ಅರಣ್ಯ ಇಲಾಖೆ : CAMPA FUND
2018-2024 CAMPA ಬಿಡುಗಡೆಯಾದ ಅನುದಾನ ಎಷ್ಟು !

ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ದಿನಾಂಕ;23-04-2004 ರ ಆದೇಶ, 2002 ರ ಗೌರವಾನ್ವಿತ ಸುಪ್ರೀಂ ಕೋರ್ಟ್ನ ಆದೇಶದ ಮೇರೆಗೆ, 1.6.A. ನಂಬರ್-1995. CAMPA ರಚಿಸುವ ಮೂಲಕ (Compensatory Afforestation Fund Management and Planning Authority) ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ ಎಂದು ಕರೆಯಲಾಗಿದೆ.
ಭಾರತ ಸರ್ಕಾರ MoEF, 2-07-2009 ರಂದು ರಾಜ್ಯ CAMPA ಅಡಿಯಲ್ಲಿ ನಿಧಿಗಳನ್ನು ನಿರ್ವಹಿಸಲು ಮಾರ್ಗಸೂಚಿಗ ಳನ್ನು ರಚಿಸಿದೆ.ರಾಜ್ಯ (CAMPA) ಕಾಂಪಾ ವ್ಯವಹಾರಗಳನ್ನು ನಿರ್ವಹಿಸಲು, ಕರ್ನಾಟಕ ಸರ್ಕಾರವು ರಾಜ್ಯ ಆಡಳಿತ ಮಂಡಳಿ, ರಾಜ್ಯ ಚಾಲನಾ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಿ, ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷ ತೆಯಲ್ಲಿ ಆಡಳಿತ ಮಂಡಳಿಯು ರಾಜ್ಯ ಮಟ್ಟದ CAMPA ಕಾರ್ಯ ಚಟುವಟಿಕೆಗೆ ವಿಶಾಲವಾದ ನೀತಿ ಚೌಕಟ್ಟನ್ನು ರೂಪಿ ಸಿದೆ. ಈ ಕಾರ್ಯಕಾರಿ ಸಮಿತಿ ಸದಸ್ಯರು, ಅಧಿಕಾರಿಗಳು ಕಾಲಕಾಲಕ್ಕೆ ತಕ್ಕಂತೆ ಕೆಲಸವನ್ನು ಪರಿಶೀಲಿಸುತ್ತಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ,ರಾಜ್ಯ ಉಸ್ತುವಾರಿ ಸಮಿತಿಯು ವಾರ್ಷಿಕ ಕಾರ್ಯಾಚರಣೆ ಯೋಜನೆಯನ್ನು (ಎಪಿಒ) ಅನುಮೋದಿಸುತ್ತಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಇಲಾಖೆ ಮುಖ್ಯಸ್ಧರ ಕಾರ್ಯವ್ಯಾಪ್ತಿಗೆ ಒಳಪಟ್ಟಿರುತ್ತದೆ) ರಾಜ್ಯ ಕಾರ್ಯಕಾರಿ ಸಮಿತಿಯು ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದನೆ ಪಡೆದನಂತರ ಅನುಷ್ಠಾನ & ಮೇಲ್ವಿ ಚಾರಣೆ ಮಾಡುತ್ತಾರೆ.CAMPA ಮಾರ್ಗ ಸೂಚಿಯಂತೆ ರಾಜ್ಯದ ಅರಣ್ಯ ಇಲಾಖೆ ಕಾರ್ಯವ್ಯಾಪ್ತಿಗೆ ಒಳಪಟ್ಟಿರುತ್ತದೆ. ಕಾರ್ಯಕಾರಿ ಸಮಿತಿ ಕಾರ್ಯನಿರ್ವಹಣೆ ನಿಯಮಗಳ ಆಧಾರದ ಮೇಲೆ ಈ ಕಾರ್ಯವಿಧಾನಗಳನ್ನು ಜಾರಿಗೋಳಿಸು ತ್ತದೆ.
1.ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅರಣ್ಯಗಳ ಸಂರಕ್ಷಣೆ, ಪುನರುತ್ಪಾದನೆ ಮತ್ತು ನಿರ್ವಹಣೆ ಮಾಡುವುದು.
2.ರಾಜ್ಯದಲ್ಲಿರುವ ಸಂರಕ್ಷಿತ ಪ್ರದೇಶಗಳ ಬಲವರ್ಧನೆ, ಸಂರಕ್ಷಿತ ಪ್ರದೇಶಗಳ ಒಳಗೆ ಮತ್ತು ಹೊರಗೆ ವನ್ಯಜೀವಿಗಳ ಸಂರಕ್ಷಣೆ ಮತ್ತು ನಿರ್ವಹಣೆ.
3. ಪಕ್ಷಿಗಳ ಆವಾಸಸ್ಥಾನ ರಕ್ಷಣೆ.
4.ಪರಿಹಾರ ಅರಣ್ಯೀಕರಣ ಬೆಳೆಸುವುದು.
5.ಪರಿಸರ ಸೇವೆಗಳು, ಸರಕುಗಳನ್ನು ಒದಗಿಸುವುದು, ಸೇವೆಗಳನ್ನು ನಿಯಂತ್ರಿಸುವುದು.
6.ಅರಣ್ಯ, ಪಕ್ಷಿ-ಪ್ರಾಣಿ ಸಂಕುಲಗಳ ಬಗ್ಗೆ ಸಂಶೋಧನೆ, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ.
2018 – 2024 ಕೆಂದ್ರದಿಂದ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗಿರುವ ಅನುದಾನ & ಬಳಕೆಯಾಗಿರುವ ಮೊತ್ತ (ರೂ ಕೋಟಿಗಳಲ್ಲಿ)
2018-2019 ರೂ.88.85.
2019-2020 ರೂ.104.15
2020-2021 ರೂ.170.43.
2021-2022 ರೂ.299.99
2022-2023 ರೂ.269.37.
2023-2024 ರೂ.288.5
2024-2025 ರೂ. 82.03, (2024 Dec End )
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾದ ಅನುದಾನಗಳನ್ನು ಹಿಂದೆ ಆಡಳಿತ ನಡೆಸಿದಂತಹ BJP ಸರ್ಕಾರ ಹಾಗೂ ಪ್ರಸ್ತುತ ಆಡಳಿತ ರೂಡ ಕಾಂಗ್ರೇಸ್ ಸರ್ಕಾರ ಕಾರ್ಯ ಯೋಜನೆ & ನೀತಿ ನಿಲುವುಗಳ ಅಧಾರದ ಮೇಲೆ (CAMPA) ತನ್ನ ಯೋಜನೆಯನ್ನು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಕಾರ್ಯಗತಗೊಂಡಿದೆ ಎಂಬ ಮಾಹಿತಿಯನ್ನು ಪರಿಶೀಲನೆ ಮಾಡಿ, ವರದಿ ಮಾಡಬೇಕಾಗಿದೆ.
ಎಸ್.ಪಟೇಲ್