ನಾವು ಜಗತ್ತಿಗೆ ದೊಡ್ಡಣ್ಣನಾಗಲು ಸಿದ್ದರಾಗೋಣ !
ಆರ್ಥಿಕ ರಾಜತಾಂತ್ರಿಕ ವಿಭಾಗ ವಿದೇಶಿ ಹೂಡಿಕೆ, ಹರಿವನ್ನು ಸುಗಮಗೊಳಿಸಲು, ವ್ಯಾಪಾರ, ಪ್ರವಾಸೋದ್ಯಮ, ಯೋಗ ಮತ್ತು ಸಾಂಪ್ರದಾಯಿಕ ಭಾರತೀಯ ಔಷಧವನ್ನು ಉತ್ತೇಜಿಸಲು, ವಿದೇಶದಲ್ಲಿರುವ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಆರ್ಥಿಕ ವಿಭಾಗವಾಗಿ ಸ್ಥಾಪಿಸಲಾಗಿದೆ. ವಿದೇಶಿ ಉದ್ಯಮಗಳು ಮತ್ತು ವ್ಯವಹಾರಗಳು ಜಾಗತಿಕ ಹೆಜ್ಜೆ ಗುರುತನ್ನು ವಿಸ್ತರಿಸಲು ಬಯಸುತ್ತಿವೆ. ಭಾರತೀಯ ವ್ಯಾಪಾರ ಸಂಸ್ಥೆಗಳು ಹೂಡಿಕೆ, ತಂತ್ರಜ್ಞಾನ ಸಹಕಾರ ಮತ್ತು ರಾಜ್ಯ, ನಗರ ಪಾಲುದಾರಿಕೆಗಳಿಗಾಗಿ ವಿದೇಶದಲ್ಲಿ ಪಾಲುದಾರರನ್ನು ಆಯ್ಕೆ ಮಾಡಲು, ವ್ಯಾಪಾರ , ಪ್ರವಾಸೋದ್ಯಮ ಉತ್ತೇಜಿಸತ್ತದೆ.
ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಆರ್ಥಿಕತೆಯಾಗಿ ಹೊರಹೊಮ್ಮಿತ್ತಿದೆ. ಮುಂಬರುವ 10-15 ವರ್ಷಗಳಲ್ಲಿ ದೃಢವಾದ ಪ್ರಜಾಪ್ರಭುತ್ವ ಮತ್ತು ಬಲವಾದ ಪಾಲುದಾರಿಕೆಗಳಿಂದ ಬೆಂಬಲಿತವಾದ ವಿಶ್ವದ ಆರ್ಥಿಕ ಶಕ್ತಿಗಳಲ್ಲಿ ಒಂದಾಗುವ ನಿರೀಕ್ಷೆಯಿದೆ ಎಂಬುದನ್ನು ಊಹಿಸಬಹುದು. ಜಾಗತಿಕವಾಗಿ ಮಟ್ಟದಲ್ಲಿ ಅನಿರೀಕ್ಷಿತ ಮತ್ತು ವೇಗವಾಗಿ ಭಾರತದಲ್ಲಿ ಹೂಡಿಕೆಗಳಿಗೆ ಆಕರ್ಷಕ ತಾಣವಾಗಿ ಬದಲಾಗಿದೆ ಮತ್ತು ಆರ್ಥಿಕತೆಗೆ ಹೆಚ್ಚು ಸುಸ್ಥಿರವಾಗಿದೆ. ನಾವು ನೋಡಿದಂತೆ 2022 ರಲ್ಲಿ ಭಾರತ ಕೇಂದ್ರಿತ ನಿಧಿಗಳಿಂದ ಸಂಗ್ರಹಿಸಲಾದ ಹಣವು “ಭಾರತದಲ್ಲಿ ಹೂಡಿಕೆ ಮಾಡಿ” ಎಂಬ ನಿರೂಪಣೆಯಲ್ಲಿ ಹೂಡಿಕೆದಾರರ ನಂಬಿಕೆಗೆ ಖಾಸಗಿ ಸಹಭಾಗತ್ವಕ್ಕೆ ಸಾಕ್ಷಿಯಾಗಿದೆ.
2023 ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ಬಲವಾದ ಆರ್ಥಿಕ ಬೆಳವಣಿಗೆ ಮತ್ತು ಭಾರತ COVID-19 ಸಾಂಕ್ರಾಮಿಕ ಆಘಾತದಿಂದ ಚೇತರಿಸಿಕೊಂಡ ನಂತರ ತನ್ನ ಅರ್ಧಿಕತೆಯನ್ನು ಸರಿದೂಗಿಸಿಕೊಂಡು ಮುಂಬರುವ ವರ್ಷಗಳಿಗೆ ಅತಿದೊಡ್ಡ ಆರ್ಥಿಕತೆಯಾಗಲು ಅನುವುಮಾಡಿಕೊಂಡಿತು ಎಂದರೆ ತಪ್ಪಾಗಲಾರದು.
ಭಾರತೀಯ ಆರ್ಥಿಕತೆ, ಅದರ ವಿವಿಧ ವಲಯಗಳು, ಸರ್ಕಾರದ ನೀತಿಗಳು, ನಿಯಮಗಳು ವ್ಯಾಪಾರ ಪ್ರಚಾರ ಸಂಸ್ಥೆಗಳಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಿದೆ. ವ್ಯಾಪಾರ ಪರಿಸರವನ್ನು ಸುಧಾರಿಸುವ, ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ಭಾರತ ಇತ್ತೀಚಿನ ನೀತಿ, ನಿಯಮ ಸುಧಾರಣೆಗಳು ಮತ್ತು ಪ್ರೋತ್ಸಾಹಗಳನ್ನು ಒಳಗೊಂಡಂತೆ ವಿದೇಶಗಳಲ್ಲಿ ಹೂಡಿಕೆ ಅವಕಾಶಗಳು ಮತ್ತು ಯಾವುದೇ ಹೂಡಿಕೆ ಸಂಬಂಧಿತ ಸಹಾಯಕ್ಕಾಗಿ ಪ್ರಪಂಚದಾದ್ಯಂತ ಭಾರತೀಯ ರಾಯಭಾರ ಕಚೇರಿಗಳ ಮಾಹಿತಿಯ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ.
2024 ರ ಮೊದಲಾರ್ಧದಲ್ಲಿ ಭಾರತದ ಆರ್ಥಿಕತೆಗೆ ಸರ್ಕಾರವು ತನ್ನ ಬಂಡವಾಳ ವೆಚ್ಚಕ್ಕೆ ನೀಡಿದ ಅಚಲ ಬೆಂಬಲವನ್ನು ತೋರಿಸುವ ಹಾಗೂ ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಗೆ ಹೋಲಿಸಿದರೆ 37.4% ಹೆಚ್ಚಾಗಿತು. ಭಾರತದ FY24 ರಲ್ಲಿ ಇದು Rs. 65.8 ಲಕ್ಷ ಕೋಟಿ (US$ 773.0 ಶತಕೋಟಿ) ಆಗಿತ್ತು. ಭಾರತದ ಸರಕು ಮತ್ತು ಸೇವೆಗಳ ಒಟ್ಟು ರಫ್ತು FY25 ರಲ್ಲಿ 5.5% ರಷ್ಟು ಏರಿಕೆಯಾಗಿ ದಾಖಲೆಯ ರೂ. 69.8 ಲಕ್ಷ ಕೋಟಿ (US$ 820.9 ಶತಕೋಟಿ) ಕ್ಕೆ ಇಂದು ತಲುಪಿದೆ, ಭಾರತವು ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು 2023 ರಿಂದ 2030 ರ ನಡುವೆ ತನ್ನ ಉದ್ಯೋಗ ಬೆಳವಣಿಗೆಯ ದರವನ್ನು ಹೆಚ್ಚಿಸವ ಮೂಲಕ 90 ಮಿಲಿಯನ್ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಆಲೋಚಿಸಿದೆ. ಅದೇ ಅವಧಿಗಳ ನಡುವೆ 8-8.5% GDP ಬೆಳವಣಿಗೆಯನ್ನು ಸಾಧಿಸಲು 2023 ರಿಂದ 2030 ರವರೆಗೆ ನಿವ್ವಳ ಉದ್ಯೋಗ ದರವು ವಾರ್ಷಿಕವಾಗಿ 1.5% ರಷ್ಟು ಬೆಳೆಯಬೇಕು ಎಂಬ ಆಶೆಯದೊಂದಿಗೆ ಸಾಗಿದೆ.
2025-2026 ರ ಕೇಂದ್ರ ಬಜೆಟ್ನಲ್ಲಿ, ಬಂಡವಾಳ ವೆಚ್ಚವನ್ನು 10.0% ರಷ್ಟು ರೂ. 11.21 ಲಕ್ಷ ಕೋಟಿ (US$ 131.42 ಶತಕೋಟಿ) ಗೆ ತೀವ್ರವಾಗಿ ಹೆಚ್ಚಿಸುವ ಮೂಲಕ ಮುನ್ನಡೆಸಿತು. FY25 ರಲ್ಲಿ 10.18 ಲಕ್ಷ ಕೋಟಿ (US$ 119.34 ಶತಕೋಟಿ). ಸುಧಾರಿತ ತೆರಿಗೆ ಅನುಸರಣೆ, ಕಂಪನಿಯ ಲಾಭದಾಯಕತೆಯ ಹೆಚ್ಚಳ ಮತ್ತು ಆರ್ಥಿಕ ಚಟುವಟಿಕೆಯ ಹೆಚ್ಚಳದಿಂದಾಗಿ ಬಲವಾದ ಆದಾಯ ಉತ್ಪಾದನೆಗೆ ಬಂಡವಾಳ ವೆಚ್ಚದ ಮಟ್ಟಗಳ ಏರಿಕೆಗೆ ಕಾರಣವಾಗಿದೆ.
ಭಾರತದ ಆರ್ಥಿಕತೆಯು 2025 ರ ಮೂರನೇ ತ್ರೈಮಾಸಿಕದಲ್ಲಿ 6.2% ರಷ್ಟು ಬೆಳವಣಿಗೆ ಕಂಡಿದೆ. ಚೇತರಿಕೆಯ ಲಕ್ಷಣಗಳು ಈಗ ಗೋಚರಿಸುತ್ತಿದ್ದು, 2025 ರ ನಾಲ್ಕನೇ ತ್ರೈಮಾಸಿಕದಲ್ಲಿ ಬೆಳವಣಿಗೆ 7.6% ಕ್ಕೆ ಏರುವ ನಿರೀಕ್ಷೆಯಿದೆ. ಭಾರತದ ತುಲನಾತ್ಮಕವಾಗಿ ಬಲವಾದ ಸ್ಥಾನವು ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಉದ್ಯೋಗ ದರಗಳಿಗೆ ಸಕಾರಾತ್ಮಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
ಭಾರತೀಯ ಆರ್ಥಿಕತೆಯು ಬಲವಾದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅನುಭವಿಸುತ್ತಿದೆ. ವಿಶ್ವದ ಆರ್ಥಿಕ ಶಕ್ತಿಯಾಗಿ ಹೆಜ್ಜೆ ಹಾಕುತ್ತಿದೆ. ಭಾರತವು ದೇಶೀಯ ಸುಧಾರಣೆಗಳು ಮತ್ತು ಕಾರ್ಯತಂತ್ರದ ಜಾಗತಿಕ ಸ್ಥಾನೀಕರಣದಿಂದಾಗಿ ಭಾರತದ GDP ಯಿಂದ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಕಳೆದ ದಶಕದಲ್ಲಿ ನಾಮಮಾತ್ರ GDP ಮೂರು ಪಟ್ಟು ಹೆಚ್ಚಾಗಿದೆ. ಇಂದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುವ ನಿರೀಕ್ಷೆಯಿದೆ.
ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ
ಬೆಳವಣಿಗೆ ಮತ್ತು ಅಭಿವೃದ್ಧಿ ಪರಸ್ಪರ ಸಂಬಂಧ ಹೊಂದಿದ್ದರೂ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಬೆನ್ನೆಲುಬಾಗಿ ರೂಪುಗೊಳ್ಳುವ ವಿಭಿನ್ನ ಪರಿಕಲ್ಪನೆಗಳಾಗಿವೆ. ಬೆಳವಣಿಗೆ ಸಾಮಾನ್ಯವಾಗಿ ದೇಶದ ಉತ್ಪಾದನೆ ಅಥವಾ ಆದಾಯದ ಪರಿಮಾಣಾತ್ಮಕ ಹೆಚ್ಚಳವನ್ನು ಸೂಚಿಸುತ್ತದೆ. ಜೀವನಮಟ್ಟ, ಸಮಾನತೆ ಮತ್ತು ಸಾಮಾಜಿಕ ಯೋಗಕ್ಷೇಮದಲ್ಲಿ ಗುಣಾತ್ಮಕ ಸುಧಾರಣೆಗಳನ್ನು ಒಳಗೊಂಡಿದೆ.
ಬೆಳವಣಿಗೆ ಮತ್ತು ಅಭಿವೃದ್ಧಿಯು ಪೂರಕ ಆದರೆ ಇವು ವಿಭಿನ್ನ ಪ್ರಕ್ರಿಯೆಗಳಾಗಿದ್ದು, ಅವುಗಳಿಗೆ ಸಮತೋಲಿತ ತಂತ್ರಗಳು ಬೇಕಾಗುತ್ತವೆ. ಬೆಳವಣಿಗೆಯು ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿದರೆ, ಎರಡನೆಯದು ಆ ಸಂಪನ್ಮೂಲಗಳ ಸಮಾನ ಮತ್ತು ಸುಸ್ಥಿರ ಬಳಕೆಯನ್ನು ಖಚಿತಪಡಿಸುತ್ತದೆ. ದೀರ್ಘಕಾಲೀನ ಪ್ರಗತಿ ಮತ್ತು ಯೋಗಕ್ಷೇಮವನ್ನು ಸಾಧಿಸಲು ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಆಯಾಮಗಳನ್ನು ಸಂಯೋಜಿಸುವ ವಿಧಾನವಾಗಿದೆ.
ಬಾಂಧವ್ಯ ವೃದ್ಧಿ ಸಾಧಿಸಬೇಕು !
ಯಾವುದೇ ಒಂದು ಸ್ವತಂತ್ರ ದೇಶ ಶಾಂತಿ ಮತ್ತು ನೆಮ್ಮದಿಯಿಂದ ಅಭಿವೃದ್ಧಿಯತ್ತ ಮುನ್ನಡೇಯ ಬೇಕಾದರೆ ಜಗತ್ತಿನ ಇತರೆ ದೇಶಗಳ ಜೊತೆಗೆ ಅದರಲೂ ನೆರೆಹೊರೆಯ ದೇಶಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನೆರೆಹೊರೆಯ ದೇಶಗಳ ಜೊತೆಗೆ ಸೌಹಾರ್ದ ಸಂಬಂಧವು ಹೆಚ್ಚಾಗಿದೆ ಹಾಗೇ ನೋಡಿದರೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹಲವಾರು ತಟಸ್ಥ ದೇಶಗಳ ಮನವೊಲಿಸಿ ಅಲಿಪ್ತ ರಾಷ್ಟ್ರಗಳೊಂದಿಗೆ ಕೈ ಜೋಡಿಸಿದ್ದರು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ದಕ್ಷಿಣ ಏಷ್ಯಾದ ಸಣ್ಣಪುಟ್ಟ ದೇಶಗಳ ಮನವೊಲಿಸಿ ಸಾರ್ಕ್ ಸಂಸ್ಥೆಗೆ ಚಾಲನೆ ನೀಡಿದರು. ದಿ. ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಫೆಲೆಸ್ತೀನ್ ಪರವಾಗಿ ಸಾಮ್ರಾಜ್ಯಶಾಹಿ ವಿರೋಧಿ ವಿದೇಶಾಂಗ ನೀತಿಯ ಬಗ್ಗೆ, ಬಹಿರಂಗವಾಗಿ ಇಸ್ರೇಲ್ನ ಜನಾಂಗವಾದಿ, ಆಕ್ರಮಣಕಾರಿ ನೀತಿಯನ್ನು ಖಂಡಿಸಿದ್ದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೆರೆಹೊರೆಯ ದೇಶಗಳ ಸಂಬಂಧ ಮತ್ತು ನೆರೆಯ ರಾಜ್ಯಗಳ ಬಾಂದವ್ಯವನ್ನು ವೃದ್ಧಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಲ್ಲಿ ಆಂತರಿಕ ಮತ್ತು ವಿದೇಶಾಂಗ ನೀತಿಗಳು ಇನ್ನೂ ಬಲಯುತವಾಗಿರಬೇಕು ಮತ್ತು ಕೆಲವೊಂದು ಬಾರಿ ಎಕ ಮುಖವಾದ ನಿರ್ಣಗಳು ದೇಶದ ಹಿತಾಸಕ್ತಿಗೆ ಮಾರಕವಾಗಬಹುದು. ಮತ್ತೊಂದು ಕಡೆ ಪ್ರತಿ ಪಕ್ಷಗಳ ಟೀಕೆಗಳಿಗೂ ಗುರಿಯಾಗಬಹುದು ಎಂಬುದನ್ನು ಮನಗಾಣ ಬೇಕು.
ಪ್ರಧಾನಿ ನರೇಂದ್ರ ಮೋದಿಜೀಯವರು ಹಿಂದಿನ ಯಾವ ಪ್ರಧಾನಿ ಮಂತ್ರಿಗಳು ಮಾಡಿದಷ್ಟು ವಿದೇಶ ಪ್ರವಾಸಗಳನ್ನು ಮಾಡಿದಾರೆ. ಕೆಲವೊಂದು ಕಡೆ ವಿದೇಶಾಂಗ ಮಂತ್ರಿ ಹೋಗಬೇಕಾದ ದೇಶಗಳಿಗೂ ಸ್ವತ:ಹ ಇವರೇ ಬೇಟಿಮಾಡಿದಾರೆ. ನಮ್ಮ ದೇಶದಲ್ಲಿ ಇನ್ನೂ ಕೆಲವೊಂದು ವಿದೇಶಾಂಗ ನೀತಿ, ಗಡಿ ಸಮಸ್ಯಗಳುನ್ನು ಸರಿಪಡಿಸುವುದು ಭಾರತಕ್ಕೆ ತುಂಬಾ ಅನಿವಾರ್ಯವಿದೆ ಹಾಗೂ ಭಾರತದ ಆರ್ಥಿಕತೆ ಚೀನಾ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಕ್ಕಿಂತ ಹೆಚ್ಚು ಬೆಳವಣಿಗೆ ಸಾಧಿಸಬೇಕಿದೆ ಎಂದು ವಿಶ್ವಸಂಸ್ಥೆ ವರದಿಯೊಂದು ತಿಳಿಸಿದೆ.
ವಿಶ್ವಸಂಸ್ಥೆಯ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ನಿರೀಕ್ಷೆಗಳ (WESP) ಪ್ರಕಾರ, ಭಾರತದ ಬೆಳವಣಿಗೆಗೆ ಬಲವಾದ ಗೃಹಬಳಕೆ ಖರ್ಚು, ಸರ್ಕಾರಿ ಹೂಡಿಕೆಗಳು, ಸರಕು-ಸೇವೆಗಳ ರಫ್ತುಗಳು ಕಾರಣವಾಗಿವೆ. ಜಾಗತಿಕ ಆರ್ಥಿಕತೆಯು ಅಸ್ಥಿರ ನೆಲೆಯಲ್ಲಿ ನಿಂತಿದ್ದರೂ, ಭಾರತವು ಇನ್ನೂ ಹೊಳೆಯುತ್ತಲೇ ಇದೆ ಎಂಬ ಮಾಹಿತಿ ನೀಡಿದೆ.
ಪ್ರಸ್ತುತ ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆಯುವ ಮುನ್ನೂಸೂಚನೆ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ. ಭಾರತವು ಚೀನಾ, ಅಮೇರಿಕ ಮತ್ತು ಯುರೋಪಿಯನ್ ಒಕ್ಕೂಟದಂತಹ ದೊಡ್ಡ ಆರ್ಥಿಕತೆಗಳಿಗಿಂತ ಮುಂದಿದೆ. ಭಾರತದ ಆರ್ಥಿಕತೆಯು 9.4 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ ಅದರೆ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರವು ತುಂಬಾ ಬದಲಾಗಲಿದೆ ಎಂಬ ಮಾಹಿತಿ ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವ ಆರ್ಥಿಕತೆಯು ಅನಿಶ್ಚಿತೆಯ ಕ್ಷಣದಲ್ಲಿದೆ, ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯನ್ನು ಸೂಚಿಸುತ್ತದೆ ಪ್ರಪಂಚದ ಅನೇಕ ದೇಶಗಳು ಹಂತ ಹಂತವಾಗಿ ಬೆಳೆಯುವ ನಿರೀಕ್ಷೆಯಿದೆ ಆದರೆ ಇತರೆ ದೇಶದ ಆರ್ಥಿಕತೆಗೆ ಹೋಲಿಸಿದರೆ ಭಾರತದ ಆರ್ಥಿಕತೆಯಲ್ಲಿ ಸ್ಧಿರತೆಯನ್ನು ಕಾಯ್ದುಕೊಂಡಿದೆ. 2025ರ ಭಾರತೀಯ ಆರ್ಥಿಕತೆಯು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ, ಅಂದಾಜು GDP ಬೆಳವಣಿಗೆ ೬.೩% ರಿಂದ ೬.೮% ರಷ್ಟಿರುತ್ತದೆ. ಈ ಬೆಳವಣಿಗೆಯು ಬಲವಾದ ದೇಶೀಯ ಬಳಕೆ, ಹೂಡಿಕೆಗಳು ಮತ್ತು ಕಾರ್ಯತಂತ್ರದ ಜಾಗತಿಕ ಸ್ಥಾನೀಕರಣದಿಂದ ಉತ್ತೇಜಿಸಲ್ಪಟ್ಟಿದೆ. ಭಾರತವು ನಾಲ್ಕನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ವಿವರಿಸಿದ್ದಾರೆ. ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಪ್ರಕಾರ, 2025-2026 ಕ್ಕೆ ಭಾರತವು 6.3% ರಿಂದ 6.9% ವರೆಗೆ ಅಂದಾಜುಗಳೊಂದಿಗೆ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಲಿದೆ ಎಂದರೆ ತಪ್ಪಾಗಲಾದರು.
ಪಟೇಲ್ ಎಸ್