ಸೋಲಿನಲ್ಲೂ ಅಮೂಲ್ಯವಾದ ಪ್ರೇರಣೆ ಪಾಠ ಕಲಿಯಬೇಕು !
ನಮ್ಮೆಗೆಲ್ಲರಿಗೂ ಇರುವುದು ಒಂದೇ ಬದುಕು. ಪ್ರತಿಯೊಬ್ಬರ ಬದುಕಿನಲ್ಲಿ ಅಗಾದವಾದ ಕನಸುಗಳಿವೆ ಅಂತಹ ಕನಸಗಳನ್ನು ಪಡೆಯಲು ಪ್ರತಿ ಸ್ಪರ್ಧಿಯಾಗಿ ನಿಂತು, ಉತ್ಸಾಹಿಗಳಾಗಿ ಮುನ್ನುಗ್ಗಬೇಕು ಇದರಿಂದ ಮುನ್ನಡೆ, ಯಶಸ್ಸು ಸಾದ್ಯ. ಬದುಕಿನಲ್ಲಿ ಬಂದಿರುವ ವೈವಿಧ್ಯಮಯ ದುರ್ಘಟನೆಗಳನ್ನು ನಾವೆಲ್ಲರೂ ಪ್ರೇರಣೆಗಳೆಂದು ತಿಳಿದುಕೊಂಡು ಮುಂದಿನ ದಾರಿ ರೂಪಿಸಕೊಳ್ಳಬೇಕು. ಈ ಸಮಾಜದ ಹಿಂದಿನ ಇತಿಹಾಸವನ್ನು ಅರಿತಾಗ ಕೆಲವು ನಡೆದುಹೋದ ಘಟೆನೆಗಳನ್ನು ಅರಿತುಕೊಂಡು ಮುಂದಿನ ಬದುಕು ಸಾಗಿಸಬೇಕು.
ನಮ್ಮ ಪ್ರತಿಯೊಂದು ವಿಷಯ, ವಿಚಾರಕ್ಕೂ ಗಮನ ನೀಡಿದರೆ ನಮಗೆ ಯಾವುದು ಮುಖ್ಯ ಎಂದು ತಿಳಿಯುತ್ತದೆ. ನಾವುಗಳು ಸಾಕಷ್ಟು ಬಾರಿ ಕೇಳಿರುವಂತೆ, ಓದಿರುವಂತೆ ಹಿರಿಯರು, ಕವಿಗಳು, ವಿಮರ್ಶಕರು, ಚಿಂತಕರು,ಕಾದಂಬರಿಕಾರರು, ಪತ್ರಕರ್ತರು ಮತ್ತು ನಾಟಕಕಾರರು ಬರೆದಿರುವ ಬರವಣಿಗೆಯ ಶೈಲಿಗಳನ್ನು ನೋಡಿದರೆ ಕೆಲವು ಸನ್ನೀವೇಶ ಹಾಗೂ ಸಂದರ್ಭಗಳು ಅಯಾಯ ಕಾಲಘಟಕ್ಕೆ ನಡೆದಿರುವ ಘಟನೆಗಳಾಗಿವೆ. ಇಂತಹ ಘಟನೆಗಳಿಂದ ಪ್ರೇರಣೆಗೊಂಡು, ಸಾದನೆಯ ಹಾದಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಮೂಲಕ ಅವರ ಹೆಸರುಗಳು ಇಂದಿಗೂ ಪ್ರಭಾವಿಸುತ್ತಿವೆ.
ಹಾಗೆ ನೋಡುವುದಾದರೆ ವಿಲಿಯಂ ಶೇಕ್ಸ್ ಪಿಯರ್ (William Shakespeare ) ಈ ಜಗತ್ತು ಕಂಡ ಅತ್ಯಂತ ಪ್ರಸಿದ್ಧ ನಾಟಕಕಾರ. ಈತನ ಕೃತಿಗಳು ಹಿಂದಿನ ಎಲಿಜಬೆತ್ ಯುಗದ ಸಾಮಾಜಿಕ ಮತ್ತು ರಾಜಕೀಯ ಭೂದೃಶ್ಯವನ್ನು ಪ್ರತಿಬಿಂಬಿಸಿವೆ. ಮುಂದುವರೆದು ಪ್ರೀತಿಯ ಮಹತ್ವಾಕಾಂಕ್ಷೆ ಮತ್ತು ಸೇಡಿನ ಸಾರ್ವತ್ರಿಕ ಘಟನೆಗಳು ಪ್ರಸ್ತುತ ಜಗತ್ತುನ್ನು ಇಂದಿಗೂ ನೆನಪಿಸಿಕೊಳುವಂತೆ ಮಾಡಿದೆ.
ಜೇನ್ ಆಸ್ಟೆನ್ (Jane Austen) ಪ್ರೈಡ್ ಅಂಡ್ ಪ್ರಿಜುಡೀಸ್ನಂತಹ ಕಾದಂಬರಿಗಳು 19 ನೇ ಶತಮಾನದಲ್ಲಿ ಇಂಗ್ಲೆಂಡ್ನ ಸಾಮಾಜಿಕ ವರ್ಗ, ಲಿಂಗ ತಾರತಮ್ಯ ಮತ್ತು ಮಹಿಳೆಯರ ಮೇಲೆ ಹೊರಿಸಲಾದ ನಿರ್ಬಂಧಗಳ ವ್ಯಾಖ್ಯಾನವನ್ನು ನೀಡಿತು. ಇದರಿಂದ ಪ್ರಭಾವಿತನಾಗಿ ಈತನು ಸಹ ಇತಿಹಾಸವನ್ನು ಬರೆದ.
ಚಾರ್ಲ್ಸ್ ಡಿಕನ್ಸ್ (Charles Dickens) ಆಲಿವರ್ ಟ್ವಿಸ್ಟ್ ಮತ್ತು ಎ ಟೇಲ್ ಆಫ್ ಟು ಸಿಟೀಸ್ ನಂತಹ ಕಾದಂಬರಿಗಳು ಬಡತನ, ಸಾಮಾಜಿಕ, ಅಸಮಾನತೆ ಮತ್ತು ಇಂಗ್ಲೆಂಡ್ನ ಕೈಗಾರಿಕಾ ಕ್ರಾಂತಿಯ ಕಠೋರ ವಾಸ್ತವಗಳನ್ನು ಸ್ಪಷ್ಟವಾಗಿ ನೇರವಾಗಿ ಸಮಾಜಕ್ಕೆ ತೆರೆದಿಟ್ಟ ಎಂಬುದು ಮರೆಯಲಾಗದು.
ಸಿ.ಎಸ್. ಲೆವಿಸ್ (C.S. Lewis ) ರವರು ಬರೆದಿರುವ ದಿ ಕ್ರಾನಿಕಲ್ಸ್ ಆಫ್ ನಾರ್ನಿಯಾ ಸೇರಿದಂತೆ ಹಲವು ಕೃತಿಗಳು ನಂಬಿಕೆ, ವಿಮೋಚನೆ ಮತ್ತು ಕಲ್ಪನೆಯ ಶಕ್ತಿಯ ವಿಷಯಗಳನ್ನು ಅನ್ವೇಷಿಸಿದನ್ನು. ಎರಡನೇ ಮಹಾಯುದ್ಧದ ಘಟನೆಗಳು ಕೆಲವು ಅನುಭವಗಳಿಂದ ಪ್ರಭಾವಿರಾಗಿದ್ದರು.
ಈ ಮಹಾನ್ ವ್ಯಕ್ತಿಗಳ ಬದುಕಿನ ಚಿತ್ರಣ ಕೆಲವೊಂದು ಘಟನೆಗಳಿಂದ ಪ್ರೇರಣೆಗೊಂಡು ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಯೋಚಿಸಿ ಕಾರ್ಯಮಗ್ನರಾಗಿದ್ದರು, ಇವರು ನೋಡಿದಂತಹ, ಅನುಭವಿಸಿದಂತಹ ಸನ್ನಿವೇಶ, ಘಟನೆ ಹಾಗೂ ಸಂದರ್ಭಗಳು ಅವರಿಗೆ ಮಾತ್ರ ಗೊತ್ತಿದ್ದು ಜೀವನದಲ್ಲಿ ಅವರ ಸಾಧನೆಗೆ ಹಾದಿ ಶುರುವಾಯಿತು.
ನಾವು ಯಾವುದೊ ಸಂದರ್ಭದಲ್ಲಿ ನಾವು ಯಾವುದೋ ಒಂದು ರೀತಿಯ ನಿರೀಕ್ಷೆ, ಮತ್ತೊಬ್ಬರ ಪ್ರೀತಿ, ಸ್ನೇಹ, ವಿಶ್ವಾಸ, ನಂಬಿಕೆಗಳನ್ನು ಇಟ್ಟಿರುತ್ತೇವೆ. ಕೆಲವೊಮ್ಮೆ ನಮ್ಮ ಇಷ್ಟಗಳು, ಅಪೇಕ್ಷೆಗಳು, ನಿರೀಕ್ಷೆಗಳು ಎಲ್ಲವೂ ತದ್ವಿರುದ್ಧವಾಗಿ ಕಸಿವಿಸಿಯಾದಾಗ ನಾವು ತಗೆದುಕೊಳ್ಳುವ ನಿರ್ದಾರಗಳ ಮೇಲೆ ಸಾಧನೆ ಮೆಟ್ಟಿಲು ಸಾದ್ಯ.
ನಾವು ಎಂತಹ ಸನ್ನೀವೇಶದಲಾಗಲಿ ಸೋಲಬಾರದು ಏಕೆಂದರೆ ಸೋಲಿನಲ್ಲೂ ಕೂಡ ಅಮೂಲ್ಯವಾದ ಪಾಠವನ್ನು ಕಲಿತುಕೊಳ್ಳಬೇಕು, ಇಂತಹ ಪರಿಸ್ಧಿತಿಯಲ್ಲಿ ನಮ್ಮನರಸಿ ಬರುವಂತಹ ತಿರಸ್ಕಾರ ಮತ್ತು ಪುರಸ್ಕಾರಗಳಿಗೆ ಜಯಕಾರ ಬರೆಯುವ ನಿಟ್ಟಿನಲ್ಲಿ ನಮ್ಮ ಅನುಭವ ಸಾಗಬೇಕು, ನಾವುಗಳು ಅವರಿಂದಲೇ ಪ್ರೇರಿತರಾಗಿ ಜೀವನದ ಜೊತೆ ಸಾಗಬೇಕು.’’
ನಮ್ಮ ಜೀವನ ಗುರಿ ಸಾಧನೆ ಕಡೆ ಇರಬೇಕು ಎಂದು ಬಯಸುತ್ತೇವೆ. ನಾವು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸಿದರೆ ನಮಗೆ ನಿಯೋಜಿಸಲಾದ ಪ್ರತಿಯೊಂದು ಕೆಲಸಗಳನ್ನು ಅತ್ಯುತ್ತಮವಾಗಿ ಮಾಡಬೇಕು. ನಾವು ಮಾಡುವ ಪ್ರತಿ ಪಾತ್ರದಲ್ಲಿ ಬಲಶಾಲಿಯಾಗಬೇಕು, ಪ್ರತಿಯೊಂದು ಸನ್ನಿವೇಶದಲ್ಲೂ ಪರಿಹಾರವನ್ನು ಕಂಡುಕೊಳ್ಳಬೇಕು. ನಮ್ಮ ಜೀವನ ಯಶಸ್ಸಿನ ಜೊತೆ ಸಾಗಬೇಕಾದರೆ ನಿರಂತರವಾಗಿ ಸವಾಲು, ಸೋಲು, ನೋವುಗಳು ಇರಬೇಕು.
ಬದುಕಿನಲ್ಲಿ ನಮ್ಮವರೆಂದು ನಾವು ಅವರ ತಾಳ ಮೇಳಕ್ಕೆ ದಾಳವಾಗಿ ಕುಣಿಯಬಾರದು. ಸಮಾಜದ ಜನರ ಮಾತಿಗೆ ಕುಗ್ಗದೆ, ವ್ಯಂಗ್ಯತೆಗೆ ಬಗ್ಗದೆ ಮುಂದೆ ಸಾಗಬೇಕು. ಅಸಾಮಾನ್ಯ ಜಗತ್ತಿಗೆ ನಾವೇ ಸಾಮಾನ್ಯ ಎಂಬ ಪ್ರಜೆ ಎಂಬ ಭಾವನೆ ಬೆಳಸಿಕೊಳ್ಳಬೇಕು’’ ಒಂದು ವೇಳೆ ನಾವು ಜನರ ಮಾತಿಗೆ ವ್ಯಥೆಪಟ್ಟರೆ, ನಮ್ಮ ಗೆಲುವು ಅಸಾಧ್ಯ. ನಮ್ಮಿಂದ ಏನೂ ಮಾಡಲು ಆಗದೆಂದು ಕುಳಿತರೆ ಬದುಕಿನ ಚಕ್ರ ನಿಂತಂತೆ. ಆಗ ನಮ್ಮ ಸಹಾಯಕ್ಕೆ ಯಾರೂ ಬರಲಾರರು ಎಂಬ ಮಾತು ಸತ್ಯ.
ನಾವು ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ ನಾವು ಪ್ರತಿದಿನ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ಕೆಲವೊಮ್ಮೆ ನಾವು ತಪ್ಪಾಗಿ ಭಾವಿಸಿಕೊಳ್ಳುತ್ತೇವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅನಿರೀಕ್ಷಿತವಾಗಿ ಬರುವಂತಹ ಕೆಲವು ವೈಫಲ್ಯ ಯಶಸ್ಸಿನ ವಿರುದ್ಧವಾಗಿರುವುದಿಲ್ಲ ಬದಲಾಗಿ ಇಂತಹ ಸನ್ನಿವೇಶಗಳು ಯಶಸ್ಸಿನ ಗರಿಷ್ಟ ಭಾಗವಾಗಿರುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು.
ಘಟನೆಗಳಿಂದ ನಾವು ಸಮಸ್ಯೆ ಮತ್ತು ಅಡೆತಡೆಗಳನ್ನು ಕಂಡಾಗ ಹೆದರುವುದು ಸಾಮಾನ್ಯ. ಪ್ರತಿಯೊಂದು ಅಡಚಣೆಯಲ್ಲೂ ಅವಕಾಶಗಳ ಮಹತ್ವವನ್ನು ಹುಡುಕಿಕೊಳ್ಳಬೇಕು, ನಮ್ಮ ದಾರಿಯಲ್ಲಿನ ಅಡೆತಡೆಗಳನ್ನು ತಡೆಯಲು ಸ್ವಲ್ಪ ಸಮಯ, ಕಾರಣ, ಜಾಗರುಕತೆಗಳನ್ನು ಪಾಲಿಸಬೇಕು. ಈ ಸಮಾಜದಲ್ಲಿ ಶ್ರೇಷ್ಠ, ಸಾಧಕ ಎನ್ನಲು ಮೊದಲು ಶ್ರಮ ಮತ್ತು ಸಮಯಕ್ಕೆ ತುಂಬಾ ಗೌರವ ಕೊಡಬೇಕು. ಇಂತಹ ಸಂದರ್ಬೊಚಿತ ಸನ್ನಿವೇಶಗಳನ್ನು ಮೆಟ್ಟಿ ನಿಂತಾಗ ನಮ್ಮೆದುರೆ ನಮ್ಮಗೆ ಹೂವಿನ ಮೇಲೆ ನಡೆಯುವುದು, ಹೂವಿನ ಹಾರ ಹಾಕಿಸಿಕೊಳ್ಳುವುದು ನಾವು ಅವರಿಗೆ ಕೊಡುವ ಉತ್ತರ. ಇಂತಹ ಆಸಾಮಾನ್ಯ ತೊಂದರೆಗಳನ್ನು ಹೆದರಿಸಿ ಮೆಟ್ಟಿನಿಂತು ಜನರ ನಡುವಿನ ಸವಾಲುಗಳಿ ಗಟ್ಟಿತನದಿಂದ ಉತ್ತರಿಸಿದಾಗ, ಗೆಲುವಿನ ಸತ್ಯಸಾರ ಸಾದ್ಯವಾದೀತು.
ನಾವು ಯಾರ ಬದುಕಿನಲ್ಲೂ ನೋಯಿಸದೆ, ನಿಂದಿಸದೆ ಅವರಿಗೂ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಬೇಕು. ಪರರಿಗೆ ಉಪಕಾರ ಮಾಡದಿದ್ದರೂ ಅಪಕಾರ ಮಾಡಬಾರದು. ನಾವು ಯಾವಾಗಲು ಧೈರ್ಯ, ಆತ್ಮವಿಶ್ವಾಸ ಕಳೆದುಕೊಳ್ಳದೆ ಏನೇ ಆಗಲಿ ಯಾರೇ ಬರಲಿ ಗೆಲ್ಲುತ್ತೇನೆ ಎಂಬ ಭರವಸೆ ನಮ್ಮೊಳಗೆ ಬೆಳಸಿಕೊಳ್ಳಬೇಕು. ಜಗತ್ತಿನ ಮಹಾನ್ ವ್ಯಕ್ತಿಗಳ ಸಾದನೆಗಳು ಸಹ ಅನಿರಿಕ್ಷಿತವಾಗಿ ಬರುವಂತಹ ದುರ್ಘಟನೆ, ನೋವು, ನಿಂದನೆ, ಕಲಹ, ಯಾತನೆ, ಹೋರಾಟ, ಒಂಟಿತನ ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಅಂತಹ ಸಂದರ್ಭಗಳ ಸೋಲಿನಲ್ಲೂ ಅಮೂಲ್ಯವಾದ ಪ್ರೇರಣೆ ಪಾಠ ಕಲಿಯಬೇಕು !
ಪಟೇಲ್. ಸಿಜಿ