೆದಿರುವುದು ಇದಕ್ಕೆ ಸಾಕ್ಷಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಂಚವಟಿ, ಪಂಚವಲ್ಕಲ, ಚೆಲುವಿನ, ಹಣ್ಣಿನ ತೋಟ, ಮಿಯಾವಾಕಿ, ಒತ್ತು ಅರಣ್ಯ ಹಲವಾರು ಔಷಧಿ ಗಿಡಗಳು ಪ್ರಾಣಿ ಪಕ್ಷಿ ಸಂಕುಲಗಳು ಬದುಕಿ ಜೀವ ಉಳಿಸಿಕೊಂಡಿದ್ದು ಸದಾ ಹಸಿರು ತುಂಬಿಗೊಂಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಯೋಡೈವರ್ಸಿಟಿ ಪಾರ್ಕ್ ಹೈಕೋರ್ಟ್ ನಿರೀಕ್ಷೆಯಂತೆ ಅಭಿವೃದ್ಧಿಯಾಗುತ್ತಿದ್ದು, ನೀರಿನ ಕುಂಟೆ, ಕಟ್ಟೆ, ಕಲ್ಯಾಣಿಗಳಿಂದ ತುಂಬಿ ಬಯೋ-ಜಿಯೋ-ಹೈಡ್ರೋ ಪಾರ್ಕ್ (Natural indigenous diversified Forest) ಹೊರಹೊಮ್ಮಿದೆ. ಪರಿಸರವಾದಿ ಡಾ. ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ಹಾಗೂ ಪರಿಸರ ಕಾರ್ಯಕರ್ತರು ಘನವೆತ್ತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ಇದರ ಫಲವಾಗಿ ಜ್ಞಾನಭಾರತಿ ಆವರಣದಲ್ಲಿ ಜೀವವೈವಿಧ್ಯ ತಾಣ ಹೊರಹೊಮ್ಮಿದೆ. ವಿವಿಯಲ್ಲಿ ಅಂದಾಜು ಸುಮಾರು 660 ಎಕರೆ ಪ್ರದೇಶದಲ್ಲಿ ನಗರದ ಅತಿದೊಡ್ಡ ಜೀವ ವೈವಿಧ್ಯ ವನ’ ಸೃಷ್ಟಿಗೆ ದಾಖಲೆಗಳೆ ಸಾಕ್ಷಿ. ಇಂತಹ ‘ಬಯೊ-ಜಿಯೊ-ಹೈಡೋ ಪಾರ್ಕ್’ ನಂತಹ ವನವನ್ನು ನಾಶಮಾಡಿ ಹಲವು ಸಂಸ್ಥೆಗಳಿಗೆ ಜಮೀನು ನೀಡುವ ಮೂಲಕ, ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂಬುದು ಸಾರ್ವಜನಿಕರ ವಾದ.
ವೈಜ್ಞಾನಿಕ ವರದಿ ವಿಳಂಬ ಏಕೆ ?
ಜ್ಞಾನಭಾರತಿ ಆವರಣದಲ್ಲಿ ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ನ್ಯಾಕ್ ಕೂಡ ಹೇಳಿದೆ.’ವಿಶ್ವವಿದ್ಯಾಲಯದ ಸಿಂಡಿಕೇಟ್ನಲ್ಲಿ 2017 ಮತ್ತು 2022 ರಲ್ಲಿ ಜ್ಞಾನಭಾರತಿ ಆವರಣದಲ್ಲಿರುವ ಬಯೊಪಾರ್ಕ್ ಸಂರಕ್ಷಿಸಲು ನಿರ್ಣಯ ಮಂಡಿಸಲಾಗಿದೆ. ಜ್ಞಾನಭಾರತಿ ಅವರಣವನ್ನು ಜೀವವೈವಿಧ್ಯ ಕಾಯ್ದೆ-2002 ರಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯ ರಚಿಸಿದ್ದ ಸಮಿತಿ ವರದಿ ನೀಡಿದೆ. ‘ಜ್ಞಾನ ಭಾರತಿ ವಾಯುವಿಹಾರಿಗಳ ಸಂಘ ಸಲ್ಲಿಸಿದ್ದ ದೂರಿನ ಮೇರೆಗೆ ರಾಜ್ಯಪಾಲರಿಗೆ ವೈಜ್ಞಾನಿಕ ವರದಿ ಸಲ್ಲಿಸಲು ಕುಲಸಚಿವರ ಅಧ್ಯಕ್ಷತೆಯಲ್ಲಿ 2024ರ ಸೆಪ್ಟೆಂಬರ್ 26ರಂದು ಸಮಿತಿ ರಚಿಸಲಾಗಿದ್ದು ಮಾಹಿತಿ ಹಕ್ಕು ಕಾಯ್ಧೆಯಡಿ ಸುಮಾರು 95 ಕ್ಕೂ ಹೆಚ್ಚು ದಿನ ಕಳೆದರು ವಿವಿ ಯ ಅಧಿಕಾರಿಗಳಿಂದ ಯಾವುದೇ ಮಾಹಿತಿ ನೀಡಿಲ್ಲ. ವಿವಿ ಯದ ಜೈವಿಕ ಸಂಪತ್ತು ಅಂದಾಜು ಸುಮಾರು ರೂ. 16,500 ಕೋಟಿ ಬಾಳುವ ಆಮ್ಲಜನಕ ಉತ್ಪಾದನಾ ಕೇಂದ್ರವಾಗಿದೆ. ಯುವಿಸಿಇಗೆ ಐವತ್ತು ಎಕರೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿರುವುದು ಶೋಚನೀಯ. ಹಸಿರಿನ ವನಸಿರಿಯ ಉಸಿರಿನ ಹಾಗೂ ಅಂತರ್ಜಲ ಮರುಪೂರಣ ಕೇಂದ್ರ ನೀರಿಗಾಗಿ ಪರಿತಪಿಸುವ ಕಾಲದಲ್ಲಿ ಕಳೆದುಕೊಳ್ಳಲಾಗದು. ಬೆಂಗಳೂರಿಗೆ ಅತಿದೊಡ್ಡ ಜೈವಿಕ ವೈವಿಧ್ಯ ವನವಾಗಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿರುವ ಜೀವವೈವಿಧ್ಯತೆ ತಾಣವು ಜೀವವೈವಿಧ್ಯ ಕಾಯ್ದೆ 2004, ಪರಿಸರ ಸಂರಕ್ಷಣಾ ಕಾಯ್ದೆ 1968 ರ ಉಲ್ಲಂಘನೆಯಾಗಿದೆ ಎಂಬ ಸಾಮಾನ್ಯ ಅರಿವು ನಮ್ಮನಾಳುವ ಜನನಾಯಕರಿಗೆ ಇಲ್ಲದೆ ಇರುವುದು ನೋವಿನ ಸಂಗತಿ ಎಂದು ವಾಯುವಿಹಾರಿಗಳು ನೋವನ್ನು ವ್ಯಕ್ತಪಡಿಸುವ ಮೂಲಕ ಈ ಜೈವಿಕ ತಾಣವನ್ನು ಬೆಂಗಳೂರಿನ ನಾಗರೀಕರಿಕೆ ತಮ್ಮ ಪ್ರಾಣವನ್ನು ಕೊಟ್ಟು ಉಳಿಸಿಕೊಳ್ಳಲು ಮುಂದಾಗಿದಾರೆ.
ವಿ ವಿ. ಮುಖ್ಯಾಂಶ
- ಡಾ. ಹೆಚ್. ನರಸಿಂಹಯ್ಯನವರು 1964 ರಲ್ಲಿ ಪ್ರತ್ಯೇಕ ಬೆಂಗಳೂರು ವಿವಿ ಸ್ಧಾಪನೆ.
- ವಿಶ್ವವಿದ್ಯಾನಿಲಯ 1100 ಎಕರೆ ವಿಸ್ತಾರವಾದ ಭೂಮಿಯನ್ನು ಹೊಂದಿದ್ದು, ‘ಜ್ಞಾನ ಭಾರತಿ’ ಎಂಬ ಹೆಸರು್ ಪಡೆಯಿತು.
- ವೈಜ್ಞಾನಿಕ ವರದಿ ಸಲ್ಲಿಸಿರುವ ಬಗ್ಗೆ ಮಾಹಿತಿ ಹಕ್ಕು ಕೋರಿಕೆ, ಉತ್ತರ ನೀಡದ ಕುಲಪತಿ ಜಯಕರ್ ಶೆಟ್ಟಿ ಮತ್ತು ಸಿಬ್ಬಂದಿ.
- ವಿವಿಯಲ್ಲಿ ಅಂದಾಜು ಸುಮಾರು 75- 80 ಎಕರೆ ಒತ್ತುವರಿ.
- ಪಂತರಪಾಳ್ಯ, ನಾಯಂಡಹಳ್ಳಿ, ಕೆಂಚೇನಹಳ್ಳಿ, ಮಲ್ಲತ್ತಹಳ್ಳಿ ಮತ್ತು ನಾಗರಭಾವಿ ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳು ಅತಿಕ್ರಮಣ.
- ವಿವಿ ಭೂ ಒತ್ತುವರಿದಾರರ ಬಗ್ಗೆ ಮತ್ತು ವಿವಿ ಯಲ್ಲಿರುವ ಭೂಮಿಯ ಬಗ್ಗೆ ಲಿಖಿತ ದಾಖಲೆಗಳೆ ಇಲ್ಲ.
- ಬೆಂಗಳೂರು ವಿಶ್ವವಿದ್ಯಾಲಯದ 2017 ಮತ್ತು 2022 ರ ಸಿಂಡಿಕೇಟ್ ಸಭೆಯಲ್ಲಿ ಜ್ಞಾನಭಾರತಿ ಆವರಣದಲ್ಲಿ ಬಯೊಪಾರ್ಕ್ ಸಂರಕ್ಷಿಸಲು ನಿರ್ಣಯ.
- ಜ್ಞಾನಭಾರತಿ ಅವರಣವನ್ನು ಜೀವವೈವಿಧ್ಯ ಕಾಯ್ದೆ-2002 ರಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಲು ಮನವಿ.
- ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಜೀವವೈವಿಧ್ಯತೆ ತಾಣ, ಜೀವವೈವಿಧ್ಯ ಕಾಯ್ದೆ 2004, ಪರಿಸರ ಸಂರಕ್ಷಣಾ ಕಾಯ್ದೆ 1968 ರ ಉಲ್ಲಂಘನೆ.
- ಬಿಬಿಎಂಪಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಯನ ವರದಿಯಲ್ಲಿ ಪ್ರತಿ ವರ್ಷ ಅಂದಾಜು ಸುಮಾರು ₹ 16500 ಕೋಟಿ ಮೌಲ್ಯದ ಆಮ್ಲಜನಕ ಬಿಡುಗಡೆ.
- ಹಾಲಿ ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಅಂದಾಜು 150 ಕಟ್ಟಡಗಳು ನಿರ್ಮಾಣ.
- ಡಾ. ಯಲ್ಲಪ್ಪರೆಡ್ಡಿ ನೇತೃತ್ವ, ನಿವೃತ ಪ್ರಾಧ್ಯಾಪಕ ಟಿ.ಜೆ.ರೇಣುಕಾ ಪ್ರಸಾದ್ & ಸಂಘ ಸಂಸ್ಧೆಗಳು ಸೇರಿ ಸುಮಾರು 660 ಎಕರೆ ಜೀವವೈವಿಧ್ಯ ತಾಣವಾಗಿ ಪರಿವರ್ತನೆ.
- ಜೈವಿಕ ವನದಲ್ಲಿ ನೂರಾರು ಮರಗಳು. ಪಕ್ಷಿಗಳು, ದುಂಬಿಗಳು, ಸಸ್ಯಕಾಶಿ ಪಂಚವಟಿ, ಪಂಚವಲ್ಕಲ, ಹಣ್ಣಿನ ತೋಟ, ಮಿಯಾವಾಕಿ, ಶ್ರೀಗಂಧ, ಮೆಡಿಷನ್ ಪ್ಲಾಟ್ ಹಾಗೂ ಕೆರೆ, ಕಟ್ಟೆ ಮತ್ತು ಕಲ್ಯಾಣಿಗಳು ತುಂಬಿ ‘ಬಯೊ-ಜಿಯೊ-ಹೈಡೋ ಪಾರ್ಕ್’ ನಿರ್ಮಾಣ.
- ಸ್ಕೈಡೆಕ್ ನಿರ್ಮಾಣ ಕೈಬಿಟ್ಟ ಸರ್ಕಾರ.
- ಪಾರಂಪರಿಕ ತಾಣ ಎಂದು ಘೋಷಿಸಲು ಸರ್ಕಾರ ಚಿಂತನೆ.
ಪಾರಂಪರಿಕ ತಾಣ ಎಂದು ಘೋಷಣೆ ಆಗಲಿ !
ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಅಮೂಲ್ಯವಾದ ಜೈವಿಕ ಕಾಡನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು. ಅಭಿವೃದ್ಧಿ ಹೆಸರಿನಲ್ಲಿ ಅನ್ಯ ಸಂಸ್ಧೆಗಳಿಗೆ ಜಾಗ ನೀಡುವುದರಿಂದ ಇಲ್ಲಿನ ಪರಿಸರ ನಾಶವಾಗಿ, ಇಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಕ್ಕೆ ಹಾನಿಯಾಗಲಿದೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಯೋಪಾರ್ಕ ಬೆಂಗಳೂರಿನ ನಾಗರೀಕರಿಗೆ ಅಕ್ಸಿಜನ್ ನೀಡುವ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಪ್ರಸ್ತುತ ಬಯೋ-ಪಾರ್ಕ್ 3೦೦ ಜಾತಿಗಳ, 3 ಲಕ್ಷ ಸಸ್ಯ ಸಂಕುಲಗಳನ್ನು ಹೊಂದಿದೆ, 5 ಚೆಕ್ ಅಣೆಕಟ್ಟುಗಳು ಮತ್ತು ಒಂದು ಕಲ್ಯಾಣಿಯನ್ನು ನಿರ್ಮಿಸಲಾಗಿದೆ, ಇದರ ಮೂಲಕ ಮಳೆ ನೀರನ್ನು ಸಂರಕ್ಷಿಸಲಾಗುತ್ತದೆ, ಹನಿ ನೀರಾವರಿ ಮೂಲಕ ಓವರ್ಹೆಡ್ ಟ್ಯಾಂಕ್ ಹೊಂದಿರುವ ಒಟ್ಟು ಎಂಟು ಬೋರ್ವೆಲ್ಗಳು ಎಲ್ಲಾ ಪ್ಲಾಟ್ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಸರ್ಕಾರ ಇದನ್ನೆಲ್ಲಾ ಪರಿಗಣಿಸಿ ಬೆಂಗಳೂರು ವಿವಿ ಯನ್ನು ಜೀವವೈವಿಧ್ಯ ತಾಣ ಎಂದು ಘೋಷಣೆ ಮಾಡಬೇಕು.
ಪಾಲನೆಯಾಗದ ಸಿಂಡಿಕೇಟ್ ನಿರ್ಣಯ
ವಿ.ವಿ ಯಲ್ಲಿ 2017 ರ ಸಿಂಡಿಕೇಟ್ ಸಭೆಯಲ್ಲಿ ಕ್ಯಾಂಪಸ್ ಒಳಗೆ ಇರುವಂತಹ ಜಮೀನನ್ನು ಯಾರಿಗೂ ಪರಭಾರೆ ಮಾಡದಂತೆ ನಿರ್ಣಯ ಕೈಗೊಳ್ಳಲಾಗಿದು ಮತ್ತು ವಿವಿಯಲ್ಲಿರುವ ಜೀವವೈವಿಧ್ಯ ವನವನ್ನು ಉಳಿಸಿಕೊಳ್ಳುವಂತೆ ಸಿಂಡಿಕೇಟ್ ನಿರ್ಣಯಿಸಿದೆ. ಬೆಂಗಳೂರು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಕೂಡ ವಿವಿಯಲ್ಲಿರುವ ಜೀವವೈವಿಧ್ಯ ತಾಣ ರಕ್ಷಣೆ ಮಾಡಲು ಆದೇಶಿಸಿದೆ ಮತ್ತೊಂದು ಕಡೆ ಹಿಂದೆ ಇದ್ದಂತಹ ಬಿಬಿಎಂಪಿ ಜೀವವೈವಿಧ್ಯ ನಿರ್ವಹಣಾ ಸಮಿತಿ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿರುವಂತೆ ಪ್ರತಿ ವರ್ಷ ಅಂದಾಜು ಸುಮಾರು ₹ 16,500 ಕೋಟಿ ಮೌಲ್ಯದ ಆಮ್ಲಜನಕವನ್ನು ಬೆಂಗಳೂರು ನಗರಕ್ಕೆ ನೀಡಲಿದೆ ಎಂಬ ಮಾಹಿತಿಯನ್ನು ವರದಿ ನೀಡಿದೆ.
ಈ ಜಾಗದಲ್ಲಿ ಈ ಹಿಂದೆ ಯೋಗ ವಿಜ್ಞಾನ ಮತ್ತು ಇತರ ಸಂಸ್ಥೆಗಳಿಗೆ ನೀಡಲಾಗಿತ್ತು. ಅದೃಷ್ಟವಶಾತ್, ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಪರಿಣಾಮ ಮತ್ತು ವಿಶ್ವವಿದ್ಯಾಲಯ ಸಿಂಡಿಕೇಟ್ ನೋಂದಣಿಯನ್ನು ರದ್ದುಗೊಳಿಸವ ನಿರ್ಣಯವನ್ನು ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿದೆ ಆದಾಗ್ಯೂ, ನೋಂದಣಿಯನ್ನು ಇನ್ನೂ ರದ್ದುಗೊಳಿಸಲಾಗಿಲ್ಲ. ಯುವಿಸಿಇ (ಸ್ವಾಯತ್ತ ಸಂಸ್ಥೆ) ಗೆ ನೀಡಲಾದ 50 ಎಕರೆ ಭೂಮಿಯಲ್ಲಿ ಎನ್ಜಿಇಎಫ್ ಲೇಔಟ್ನ ಪಕ್ಕದಲ್ಲಿರುವ ವಿವಿಧ ಜಾತಿಯ ಹಲವು ಬಗೆಯ ಸಸ್ಯಗಳಿವೆ. ವಾಯುವಿಹಾರಿಗಳ ದೂರಿನ ಆಧಾರದ ಮೇಲೆ ಗೌರವಾನ್ವಿತ ರಾಜ್ಯಪಾಲರು ವರದಿ ಕೇಳಿದ್ದು, ಸಸ್ಯಶಾಸ್ತ್ರ, ಪರಿಸರ ವಿಜ್ಞಾನ ಮತ್ತು ಬಯೋಟೆಕ್ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಯಿತು ಅದರೆ ಈ ವರದಿ ಇನ್ನೂ ಗೌರವಾನ್ವಿತ ರಾಜ್ಯಪಾಲರನ್ನು ಕಛೇರಿ ಅದರೆ ವರದಿಯಲ್ಲಿ ವಿವಿ ಯಲ್ಲಿರುವ ಬಯೋಪಾರ್ಕ್ ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ, ಇದನ್ನು ಉಳಿಸಬೇಕು ಅಧಿಕಾರಿಗಳು ಸಮಿತಿ ಶಿಫಾರಸು ಮಾಡಿ ದಾಖಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
2022 ರಲ್ಲಿ ಜ್ಞಾನಭಾರತಿ ಆವರಣದಲ್ಲಿರುವ ಬಯೊಪಾರ್ಕ್ ಅನ್ನು ಸಂರಕ್ಷಿಸಲು ನಿರ್ಣಯ ಕೈಗೊಳ್ಳಲಾಗಿದೆ. ಜ್ಞಾನಭಾರತಿ ಆವರಣದಲ್ಲಿ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ನ್ಯಾಕ್ ಕೂಡ ಹೇಳಿದೆ ಹೀಗಾಗಿ ಜ್ಞಾನಭಾರತಿ ಅವರಣವನ್ನು ಜೀವವೈವಿಧ್ಯ ಕಾಯ್ದೆಯಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯ ರಚಿಸಿದ್ದ ಸಮಿತಿ ವರದಿ ನೀಡಿದೆ ಮುಂದುವರೆದು ಜ್ಞಾನಭಾರತಿ ವಾಯುವಿಹಾರಿಗಳ ಸಂಘದ ಸದಸ್ಯರು ಸಲ್ಲಿಸಿದ್ದ ದೂರಿನ ಮೇರೆಗೆ ರಾಜ್ಯಪಾಲರಿಗೆ ವೈಜ್ಞಾನಿಕ ವರದಿ ಸಲ್ಲಿಸಲು ಕುಲಸಚಿವರ ಅಧ್ಯಕ್ಷತೆಯಲ್ಲಿ 2024ರ ಸೆಪ್ಟೆಂಬರ್ 26 ರಂದು ಸಮಿತಿ ರಚಿಸಲಾಗಿತ್ತು. ಈ ಸಮಿತಿ ಕುಲಪತಿಯವರಿಗೆ ವರದಿ ನೀಡಿದ್ದರೂ ಕುಲಪತಿ ರಾಜ್ಯಪಾಲರಿಗೆ ತಲುಪಿಸಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಂದ ಮತ್ತು ವಾಯುವಿಹಾರಿಗಳ ಸಂಘದ ಸದಸ್ಯರುಗಳಿಂದ ತಿಳಿದು ಬಂದಿದೆ.
ಒತ್ತುವರಿ ವಿಳಂಬ ಏಕೇ ?
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 1964 ರಿಂದಿ ಹೆಚ್ಚಿನ ಸಂಖ್ಯೆಯಲ್ಲಿ ಸಂಯೋಜಿತ ಕಾಲೇಜುಗಳು, ಪಿ.ಜಿ. ಕೇಂದ್ರಗಳು ಹೆಚ್ಚಾಗುತ್ತಿವೆ. 1973 ರಲ್ಲಿ, ವಿಶ್ವವಿದ್ಯಾನಿಲಯವು 1200 ಎಕರೆ ವಿಸ್ತಾರವಾದ ಭೂಮಿಯನ್ನು ಹೊಂದಿದ್ದು, ‘ಜ್ಞಾನ ಭಾರತಿ’ ಎಂಬ ಹೊಸ ಹೆಸರು ಪಡೆದಿತು. ವಿಶ್ವವಿದ್ಯಾಲಯದ ಅಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆ ಮತ್ತು ಸರ್ವೆ ಇಲಾಖೆ, ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ, 1200 ಎಕರೆಗಳ ಜಂಟಿ ಸಮೀಕ್ಷೆಗೆ ಆದೇಶಿಸಿದೆ. ವಿವಿಯಲ್ಲಿರುವ ಅಕಾರ ಬಂದ್, ಕೈಬರಹದ ದಾಖಲೆಗಳು ಮತ್ತು ಗಣಕೀಕೃತ ದಾಖಲೆಗಳ ಆಧಾರದ ಮೇಲೆ ಸಮೀಕ್ಷೆಯಲ್ಲಿ ಭೌತಿಕವಾಗಿ ಒತ್ತುವರಿಯಾಗಿರುವುದು ಕಂಡುಬಂದಿದೆ. ಮೂಲ ದಾಖಲೆಗಳ ಪ್ರಕಾರ, 26 ಶಿಕ್ಷಣ ಸಂಸ್ಥೆಗಳಿಗೆ 278 ಎಕರೆಗಳನ್ನು ಗುತ್ತಿಗೆ ನೀಡಲಾಗಿದು, ದಾಖಲೆಗಳ ಪ್ರಕಾರ, 24.4 ಎಕರೆ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದು ಆಂದಾಜು ಸುಮಾರು 43.24 ಎಕರೆ ಭೂಮಿ ವಿವಾದಾಸ್ಪದವಾಗಿದೆ. ವಿವಿ ಯಲ್ಲಿ ಖಾಸಗಿ ವ್ಯಕ್ತಿಗಳ ಅತಿಕ್ರಮಣಗೊಂಡು 19 ಎಕರೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಘನ ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂದು ಸಾರ್ವಜನಿಕರು ವಿವರಿಸಿದ್ದಾರೆ.
ಒಟ್ಟಾರೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಯೋಪಾರ್ಕ ಬೆಂಗಳೂರಿನ ಜನರಿಗೆ ಅಕ್ಸಿಜನ್ ನೀಡುವ ಬ್ಯಾಂಕ್ ಆಗಿದೆ ಅದರೆ ಸರ್ಕಾರ ವೈವಿಧ್ಯ ತಾಣವನ್ನು ಹಾಳುಮಾಡುವ ಮೂಲಕ ನೂರಾರು ವಾಯು ವಿಹಾರಿಗಳು ಮತ್ತು ಸಂಘ ಸಂಸ್ಧೆಗಳು ವಿವಿ ಯಲ್ಲಿರುವ ವೈವಿಧ್ಯ ತಾಣವನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ವಿವಿಯಲ್ಲಿ ಕಟ್ಟಡ ಕಾಮಗಾರಿ ನಿಲ್ಲುತ್ತಿಲ್ಲ ಎಂಬ ಮಾಹಿತಿಯನ್ನು ಸಾರ್ವಜನಿಕರು ತಿಳಿಸಿದ್ದಾರೆ. ವಿವಿಯಲ್ಲಿರುವ ಬಯೋ ಪಾರ್ಕ್ ಜಾಗದಲ್ಲಿ ಯಾವುದೇ ಶೈಕ್ಶಣಿಕ ಸಂಸ್ಧೆಗಳಿಗೆ ನೀಡಬಾರದು ಮತ್ತು ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟೇಲ್ . ಎಸ್