RCB ಸಂಭ್ರಮಾಚರಣೆ: ಸಾವಿಗೆ ಯಾರು ಹೊಣೆ ?
ಹದಿನೆಂಟು ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವಕ್ಕೆ ಬುಧವಾರ ಸಾಗರೋಪಾದಿಯಲ್ಲಿ ಅಭಿಮಾನಿಗಳು ಜಮಾಯಿಸಿದರು ಆ ವೇಳೆ ಉಂಟಾದ ಕಾಲ್ತುಳಿತದ ದುರ್ಘಟನೆಯಿಂದ 11 ಮಂದಿ ದುರಂತ ಸಾವು ಕಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಹಮದಾಬಾದ್ ನಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ದ ಜಯಗಳಿಸಿದ ಹಿನ್ನೆಲೆ ಸಂಭ್ರಮಾಚರಣೆಯನ್ನು ಆಚರಿಸಿ, ತನ್ನ ತವರು ನೆಲದಲ್ಲಿ ಅಭಿಮಾನಿಗಳಿಗೆ ಕೃತಜ್ಣತೆ ಅರ್ಪಿಸಲು ಬಂದಾಗ ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಸಿಲುಕಿ ಕ್ರಿಕೆಟ್ ಅಭಿಮಾನಿಗಳು ದಾರುಣವಾಗಿ ದುರಂತ ಸಾವು ಕಂಡಿದ್ದಾರೆ .
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಅಗಾಧ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಕಣ್ತುಂಬಿಕೊಳ್ಳಲು ಸೇರಿದಾಗ ದುರ್ಘಟನೆಯಲ್ಲಿ ಸಾವು ನೋವು ಉಂಟಾಗಿದ್ದು, ಇವರಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದಾರೆ. ಈ ದಾರುಣ ಸಾವು -ನೋವಿನ ಬಗ್ಗೆ ಸರ್ಕಾರವಾಗಲಿ ಅಧವಾ ಪೊಲೀಸ್ ಇಲಾಖೆಯಾಗಲಿ ಮುಂಜಾಗ್ರತೆ ಕ್ರಮವಹಿಸದೆ ಇರುವುದು ಈ ದುರಂತಕ್ಕೆ ಕಾರಣ. ಒಂದು ವೇಳೆ ಮುಂಜಾಗ್ರತೆ ಕ್ರಮವನ್ನು ಅನುಸರಿಸಿದ್ದೇ ಅಗಿದಲ್ಲಿ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ.
ಯಾವುರೇ ಅಭಿಮಾನಿಗಳು ಯಾವುದೇ ಕ್ರೀಡೆಯನ್ನು ಅತಿರೇಕದ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ. ಯಾವುದೇ ಕ್ರೀಡೆ ಆಯಾಯ ದೇಶದ ಪ್ರತಿಭಾವಂತರ ಸ್ಪರ್ಧೆ ಮಾತ್ರ. ಇಂತಹ ಕ್ರೀಡೆಗಳು ದೈಹಿಕ, ಮಾನಸಿಕ ಶ್ರಮ, ಸಾಮರ್ಥ್ಯ, ಕಲೆ ಮತ್ತು ಕೌಶಲ್ಯಗಳನ್ನು ಒಳಗೊಂಡಿರುತ್ತದೆ. ಕ್ರೀಡೆಗಳು ಯಾವುದೇ ತಂಡಗಳ ಆಟವಾಗಲ್ಲಿ ಕ್ರೀಡೆಯೇ ಆಟಗಳ ಪ್ರಕ್ರಿಯೆ ಬೇರೆ ಬೇರೆಯಾಗಿರುತ್ತದೆ, ಕೆಲವೊಮ್ಮೆ ಸ್ವಲ್ಪ ಸಣ್ಣಪುಟ್ಟ ವ್ಯತ್ಯಾಸಗಳು ಇರಬಹುದು. ಅದರೆ RCB ಗೆದ್ದಿದೆ ಎಂಬುದಕ್ಕೆ ಅಭಿಮಾನಿಗಳ ಸಂತೋಷ ಮತ್ತು ಸಂಭ್ರಮ ಅಷ್ಟಕ್ಕೆ ಸೀಮಿತವಾಗಿರಲಿಲ್ಲ ಅದು ಎಲ್ಲೆ ಮೀರಿದ ಅಂಧಾಭಿಮಾನ ಈ ಘನ ಘೋರ ದುರಂತಕ್ಕೆ ಕಾರಣವಾಯಿತು. ನೆಚ್ಚಿನ ಅಭಿಮಾನಿಗಳು ಕ್ರಿಕೆಟ್ ಒಂದು ಕ್ರೀಡೆ ಎಂಬುದನ್ನು ಮಾತ್ರ ಪರಿಗಣಿಸಬೇಕಿತ್ತು ಅದರೆ ಅಭಿಮಾನಿಗಳು RCB ತಂಡವು ಗೆಲ್ಲಬೇಕೆಂದು ದೇವಾಲಯಗಳಲ್ಲಿ ಹೋಮ, ಹವನ, ಪೂಜೆಗಳನ್ನು ಮಾಡಿಸುವ ಮಟ್ಟಕೆ ತಮ್ಮ ವಿವೇಚನಾ ಶಕ್ತಿಯ ಕಳೆದುಕೊಂಡು ಆಟಗಾರರನ್ನು ದೇವರಂತೆ ಭಾವುಕವಾಗಿ ಬಿಂಬಿಸ ತೊಡಗಿದರು.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅಂದಾಜು ಕನಿಷ್ಠ ಶೇಕಡಾ 35 ರಿಂದ 45% ಜನರಿಗೆ ಕ್ರಿಕೆಟ್ ಬಗ್ಗೆ ಮಾಹಿತಿ ಇದೆ. ಆ ಕಾರಣದಿಂದಲೇ ಭಾರತದ ಕ್ರಿಕೆಟ್ ಆಟವನ್ನು ಇಷ್ಟಪಟ್ಟು ನೋಡುತ್ತಾರೆ ಅದರಿಂದ ಭಾರತದ ಕ್ರಿಕೆಟ್ ಮಂಡಳಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಎಂದು ಹೆಸರುಗಳಿಸಿದೆ. ಇಂತಹ ಕ್ರೀಡೆಗೆ ಅತ್ಯಧಿಕ ಅಭಿಮಾನಿಗಳು ಸೇರುವಂತಹ ಕಾರ್ಯಕ್ರಮಗಳಲ್ಲಿ ಅಪಘಾತಗಳು ಅಕಸ್ಮಾತ್ತಾಗಿ ಸಂಭವಿಸಬಹುದು ಎಂಬ ಅಭಿಪ್ರಾಯವನ್ನು ಸಾಮಾನ್ಯವಾಗಿ ಒಪ್ಪೋಣ ಅದರೆ RCB ತಂಡವು ಬರಿ ಬೆಂಗಳೂರು ಅಲ್ಲದೇ ವಿಶ್ವದ ನಾನಾ ದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದೆ.
ನಮ್ಮ ಸರ್ಕಾರ ಆದರಲ್ಲೂ ಇಲಾಖೆಗಳಲ್ಲಿ ಕಾನೂನು, ಸುವ್ಯವಸ್ಧೆ ಮತ್ತು ಭದ್ರತಾ ಇಲಾಖೆಗಳು ಇದ್ದು ಇದರ ಅಧಾರ ಮೇಲೆ ಮುಂಜಾಗ್ರತಾ ಕ್ರಮವನ್ನು ವಹಿಸಬಹುದಿತ್ತು ಆದರೆ ಘಟನೆಯಲ್ಲಿ ಸಚಿವರಾದಿಯಾಗಿ ತಮ್ಮ ಕುಟುಂಬ ಸಮೇತ ಆಗಮಿಸುವ ಮೂಲಕ ಇದು ಸರ್ಕಾರಿ ಕಾರ್ಯಕ್ರಮ ಎಂಬದನ್ನು ಮರೆತು ತಮ್ಮ ವಯಕ್ತಿಕ ಹಿತಾಶಕ್ತಿಗೋಸ್ಕರ ಆಯೋಜಿದ ಕಾರ್ಯಕ್ರಮ ಎಂಬಂತೆ ವರ್ತಿಸಲಾಗಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ದಾರುಣ ಕಾಲ್ತುಳಿತದಿಂದ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನುನಿಭಾಯಿಸುವುದರಲ್ಲಿ ವಿಫಲವಾಗಿದೆ? ಎಂದು ರಾಜ್ಯದ ಸಾರ್ವಜನಿಕರು ಸಿ.ಎಂ ಸಿದ್ದರಾಮಯ್ಯ, ಸರಕಾರದ ವಿರುದ್ಧ ಟೀಕೆಗಳು ಜೋರಾಗಿದೆ ಅದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಸಹಜ ಪ್ರತಿಕ್ರಿಯೆ. ರಾಜ್ಯದಲ್ಲಿ ಒಂದು ಜವಾಬ್ದಾರಿಯುತ ಸರಕಾರವೊಂದು ಸಾರ್ವಜನಿಕ ಸಭೆಯನ್ನು ಆದ್ಯತೆಯ ಮೇರೆಗೆ ದಟ್ಟಣೆ ಜನಸಂದಣಿಯ ಬಗ್ಗೆ ಸಷ್ಟಪಡಿಸಿಕೊಂಡಿದ್ದರೆ ಇಂತಹ ಕಾಲ್ತುಳಿತದಂತಹ ಭೀಕರ ಸಾವುಗಳು ಸಂಭವಿತ್ತಿರಲಿಲ್ಲ.
ನಮ್ಮನಾಳುವ ಸರಕಾರ ಮತ್ತು ನಾಯಕರು ಇಂತಹ ಸಂದರ್ಭದಲ್ಲಿ ಬೇಜಾವಬ್ಧಾರಿಯುತವಾಗಿ ವರ್ತಿಸುವುದು, ತಮ್ಮಗೆ ಇಷ್ಟ ಬಂದಂತೆ ಮಾದ್ಯಮಗಳ ಮುಂದೆ ಹೇಳಿಕೆ ಕೂಡುವುದು ದುರ್ವಿದಿ. ರಾಜ್ಯದ ಜನಸಾಮಾನ್ಯರು ತೀವ್ರವಾಗಿ ಆಕ್ಷೇಪಿಸುತ್ತಿರುವುದರಲ್ಲಿ ಒಂದು ಅರ್ಥವಿದೆ.
ನೂರುಕಾಲ ಬಾಳಿ ಬದುಕಬೇಕಾಗಿದ್ದ ಹನ್ನೊಂದು ಜೀವಗಳು ಆರ್ಸಿಬಿ ಗೆಲುವಿನ ಹುಚ್ಚು ಸಂಭ್ರಮಕ್ಕೆ ಬಲಿಯಾಗಿದ್ದು ಕರ್ನಾಟಕದ ಇತಿಹಾಸದಲ್ಲಿ ಬಹುದೊಡ್ಡ ದುರಂತವಾಗಿ ಪರಿಣಮಿಸಿದೆ. ಕರ್ನಾಟಕ ಸರಕಾರ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ ಸರ್ಕಾರ ತನ್ನ ಕರ್ತವ್ಯ ಲೋಪ ಎಸಗಿದು ಪೊಲೀಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸೇರಿ ಐದಾರು ಜನ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದು, ನ್ಯಾಯಾಂಗ ತನಿಖೆಗೂ ಆದೇಶಿಸಿಸಲಾಗಿದೆ.
ಒಟ್ಟಾರೆ ಈ ದಾರುಣ ಘಟನೆಯಿಂದ ಸರ್ಕಾರ ಮತ್ತು ನಮ್ಮನಾಳುವ ನಾಯಕರು ಕಲಿಯಬೇಕಾದ ಹತ್ತಾರು ಪಾಠಗಳಿವೆ. ಕ್ರಿಕೆಟ್ ಒಂದು ವಾಣಿಜ್ಯ ಉದ್ದೇಶದ ಹಣ ಮಾಡುವ ದಂಧೆಯಾಗಿ ಮಾರ್ಪಟಿದೆ. ಕ್ರಿಕೆಟ್ ಹುಚ್ಚಿನ ಉನ್ಮಾದದಲ್ಲಿ ಹನ್ನೊಂದು ಜನ ಜೀವ ಕಳೆದುಕೊಂಡಿದ್ದು ಲೆಕ್ಕಕ್ಕೆ ಯಾರು ಹೊಣೆಗಾರರು? ಬೆಳೆದ ಮಕ್ಕಳನ್ನು ಕಳೆದುಕೊಂಡು ತಂದೆಯಾಯಿಗಳು ಏಷ್ಟು ನೋವನ್ನು ಅನುಭವಿಸಬಹುದು ಎಂದು ಚಿಂತಿಸಬೇಕಾಗಿದೆ ಅದರೆ ಈ ದಾರುಣ ಘಟನೆಗೆ ರಾಜ್ಯ ಸರ್ಕಾರ ಎಂಬುದನ್ನು ನಾವು ಮರೆಯುವಂತಿಲ್ಲ.