ಖಾಸಗಿ ಶಾಲೆಗಳಲ್ಲಿ ವರ್ಗಾವಣೆ (TC) ಪತ್ರ ವಿವಾದ, ಪೋಷಕರಿಂದ ಬಾಕಿ ಶುಲ್ಕ ಪಾವತಿಗೆ ಬೇಡಿಕೆ ?

ಬೆಂಗಳೂರು ನಗರದಲ್ಲಿರುವ ಕೆಲವು ಖಾಸಗಿ ಶಾಲೆಗಳು ಮಕ್ಕಳ ವರ್ಗಾವಣೆ ಪತ್ರ ನೀಡುತ್ತಿಲ್ಲವೆಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರುಗಳಿಗೆ ದೂರು ನೀಡಿದ್ದಾರೆ. ನಗರದ ಕೆಲವು ಖಾಸಗಿ ಶಾಲೆಗಳ ವಿರುದ್ಧ ದೂರು ನೀಡಿದರೂ ಸಹ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ವೈಫಲ್ಯವೆಂದು ತಿಳಿದು ಬಂದಿದೆ. ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಿಧಿಸುವ ಪರಿಣಾಮವಾಗಿ ಕೆಲವು ಪೋಷಕರು ಶುಲ್ಕ ಪಾವತಿಸಲು ಸಾದ್ಯವಾಗದ ಸಂದರ್ಭದಲ್ಲಿ ಕುಟುಂಬದ ಆರ್ಧಿಕತೆಗೆ ತಕ್ಕಂತೆ ತಮಗೆ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ಶಾಲೆಗಳಿಗೆ ದಾಖಲಿಸಿದಾಗ ಹಾಲಿ ದಾಖಲಾಗಿರುವ ಶಾಲೆಗಳಿಗೆ ವರ್ಗಾವಣೆ (ಟಿ.ಸಿ) ಪತ್ರವನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ನೀಡದೆ ಇರುವುದು ಕಂಡು ಬಂದಿದೆ.
ಬೆಂಗಳೂರು ನಗರದಲ್ಲಿರುವ ಕೆಲವು ಖಾಸಗಿ ಶಾಲೆಗಳಲ್ಲಿ ಅನಿವಾರ್ಯ ಕಾರಣದಿಂದ ಪೂರ್ಣ ಪ್ರಮಾಣದ ಶುಲ್ಕ ನೀಡುವುದು ಎಂದು ಹೇಳುವ ಮೂಲಕ ಮಕ್ಕಳ ವರ್ಗಾವಣೆ (ಟಿಸಿ) ಪತ್ರಗಳನ್ನು ತಡೆಹಿಡಿದಿದ್ದಾರೆ ಎಂದು ಪೋಷಕರು ಪ್ರಜಾ ಸಮಯ ಪತ್ರಿಕೆ ಜೊತೆ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.
ಕೆಲವು ಪೋಷಕರು ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು ಇಂತಹ ಸೂಕ್ಶ್ಮ ವಿಷಯದಲ್ಲಿ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾದ್ಯವಾಗದೇ ಮೌನವಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಅಧಿಕಾರಿಗಳು ನೀಡುವ ಮಾನಸಿಕ ನೋವನ್ನು ಹೇಳಿಕೊಳ್ಳಲಾಗದೆ ಇರುವಂತಹ ಸ್ಧಿತಿ ತಲುಪಿದ್ದಾರೆ. ನಗರದಲ್ಲಿರುವ ಕೆಲವು ಖಾಸಗಿ ಶಾಲೆಗಳ ಅಧಿಕಾರಿಗಳು ಶುಲ್ಕ ಪಾವತಿಸಿದ ನಂತರ (ವರ್ಗಾವಣೆ ಪತ್ರ) ಟಿಸಿ ಪತ್ರ ನೀಡಲು ಒಪ್ಪಿದ್ದಾರೆ ಎಂದು ಪೋಷಕರು ವಿವರಿಸಿದ್ದಾರೆ.
ಖಾಸಗಿ ಶಾಲೆಗಳಿಂದ ಕಾನೂನು ಉಲ್ಲಂಘನೆ ?

ಖಾಸಗಿ ಶಾಲೆಗಳು ಪೋಷಕರಿಂದ ಅಧಿಕ ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ವರ್ಗಾವಣೆ ಪತ್ರ ನೀಡದಿರುವುದು ಕರ್ನಾಟಕ ಶಿಕ್ಷಣ ಇಲಾಖೆಯ ಆದೇಶಗಳಿಗೆ ಮತ್ತು ಶಿಕ್ಷಣ ಹಕ್ಕು (Right to Education -RTE) ಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎಂಬುದಕ್ಕೆ ಲಿಖಿತ ದಾಖಲೆಗಳೇ ಸಾಕ್ಷಿ. ಇಂತಹ ಘಟನೆಯ ಬಗ್ಗೆ ಈ ಹಿಂದೆ ಖಾಸಗಿ ಶಾಲೆಗಳು ಶುಲ್ಕ ಬಾಕಿ ಉಳಿಸಿಕೊಂಡಿರುವ ಹಣ ವಸೂಲಾತಿಗಾಗಿ ಪ್ರತ್ಯೇಕ ಕಾನೂನು ಕ್ರಮಗಳನ್ನು ಅನುಸರಿಸಬಹುದೇ ಹೊರತು, ಯಾವುದೇ ಮಗುವಿನ ಟಿಸಿ ತಡೆ ಹಿಡಿಯುವಂತಿಲ್ಲ ಎಂಬ ಮಾನದಂಡಗಳನ್ನು ಖಾಸಗಿ ಶಾಲೆಗಳು ಗಾಳಿಗೆ ತೂರಿವೆ.
ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಸರ್ಕಾರದ ಆದೇಶವಿದೆ ಅದರೆ ಕೆಲವು ಅನಿರ್ವಾಯ ಕಾರಣಗಳಿಂದ ಪೋಷಕರು ಶಾಲಾ ಶುಲ್ಕವನ್ನು ಪಾವತಿಸದಿರುವುದು ಅಧವಾ ಕಡಿಮೆ ಪಾವತಿಸುರುವುದು ಕಂಡು ಬಂದಿದೆ. ಖಾಸಗಿ ಶಾಲೆಗಳು ಯಾವುದೇ ಸಂದರ್ಭಗಳಲ್ಲಿ ಮಕ್ಕಳ ಶಿಕ್ಷಣದ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗಬಾರದು ಎಂದು ಶಿಕ್ಷಣ ಇಲಾಖೆಯ ಆದೇಶ ಜಾರಿಯಲ್ಲಿದೆ. ಇನ್ನುಳಿದಂತೆ ರಾಜ್ಯದಲ್ಲಿ ವಿವಿಧ ಉನ್ನತ ನ್ಯಾಯಾಲಯಗಳ ಆದೇಶಗಳ ಹೊರತಾಗಿಯೂ, ಖಾಸಗಿ ಶಾಲೆಗಳು ಮಕ್ಕಳಿಗೆ ವಿನಾಕಾರಣ ಶುಲ್ಕ ಪಾವತಿ ಮಾಡುವಂತೆ ಒತ್ತಾಯಿಸುತ್ತಿವೆ ಎಂಬ ಮಾಹಿತಿ ಪೋಷಕರಿಂದ ತಿಳಿದು ಬಂದಿದೆ.
ಶಿಕ್ಷಣ ಹಕ್ಕು (RTE), ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009 ಉಲ್ಲೇಖಿಸುತ್ತದೆ. ಭಾರತೀಯ ಸಂವಿಧಾನ 21 ಎ ವಿಧಿಯಡಿಯಲ್ಲಿ 6 ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನೀಡಬೇಕು ಎಂದು ವಿವರಿಸಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ಧೆಯಡಿ 1 ರಿಂದ 14 ವರ್ಷ ವಯಸ್ಸಿನ ಪ್ರತಿಯೊಂದು ಮಗು ಪ್ರಾಥಮಿಕ ಶಿಕ್ಷಣದ ಪ್ರವೇಶ, ಹಾಜರಾತಿ ಮತ್ತು ಪೂರ್ಣ ಗೊಳಿಸುವಿಕೆಯನ್ನು ಸರ್ಕಾರದ ಸ್ಥಳೀಯ ಅಧಿಕಾರಿಗಳು ಬದ್ಧರಾಗಿರಬೇಕು ಎಂದು ವಿವರಿಸುತ್ತದೆ.
ಯಾವುದೇ ಮಗುವು ಪ್ರಾಥಮಿಕ ಶಿಕ್ಷಣವನ್ನು ಮುಂದುವರಿಸುವುದನ್ನು ಮತ್ತು ಪೂರ್ಣಗೊಳಿಸುವುದನ್ನು ತಡೆಯುವಂತ್ತಿಲ್ಲ. ಯಾವುದೇ ರೀತಿಯ ಶುಲ್ಕಗಳು ಅಥವಾ ವೆಚ್ಚಗಳನ್ನು (ಪಠ್ಯ ಪುಸ್ತಕಗಳು, ಸಮ ವಸ್ತ್ರಗಳು ಮತ್ತು ಲೇಖನ ಸಾಮಗ್ರಿಗಳನ್ನು ಒಳಗೊಂಡಂತೆ) ಪಾವತಿಸಲು ಬಾಧ್ಯತೆ ಹೊಂದಿರುವುದಿಲ್ಲ ಎಂಬ ಅಂಶಗಳು ಖಾಸಗಿ ಶಾಲೆಗಳು ಧಿಕ್ಕರಿಸಿವೆ. ಮತ್ತೊಂದು ಕಡೆ ಖಾಸಗಿ ಶಾಲೆಗಳಲ್ಲಿ ಮಕ್ಕಳು ಸ್ನೇಹಿಯಾಗಿರಬೇಕು ಹಾಗೂ ಪೋಷಕರು ಖಾಸಗಿ ಶಾಲೆಗಳ ವಿರುದ್ಧ ದೂರು ನೀಡಲು ಸಮರ್ಥರಾಗಿಬೇಕು ಎಂದು ವಿವರಿಸಿದೆ. ರಾಜ್ಯದಲ್ಲಿ ಕೆಲವು ಪೋಷಕರು ಮಾತ್ರ ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದು ಪೋಷಕರು ನೋವನ್ನು ವ್ಯಕ್ತಪಡಿಸಿದ್ದಾರೆ.
ಪೋಷಕರ ಅನಿವಾರ್ಯ ಕಾರಣಗಳು:
ಕೆಲವು ಪೋಷಕರ ಆರ್ಥಿಕ ಸಂಕಷ್ಟ, ನಿವಾಸದ ಬದಲಾವಣೆ ಹಾಗೂ ಇತರ ಕಾರಣದಿಂದಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಅಧವಾ ಇತರ ಶಾಲೆಗೆ ಸೇರಿಸಲು ಬಯಸುತ್ತಾರೆ ಅದರೆ ಕೆಲವೊಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಧಿಕ ಶುಲ್ಕ ವಿಧಿಸುತ್ತಿವೆ ಎಂಬ ಕಾರಣಕ್ಕೆ (ವರ್ಗಾವಣೆ ಪತ್ರ) ಟಿಸಿ ಯನ್ನು ಇದುವರೆವಿಗೂ ಹಾಲಿ ವ್ಯಾಸಂಗ ಮಾಡುತ್ತಿರುವ ಶಾಲೆಗೆ ಕೊಡಲು ನಿರಾಕರಿಸುತ್ತಿವೆ ಎಂದು ಪೋಷಕರು ವಿವರಿಸಿದ್ದಾರೆ.ಮತ್ತೆ ಕೆಲವು ಪೋಷಕರು ಸಂಬಂದಪಟ್ಟಂತಹ ಬಿ.ಇ.ಓ ಹಾಗೂ ಉಪ ನಿರ್ದೇಶಕರಿಗೆ ದೂರು ನೀಡಿದರೂ ಸಹ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ನೀವು ಮಕ್ಕಳ ಆಯೋಗದಲ್ಲಿ ದೂರು ದಾಖಲಿಸಿ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಖಾಸಗಿ ಶಾಲೆಗಳು ಟಿಸಿ ನಿರಾಕರಣೆಗೆ ಪ್ರಮುಖ ಕಾರಣವೆಂದರೆ ಪೋಷಕರು ಬಾಕಿ ಇರುವ ಶಾಲಾ ಶುಲ್ಕವನ್ನು ಪಾವತಿಸದಿರುವುದು. ವಿದ್ಯಾರ್ಥಿಗಳು ವರ್ಷದ ಮಧ್ಯದಲ್ಲಿ ಅಥವಾ ವರ್ಷದ ಕೊನೆಯಲ್ಲಿ ಎಲ್ಲಾ ಬಾಕಿಗಳನ್ನು ಪಾವತಿಸದೆ ಹಣ ಹಿಂಪಡೆಯುವುದರಿಂದ ಶಾಲಾ ಆಡಳಿತ ಮಂಡಳಿಗೆ ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸುತ್ತವೆ ಎಂದು ವಾದಿಸುತ್ತಾರೆ.ಅಧಿಕ ಶುಲ್ಕ ವಸೂಲಾತಿಗೆ ಮಾಡುವ ಏಕೈಕ ಆಸ್ತ್ರವಾಗಿ ಖಾಸಗಿ ಶಾಲೆಗಳು ಬಳಸಿಕೊಳ್ಳುತ್ತಿವೆ ಅದರೆ ಮಕ್ಕಳ ಟಿಸಿ (TC) ಗಳನ್ನು ತಡೆಹಿಡಿಯುವುದರ ವಿರುದ್ಧ ಸ್ಪಷ್ಟ ಕಾನೂನು ನಿಬಂಧನೆಗಳಿದ್ದರೂ, ಕೆಲವು ಖಾಸಗಿ ಅನುದಾನರಹಿತ ಶಾಲೆಗಳು Karnataka Education Act, 1983, Right to Education (RTE) Act, 2009, High Court and Commission Orders: The Karnataka High Court and the Karnataka State Commission for Protection of Child Rights (KSCPCR) ಮಾನದಂಡ ಮತ್ತು ಆದೇಶಗಳನ್ನು ಗಾಳಿಗೆ ತೂರಿವೆ ಅಂತಿಮವಾಗಿ ಸಾರ್ವಜನಿಕ ಶಿಕ್ಷಣ ಬಿಇಒ, ಇಲಾಖೆಯ ಉಪ ನಿರ್ದೇಶಕರು ಪೋಷಕರಿಂದ ದೂರು ಸ್ವೀಕರಿಸಿದ ಬಳಿಕವು ನಿಗದಿತ ಸಮಯದೊಳಗೆ ಖಾಸಗಿ ಶಾಲೆಗಳಿಂದ (TC) ಟಿಸಿಗಳನ್ನು ನೀಡುವಂತೆ ಕಾರಣ ಕೇಳಿ ನೋಟಿಸ್, ಸುತ್ತೋಲೆಗಳನ್ನು ಹೊರಡಿಸಿದರು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಗದೇ ಕೈಕಟ್ಟಿ ಕುಳಿತ್ತಿವೆ ಎಂದರೆ ತಪ್ಪಾಗಲಾರದು.