ಹಳ್ಳಿಗಳ ಉದ್ಧಾರ ಯಾರ ಕೈಯಲ್ಲಿ ? PDO ಕರ್ತವ್ಯದ ಮೇಲೆ ನಿಗಾವಹಿಸದ ಸರ್ಕಾರ !
ರಾಜ್ಯದಲ್ಲಿ ಗ್ರಾಮ ಪಂಚಾಯಿಗಳ ಬಗ್ಗೆ ಖ್ಯಾತ ಕೃತಿ ಹಿಂದ್ ಸ್ವರಾಜ್ ಎಂಬ 4 ನೇ ಅಧ್ಯಾಯದಲ್ಲಿ ಗಾಂಧೀಜಿಯವರು ಸ್ವ ರಾಜ್ಯದ ಪರಿಕಲ್ಪನೆಯನ್ನು ಕಂಡದ್ದು ಅಂದಿನಕಾಲಕ್ಕೆ ಆಷ್ಟೆ ಸಿಮಿತವಾಗಿದೆ ಎಂದರೆ ತಪ್ಪಾಗಲಾರದು. ಹಳಿ ತಪ್ಪಿದ ಗ್ರಾಮ ಸ್ವರಾಜ್ಯದ ಕನಸು ಮಹಾತ್ಮ ಗಾಂಧೀಜಿಯವರು ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ, ನೆಹರೂರವರಿಗೆ ಬರೆದ ಪತ್ರದಲ್ಲಿ ‘ಗ್ರಾಮ ಸ್ವರಾಜ್ಯ’ದ ಪರಿಕಲ್ಪನೆಯನ್ನು ಮಂಡಿಸಿದ್ದರು. ಪ್ರಜಾಪ್ರಭುತ್ವವು ಗ್ರಾಮದಿಂದ ಆರಂಭವಾಗಿ ಸಂಸತ್ತಿನವರೆಗೂ ಸ್ವಯಂ ಆಡಳಿತ ಹೊಂದಿರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ಇಂದು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು (PDO), ಸರ್ಕಾರಿ ಆಸ್ತಿ ರಕ್ಷಿಸುವಲ್ಲಿ ಮತ್ತು ಅನುದಾನಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂಬುದಕ್ಕೆ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ.
ಗ್ರಾಮ ಪಂಚಾಯತಿಗಳ ಅಧಿಕಾರ ವಿಕೇಂದ್ರೀಕರಣದ ಹಾದಿಯಲ್ಲಿ ರಾಜಕೀಯದ ಕೂಪವಾಗಿವೆ ರಾಜ್ಯದ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಅನುದಾನಗಳ ದುರ್ಬಳಕೆ ಮತ್ತು ದುರಾಡಳಿತ ತಾಂಡವವಾಡುತ್ತಿದೆ. ಸ್ಥಳೀಯ ಸದಸ್ಯರ ನಡುವಿನ ಅಸಮಾಧಾನ, ಆಂತರಿಕ ರಾಜಕೀಯದಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದೆ. ಗ್ರಾಮಗಳಲ್ಲಿ ರಾಜಕೀಯ, ಜಾತಿ, ಧರ್ಮದ ಆಧಾರದ ಮೇಲೆ ಆಡಳಿತ ನಡೆಯುತ್ತಿರುವುದು ಜನಸಾಮಾನ್ಯರಲ್ಲಿ ಆರಾಜಕತೆಯನ್ನು ಸೃಷ್ಟಿಸಿದೆ. ಈ ಬೆಳವಣಿಗೆ ಗ್ರಾಮೀಣ ಭಾಗದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನು ವಿರೂಪಗೊಳಿಸಿದೆ.
ರಾಜ್ಯದಲ್ಲಿರುವ ಗ್ರಾಮ ಪಂಜಾಯಿತಿಗಳಲ್ಲಿ ಅನುದಾನಗಳ ದುರ್ಬಳಕೆ, ದುರಾಡಳಿತ, ಸ್ಧಳಿಯ ಗ್ರಾಮದ ಸದಸ್ಯರುಗಳ ಅಸಮದಾನ ಅಭಿವೃದ್ಧಿಗೆ ಮಾರಕವಾಗಿದೆ. ಗ್ರಾಮಗಳಲ್ಲಿ ಅಂತರೀಕ ರಾಜಕೀಯದಿಂದ ಗ್ರಾಮಗಳ ಅಭಿವೃದ್ಧಿ ಹೇಗೆ ಸಾದ್ಯವಾದಿತು, ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ, ಜಾತಿ, ಧರ್ಮ ಮೂಲಕ ಆರಾಜಕತೆ ಕೇಳಿಬರುತ್ತಿದೆ. ಇಂತಹ ಬೆಳವಣಿಗೆ ಹಳ್ಳಿಗಳಲ್ಲಿ ಅಭಿವೃದ್ಧಿ ವಿರೂಪಗೋಳಿಸಿದೆ ಎಂಬುದು ಅಧಿಕಾರಿಗಳಿಗೆ ಮನವರಿಕೆಯಾಗಿಲ್ಲ.
ರಾಜ್ಯದಲ್ಲಿ ಗ್ರಾಮಗಳು ಅಭಿವೃದ್ದಿಯಾಗ ಬೇಕಾದರೆ ಪಂಚಾಯಿತಿ ವಿಕೇಂದ್ರೀಕರಣದಿದಲ್ಲೇ ಸಾದ್ಯ. ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ಗುರಿ ತಲುಪದ ಜಲ ಜೀವನ ಮಿಷನ್, ಶುದ್ಧ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಗ್ರಾಮಗಳ ನೈರ್ಮಲ್ಯ, ಘನ ತ್ಯಾಜ್ಯ ನಿರ್ವಹಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ ನರೇಗಾ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ವಿತರಣೆ ವಿಳಂಬವಾಗುತ್ತಿದೆ. ಗ್ರಾಮಗಳ ಪಂಚಾಯಿತಿಗಳಲ್ಲಿ ಮೂಲಸೌಕರ್ಯಗಳಾದ ಬೀದಿ ದೀಪಗಳು, ಚರಂಡಿ ನಿರ್ವಹಣೆ ಮತ್ತು ಗ್ರಾಮೀಣ ರಸ್ತೆಗಳ ಸ್ಥಿತಿ ಹದಗೆಟ್ಟಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಅಧಿಕಾರಿಗಳು ಮತ್ತು ಗ್ರಾಮದ ಸದಸ್ಯರಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬಹದು ಇಲ್ಲವಾದರೆ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಯಲ್ಲಿಯು ಸರ್ಕಾರ ನೀಡುವ ಅನುದಾನಗಳು ಸರಿಯಾಗಿ ಹಂಚಿಕೆಯಾಗದೇ ರಾಜಕೀಯದಿಂದ ಬಲಿಯಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರಿಯಾಗಿ ಗ್ರಾಮ ಸಭೆಗಳ ಕಾರ್ಯಸೂಚಿ, ಸಭಾನಡವಳಿ, ಗ್ರಾಮ ಪಂಚಾಯಿತಿ ವಿಶೇಷ ಸಭೆಯ ವಿವರ, ವಿವಿಧ ಯೋಜನೆಗಳ ಅನುಷ್ಟಾನ, ಅನುದಾನದ ಲಭ್ಯತೆ, ಅನುದಾನ ಬಿಡುಗಡೆ, ರಾಜ್ಯ ಮತ್ತು ಕೆಂದ್ರದ ಅನುದಾನ ಹಣದ ಮೊತ್ತ, ಗ್ರಾಮ ಮಟ್ಟದಲ್ಲಿ ಅನುಷ್ಟಾನವಾಗಬೇಕಾದ ಕಾಮಗಾರಿ ವಿವರ, ಗ್ರಾಮಗಳ ತೆರಿಗೆ ಪಾವತಿ, ಬೀದಿ ದೀಪದ ನಿರ್ವಹಣೆ, ನೈರ್ಮಲ್ಯ, ಸ್ವಚತೆ, ಪರಿಸರಮಾಲಿನ್ಯ ನಿಯಂತ್ರಣ, ಕಾಮಗಾರಿಗಳ ಕ್ರೀಯಾ ಯೋಜನೆ, ಗ್ರಾಮ ಸಭಾನಿರ್ಣಯ, ಗ್ರಾಮದಲ್ಲಿ ತುರ್ತು ಸಭೆಯ ವಿವರ, ವಿಶೇಷ ಸಭೆಯ ಕಾರ್ಯಸೂಚಿ, ತಯಾರಿಕೆ, ಗ್ರಾಮ ಸಭೆಯಲ್ಲಿ ಪಾಲಿಸಬೇಕಾದ ನಿಯಮ, ಗ್ರಾಮ ಸಭೆಯ ಗೋತ್ತುವಳಿಗಳು, ನಡವಳಿ ಪುಸ್ತಕ, ಗ್ರಾಮ ಸಮಿತಿ ಕರ್ತವ್ಯ, ಇನೂ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಸಾಮನ್ಯರಿಗೆ ತಿಳಿಸಲು ವಿಫಲರಾಗಿದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಹೊಣೆಗಾರಿಕೆ ಮತ್ತು ಪ್ರಸ್ತುತ ವ್ಯವಸ್ಥೆಯಲ್ಲಿನ ಲೋಪ ದೋಷಗಳ ಕುರಿತು ಸುದೀರ್ಘ ಮತ್ತು ವಾಸ್ತವಿಕವಾದ ವಿಶ್ಲೇಷಣೆ ಮಾಡಲು ಆಸಾದ್ಯ.ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ದ ಕನಸು ಮತ್ತು ಇಂದಿನ ವಾಸ್ತವದ ನಡುವಿನ ಅಂತರವನ್ನು ಆಯಾಯ ಗ್ರಾಮಗಳಲ್ಲಿ ರುವ ದಾಖಲೆಗಳು ಮತ್ತು ಅಭಿವೃದ್ಧಿ ಬಗ್ಗೆ ಎತ್ತಿ ತೋರಿಸುತ್ತದೆ. ರಾಜ್ಯದಲ್ಲಿರುವ ಕೆಲ ಗ್ರಾಮ ಪಂಚಾಯಿತಿಗಳ ವ್ಯವಸ್ಥೆಗಳು ಸುಧಾರಣೆ ಆಗುವ ವರೆಗೆ ಗ್ರಾಮಗಳು ಅಭಿವೃದ್ಧಿ ಆಸಾದ್ಯ ಇದಕ್ಕೆ ಪ್ರಮುಖ ಕಾರಣ ಪ್ರತಿ ಪಂಚಾಯಿತಿ ಪಿಡಿಒ ಅಧಿಕಾರಿಗಳು ಕಾರಣಿಕರ್ತರು, ರಾಜ್ಯದಲ್ಲಿರುವ ಕೆಲವು ಪಿಡಿಒ (PDO) ತಮ್ಮ ಅಧಿಕಾರ ಮತ್ತು ಜವಾಬ್ಧಾರಿಯನ್ನು ಮರೆತು ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಈ ಕೆಳಗಿನ ಅಂಶಗಳು ಕಾರಣ.

1 ಸರ್ಕಾರಿ ಆಸ್ತಿ ಸಂರಕ್ಷಣೆ ಇಲ್ಲ: ಗ್ರಾಮದ ಗೋಮಾಳ, ಕೆರೆ, ಗುಂಡುತೋಪು ಮತ್ತು ಸರ್ಕಾರಿ ಶಾಲೆಗಳ ಜಾಗ ಅತಿಕ್ರಮಣವಾಗದಂತೆ ತಡೆಯಲು ವಿಫಲರಾಗಿದ್ದಾರೆ.
2. ಸೌಲಭ್ಯಗಳ ವಿತರಣೆ: ಜಲ ಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಸರಿಯಾಗಿಲ್ಲ.
3. ಪಾರದರ್ಶಕವಾದ ಆಡಳಿತ: ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸಿ, ಸರ್ಕಾರದ ಅನುದಾನ ಮತ್ತು ವೆಚ್ಚದ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ವಿಫಲ.
4. ಉದ್ಯೋಗ ಖಾತ್ರಿ: ನರೇಗಾ ಯೋಜನೆಯಡಿ ಅರ್ಹರಿಗೆ ಕೆಲಸ ನೀಡುವುದು ಮತ್ತು ಸಕಾಲಕ್ಕೆ ಕೂಲಿ ಪಾವತಿಸುವುದು ಇನ್ನೂ ಮರಿಚಿಕೆ. ಈ ಯೋಜನಡಿ ಸಾಕಷ್ಟು ಲೋಪದೋಷ.
5. PDo ಸ್ಥಳೀಯವಾಗಿ ವಾಸದ ಕೊರತೆ: ಅನೇಕ ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ ವಾಸಿಸುತ್ತಾ, ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಭೇಟಿ ನೀಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ.
6. ರಾಜಕೀಯ ಪ್ರೇರಿತ ಕೆಲಸ: ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಥವಾ ಜಾತಿರಾಜಕಾರಣದ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡುವುದು ಅಭಿವೃದ್ಧಿಗೆ ಮಾರಕ. ಪಂಚಾಯಿತಿ ರೆವಿನ್ಯೂ ದಾಖಲೆಗಳ ನಿರ್ವಹಣೆಯಲ್ಲಿ ವಿಫಲ: ಸರ್ಕಾರಿ ಆಸ್ತಿಗಳು ಪರಭಾರೆಯಾಗುತ್ತಿದ್ದರೂ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಬಡವರ ಮತ್ತು ಸರ್ಕಾರದ ಸ್ವತ್ತುಗಳು ಭೂಮಾಫಿಯಾದ ಪಾಲು.
7. ಭ್ರಷ್ಟಾಚಾರ ಮತ್ತು ಅನುದಾನ ದುರ್ಬಳಕೆ: ಅಭಿವೃದ್ಧಿ ಕಾಮಗಾರಿಗಳ ಹಣ ಬಿಡುಗಡೆಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು.
ಕೆಲ ಪಂಚಾಯಿತಿಗಳಲ್ಲಿ ಅಧಿಕಾರಿ ದಕ್ಷರಿದು ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಲು ಅಸಕ್ತರಾಗಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿ, ಕಾರ್ಯದರ್ಶಿ, ಅಧ್ಯಕ್ಷರು, ಉಪಾಧ್ಯಕ್ಷರು, ಕರವಸೂಲಿಗಾರ, ಮುಂತಾದ ಇತರೆ ಸಿಬಂದ್ಧಿ ವರ್ಗಗಳಲ್ಲಿ ಸಹಕಾರ, ಹೊಂದಾಣಿಕೆ ಕಡಿಮೆ ಎಂದು ಈ ಮೂಲಕ ಪಂಚಾಯಿತಿಯ ಕೆಲಸಗಳ ಕಡೆ ಗಮನಕೊಟ್ಟಾಗ ಮಾತ್ರ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿ ಸಾದ್ಯವಾದಿತ್ತು ಎಂಬುದು ಗ್ರಾಮಸ್ಧರಲ್ಲಿ ಕೇಳಿಬರುತ್ತಿದೆ. ಪಂಚಾಯಿತಿ ಮಟ್ಟದಲ್ಲಿ ಜಾತಿ ತಾರತಮ್ಯ, ಒಳ ರಾಜಕೀಯ ಹೆಚ್ಚಾಗಿರುವುದರಿಂದ ಗ್ರಾಮದಲ್ಲಿ ಆರ್ಥಿಕ ಅಸಮಾನತೆಯನ್ನು ಉಂಟುಮಾಡಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದನ್ನು ಅಧಿಕಾರಿಗಳು ತಿಳಿದಿರಬೇಕು.
ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಅಭಿವೃದ್ಧಿಯಾಗ ಬೇಕಾದರೆ ಕೆಲವು ಸುಧಾರಣಾ ಕ್ರಮಗಳು ಮಾಡಬೇಕು. ಡಿಜಿಟಲೀಕರಣ,, ಜವಾಬ್ದಾರಿ ನಿಗದಿ, ಗ್ರಾಮ ಸಭೆಗಳ ಸಬಲೀಕರಣ, ಸಾಮಾಜಿಕ ಪರಿಶೋಧನೆ:, ಕಾಮಗಾರಿಗಳ ಗುಣಮಟ್ಟವನ್ನು ಗ್ರಾಮಸ್ಥರೇ ತಪಾಸಣೆ ಮಾಡುವಂತಾಗಬೇಕು. ಒಟ್ಟಾರೆ ಪಿಡಿಒ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಗ್ರಾಮೀಣ ಭಾರತದ ಇಂದಿನ ಜ್ವಲಂತ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಪಿಡಿಒ ಅಧಿಕಾರಿಗಳು ಕೇವಲ ಸರ್ಕಾರಿ ನೌಕರರಂತೆ ಕೆಲಸ ಮಾಡದೆ, ‘ಗ್ರಾಮ ಸ್ವರಾಜ್ಯ’ದ ಆಶಯದಂತೆ ಜನರ ಸೇವಕರಾಗಿ ಕೆಲಸ ಮಾಡಿದಾಗ ಮಾತ್ರ ಹಳ್ಳಿಗಳ ಉದ್ಧಾರ ಸಾಧ್ಯ. ಎಂಬ ಅಂಶವನ್ನು ನಾವು ಕಾಣಬಹುದು.