! ಬದುಕಿನೊಂದಿಗೆ ಒಂದಿಷ್ಟು ಸಂಸ್ಕಾರ, ಸತ್ಕಾರ, ತಿರಸ್ಕಾರದ ಸಾಮಿಪ್ಯ ಬೇಕು ?
ಬದುಕಿನ ಉನ್ನತಿಗೆ ಬೇಕಾಗಿರುವುದು ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ. ನಮ್ಮ ಹಿರಿಯರ ಆದರ್ಶ, ಮೌಲ್ಯ, ಚಿಂತನೆಗಳನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರ ಬದುಕಿನ ದಾರಿ ಅವರದೇ ಆದಂತಹ ವಿಭಿನ್ನ ಆಲೋಚನೆ ಮೇಲೆ ಸಾಗುತ್ತಿದೆ. ಬದುಕಿನಲ್ಲಿ ಧರ್ಮ, ಆಚಾರ, ವಿಚಾರ, ರೂಡಿ, ಸಂಪ್ರದಾಯಗಳ ಸಂಗಮವಾಗಿದೆ. ಸಮಾಜದಲ್ಲಿ ನಾವುಗಳು ಮಡಿವಂತರಾದರೆ ಜೀವನ ಪಾವನವಾಗುವುದು. ನಮ್ಮ ದಿನ ನಿತ್ಯದ ಕಾರ್ಯಕ್ಷೇತ್ರದಲ್ಲಿ ನಾವುಗಳು ಆಚರಣೆ, ಪಾಲನೆ ಮತ್ತು ರಕ್ಷಣೆ ಮಾಡದಿದ್ದರೆ ಸುಗಂಧವಿಲ್ಲದ ಹೂವಿನಂತೆ, ಫಲವಿಲ್ಲದ ಬಾಳೆಯಂತೆ ಬದುಕು ಸಾಗಬೇಕಾಗುತ್ತದೆ.
ಅನುಭವದ ಪ್ರಕಾರ ‘ನಮ್ಮ ಬದುಕಿನ ಸತ್ಯ ನಿಜವಾಗಿದ್ದರೆ, ನಾವು ಪ್ರತಿಯೊಬ್ಬರ ಬದುಕಿನಲ್ಲಿ ಆಸಕ್ತಿದಾಯಕವಾಗಿ, ಬೇರೊಬ್ಬರನ್ನು ಜಾಗೃತರಾಗಿಸಿ ಇನ್ನೋಬರ ಬದುಕಿಗೆ ಪ್ರೇರಣೆ ರೂವಾರಿಗಳಾಗುತ್ತೇವೆ. ನಮ್ಮ ತತ್ವ,, ಆದರ್ಶಗಳು ಸಮಾಜದಲ್ಲಿ ಸಾರ್ವತ್ರಿಕವಾಗಿ ಕಾಣುವಂತಿರಬೇಕು.’’ಪ್ರತಿಯೊಬ್ಬರ ಬದುಕಿನಲ್ಲಿ ಧರ್ಮ-ಕರ್ಮ, ಸಮನ್ವಯತೆ, ಮಾನವೀಯ ಮೌಲ್ಯಗಳನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಜೀವನ ಉತ್ತಮವಾಗಿಸುತ್ತದೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಕೆಲವು ಜನರು ವಾಸ್ತವಿಕ ಪ್ರಪಂಚದ ಅರಿವಿಲ್ಲದೆ ಪ್ರಾಚೀನತೆಯ ಸತ್ಯ-ಸಂಸ್ಕಾರಗಳ ತಿರುಳನ್ನು ಮರೆಯುತ್ತಿದಾರೆ, ಧರ್ಮದ ಸಾತ್ವಿಕ ಶಕ್ತಿಯನ್ನು ದುರ್ಬಳಕೆ ಮಾಡುವ ಜನ ಹೆಚ್ಚಾಗುತ್ತಿದ್ದಾರೆ. ಇಂಥ ಸಂದಿಗ್ಧ ಕಾಲದಲ್ಲಿ ಸನಾತನ ಮಠಮಾನ್ಯ,, ಗುರುಪೀಠಗಳು, ಸಾದು-ಸಂತರು, ಸನ್ಯಾಸಿಗಳು ನಾಡಿನಾದ್ಯಂತ ಸಂಚರಿಸಿ ಜಾತಿ-ಮತಗಳ ಗೋಡೆ ಗಡಿಯನ್ನು ಮಿರಿ ಸರ್ವರಿಗೂ ಭಾವೈಕ್ಯತೆಯನ್ನು ಸಾರಲು ಮುಂದಾಗಾಬೇಕು ?
‘ನಮ್ಮ ಬದುಕಿನ ಪಯಾಣದಲ್ಲಿ ಸ್ಫೂರ್ತಿಯಾಗಿ ಸವಾಲುಗಳನ್ನು ಸ್ವೀಕರಿಸಿದರೆ ಮಾತ್ರ ನಾವು ಬೇರೆಯವರಿಗೆಮಾರ್ಗದರ್ಶಕರಾ ಗಲು ಸಾದ್ಯ, ಆವೇಳೆಗೆ ಸಮಾಜ ನಮ್ಮನು ಆಹ್ವಾನಿಸಿ, ಆಕರ್ಷಿಸುತ್ತದೆ,ಆಗ ನಾವು ಇನ್ನೋಬ್ಬರಿಗೆ ಪ್ರೇರಕರಾಗುತ್ತೇವೆ.’’ ನಾವು ಮಾಡುವ ಕೆಲಸ ಶ್ರದ್ಧೆಯಿಂದ ಕೂಡಿದರೆ ಅದಕ್ಕೆ ತಕ್ಕ ಫಲ ಖಂಡಿತ. ಈ ರಾತ್ರಿ ನಾನು ಶ್ರಮಪಟ್ಟು ಬರೆಯದಿದ್ದರೆ ಯಾರು ಇದನ್ನು ಓದುತ್ತಿರಲಿಲ್ಲ, ನಿತ್ಯದ ಬದುಕಿನಲ್ಲಿ ನಾನು ಓದುಗನಿಗೆ ಹೊಸ ವಿಷಯವನ್ನು ತಿಳಿಸಲು ಇಚ್ಚಿಸುತ್ತೇನೆ ಅಥವಾ ಇನ್ನೂ ಕೆಲವರು ಇದನ್ನು ಬಯಸದೇ ಇರಬಹುದು, ನಾನು ಯಾವಾಗಲು ಪ್ರಯತ್ನದ ಸರದಿಯ ಮೊದಲ ನಾವಿಕ. ಇವುಗಳ ಮಧ್ಯೆ ಬರುವಂತಹ ಸೋಲು, ಸವಾಲು, ಅವಮಾನಗಳನ್ನು ಛಲ ಬಿಡದೆ ಗೆಲುವಿನ ಮೆಟ್ಟಿಲುಗಳಾಗಿ ಎಣಿ ಮಾಡಿ ಏರಬೇಕು ಎಂಬ ಹಠ ನಮಗೆ ಬರಬೇಕು.
ನಾವು ಸಮಾಜಕ್ಕೆ ಯಾವ ತರಹದ ವ್ಯಕ್ತಿಯಾಗಲು ಬಯಸುತ್ತೇವೆ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳುವ ಮೂಲಕ ಉತ್ತರ ಹುಡಿಕಿಕೊಳ್ಳಬೇಕು. ನಮ್ಮ ಬದುಕಿನ ಜೊತೆ ಎಂತಹ ಸಂಬಂಧಗಳನ್ನು ನಾವು ಬೆಳೆಸಿಕೊಳ್ಳಲು, ಉಳಿಸಿಕೊಳ್ಳಲು ಇಚ್ಛಿಸುತ್ತೇವೆ ಅಂತಹವುಗಳನ್ನು ನಾವೇ ಸÈಷ್ಠಿಸಿ ಸ್ಪಷ್ಟಪಡಿಸಿಕೊಳ್ಳಬೇಕು. ನಮ್ಮ ಬದುಕಿನ ಬಹು ಮುಖ್ಯವಾದ ಸಮಯ, ಶ್ರಮ ಮತ್ತು ಅಭಿರುಚಿಗಳನ್ನು ಸಮಯ, ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಳ್ಳುವ ಮೂಲಕ ಆದರ್ಶವಾಗಬೇಕು. ಬದುಕಿನಲ್ಲಿ ಬರುವಂತಹ ನೋವು, ಸೋಲು ನಮ್ಮನು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ಕಲ್ಪಿಸುತ್ತವೆ. ಆಂತಹ ಸಂದರ್ಭಗಳನ್ನು ಸಮಯೋಚಿತವಾಗಿ ಬಳಸಿಕ್ಕೊಳಬೇಕು. ನಮ್ಮ ಆಯ್ಕೆ.ಯ ಬದುಕನ್ನು ಸುಂದರವಾಗಿಸಿಕೊಳ್ಳುವ ನಿಟ್ಟಿನಲ್ಲಿ ಬದುಕಿನ ಭರವಸೆ ಮೂಡಿಸಿಕೊಳ್ಳ ಬೇಕು.
‘ಪ್ರಂಪಚದಲ್ಲಿ ಶ್ರೇಷ್ಠತೆಯನ್ನು ಸಾಧಿಸಿರುವ ವ್ಯಕ್ತಿಗಳು ತಮ್ಮ ಬುದ್ಧಿವಂತಿಕೆಯಿಂದ ನಿರಂತರ ಅಭ್ಯಾಸ ಮಾಡಿ ಶ್ರೇಷ್ಠತೆಯನ್ನು ಕಂಡಿದ್ದಾರೆ ಮಾತ್ರ ಇತರರು ಅನುಸರಿಸಲು ಹೋದಾಗ ಅವರು ತಮ್ಮ ಸ್ಫೂರ್ತಿಯ ಜಾಡನ್ನು ಹರಿ ಬಿಟ್ಟಿರುತ್ತಾರೆ ಎಂಬ ಮಾತು ಸತ್ಯ’’. ನಮ್ಮ ಬದುಕಿನ ಜೀವನದಲ್ಲಿ ಯಾರೂ ನಮ್ಮನ್ನು ಇಷ್ಟ ಪಡದಿರಬಹುದು. ಇತರರು ನಮ್ಮನು ನಂಬಲೇ ಬೇಕು ಎಂದು ಭಾವಿಸಬಾರದು, ಜಗತ್ತಿನಲ್ಲಿರುವ ಜನರು ನಿಮ್ಮನ್ನು ಹೇಗೆ ನೋಡಲಿ, ನೀನು ಮಾತ್ರ ನಿನ್ನ ದಾರಿಯಲ್ಲಿ ಸಾಗು. ಆಗ ನಿನ್ನಲ್ಲಿ ಅರಿವಿಲ್ಲದೆಯೇ ಜೀವನದಲ್ಲಿ ಪರಿಣಾಮಕಾರಿಯಾಗಿ ಬದಲಾವಣೆ ಮತ್ತು ವ್ಯತ್ಯಾಸ ಕಂಡುಬಂದು, ಸಮಾಜ ನಿಮ್ಮನು ಪೂಜಿಸುವಂತೆ ಮಾಡುತ್ತದೆ.
‘’ಬದುಕಿನಲ್ಲಿ ಬರುವಂತಹ ಕಷ್ಟದ ಕ್ಷಣಗಳನ್ನು ಸಂಭ್ರಮಿಸಿ ಖುಷಿಪಡಿ ಹಾಗೆ ಬರುವಂತಹ ಸಂತೋಷಗಳನ್ನು ಆನಂದಿಸಿ. ಬದುಕಿನ ದಾರಿಯಲ್ಲಿ ಒಂದಿಷ್ತು ಜವಾಬ್ದಾರಿ, ಬದ್ದತೆ-ಶುದ್ಧತೆ, ಪ್ರಬುದ್ಧತೆ, ಪ್ರಾಮಾಣಿಕತೆಯನ್ನು ಹೆಗಲಿಗೇರಿಸಿಕೊಂಡು ನಿರಂತರ ಶ್ರಮದ ಜೊತೆ ರಾಜಿಯಾಗದೆ ರಾರಾಜಿಸಬೇಕು’. ನಮ್ಮ ಬದುಕಿನ ಬಗ್ಗೆಯೇ ಯೋಚಿಸುತ್ತಾ, ಅವುಗಳಾಚೆಗೆ ಅದ್ಭುತ ಬದುಕಿನ ಕಡೆಗೆ ದೃಷ್ಟಿಯನ್ನು ಹರಿಸಿದಾಗಲೇ ಪ್ರಪಂಚದ ಬೆರಗು-ಮೆರಗನ್ನು ಕಾಣಲು ಸಾದ್ಯವಾದಿತು. ಬದುಕಿನ ಪ್ರತಿ ಕ್ಷಣಕ್ಕೂ ಒಂದು ಅರ್ಥವಿದೆ, ಒಂದು ಉದ್ದೇಶವಿದೆ ಎಂದು ತಿಳಿದು ಬದುಕಿನೊಂದಿಗೆ ಒಂದಿಷ್ಟು ಸಂಸ್ಕಾರ, ಸತ್ಕಾರ, ತಿರಸ್ಕಾರ ಸಾಮಿಪ್ಯದ ಜೊತೆ ಬದುಕು ನಿರಂತರವಾಗಿ ಸಾಗಲಿ.
ಎಸ್. ಪಟೇಲ್.
ಪರ್ತಕರ್ತ.