ರಾಜಕೀಯ ದ್ವಂದ್ವದ ಮಧ್ಯೆ ಅಶಾಂತಿಗೆ ತುತ್ತಾದ ಸಮಾಜ !
ಇತ್ತೀಚಿನ ರಾಜಕೀಯ ಪರಿಸ್ಥಿತಿಗಳು ದೇಶಕ್ಕೆ ಅಪಾಯಕಾರಿ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಬೌದ್ಧಿಕ ದಿವಾಳಿತನದಿಂದಾಗಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿವೆ. ಇವು ಸಮಾಜದಲ್ಲಿ ಗಂಭೀರ ಚಿಂತನೆಗೆ ಕಾರಣವಾಗಿವೆ.ಒಂದು ಕಾಲದಲ್ಲಿ ಪವಿತ್ರತೆ ಮತ್ತು ಸೇವೆಯ ಕ್ಷೇತ್ರವಾಗಿದ್ದ ಶಿಕ್ಷಣ, ಇಂದು ಬಂಡವಾಳ ಹೂಡಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಮೂಲಭೂತ ಹಕ್ಕಾಗಿ ಕಾಣಬೇಕಾದ ಶಿಕ್ಷಣ, ಇಂದಿಗೆ ಹಣಗಳಿಕೆಯ ಕೇಂದ್ರವಾಗಿದ್ದು, ಬಹುತೇಕ ಶಿಕ್ಷಣ ನೀತಿಗಳನ್ನು ರೂಪಿಸುವವರು ರಾಜಕೀಯ ಹಿನ್ನೆಲೆಯ ಬಂಡವಾಳದವರು ಆಗಿರುವುದು ವಿಷಾದಕರ.ಪರಿಣಾಮವಾಗಿ, ಶಿಕ್ಷಣವು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡಿದೆ.
ಇನ್ನೊಂದೆಡೆ, ಸಮಾಜದ ಸ್ವಾಸ್ಥ್ಯಕಾಯ್ದುಕೊಳ್ಳಬೇಕಾದ ಜಾತಿ, ಧರ್ಮಾಧಾರಿತ ಸಂಘಟನೆಗಳು ರಾಜಕೀಯ ಓಟ್ ಬ್ಯಾಂಕುಗಳಾಗಿ ಪರಿವರ್ತನೆಗೊಂಡಿವೆ.ಇವುಗಳಿಂದ ಉದ್ಭವವಾಗುತ್ತಿರುವ ಪ್ರಭಾವ, ಸಮಾಜದಲ್ಲಿ ಭಿನ್ನತೆ, ಅನುಮಾನ ಹಾಗೂ ಅಶಾಂತಿಯನ್ನು ಹೆಚ್ಚಿಸುತ್ತಿದೆ.ಇತ್ತೀಚೆಗೆ ರಾಜ್ಯದ ಸಚಿವರೊಬ್ಬರು, ಒಂದು ಧರ್ಮದ ಸಂಘಟನೆಯ ಕಾರ್ಯಕ್ರಮಗಳು ಸಮಾಜದಲ್ಲಿ ಒಡಕು ಉಂಟು ಮಾಡುತ್ತಿರುವುದಾಗಿ ಆರೋಪಿಸಿ, ಅವುಗಳ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಹೇಳಿರುವುದು ವಾದ-ವಿವಾದಗಳಿಗೆ ಕಾರಣವಾಯಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಂದು ರಾಜಕೀಯ ಪಕ್ಷ ಮತ್ತೊಂದು ಧರ್ಮದ ಕಾರ್ಯಕ್ರಮಗಳ ವಿರುದ್ಧ ನಿಷೇಧದ ಬೇಡಿಕೆಯನ್ನು ಮುಂದಿಟ್ಟಿದೆ.ಇದಲ್ಲದೆ, ಹಲವಾರು ಜಾತಿ ಸಂಘಟನೆಗಳು ತಮಗೆ ಅನ್ಯಾಯವಾಗಿದೆ ಎಂಬ ಆರೋಪಗಳನ್ನು ಎತ್ತಿ, ಆಗಾಗ್ಗೆ ಪ್ರತಿಭಟನೆ ಮಾಡುತ್ತಲೇ ಇವೆ.ಈ ಬೆಳವಣಿಗೆಗಳನ್ನು ನೋಡಿ ಸ್ಪಷ್ಟವಾಗುವುದು ಏನೆಂದರೆ, ರಾಜಕೀಯ ಪ್ರೇರಿತ ಧರ್ಮ ಹಾಗೂ ಜಾತಿ ಸಂಘಟನೆಗಳ ಚಟುವಟಿಕೆಗಳು ಸಮಾಜದಲ್ಲಿ ಭಿನ್ನತೆ ಮತ್ತು ಅಶಾಂತಿಗೆ ಕಾರಣವಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಅಥವಾ ಸಮರ್ಥವಾಗಿ ನಿರ್ವಹಿಸಲು ಸರ್ಕಾರಗಳು, ರಾಜಕೀಯ ಪಕ್ಷಗಳು ಹಾಗೂ ಸಮಾಜದ ಜಾಗೃತನಾಗರಿ ಕರು ಗಂಭೀರವಾಗಿ ಆಲೋಚಿಸ ಬೇಕಾಗಿದೆ.ಇಂತಹ ಚಟುವಟಿಕೆಗಳನ್ನು ಕಠಿಣವಾಗಿ ನಿಯಂತ್ರಿಸುವುದು ಅಥವಾ ನಿಯಮ ಬದ್ಧಗಳಿಸುವುದು ಸಮಾಜದ ಸ್ವಚ್ಛತೆಗೆ ಸಹಕಾರಿ ಆಗಬಹುದು.
ಕರ್ನಾಟಕದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇನ್ನೂಮುಂದುವರಿದಿರುವ ಸಂದರ್ಭದಲ್ಲಿ, ಜನತೆ ರಸ್ತೆಗಳ ಗುಣಮಟ್ಟ, ಕುಡಿಯುವನೀರು, ಆರೋಗ್ಯ ಸೇವೆಗಳ ಕೊರತೆ ಇತ್ಯಾದಿ ಪ್ರಶ್ನೆಗಳನ್ನುಎತ್ತುತ್ತಿರುವರು.ಆದರೆ ಈ ಪ್ರಶ್ನೆಗಳಿಗೆ ಉತ್ತರ ನೀಡುವಬದಲು, ಕೆಲಸಚಿವರು ‘ಜಿಎಸ್ಟಿ ಬಗ್ಗೆ ಕೇಂದ್ರವನ್ನುಕೇಳಿ’ಎಂಬ ಉಢಾಪೆ ಹೇಳಿಕೆ ನೀಡಿ ತಪ್ಪಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.ಇದು ಸರಕಾರದತನ್ನ ಜವಬ್ದಾರಿ ಮತ್ತು ಕರ್ತವ್ಯದಿಂದ ತಪ್ಪಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಪ್ರತಿ ರಾಜ್ಯಸರ್ಕಾರದ ನೈತಿಕ ಹಾಗೂ ಆಡಳಿತಾತ್ಮಕ ಕರ್ತವ್ಯವಾಗಿದೆ.ಆದರೆ ಪ್ರಸ್ತುತ ರಾಜ್ಯ ಸರಕಾರದ ಕೆಲ ನಾಯಕರು ಈ ಬದಲಿಗೆ ಉಡಾಪೆಯ ಹೇಳಿಕೆಗಳನ್ನು ನೀಡುವುದು ಮಾತ್ರವಲ್ಲದೆ, ವಿಫಲತೆಯ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿರುವುದು ಹೆಚ್ಚು ಅಸಂಬದ್ಧವಾಗಿದೆ.
ಒಂದು ಕಡೆ, ಹಿಂದಿನ ಸರ್ಕಾರದ ದುರಾಡಳಿತ ದಿಂದ ಬೇಸತ್ತ ಜನತೆ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತಂದರು.ಆದರೆ, ಇಂದಿನ ಸರ್ಕಾರವು ಎರಡೂವರೆ ವರ್ಷಗಳಲ್ಲಿ ರಾಜ್ಯವನ್ನು ಆರ್ಥಿಕ ಸಂಕಷ್ಟದ ಅಂಚಿಗೆ ತಂದು ನಿಲ್ಲಿಸುತ್ತಿರುವುದು ಖಂಡನೀಯ. ಸರ್ಕಾರದ ಖರ್ಚು ನೀತಿ, ಪುಕ್ಕಟ್ಟೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ, ಮತ್ತು ಹಣಕಾಸಿನ ನಿರ್ವಹಣೆಯಲ್ಲಿ ಸಮರ್ಪಕತೆ ಇಲ್ಲದ ಕಾರಣ ಈ ಸ್ಥಿತಿಉಂಟಾಗಿದೆ.ಇದರ ಜೊತೆಗೆ, ಕೆಲ ರಾಜಕಾರಣಿಗಳು ಸಾಮಾಜಿಕ ಸಂಸ್ಥೆಗಳ ನಿಧಿಗಳನ್ನು ಲೂಟಿ ಮಾಡುವುದು, ಮತ್ತೊಬ್ಬ ಶಾಸಕರು ನೂರಾರು ಕೋಟಿಗಳನ್ನು ಜೂಜಿನಲ್ಲಿ ಸಂಪಾದಿಸಿ ಸಿಕ್ಕಿಹಾಕಿ ಕೊಳ್ಳುವುದು—ಇವು ಸರಕಾರದ ನೈತಿಕ ಪತನಕ್ಕೆ ನಿದರ್ಶನಗಳಾಗಿ ಪರಿಣಮಿಸುತ್ತಿವೆ. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ನಿರಾಶೆ, ಆಕ್ರೋಶ ಉಂಟು ಮಾಡುತ್ತಿವೆ.ಈ ಹಿನ್ನೆಲೆಯಲ್ಲಿ, ಎಲ್ಲದಕ್ಕೂ “ಕೇಂದ್ರ ಸರ್ಕಾರದ ರಾಜಕೀಯ ಪ್ರತೀಕಾ ರವೇಕಾರಣ” ಎಂಬ ಹೇಳಿಕೆ ಸರಕಾರದ ವೈಫಲ್ಯವನ್ನು ಮುಚ್ಚಿಡಲು ಉಪಯೋಗಿಸಲಾಗುತ್ತಿರುವುದು ದುರಂತ. ಇದು ನಿಜಕ್ಕೂ ತೀರಾ ಹಾಸ್ಯಾಸ್ಪದವಾಗಿದೆ. ರಾಜಕೀಯದ ಹೆಸರಿನಲ್ಲಿ ನೈತಿಕತೆ, ಜವಾಬ್ದಾರಿ ಎಂಬಂತಹ ಸ್ತಂಭಗಳನ್ನು ಉಪೇಕ್ಷಿಸುವುದು ಒಪ್ಪಲಾರದಂತಹದ್ದು.
ರಾಜ್ಯದಲ್ಲಿ ನಡೆದಿರುವ, ನಡೆಯುತ್ತಿರುವ ಭ್ರಷ್ಟಾಚಾರ, ದುರುಪಯೋಗ ಹಾಗೂ ಲೂಟಿ ಪ್ರಕರಣಗಳಿಗೆ ತಪ್ಪಿತಸ್ಥರನ್ನು ಪತ್ತೆಹಚ್ಚಿ, ಕಾನೂನಾತ್ಮಕ ಕ್ರಮ ಕೈಗೊಳ್ಳುವುದು ಅಗತ್ಯ. ಮುಂದಿನ ಸರ್ಕಾರಗಳು ಕೂಡ ಇಂತಹ ದೌರ್ಬಲ್ಯಗಳನ್ನು ಅನುಕರಿಸದಂತೆ ಎಚ್ಚರಿಕೆ ಆಗಬೇಕು. ಸಾರ್ವಜನಿಕರ ಹಣ, ನಂಬಿಕೆ, ಮತ್ತು ಭವಿಷ್ಯದ ಮೇಲೆ ಕಾದಿರುವ ದೋಷಿಗಳನ್ನು ಹೊರತೆಗೆದು, ರಾಜ್ಯದ ಆಡಳಿತಕ್ಕೆ ನೈತಿಕದಿಕ್ಕು ನೀಡುವುದು ಈಗ ಅತ್ಯಾವಶ್ಯಕವಾಗಿದೆ.
ಇನ್ನೂ ರಾಜಕೀಯ ಪಕ್ಷವೊಂದು ಯಾವಾಗಲೂ ತನ್ನ ದೇಶದ ಹಿತಾಸಕ್ತಿಗೆ ನಿಷ್ಠರಾಗಿರಬೇಕು.ಆದರೆ ಮತ ಬ್ಯಾಂಕ್ ರಾಜಕಾರಣದ ಲಾಲಸೆಯಿಂದಾಗಿ ದೇಶದ ಬದಲು ಒಂದು ನಿರ್ದಿಷ್ಟ ಧರ್ಮದ ಪರವಾಗಿ ತಾವು ನಿಲ್ಲುತ್ತಿರುವಂತೆ ತೋರಿಸಲು ಹೊರಟಿದೆ..ಗಾಜಾ ಮತ್ತು ಪ್ಯಾಲೆಸ್ತೈನ್ವಿಚಾರಗಳ ಬಗ್ಗೆ ತಮ್ಮ ಧರ್ಮಪರ ಪ್ರೀತಿ ವ್ಯಕ್ತಪಡಿಸುವ ಈ ಪಕ್ಷ, ದೇಶದ ಗಡಿಯಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಮೌನವಹಿಸುವುದು ವ್ಯಂಗ್ಯಮಯ.ತಾವು ಈ ದೇಶದ ರಾಜಕೀಯದಲ್ಲಿ ಪಾಲ್ಗೊಂಡಿರುವುದನ್ನು ಮರೆತು, ಸದಾ ಇಸ್ರೇಲ್ವಿ ವಿರುದ್ಧ ಮಾತನಾಡುವುದು ಅಸಾಧಾರಣವಾದ ಧಾರ್ಮಿಕ ರಾಜಕಾರಣದ ಪ್ರತಿ ಬಿಂಬವಾಗಿದೆ. ಇತ್ತೀಚೆಗೆ ಪಾಕಿಸ್ತಾನ ಮತ್ತು ಅಪಘಾನಿಸ್ತಾನ ನಡುವೆ ಉಂಟಾದ ಸಂಘರ್ಷದಲ್ಲಿ ಈ ಪಕ್ಷ ತೀವ್ರಗೊಂದಲದಲ್ಲಿದೆ—ಯಾರ ಪರವಾಗಿ ನಿಲ್ಲಬೇಕು ಎಂಬ ಪ್ರಶ್ನೆಗೆ ಉತ್ತರವೇಸಿಗುತ್ತಿಲ್ಲ. ಇದು ತಾವು ಬೆಂಬಲಿಸುತ್ತಿರುವ ಧರ್ಮವೇ ಮುಖಾಂತರ ಆಳುವಯತ್ನದ ಒಳಹೊಕ್ಕಿದ ಮೃದು ಹಾಸ್ಯ. ತಾತ್ವಿಕ ಮೌಲ್ಯಗಳಿಲ್ಲದ, ದೇಶ ಪ್ರೀತಿಯ ಬಗ್ಗೆ ಸ್ಪಷ್ಟ ನಿಲುವಿಲ್ಲದ, ಮತಕ್ಕಾಗಿ ಧರ್ಮವನ್ನು ಉಪಯೋಗಿಸುವ ಈ ರೀತಿಯ ರಾಜಕೀಯ ನೈತಿಕ ದಿವಾಳಿತನದ ಸ್ಪಷ್ಟ ಚಿಹ್ನೆಯಾಗಿದೆ.
ರಾಜ್ಯದ ವಿರೋಧ ಪಕ್ಷವೊಂದು ಪ್ರತಿದಿನವೂ “ನಾನು ಎಲ್ಲಾ ಹುಳುಕುಗಳನ್ನು ಬಿಚ್ಚಿಟ್ಟಿದ್ದೇನೆ” ಎಂಬ ಢೋಂಗಿನಲ್ಲಿ ಮಾಧ್ಯಮಗಳಲ್ಲಿ ನಾಟಕೀಯ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಆದರೆ ತಮಾಷೆಯ ಸಂಗತಿಯೆಂದರೆ, ರಾಜ್ಯದ ಜನತೆ ಇಂದು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಅದರ ಹಿಂದಿನ ಆಡಳಿತದ ಅವ್ಯವಸ್ಥೆಯಲ್ಲಿಯೇ ಆಳವಾಗಿ ಬೇರೂರಿದೆ.ಆಡಳಿತ ವಿದ್ದಾಗ ಹೊಣೆಗಾರಿಕೆಯನ್ನು ತಲೆಗೆ ಹಾಕದೆ, ರಾಜಕೀಯ ಲಾಭಕ್ಕಾಗಿ ಪಕ್ಷಾಂತರದ “ಜಂಪಿಂಗ್ಸ್ಟಾರ್ಗಳನ್ನು” ಕಲೆ ಹಾಕಿ ಲೂಟಿ ಮಾಡಿದ ಇತಿಹಾಸ ಮರೆಸಲಾಗದು. ತಮ್ಮ ದೋಷಗಳ ಕಾರಣ ಅಧಿಕಾರ ಕಳೆದುಕೊಂಡ ಪಕ್ಷ ಈಗ ರಸ್ತೆ, ಮೆಟ್ರೋ ಯೋಜನೆಗಳ ಬಗ್ಗೆ ಮೌಲ್ಯ ಬೋಧಕರಂತಾಗಿ ಮಾತನಾಡುತ್ತಿರುವುದು ನಿಜಕ್ಕೂ ನಗೆಪಟಲ ಎಬ್ಬಿಸುವಂತಿದೆ.
ಒಂದು ಕಡೆ ಅಧಿಕಾರದಲ್ಲಿರುವ ಪಕ್ಷ ಜಾತಿ ರಾಜಕಾರಣದ ಮೂಲಕ ಜನರನ್ನು ವಿಭಜಿಸಿ, ದ್ವೇಷದ ರಾಜಕೀಯದಲ್ಲಿ ತೊಡಗಿದರೆ, ಇನ್ನೊಂದು ಕಡೆ ವಿರೋಧ ಪಕ್ಷ ಧರ್ಮಾಧಾರಿ ತಮತ ಬ್ಯಾಂಕ್ರಾ ರಾಜಕಾರಣದಿಂದಾಗಿ ಅಧಿಕಾರ ತಪ್ಪಿಸಿಕೊಂಡಿದೆ. ಈ ಎರಡು ಮುಖವಾಡಗಳು ಜನತೆಗೆ ವಿಕಲ್ಪವಿಲ್ಲದ ಅಸ್ತಿತ್ವವೊಂದನ್ನು ಬಿತ್ತಿವೆ.ಈ ಸಮಯದಲ್ಲಿ ಮತದಾರನು ‘ಯಾರು ಕಡಿಮೆ ಕೆಟ್ಟವರು’ ಎಂಬ ಆಧಾರದಲ್ಲಿ ಮತ ಹಾಕುವಂತಾದರೆ, ಅದು ಪ್ರಜಾಪ್ರಭುತ್ವದ ಗೆಲುವಲ್ಲ–ನೈತಿಕ ಅಧಃಪತನದ ಸಂಕೇತ.