ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ:
ಟೆಂಟಕಲ್ ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ನಿರ್ವಹಣೆ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ದಟ್ಟವಾದ ಅರಣ್ಯವನ್ನು ಪ್ರದೇಶವನ್ನುಹೊಂದಿದೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಸುತ್ತಮುತ್ತಲು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ್ದು, ಇಲ್ಲಿ ನೆಲೆಸಿರುವಂತಹ ಸುತ್ತಮುತ್ತಲಿನ ರೈತರು ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾ
ಗಕ್ಕೆ ಕಾಡಂಚಿನ ಗ್ರಾಮಗಳಲ್ಲಿ ಸಣ್ಣ, ಅತಿ ಸಣ್ಣ ರೈತರು ಹಾಗೂ ಬುಡಕಟ್ಟು ಜನಾಂಗದವರು ನೆಲೆಸಿದ್ದು, ಈ ಜನಾಂಗ ದವರು ವ್ಯವಸಾಯವೇ ಮೂಲಕಸುಬು. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗಕ್ಕೆ ಹೊಂದಿಕೊಂಡಂತೆ ರೈತರ ಜಮೀನುಗಳಿದ್ದು, ರೈತರ ಜಮೀನುಗಳಿಗೆ ಆನೆ ದಾಳಿ, ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದಂತಹ ರಾಗಿ ಜೋಳ ಸಾಸಿವೆ ಹರಳು ಶೇಂಗಾ ಭತ್ತ ಬೆಳೆಗಳನ್ನು ತಿಂದು, ನಿರಂತರವಾಗಿ ದಾಳಿ ಮಾಡುತ್ತಿವೆ ಎಂದು ಅಲ್ಲಿನ ರೈತರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಚಾಮರಾಜನಗರ ಶೇ.೪೮ ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಮೂರು ಜಿಲ್ಲೆಗಳನ್ನು ವ್ಯಾಪಿಸಿದೆ. ಈ ಅರಣ್ಯ ಪ್ರದೇಶವು ವನ್ಯಜೀವಿಗಳಿಂದ ಕೂಡಿದು ಸುಮಾರು 18. KM ವಿಸ್ತೀರ್ಣ ಹೊಂದಿದೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಹೊಂದಿಕೊಂಡಂತೆ ಸಂಗಮ, ಮುಗ್ಗೂರು,ಹನೂರು ಕೌದೆಳ್ಳಿ, ಕೊತ್ನೂರು, ಗೋಪಿನಾಥಂ, ಹಲಗೂರು ಅಭಯಾರಣ್ಯ ಆವರಿಸಿದ್ದು ವನ್ಯಜೀವಿ ಆವಾಸ ಸ್ಥಾನವಾಗಿದೆ. ಈ ಅರಣ್ಯ ಪ್ರದೇಶವು ಕಾವೇರಿ, ಅರ್ಕಾವತಿ ಮತ್ತು ಶಿಂಷಾ ಎಂಬ ಮೂರು ನದಿಗಳಿಂದ ಕೂಡಿದೆ. ಈ ಅರಣ್ಯ ಪ್ರದೇಶದಲ್ಲಿ ಹುಲಿ, ಆನೆ, ಚಿರತೆ, ಕಾಡೆಮ್ಮೆ, ಕಾಡುನಾ, ಜಿಂಕೆ, ಬೊಗಳುವ ಜಿಂಕೆ, ಸೋಮಾರಿ ಕರಡಿ, ಕಾಡುಹಂದಿ, ಸಾಮಾನ್ಯ ಲಾಂಗುರ್, ಬಾನೆಟ್ , ದೈತ್ಯ ಅಳಿಲು, ಜೇನು ಬ್ಯಾಡ್ಜರ್ (ರಾಟೆಲ್), ಸರೀಸೃಪಗಳು ಮತ್ತು ಪಕ್ಷಿಗಳ ಪ್ರಭೇದಗಳು ಒಳಗೊಂಡ ದಟ್ಟ ಅರಣ್ಯ ಎಂಬ ಹೆಸರನ್ನು ಪಡೆದು ಕೊಂಡಿದೆ.
ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಹೊಂದಿಕೊಂಡಂತೆ 13 ರಿಂದ 15 ಹಳ್ಳಿಗಳು ಕಾಡಂಚಿನಲ್ಲಿ ನೆಲೆಸಿದ್ದು ಮಲೆ ಮಾದೇಶ್ವರ ವನ್ಯಜೀವಿ ಉಪ ವಿಭಾಗ ವಿಭಾಗಕ್ಕೆ ಸೇರಿವೆ. ಅಸ್ತೂರು, ಪೊನ್ನಾಚಿ, ಮರೂರು ಇನ್ನೂ ಇತರೆ ಹಳ್ಳಿಗಳು ಕಾಡಂಚಿ ನಲ್ಲಿ ನೆಲೆಸಿದ್ದು ರೈತರು ಬೆಳೆದಂತಹ ಬೆಳೆಗಳನ್ನು ಆನೆ , ಹಂದಿ ,ನವಿಲು, ಜಿಂಕೆ ನಾಶಪಡಿಸುತ್ತಿವೆ ಎಂದು ಸುತ್ತಮುತ್ತಲ ರೈತ ಬಾಂಧವರುಮಾಧ್ಯಮಗಳಿಗೆ ಅರಣ್ಯ ಇಲಾಖೆಗೆ ಇಡೀ ಶಾಪ ಹಾಕುತ್ತಿದ್ದಾರೆ.
ಟೆಂಟಕಲ್ ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ನಿರ್ವಹಣೆ
ಆನೆ ದಾಳಿ, ವನ್ಯಜೀವಿಗಳಿಂದ ರಕ್ಷಣೆ ಮಾಡಲು ಸೋಲಾರ್ ತಂತಿ ಬೇಲಿ ಕಾಮಗಾರಿಯನ್ನು ನಿರ್ಮಿಸಲಾಗಿದೆ. ಪೊನ್ನಾಚಿ ವ್ಯಾಪ್ತಿಯ ಹಳ್ಳಿಗಳಿಗೆ ಹೊಂದಿಕೊಂಡತೆ, ರೈತರ ಬೆಳೆಗಳನ್ನು ರಕ್ಷಿಸುವ ಉದ್ದೇಶದಿಂದ ಸೋಲಾರ್ ತಂತಿ ಬೇಲಿ ( ಅರಣ್ಯ ಇಲಾಖೆ) ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗದಿಂದ ಅಂದಾಜು ಸುಮಾರು 18 KM ಕಾಮಗಾರಿ ನಿರ್ಮಾಣ ಮಾಡಲಾಗಿದೆ ಎಂದು ಮಾಡಲಾಗಿದೆ ವಲಯ ಅರಣ್ಯ ಅಧಿಕಾರಿ ಭಾರತಿ ನಂದಿಹಳ್ಳಿ ತಿಳಿಸಿದ್ದಾರೆ, ನಿರ್ಮಾಣ ಮಾಡಿರುವಂತಹ ನಿರ್ಮಾಣ ಮಾಡಿರುವಂತಹ ಸೋಲಾರ್ ತಂತಿ ಬೇಲಿಗೆ ಬಳಸಿರುವಂತಹ ಸಾಮಗ್ರಿಗಳ ಗುಣಮಟ್ಟ ಕಳಪೆ ಮಟ್ಟದ್ದಾಗಿದೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಕಾಡಂಚಿನ ಭಾಗದಲ್ಲಿ ಆನೆ ದಾಳಿ ಹೆಚ್ಚಾಗಿದ್ದು ನಿರಂತರವಾಗಿ ಮಾನವ ಮತ್ತು ವನ್ಯಜೀವಿ ಸಂಘರ್ಷಗಳು ನಡೆಯುತ್ತಿದ್ದು, ಸಾವು ನೋವುಗಳು ಸಹ ಸಂಭವಿಸಿದೆ ಎಂದು ರೈತರು ಗ್ರಾಮಕ್ಕೆ ಭೇಟಿ ನೀಡಿದ ಪ್ರಜಾ ಸಮಯ ಬಳಗಕ್ಕೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಸೋಲಾರ್ ತಂತಿ ಬೇಲಿ ಕಾಮಗಾರಿ ಕಳಪೆ ಮಟ್ಟದಾಗಿದ್ದು, ಸೋಲಾರ್ ಎಲೆಕ್ಟ್ರಿಕ್ ಕಂಬಗಳು ಮುರಿದು ಬಿದ್ದಿವೆ ಎಂಬುದನ್ನು ಖುದ್ದು ಭೇಟಿ ಮಾಡಿ ಪರಿಶೀಲಿ ಸಿದಾಗ ಸತ್ಯ ಸತ್ಯತೆಗಳು ಬೆಳಕಿಗೆ ಬಂದಿವೆ. ಮತ್ತೊಂದು ಕಡೆ ಸೋಲಾರ್ ತಂತಿ ಬೇಲಿ ವಿದ್ಯುತ್ ಅಳವಡಿಕೆಯ ಕಂಬಗಳು ಮುರಿದು ಬಿದ್ದಿರುವುದನ್ನು ಕಣ್ಣಾರೆ ನೋಡಬಹುದು, ತಂತಿ ಬೇಲಿ ವಿದ್ಯುತ್ ಕಂಬಕ್ಕೆ ಎಳೆದಿರುವಂತಹ ಸೋಲಾರ್ ಕೇಬಲ್ ಗಳು ಮಧ್ಯಭಾಗದಲ್ಲಿ ಕಟ್ಟಾಗಿದ್ದು ಭೂಮಿಗೆ ಬಿದ್ದಿವೆ. ಸೋಲಾರ್ ತಂತಿ ಎಳೆದಿರುವಂತಹ ಪ್ರದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಸೋಲಾರ್ ತಂತಿ ಬೇಲಿ ಸೂಕ್ತ ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಸತ್ಯತೆಗಳು ತಿಳಿದು ಬಂದಿದೆ.
ಸೋಲಾರ್ ತಂತಿ ಬೇಲಿ ಸರಿಯಾಗಿ ನಿರ್ವಹಣೆ ಮಾಡದೆ ತುಂಡು ತುಂಡುಗಳಾಗಿ ನೆಲಕ್ಕೆ ಬಿದ್ದಿದೆ.ಸೋಲಾರ್ ಬೆಲೆ ನಿಮಿಸಿರುವ ಸ್ಥಳದಲ್ಲಿ ಗಿಡಗಂಟೆಗಳು ಬೆಳೆದು ಸೋಲಾರ್ ತಂತಿ ಬೇಲಿ ಹಾದು ಹೋಗಿರು ವಂತಹ ಸ್ಥಳದಲ್ಲಿ ಹಸಿರು ಗಿಡ ಗಂಟೆಗಳನ್ನು ಕಡೆದು ಹಾಕದೆ ಕಳಪೆ ಪ್ರಮಾಣದಲ್ಲಿ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಖುದ್ದು ಪರಿಶೀಲಿ ಸಿದಾಗ ಸತ್ಯ ಸತ್ಯತೆಗಳು ಗೋಚರಿಸಿವೆ.
ತಂತಿಬೇಲಿ ನಿರ್ಮಾಣ ಮಾಡಿರುವ ಜಾಗದಲ್ಲಿ ಅಪಾರ ಪ್ರಮಾಣದ ಕಲ್ಲು ಗುಂಡು ರಾಶಿ ರಾಶಿ ಸ್ಥಳದಲ್ಲಿ ಬಿದ್ದಿವೆ. ಸೋಲಾರ್ ನಿರ್ಮಾಣ ಮಾಡುವ ಮೊದಲು ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡುವ ಉದ್ದೇಶದಿಂದ ಒಂದಿಷ್ಟು ಅಗತ್ಯಕ್ಕೆ ತಕ್ಕಂತೆ ಗಿಡಗಂಟೆಗಳನ್ನು ಕಡಿದು ವ್ಯವಸ್ಥಿತವಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗಿರುವುದು ಗುತ್ತಿಗೆದಾರರ ಕೆಲಸ ಇದರ ಜವಾಬ್ದಾರಿಯನ್ನು ಸಂಬಂಧಪಟ್ಟಂತಹ ವಲಯ ಅರಣ್ಯ ಅಧಿಕಾರಿ ಗಮನಹರಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ಗ್ರಾಮದ ರೈತರ ಬೆಳೆಗಳಿಗೆ ವನ್ಯಜೀವಿ ಗಳಿಂದ ಆಗುತ್ತಿರುವ ನಷ್ಟವನ್ನು, ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಆದಷ್ಟು ಮಟ್ಟಿಗೆ ತಡೆಯುವುದು ವಲಯ ಅರಣ್ಯ ಅಧಿಕಾರಿ ಶ್ರೀಮತಿ ಭಾರತಿ ನಂದಿಹಳ್ಳಿ ಅಧಿಕಾರಿಯ ಕರ್ತವ್ಯ ಮತ್ತು ಜವಾಬ್ದಾರಿ ಈ ನಿಟ್ಟಿನಲ್ಲಿ ಅಧಿಕಾರಿಗಳು ಸೋಲಾರ್ ತಂತಿ ಬೇಲಿ ಕಾಮಗಾರಿ ಯಾವುದೇ ರೀತಿಯಲ್ಲೂ ಕೆಲಸ ನಿರ್ವಹಿಸದೆ, ಸರಿಯಾಗಿ ನಿರ್ವಹಣೆ ಮಾಡದೆ ಇರುವುದು ಸೂಚನೆಯ ಸಂಗತಿ ಸಂಬಂಧಪಟ್ಟಂತೆ
ಗುತ್ತಿಗೆದಾರರಿಗೆ ಅರಣ್ಯ ಇಲಾಖೆಯ ಮಾನದಂಡಗಳ ಪ್ರಕಾರ, ಟೆಂಡರ್ ಮಾರ್ಗಸೂಚಿ ನಿರ್ವಹಣೆ ಬಗ್ಗೆ ಸಮಂಜಸ ವಾದ ಮಾಹಿತಿಯನ್ನು ನೀಡಿದ್ದರೂ, ಗುತ್ತಿಗೆದಾರರು, ಅಧಿಕಾರಿಗಳು ನಿರ್ವಹಣೆ ಮಾಡದಿ ರುವುದು, ಸುತ್ತಮುತ್ತಲಿನ ರೈತರ ಆಕ್ರೋಶಕ್ಕೆ ಅಧಿಕಾರಿಗಳು ಗುರಿಯಾ ಗಿದ್ದಾರೆ. ಸೋಲಾರ್ ತಂತಿ ಬೇಲಿ ಕಾಮಗಾರಿ ಟೆಂಡರ್ ಕಾರ್ಯಾದೇಶ ಪತ್ರದಲ್ಲಿ ಕಾಮಗಾರಿ ನಿರ್ವಹ ಣೆಯ ಬಗ್ಗೆ ಒಂದಿಷ್ಟು ಮಾನದಂಡ ಗಳಿದ್ದರೂ, ಅರಣ್ಯ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
ಪೊನ್ನಾಚಿ ಗ್ರಾಮ ಪಂಚಾತಿ ವ್ಯಾಪ್ತಿಯ ರೈತರಗಳು ಬೆಳೆದಂತ ಬೆಳೆಗಳನ್ನು ನಿರಂತರವಾಗಿ ಆನೆ ದಾಳಿ, ವನ್ಯಜೀವಿ ಗಳು ತಿಂದು ನಷ್ಟ ಮಾಡುತ್ತಿವೆ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಾಡಂಚಿನ ರೈತಗಳಿಗೆ ಬೆಳೆಗಳನ್ನು ರಕ್ಷಣೆ ಮಾಡುವ ಉದ್ದೇಶ ಮತ್ತು ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಟೆಂಟಕಲ್ ಸೋಲಾರ್ ತಂತಿ ಬೇಲಿಯನ್ನು ಕಾಮಗಾರಿಯನ್ನು ಕೈಗೊಂಡಿದ್ದರು ಯಾವುದೇ ಉಪಯೋಗವಾಗದೆ ಇರುವುದು ಸುತ್ತಮುತ್ತಲಿನ ರೈತರಿಗೆ ತಲೆ ನೋವಾಗಿದೆ. ಮತ್ತೊಂದು ಮತ್ತೊಂದು ಸೋಲಾರ್ ವಿದ್ಯುತ್ ಕಂಬಗಳಿಂದ ಮತ್ತೊಂದು ಸೋಲಾರ್ ಕಂಬಗಳಿಗೆ ಎಳೆದಿರುವಂತಹ ಸೋಲಾರ್ ತಂತಿ ನಾನು ಆ ಕಡೆಗಳಲ್ಲಿ ತುಂಡು ತುಂಡಾಗಿ ಸ್ಥಳದಲ್ಲಿ ಬಿದ್ದು ನೇತಾಡುತ್ತಿದೆ.
ಸೋಲಾರ್ ತಂತಿ ಬೇಲಿ ಸರಿಯಾಗಿ ಕೆಲಸ ಮಾಡದೆ ಸ್ಥಗಿತಗೊಂಡಿರುವ ಬಗ್ಗೆ ಸಂಬಂಧಪಟ್ಟಂತಹ ಮೇಲಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಇಂತಹ ಪರಿಸ್ಥಿತಿಯಲ್ಲಿ ರೈತರ ಬೆಳೆಗಳನ್ನು ರಕ್ಷಣೆ ಮಾಡುವ ವಿಷಯದಲ್ಲಿ ಅರಣ್ಯ ಇಲಾಖೆ ಮೌನ ವಹಿಸಿದೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಫೋನ್ ಕರೆಯ ಮೂಲಕ ಸಮಸ್ಯೆಯ ಬಗ್ಗೆ ತಿಳಿಸಿದರು ಈವರೆಗೂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತ ವಂಶವನ್ನು ಸರಿಪಡಿ ಸದಿರುವುದು ಅಧಿಕಾರಿಗಳ ಬೇಜ್ವಾಬ್ದಾರಿ ಎಂಬು ದನ್ನು ಸಾರ್ವಜನಿಕರು ಮುಕ್ತವಾಗಿ ವಿವರಿಸಿದ್ದಾರೆ.
ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಫೋನ್ ಕರೆಯ ಮೂಲಕ ರೈತರು ಸೋಲಾರ್ ತಂತಿ ಬೆಲೆ ಆಗಿರುವಂತಹ ಕಳಪೆ ಕಾಮಗಾರಿ ಮತ್ತು ಕಳಪೆ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದಾಗ ಸತ್ಯಾಂಶಗಳು ಬೆಳಕಿಗೆ ಬಂದಿವೆ ಇನ್ನು ಮುಂದಾದರು ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೈ ಮಹದೇಶ್ವರ ವನ್ಯಜೀವಿ ವಿಭಾಗ ಅಧಿಕಾರಿಗಳು ರೈತರ ಕಷ್ಟಗಳಿಗೆ ಸ್ಪಂದಿಸದೆ, ಬೇಜವಾಬ್ದಾರಿತನ ತೋರುತ್ತಿರುವುದು ಸುತ್ತಮುತ್ತಲಿನ ಆನೆ ದಾಳಿಗೆ ಒಳಗಾದಂತಹ ರೈತರ ಜೊತೆ ಮಾತನಾಡಿದಾಗ ನೋವನ್ನು ವ್ಯಕ್ತಪಡಿಸಿದ್ದಾರೆ ಎಂಬ ಸತ್ಯಾಂಶ ಖುದ್ದು ಬೆಳಕಿಗೆ ಬಂದಿದೆ.
ಇನ್ನೂ ಮುಂದಾದರು ಅರಣ್ಯ ಅಧಿಕಾರಿ ಗಳು ಟೆಂಟಕಲ್ ಸೋಲಾರ್ ತಂತಿ ಬೇಲಿ ಸಮರ್ಥವಾಗಿ ನಿರ್ವಹಣೆ ಮಾಡುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿ ಸಬೇಕು ಮತ್ತು ರೈತರ ಬೆಳೆಗಳನ್ನು ರಕ್ಷಣೆ ಮಾಡುವ ಮೂಲಕ ವನ್ಯಜೀವಿ ಮತ್ತು ಮಾನವ ಸಂಘರ್ಷಗಳನ್ನು ಕನಿಷ್ಠ ಮಟ್ಟಲ್ಲಾದರೂ ತಡೆಯುವಲ್ಲಿ ಕ್ರಮವಹಿಸ ಕು, ಒಂದು ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೂ ಮುಂದಾಗದಿದ್ದರೆ ಮತ್ತೊಂದಿಷ್ಟು ಅರಣ್ಯ ಇಲಾಖೆ ವೈಫಲ್ಯಗಳನ್ನು ರೈತರ ಸಹಕಾರದೊಂದಿಗೆ ಜನತೆ ಮುಂದೆ ತರಲು ಬಯಸುತ್ತೇವೆ.