ಬಿಬಿಎಂಪಿ: ಅರಣ್ಯ ಘಟಕದಲ್ಲಿ ಮರಗಳ ಮಾರಣ ಹೋಮ
ಬಿಬಿಎಂಪಿ, ಅರಣ್ಯ ಘಟಕ ತನ್ನ ಕರ್ತವ್ಯಕ್ಕೆ ಅನುಕೂಲವಾಗುವಂತೆ ಉತ್ತರ ಉಪ ವಿಭಾಗ (ಪೂರ್ವ, ದಾಸರಹಳ್ಳಿ, ಯಲಹಂಕ ಮತ್ತು ಮಹದೇವಪುರ ವಲಯಗಳು) ಹಾಗೂ ದಕ್ಷಿಣ ಉಪ ವಿಭಾಗ-2 (ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ ಮತ್ತು ಆರ್.ಆರ್. ನಗರ ವಲಯ) ಗಳೆಂದು ರಚಿಸಿಕೊಂಡು, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರು, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಕಾಯ್ಧೆ, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976 ರಡಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅರಣ್ಯ ಘಟಕ ಪ್ರಮುಖವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಡುತೋಪು ಬೆಳೆಸುವುದು, ರಸ್ತೆ ಬದಿಯ ಮರಗಳು / ಮರಗಳ ಕೊಂಬೆಗಳನ್ನು ತೆಗೆಯಲು ಅನುಮತಿ, ಒಣಗಿದ ಮತ್ತು ಅಪಾಯಕಾರಿ ಮರಗಳಿಂದ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸವುದು. ನಗರ ಪರಿಸರಕ್ಕೆ ಅನುಗುಣ ವಾಗಿ ಮರಗಳ ರಕ್ಷಣೆ ಮತ್ತು ನಿರ್ವಹಣೆ. ಸರ್ಕಾರಿ ಜಾಗಗಳಲ್ಲಿ ಆದ್ಯಾತೆ ಮೇರೆಗೆ ಗಿಡ-ಮರಗಳನ್ನು ಬೆಳೆಸುವುದು ಘಟಕದ ಪ್ರಮುಖ ಕೆಲಸ.
ಅರಣ್ಯ ಕಾಯ್ಧೆ & ವೃಕ್ಷ ಸಂರಕ್ಷಣಾ ಕಾಯ್ಧೆ ಉಲ್ಲಂಘನೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿ ಮತ್ತು ಅರಣ್ಯ ರಕ್ಷಕರು. ಬಿಬಿಎಂಪಿ ವ್ಯಾಪ್ತಿಗೆ ಬರುವಂತಹ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳ ರೆಂಬೆ–ಕೊಂಬೆಗಳ ಕಟಾವು ಮಾಡುವ ನೆಪದಲ್ಲಿ ಅಕ್ರಮವಾಗಿ ರಸ್ತೆ ಬದಿಯಲ್ಲಿರುವ ಜೀವಂತ ಮರಗಳನ್ನು ಹಣದ ಆಸೆಗೆ ಕಟಾವು ಮಾಡಿರುವುದಾಗಿ ಸಾರ್ವಜನಿಕರಿಂದ ತಿಳಿದು ಬಂದಿದೆ. ಕಳೆದ ತಿಂಗಳ ಹಿಂದೆ ಬೊಮ್ಮನಹಳ್ಳಿ ವಲಯಕ್ಕೆ ಸೇರಿದ ಚನ್ನಪ್ಪ ಲೇಔಟ್, ವಿಕ್ರಮ ನಗರ, ಬಿಕಾಸೀಪುರ ರಸ್ತೆ ಬದಿಯಲ್ಲಿ ಮರಗಳನ್ನು ಕಟಾವು ಮಾಡಿಸಿ, ಮರಗಳನ್ನು ಅಕ್ರಮವಾಗಿ ಸಾಗಿಸಲಾಗಿತ್ತು. ಈ ಪ್ರಕರಣ ಮುಗಿಯುತ್ತಿದಂತೆಯೇ ದಕ್ಷಿಣ ವಲಯಕ್ಕೆ ಸಂಬಂದಿಸಿದ್ದಂತೆ ಜಯನಗರ, ಪದ್ಮನಾಭನಗರ, ಗಿರಿನಗರ, ಬಿಟಿಎಂ ಬಡಾವಣೆಗಳಲ್ಲಿ ವೃಕ್ಷ ಸಂರಕ್ಷಣಾ ಕಾಯ್ದೆ-1976 ಆದೇಶ ಮತ್ತು ಟ್ರೀ ಕಮಿಟಿ ಮಾನದಂಡಗಳನ್ನು ಉಲ್ಲಂಘನೆ ಮಾಡಿ, ರಸ್ತೆ ಬದಿಯ ಜೀವಂತ ಮರಗಳನ್ನು ಕಟಾವು ಮಾಡಿರುವುದಕ್ಕೆ ದಾಖಲೆಗಳೇ ಸಾಕ್ಷಿ.
ಅರಣ್ಯ ಕಾಯ್ಧೆ, ವೃಕ್ಷ ಸಂರಕ್ಷಣಾ ಕಾಯ್ದೆ ವಿರುದ್ಧ ಮತ್ತು ಟ್ರೀ ಕಮಿಟಿ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಮೂಲಕ ಕಾನೂನು ಬಾಹಿರವಾಗಿ ಬಿಬಿಎಂಪಿ ಅರಣ್ಯ ಘಟಕ ಅಧಿಕಾರಿಯಾದ ಡಿಸಿಎಫ್. ಸ್ವಾಮಿ, ಮತ್ತು ಅಧಿಕಾರಿ ವರ್ಗ ತಾವೇ ಅದೇಶ ಮಾಡಿಕೊಂಡಿರು ವಂತ ಘಟನೆ ನಡೆದಿದೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರ ಕಾಯಿದೆ ಪ್ರಕಾರ ಮರಗಳು ಕಡಿಯುವುದನ್ನು ನಿಯಂತ್ರಿಸಲು, ಮರಗಳನ್ನು ಸಂರಕ್ಷಿಸಲು ಮತ್ತು ಪರಿಸರ ಸಮತೋಲ ಕಾಪಾಡಲು ಕಾಯ್ಧೆ, ಕಾನೂನುಗಳಿದರೂ ಸಹ ಅರಣ್ಯ ಘಟಕ ಅಧಿಕಾರಿಗಳಿಗೆ ಮರಗಳನ್ನು ಅದಷ್ಟು ಮಟ್ಟಿಗೆ ರಕ್ಷಣೆ ಮಾಡಲು ಸಾದ್ಯವಾಗಿಲ್ಲ. ಅರಣ್ಯ ಘಟಕ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಡಿ ಮರಗಳ ರೆಂಬೆ–ಕೊಂಬೆಗಳನ್ನು ತೆಗೆಯಲು ಸ್ಧಳ ಪರಿಶೀಲನೆ ಮಾಡಿದ,ನಂತರ ಜೀವಂತ ಮರದ ವಾಸ್ತವಾಂಶ ತಿಳಿದು, ಅಂತಿಮವಾಗಿ ಟ್ರೀ ಕಮಿಟಿಯ ಲ್ಲಿ ಮಂಡಿಸಿ, ಆದೇಶ ಹೊರಬಿದ್ದ ನಂತರ ಮರಗಳನ್ನು ಕಟಾವು ಮಾಡಬೇಕು ಅದರೆ ಅರಣ್ಯ ಘಟಕ ಈ ಆದೇಶವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಸಾದ್ಯವಾಗಿಲ್ಲ ಅದರೆ ರಸ್ತೆ ಬದಿಯಲ್ಲಿ ಒಣಗಿದ ಮರಗಳು ಹಾಗೂ ಅಪಾಯಕಾರಿ ಮರಗಳನ್ನು ಮಾತ್ರ ತಗೆಯ ಬೇಕೆ ವಿನಹ; ಜೀವಂತವಾಗಿ ಇರುವಂತಹ ಮರಗಳನ್ನು ಕಟಾವು ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇನ್ನೂ ಪಾಲಿಕೆಯಲ್ಲಿ ಕೆಲವು ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಕೃಪಾಕಟಾ ಕ್ಷಕ್ಕೆ ಒಳಗಾಗಿ ಪಾಲಿಕೆಯಲ್ಲಿಯೇ ಉಳಿದು ಕೊಂಡಿ ದ್ದಾರೆ ಅದರಲ್ಲೂ ಬಿಬಿಎಂಪಿ ಅರಣ್ಯ ಘಟಕದ ಡಿಸಿಎಫ್. ಸ್ವಾಮಿ, ಕಾರ್ಯವೈಕರಿ ಬಗ್ಗೆ ಅರಣ್ಯ ಘಟಕದ ಇನ್ನೂಳಿದ ಅಧಿಕಾರಿಗಳೆ ಆಸಮಾಧಾನ ಹೊಂದಿದಾರೆ. ಡಿಸಿಎಫ್. ಸ್ವಾಮಿ ತಮ್ಮ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸ್ವತಹ: ನಿರ್ಧಾರ ತಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗುತ್ತಿಗೆ ದಾರರು, ಸಾರ್ವಜನಿಕರು ತಮ್ಮನೋವನ್ನು ವ್ಯಕ್ತಪಡಿ ದ್ದಾರೆ ಒಟ್ಟಾರೆಯಾಗಿ ಮಾನ್ಯ ಉಸ್ತುವಾರಿ ಸಚಿವರು ಹಾಗೂ ಡಿಸಿಎಮ್ ರವರು ಮತ್ತು ಅರಣ್ಯ ಮಂತ್ರಿ ಗಳು ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿಗಳ ವಿರುದ್ಧ ಯಾವ ಕ್ರಮಕ್ಕೆ ಮುಂದಾಗುತ್ತಾರೊ ಕಾದು ನೋಡಬೇಕಾಗಿದೆ.