ಮೈಸೂರು ಇಂಜಿನಿಯರಿಂಗ್ ವಿಭಾಗ’
ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ & ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರ.
ಆರೋಗ್ಯ ಇಲಾಖೆ, ಪ್ರಧಾನ ಕಾರ್ಯದರ್ಶಿ ಆದೇಶಕ್ಕೂ ದಾಖಲೆ ನೀಡದ ಅಧಿಕಾರಿಗಳು.
ರಾಜ್ಯದಲ್ಲಿನ ಜನತೆಯ ಆರೋಗ್ಯ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಮತ್ತು ಜವಾಬ್ಧಾರಿ ಉದ್ದೇಶದ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂಜಿನಿಯರಿಂಗ್ ಘಟಕ ಎಂಬುದು ಒಂದು ಭಾಗವಾಗಿದು, ಇದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಹಿತದೃಷ್ಟಿಯಿಂದ ಹಲವಾರು ಯೋಜನೆ, ಸವಲುತುಗಳು ಮತ್ತು ಕಟ್ಟಡ ಕಾಮಗಾರಿಗಳನ್ನು ಕೈಗೊಂಡು ನಿರ್ವಹಿಸಲಾಗುತ್ತದೆ. ಆರೋಗ್ಯ ಮತ್ತು ಕುಂಟುಬ ಇಲಾಖೆಯಲ್ಲಿ ಇಂಜಿನಿಯರಿಂಗ್ ಘಟಕ ನಾಲ್ಕು ವಿಭಾಗಗಳು ಮತ್ತು ಹದಿನೈದು ಉಪ ವಿಭಾಗಗಳ ಕಛೇರಿಗಳನ್ನು ಹೊಂದಿದ್ದು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಇಂಜಿನಿಯರ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಟ್ಟ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ನವೀಕರಣ, ಉನ್ನತೀಕರಣ, ರಿಪೇರಿ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲಾವಾರು ಸಾರ್ವಜಿಕರ ಆರೋಗ್ಯದ ಹಿತದೃಷ್ಟಿಯಿಂದ ಹಠಾತ್ ಸಂಭವಿಸುವ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ತುರ್ತು ಸೇವೆಗಾಗಿ ಆಸ್ಪತ್ರೆಗಳ ನಿರ್ಮಾಣ, ಆಸ್ಪತ್ರೆಗಳಿಗೆ ಆಕ್ಸಿಜನ್, ಮೆಡಿಕಲ್ ಗ್ಯಾಸ್, ಪೈಪ್ಲೈನ್ ಅಳವಡಿಕೆ, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್, ಐಸಿಯು ನಿರ್ಮಾಣ, ನಮ್ಮ ಕ್ಲಿನಿಕ್ ಮುಂತಾದ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕಾಗಿ ಸಂಬಂದಪಟ್ಟ ಇಲಾಖೆಗಳಿಗೆ ಹಸ್ತಾಂತರಿಸುವುದು ಇದರ ಆದ್ಯ ಕರ್ತವ್ಯ.
ಮುಖ್ಯಾಂಶಗಳು
- ಮೈಸೂರು ವಿಭಾಗ, (ಆ.ಕು.ಕಾ ಇಲಾಖೆ) ಗೆ ರೂ 670 /-ರೂ ಪಾವತಿಸಿದರು ಕಾಮಗಾರಿಗಳ ಟೆಂಡರ್ ಡಾಕ್ಯೂಮೆಂಟ್, ಕಾಮಗಾರಿಗಳ ಬಿಲ್ಲುಗಳು ದೋಖಾ.
- ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಲಿಖಿತ ಆದೇಶ ಮಾಡಿದರೂ ಸಹ ದಾಖಲೆಗಳನ್ನು ನೀಡದ ಮುಖ್ಯ ಅಭಿಯಂತರ ಮತ್ತು (ಆ.ಕು.ಕಾ.ಇ) ಅಧಿಕಾರಿಗಳು.
- ವಿಭಾಗ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ & ನಿರ್ವಹಣೆ ಹೆಸರಿನಲ್ಲಿ ನಡೆದಿರುವ ಅಕ್ರಮ, MB ಪುಸ್ತಕದಲ್ಲಿ ಸರ್ಕಾರಕ್ಕೆ ತಪ್ಪು ಲೆಕ್ಕ .
- ವಾರ್ಷಿಕ ಲೆಕ್ಕ ಶೀರ್ಷಿಕೆ: 2023-2024 ಮತ್ತು 2024- 2025 ನೇ ಸಾಲಿನಲ್ಲಿ ಅಭಿವೃದ್ಧಿ & ನಿರ್ವಹಣೆ ಕಾಮಗಾರಿಗಳು ಕಳಪೆ ಗುಣಮಟ್ಟ ಮತ್ತು ಅವ್ಯವಹಾರ.
- ಆಸ್ಪತ್ರೆಗಳಿಗೆ ಯಂತ್ರೋಪಕರಣಗಳನ್ನು ಒದಗಿಸುವ ವ್ಯವಸ್ಧೆ ಮತ್ತು ನಿರ್ವಹಣೆಯಲು ಸಹ ಲೋಪದೋಷ.
- ಜಿಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್, ಮೆಡಿಕಲ್ ಗ್ಯಾಸ್ ಪೈಪ್ಲೈನ್ ಅಳವಡಿಕೆ, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣದಲ್ಲಿ ಕಳಪೆ ಗುಣಮಟ್ಟ .
- ಆರೋಗ್ಯ ಇಲಾಖೆ,ಪ್ರಧಾನ ಕಾರ್ಯದರ್ಶಿಯವರ ಆದೇಶ (1) ಆದೇಶ ಸಂಖ್ಯೆ: ಆಕುಕ 81 ಸಿಜಿಎಂ 2025 ದಿನಾಂಕ: 3/3/2025. (2) ಆದೇಶ ಸಂಖ್ಯೆ: ಆಕುಕ 15 ಸಿಜಿಎಂ 2025 ದಿನಾಂಕ: 02/06/2025.
‘ಆರೋಗ್ಯ ಇಲಾಖೆ’ ಪ್ರಧಾನ ಕಾರ್ಯದರ್ಶಿಗಳ ಆದೇಶಕ್ಕೂ ಉತ್ತರ ನೀಡದ ಅಧಿಕಾರಿಗಳು ?
ಲೆಕ್ಕ ಶೀರ್ಷಿಕೆ: 2023-2024 ಮತ್ತು 2024- 2025 ರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಆಸ್ಪತ್ರೆಗಳ ಕಟ್ಟಡ ನಿರ್ಮಾಣ, ನವೀಕರಣ, ಉನ್ನತೀಕರಣ & ನಿರ್ವಹಣೆಗೆ ಅನುದಾನಗಳನ್ನು ಬಿಡುಗಡೆ ಮಾಡಿದ್ದು, ಮೈಸೂರು ವಿಭಾಗದ ಜಿಲ್ಲಾವಾರು ಕೈಗೊಂಡಿರುವಂತಹ ಕಾಮಗಾರಿಗಳು ಕಳಪೆ ಗುಣಮಟ್ಟ, ಅವ್ಯವಹಾರ ಹಾಗೂ MB ಪುಸ್ತಕದಲ್ಲಿ ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿ, ಗುತ್ತಿಗೆದಾರರೊಂದಿಗೆ ಅಭಿಯಂತರ ಅಧಿಕಾರಿಗಳು ಸಾಮೀಲಾಗಿ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ದಾಖಲಿಸಿ, ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಿರುತ್ತಾರೆ, (1) ಆದೇಶ ಸಂಖ್ಯೆ: ಆಕುಕ 81 ಸಿಜಿಎಂ 2025 ದಿನಾಂಕ: 3/3/2025. (2) ಆದೇಶ ಸಂಖ್ಯೆ: ಆಕುಕ 15 ಸಿಜಿಎಂ 2025 ದಿನಾಂಕ: 02/06/2025. ಆಗಿದ್ದರೂ ಸಹ ಮುಖ್ಯ ಅಭಿಯಂತರರು ಯಾವ ಕ್ರಮಕ್ಕೂ ಮುಂದಾಗಿಲ್ಲ. ಮೈಸೂರು ವಿಭಾಗದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ದಾಖಲೆಗಳನ್ನು ಮರಮಾಚಲಾಗುತ್ತಿದ್ದು, ಕೆಲವು ಕಾಮಗಾರಿಗಳ ಟೆಂಡರ್ ಡಾಕ್ಯೂಮೆಂಟ್ ಗಳು ಬೋಗಸ್ ಮಾಡುವ ಮೂಲಕ, ಗುತ್ತಿಗೆ ನೀಡಿ, ಸರ್ಕಾರಕ್ಕೆ ವಂಚಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಅಧಿನಿಯಮ ಹಾಗೂ ಸರ್ಕಾರದ ಅಧಿಸೂಚನೆ ಮೇರೆಗೆ ಇಲಾಖೆಯು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿದೆ ಆದರೆ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರ ಹಾಗೂ ಲೆಕ್ಕಾಧೀಕ್ಷಕರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ, ಖಜಾನೆಗೆ ನಷ್ಟ ಉಂಟುಮಾಡುವ ಮೂಲಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಶಿವಕುಮಾರ್ ಎಂ. ಅಗರ. ಕನಕಪುರ.