ನಮ್ಮ ಬದುಕು ಸಾಹಸಮಯವಾಗಿರ ಬೇಕು !
ನಮ್ಮ ಬದುಕು ಹಸನಾಗಿ ಸಾರ್ಥಕವಾಗಬೇಕಾದರೆ ನಮಗೆ ಒಳ್ಳೆಯ ಗುರಿ ಮತ್ತು ಗುರು ಇರಬೇಕು, ಅದರೊಂದಿಗೆ ಅದನ್ನು ಮುಟ್ಟಲು ತಿಳುವಳಿಕೆ ಬೇಕು. ಒಬ್ಬ ವ್ಯಕ್ತಿಯ ಅತ್ಯಂತ ಶಕ್ತಿಶಾಲಿಯಾದ ಕ್ರಿಯೆ ಎಂದರೆ ತನ್ನನ್ನು ತಾನು ಪ್ರೀತಿಸುವುದು, ತನ್ನನ್ನು ತಾನು ಇತರರಿಗೆ ಹೋಲಿಸಿಕೊಳದೆ ಬದುಕುವುದು. ನಾನು ಮಾಡಬಲ್ಲೆ ಎಂಬ ಉತ್ತರವನ್ನು ಕಂಡುಕೊಳ್ಳುವುದು. ಇತರರು ನಿಮ್ಮನು ದೂರರಿಂದ ದೂರುತ್ತಾ ಇರಬಹುದು ಅದರೆ ಅವರನ್ನು ಸೂಕ್ಷವಾಗಿ ಪರಿಶೀಲಿಸಿ, ಎಲ್ಲಾರಿಗೋಷ್ಕರ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ನಾವು ಬದಲಾಗಿ, ಇತರರನು ಬದಲಾಗಲು ಪ್ರಯತ್ನಿಸಿ
ಜೀವನದಲ್ಲಿ ನಮ್ಮ ಗುರಿ ಸಾದನೆ ಮಾಡದಿದ್ದರೆ, ಜ್ಞಾನವಿದರು ಉಲ್ಲಾಸವಿಲ್ಲದಂತೆ, ಸ್ವತಂತ್ರವಾಗಿ ಯೋಚನೆ ಮಾಡದಿದ್ದರೆ ವಿವೇಕವಿಲ್ಲ ಕೂರೂಪಿಯಂತೆ, ಹಾಸ್ಯ & ಸಾಹಸವಿಲ್ಲದೆ ಕೆಲಸ ಮಾಡಿದರೆ ಕುರಿ ಮಂದೆಯಂತೆ. ಜೀವನದಲ್ಲಿ ಸರಸ-ವಿರಸದಿದ್ದರೆ ಪಾಕವಿಲ್ಲ ನಿರ್ಜೀವಿಯಂತೆ, ಬದುಕಿನಲ್ಲಿ ಸ್ವ ವಿಮರ್ಶೆ ಇಲ್ಲದೆ ಕತ್ತಲೆ ಕೊಣೆಯಲ್ಲಿ ಕರಡಿಯನ್ನು ಹುಡಿಕಿದಂತೆ ಆದರೆ ಪ್ರತಿ ಕ್ಷಣ ಕ್ಷಣದಲ್ಲಿ ಪ್ರಕ್ರತಿಯಲ್ಲಿ ವಿಭಿನ್ನ ಬದಲಾವಣೆ ಕಂಡುಕೊಂಡು, ತಮ್ಮದೇ ಆದ ಸ್ವಂತಿಕೆ ಇದರೆ ಉತ್ತಮ ಬದುಕಿಗೆ ದಾರಿದೀಪದಂತೆ.
ಉದಾಹರಣೆಗೆ ನೋಡುವುದಾದರೆ ನಮ್ಮ ಸುತ್ತಾಮುತ್ತಾ ಇರುವಂತಹ ಕೆಲವು ಜನರು ಹೊಸ ವಿಷಯಗಳನ್ನು ಕಲಿಯಲು, ಹೊಸ ಆಲೋಚನೆಗಳನ್ನು ಅನ್ವೇಷಿಸಲು ಪ್ರಯತ್ನ ಪಡುತ್ತಾರೆ, ಇನ್ನು ಕೆಲವರು ತಮ್ಮ ಸುತ್ತಲಿನ ಯಶಸ್ವಿ ವ್ಯಕ್ತಿಗಳನ್ನು ನೋಡಿ ಕಷ್ಟಪಟ್ಟು ಕಲಿಯಲು ಸ್ವಯಂ ಪ್ರೇರಣೆರಾಗುತ್ತಾರೆ. ಆದಾಗ್ಯೂ, ಅವರಲ್ಲಿ ಅನೇಕರಿಗೆ ಸಹ ಪಾಠಿಗಳು, ಸ್ನೇಹಿತರಿಂದ ಕಷ್ಟಪಟ್ಟು ಕೆಲಸ ಮಾಡಲು ಪ್ರೇರಣೆ ಮತ್ತು ಸ್ಫೂರ್ತಿ ಬೇಕಾಗುತ್ತದೆ. ಬದುಕಿನ ಸುತ್ತಾಮುತ್ತಲಿರುವ ಕೆಲವರ ಕಥೆಗಳು ಯಾವಾಗಲೂ ಜನರ ಪ್ರೀತಿ ಮತ್ತು ಆಸಕ್ತಿಯನ್ನು ಹೆಚ್ಚಿಸುವ, ಪ್ರಚೋದಿಸುವ ನೆಚ್ಚಿನ ಕ್ಷೇತ್ರವಾಗಿದೆ. ಜೀವನದಲ್ಲಿ ಉತ್ತಮ ನೈತಿಕತೆಯನ್ನು ಹೊಂದಿರುವ ಅನೇಕರು ಸಾಮಾನ್ಯ ವ್ಯಕ್ತಿಗಳ ನಿಜ ಜೀವನದ ಉದಾಹರಣೆಗಳು, ಅವರ ಜೀವನ ಪ್ರಯಾಣದ ಭಾಗವನ್ನು ಮತ್ತು ಸರಳ ಕಥೆಗಳನ್ನು ಅರಿಯುವ ಮೂಲಕ ಬದುಕು ರೂಪಿಸಿಕೊಳ್ಳುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿ ಇದೆ ಅದು ವ್ಯರ್ಥವಾಗಿ ಹೋದರೆ ಮತ್ತೊಮ್ಮೆ ದೊರೆಯದು. ಇದಕ್ಕಾಗಿಯೇ ತನ್ನ ಶಕ್ತಿಯನ್ನು ವ್ಯರ್ಥಗೊಳಿಸಬಾರದು ಎಂಬುದು ಲೋಕೋಕ್ತಿ. ನಾವುಗಳು ಪ್ರತಿಯೊಬ್ಬರ ಪ್ರಗತಿಗೆ ಕ್ರಮವರಿತು ಸಾಧನಪಥದೊಂದಿಗೆ ಸಾಗಿದೊಡೆ ಲಾಭದ ಪಥವಾದೀತು. ನಾವು ಇನ್ನೊಬ್ಬರ ಪ್ರಶಂಸೆಯು ಸಮಾಧಾನ, ಸಂತೋಷ ಕೊಡಬಲ್ಲದು. ಪ್ರಶಂಸೆಯಲ್ಲಿ ನಮ್ಮ ಹೆಮ್ಮೆ, ಆತ್ಮಗೌರವ ಅಡಗಿರುವಂತೆ ಭಾಸವಾಗುತ್ತದೆ ಮತ್ತು ಸ್ಪೂರ್ತಿಯೂ ಸಿಗುತ್ತದೆ. ನಮ್ಮ ಸಾಧನೆ, ಹೋರಾಟ ಮತ್ತು ಪ್ರಯತ್ನಗಳನ್ನು ಜನರು ಗುರುತಿಸಲಿ, ಪ್ರಶಂಸೆ ನೀಡಲಿ ಎಂದು ನಾವು ಬಯಸುತ್ತೇವೆ, ಬಯಸಿದ್ದು ದೊರೆತಾಗ ಸಾರ್ಥಕವಾಯಿತು ಎನ್ನಿಸುತ್ತದೆ ಆದರೆ ಪಡೆಯದಿಂದಾಗ ವ್ಯರ್ಥವಾಗಿ ನಮ್ಮಲ್ಲಿ ಬೇಸರ ತರುತ್ತದೆ.
ನಮ್ಮ ಸುಂದರ ಬದುಕಿಗೆ ನಾವೇ ಶಿಲ್ಪಿಗಳಾಗಲೂ ಸಾಧ್ಯವಾದೀತು ಇದಕ್ಕಾಗಿಯೇ ನಮ್ಮ ಕನ್ನಡದ ಮೋಡಿಗಾರ ಕವಿ ದ.ರಾ.ಬೇಂದ್ರೆಯವರು ತಿಳಿಸಿರುವಂತೆ? ಎಷ್ಟು ವರ್ಷ ಬದುಕಿದೆವು ಎಂಬುದಕ್ಕಿಂತ ಹೇಗೆ ಬದುಕಿದೆವು ಎಂಬುದೆ ಮಹತ್ವದ್ದು ಎಂದು ತಿಳಿಸಿದ್ದಾರೆ ಹಾಗೆ ಇತಿಹಾಸದ ಪುಟಗಳನ್ನು ಒಳಹೊಕ್ಕಾಗ ದಡ್ಡ ವಿದ್ಯಾರ್ಥಿಯೆಂದು ಶಾಲೆಯಿಂದ ಹೊರಹಾಕಲ್ಪಟ್ಟ ಥಾಮಸ್ ಆಲ್ವಾ ಎಡಿಸನ್ ಸಂಶೋಧನಾತ್ಮಕ ಬುದ್ದಿ ಆತನನ್ನು ಜಗತ್ ಪ್ರಸಿದ್ದ ವಿಜ್ಞಾನಿಯನ್ನಾಗಿ ರೂಪಿಸಿತು. ಮನುಷ್ಯ ಬದುಕಿನ ಲಾಭ-ನಷ್ಟದ ರುವಾರಿಯಾಗಲೂ ಸಾಧನೆ ಮಾರ್ಗದಲ್ಲಿ ನಡೆಯುವ ದೃಡತೆ ಬೇಕು, ಇದರ ಜೊತೆಗೆ ಕರ್ತವ್ಯ ನಿಷ್ಠೆ ತಂದೆ, ಶೀಲವತಿಯಾದ ತಾಯಿ, ಸ್ವಾರ್ಥವಿಲ್ಲದ ಗುರು ? ಇವರನ್ನು ಪಡೆದಾಗ ಮಾತ್ರ ಲಾಭದಾಯಕವಾದ ಬದುಕು ನಮ್ಮದಾಗುತ್ತದೆ.
ಬದುಕಿನಲ್ಲಿ ಬರುವಂತಹ ಏರುಪೇರುಗಳನ್ನು ಸ್ವಾಗತಿಸಿದಾಗ ಮಾತ್ರ ಭವ ಪ್ರಪಂಚವನ್ನು ಶಿವಪ್ರಪಂಚವನ್ನಾಗಿಸಲು ಸಾದ್ಯ. ಜನರ ವಿಮರ್ಶೆಗಳಿಂದ ನಾವು ಕುಗ್ಗಿ ಹೋಗುತ್ತೇವೆ. ಅವರು ಯಾಕೆ ಹಾಗೆ ಹೇಳಿದರು? ನನ್ನ ಬಗ್ಗೆ ಹಾಗೆ ಹೇಳಬಾರದಿತ್ತು, ಅವರು ಸರಿಯಿಲ್ಲ, ನನ್ನನ್ನು ದ್ವೇಶಿಸುತ್ತಾರೆ. ಹೀಗೆ ನೆಗೆಟಿವ್ ಮತ್ತು ಕೆರಳಿಸುವಂತಹ ಆಲೋಚನೆಗಳು ನಮ್ಮಲ್ಲಿ ಮನೆ ಮಾಡುತ್ತವೆ. ನಮ ಬದುಕನ್ನು ರೂಪಿಸಲು ನಾವು ಗುರಿ, ಶ್ರದ್ದೆಗಳೇ ಮುಖ್ಯ. ಪ್ರಸಿದ್ದ ಲೇಖಕ ಜಾನ್ ಮ್ಯಾಕ್ಸ್ ವೆಲ್ ದಿ ಚಾಯ್ಸ್ ಟು ಮೇಕ್ ಎಂದು ಸರಳವಾದ ಮಾತುಗಳಲ್ಲಿ ಹೇಳುವುದಾರರೆ ನಾವು ಇಂದು ಏನು ಆಗಿದ್ದೇವೆ, ಮುಂದೆ ನಾವು ಏನು ಆಗಲಿದ್ದೇವೆ, ಅವೆಲ್ಲವು ನಮ್ಮ ಆಯ್ಕೆಯ ಫಲವೇ ಆದ್ದರಿಂದ ನಾವು ಯಾವುದನ್ನು ಬಯಸುತ್ತೇವೆ, ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ.
ಈ ಸಮಾಜದಲ್ಲಿರುವ ಪ್ರತಿ ವ್ಯಕ್ತಿಗೆ ಎರಡು ರೀತಿಯ ವ್ಯಕ್ತಿವ್ವಗಳಿರುತ್ತವೆ. ಒಂದು ಸಮಾಜಕ್ಕೆ ಗೊತ್ತಿರುವುದು, ಇನ್ನೊಂದು ವ್ಯಕ್ತಿಗೆ ಗೊತ್ತಿರುವಂತಹದು.ಈ ಸಮಾಜ ನಮ್ಮ ವ್ಯಕ್ತಿತ್ವವನ್ನು ಗುರುತಿಸುವುದರಿಂದಲೇ ನಾವು ಏನನ್ನಾದರೂ ಸಾಧಿಸ ಬೇಕು ಎಂಬ ಬಯಕೆ ಮೂಡಿ, ನಾನು ಸಾಧಿಸಬಲ್ಲೆ, ಇದನ್ನು ನಾನು ಸಾಧಿಸುವ ಶಕ್ತಿ ನನ್ನಲ್ಲಿದೆ ಎಂದು ಯಾರು ತಮ್ಮನ್ನು ತಾನು ಗುರುತಿಸಿಕೊಳ್ಳುತ್ತಾರೋ ಅವರೇ ಸಾಧಕರಾಗುತ್ತಾರೆ.
ಈ ಜಗತ್ತಿನಲ್ಲಿ ಹುಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಆಸೆ-ಆಕಾಂಕ್ಷೆಗಳನ್ನು ಹೊತ್ತು ಬದುಕುತ್ತಾನೆ. ಶ್ರೀಮಂತ-ಬಡವ, ಸಾಮಾನ್ಯ- ಆಸಮಾನ್ಯರು, ವಿದ್ಯಾವಂತರು-ಅವಿದ್ಯಾವಂತರಿಗೂ ಕೂಡ ಅವರದೇ ಆದ ಆಕಾಂಕ್ಷೆ, ಗುರಿ ಮತ್ತು ಉದ್ದೇಶಗಳು ಇದ್ದೇ ಇರುತ್ತದೆ. ನಮ್ಮ ಬದುಕಲ್ಲಿ ಬರುವಂತಹ ಹಿರಿಮೆ ಗರಿಮೆಗಳನ್ನು ನಿರಂತರವಾಗಿ ಕಾಪಾಡಲು ಅದರ ಬೆನ್ನೆ ಹಿಂದೆ ಇದ್ದು, ನಿರತರವಾಗಿ ಹೋರಾಟ ನಡೆಸಬೇಕು ನಾವು ಎಲ್ಲಿ ಜಾರಿ ಬಿದ್ದಿದೇವೆ ಆ ಜಾಗದಲ್ಲಿ ಎದ್ದುನಿಂತು ಜನರ ನಡುವೆಯೇ ಪ್ರಕಾಶ ಮಾನವಾಗಬೇಕು. ಬದುಕಿಗೆ ಮುನ್ನುಡಿ ಬರೆಯಬೇಕು. ನಮ್ಮ ಬದುಕಿನಲ್ಲಿ ಬರುವಂತಹ ಹಿರಿಯರ, ಕಿರಿಯರು ಮತ್ತು ಕುಟುಂಬದ ಇತರರ ಆಸೆ ಆಕಾಂಕ್ಷೆಗಳನು ಈಡೇಸಲು ದೃಢಸಂಕಲ್ಪ ಮಾಡಿ, ಕೊನೆಯ ಗುರಿ ಮುಟ್ಟುವ ಕನಸುಗಳನ್ನು ನನಸಾಗಿ ಮಾಡಿಕೊಳ್ಳಬೇಕು.
ನಾವು ನೆಲೆಸಿರುವ ಮತ್ತು ಬೆರೆತ್ತಿರುವ ಜಾಗದಲ್ಲಿ ಕೆಲವು ಟೀಕೆ, ಟಿಪ್ಪಣಿ ಮತ್ತು ಪರಮರ್ಶೆಗಳನ್ನು ಬಯಸದಿದ್ದರೂ ಕೂಡ ನಮ್ಮನು ಹಿಂಬಾಲಿಸುತ್ತವೆ ಆ ಸಮಯ, ಸಂದರ್ಭಕ್ಕೆ ನಾವು ಕೆಲವುಗಳನ್ನು ಸ್ವೀಕರಿಸಿ ನಿಭಾಯಿಸುವುದು ಒಂದು ಕಲೆ. ನಾವು ಯಾವಾಗಲು ಪ್ರಯತ್ನದಲ್ಲಿ ಮುಂದಾಗಿರಬೇಕು ಬದುಕಿನ ನಮ್ಮ ದಾರಿಗೆ ಪ್ರಯಾಣಿಕನಾಗಿ ಸಾಗಬೇಕು. ಇವುಗಳನ್ನು ನಾವು ಸಮ್ಮತಿಸದಿದ್ದರೂ ಕೂಡ ಸ್ವೀಕರಿಸುವುದನ್ನು ಕಲೆತರೆ ನಮಗೇ ಒಳ್ಳೆಯದು.
ಒಟ್ಟಾರೆ ನಮ್ಮ ವ್ಯಕ್ತಿತ್ವ, ಗುಣಗಳು ವಿಕಾಸಗೊಳ್ಳಲು ಟೀಕೆಗಳು, ವಿಮರ್ಶೆಗಳು ಬಹಳಷ್ಟು ಸಹಾಯ ಮಾಡುತ್ತವೆ. ಆದ್ದರಿಂದ ಇತರರಿಂದ ನಿರಂತರವಾಗಿ ವಿಮರ್ಶೆಗಳನ್ನು ಪಡೆದು ಅದನ್ನು ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ಇಂಧನವಾಗಿ ಬಳಸಿಕೊಳ್ಳುವುದನ್ನು ಕಲಿತರೆ ಉತ್ತಮ. ಪ್ರತಿಯೊಬ್ಬರ ಬದುಕಿನಲ್ಲಿ ಏರು ಪೇರು ಬರುವುದು ಹೋಗುವುದು ಸಹಜ ಯಾವಾಗಲು ನಮ್ಮ ಬದುಕು ಸಾಹಸಮಯವಾಗಿರ ಬೇಕು.