By using this site, you agree to the Privacy Policy and Terms of Use.
Accept
Footer Links
About Us | Privacy Policy | Terms & Conditions
Facebook X-twitter Instagram Youtube Whatsapp
Praja Samaya
Notification
  • HOME
  • EDITORIAL
  • REPORTS
  • A SPEAKING MIND
  • E PAPER
  • YOUTUBE
  • JOIN US
Reading: ಹೊಸ ವರ್ಷಕ್ಕೆ ಎರಡು ಮುಖ !
Share
Font ResizerAa
Praja SamayaPraja Samaya
  • HOME
  • EDITORIAL
  • REPORTS
  • A SPEAKING MIND
  • E PAPER
  • YOUTUBE
  • JOIN US
Search
  • HOME
  • EDITORIAL
  • REPORTS
  • A SPEAKING MIND
  • E PAPER
  • YOUTUBE
  • JOIN US
Have an existing account? Sign In
Follow US

ಹೊಸ ವರ್ಷಕ್ಕೆ ಎರಡು ಮುಖ !

Patel.S
Last updated: January 15, 2026 9:49 pm
Patel.S Published January 3, 2026
Share
SHARE

ಹೊಸ ವರ್ಷ ಕ್ಕೆ ಎರಡು ಮುಖ !

 

ಹೊಸ ವರ್ಷವೆಂಬುದು ಎರಡು ಮುಖಗಳ ಲೀಲೆ. ಒಂದು ಕಳೆದುಹೋದ ನೆನಪು. ಇನ್ನೊಂದು ಪಡೆಯಲಿರುವ ಕನಸು. ನೆನಪು ಮತ್ತು ಕನಸುಗಳ ನಡುವೆ ಸಂಭ್ರಮಿಸುವ, ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಈ ಸಂದರ್ಭವನ್ನು ಇಂಗ್ಲೀಷ್‌ ಕ್ಯಾಲೆಂಡರ್‌ ಅನುಸರಿಸುವ ಪ್ರತಿಯೊಬ್ಬರೂ ಅನುಸರಿಸುತ್ತಾರೆ. ಕಾಲ ಎಂಬುದು ನಿರಂತರವಾಗಿ ಹರಿಯುವ ನದಿ. ಆ ನದಿಯ ಹರಿವಿನಲ್ಲಿ ಮನುಷ್ಯ ಗುರುತಿಸಿಕೊಂಡಿರುವ ಒಂದು ಮೈಲಿಗಲ್ಲೇ ಹೊಸ ವರ್ಷ. ಪ್ರತಿ ವರ್ಷ ಜನವರಿ 1 ರ ಮುಂಜಾನೆ ಸೂರ್ಯ ಮೂಡಿದಾಗ, ಅದು ಕೇವಲ ಒಂದು ದಿನದ ಆರಂಭವಾಗಿರುವುದಿಲ್ಲ; ಬದಲಾಗಿ ಕೋಟ್ಯಂತರ ಮನಸುಗಳಲ್ಲಿ ಹೊಸ ಭರವಸೆಯಕಿರಣವಾಗಿ ಮೂಡುತ್ತದೆ. ಈ ಹೊಸ ವರ್ಷದ ಆಚರಣೆಯ ಇತಿಹಾಸವನ್ನು ನಾವು ಹುಡುಕುತ್ತಾ ಹೋದರೆ, ಅದು ಸುಮಾರು ನಾಲ್ಕು ಸಾವಿರ ವರ್ಷಗಳ ಹಳೆಯದಾದ ಮೆಸೊಪಟೇಮಿಯಾದ (ಇಂದಿನ ಇರಾಕ್) ಬ್ಯಾಬಿಲೋನಿಯನ್ನರ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

ಅಂದು ಅವರು ವಸಂತ ಋತುವಿನ ಆರಂಭವನ್ನು ಹೊಸ ವರ್ಷವಾಗಿ ಆಚರಿಸುತ್ತಿದ್ದರು ಆದರೆ, ಇಂದು ನಾವು ಆಚರಿಸುವಜನವರಿ 1 ರನ್ನು ಆರಂಭಕ್ಕೆ ರೋಮನ್ ಸಾಮ್ರಾಜ್ಯದ ಇತಿಹಾಸವೇ ಅಡಿಪಾಯ. ರೋಮನ್‌ ಚಕ್ರವರ್ತಿ ಜೂಲಿಯಸ್ ಸೀಸರ್ ಕ್ರಿ.ಪೂ 46 ರಲ್ಲಿ ಜೂಲಿಯನ್‌ ಕ್ಯಾಲೆಂಡರ್‌ ಜಾರಿಗೆ ತಂದಾಗ, ಜನವರಿ ತಿಂಗಳನ್ನು ವರ್ಷದ ಮೊದಲ ತಿಂಗಳೆಂದು ಘೋಷಿಸಿದನು. ಈ ಜನವರಿ ವರ್ಷ ಎಂಬ ಪದದ ಹಿಂದೆ ರೋಮನ್ನರ ದ್ವಿಮುಖದೇವ ‘ಜಾನಸ್’ (Janus) ಇದ್ದಾನೆ. ಜಾನಸ್‌ ದೇವನಿಗೆ ಎರಡು ಮುಖಗಳು ವರ್ಷ ಒಂದು ಮುಖ ಕಳೆದವ ವರ್ಷದ ಕಡೆಗೆ ತಿರುಗಿದ್ದರೆ, ಇನ್ನೊಂದು ಮುಖ ಮುಂಬರುವ ಭವಿಷ್ಯ ದತ್ತದೃಷ್ಟಿ ನೆಟ್ಟಿದೆ ಅಂದರೆ, ಹೊಸ ವರ್ಷದ ಮೂಲ ತತ್ವವೇ ಆತ್ಮಾವಲೋಕನ ಮತ್ತು ದೂರದೃಷ್ಟಿ. ಇಂದು ಭಾರತ, ಅಮೆರಿಕ, ಬ್ರಿಟನ್, ಕೆನಡಾ, ರಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಗ್ರೆಗೋರಿಯನ್‌ ಕ್ಯಾಲೆಂಡರ್‌ ಅನುಸರಿಸುತ್ತಾ ಜನವರಿ ಒಂದನ್ನು ವಿಶೇಷ ಹಬ್ಬವಾಗಿ ಸಂಭ್ರಮಿಸುತ್ತಿವೆ ಆದರೆ

ಈ ಸಂಭ್ರಮವು ಕೇವಲ ಪಟಾಕಿ ಸಿಡಿಸುವುದಕ್ಕೆ ಅಥವಾ ಪರಸ್ಪರ ಶುಭಕೋರುವುದಕ್ಕೆ ಸೀಮಿತವಾಗಬಾರದು ಅದರಾಚೆಗಿನ ಬೌದ್ಧಿಕ ಚಿಂತನೆಯೇ ನಮಗೆ ನಿಜವಾದ ಯಶಸ್ಸನ್ನು ನೀಡಬಲ್ಲದು.

ಇಂದಿನ ಡಿಜಿಟಲ್ ಯುಗದಲ್ಲಿ ಟೈಪಿಂಗ್ ಸಂಸ್ಕೃತಿ ಹೆಚ್ಚಾಗಿದ್ದರೂ, ಲೇಖನಿಯಲ್ಲಿ  “The object of a New Year is not that we should have a new year. It is that we should have a new soul and a new nose; new feet, a new backbone, new ears, and new eyes,”  ಎಂದು ಜಿ.ಕೆ. ಚೆಸ್ಟರ್‌ಟನ್ (G.K. Chesterton) ಹೇಳಿದ್ದಾರೆ ಅಂದರೆ ಹೊಸ ವರ್ಷ ಉದ್ದೇಶ ಕೇವಲ ಕ್ಯಾಲೆಂಡರ್ ಬದಲಾವಣೆಯಲ್ಲ, ಬದಲಾಗಿ ನಮ್ಮ ಮನಸ್ಸು, ದೃಷ್ಟಿಕೋನ ಮತ್ತು ಆಲೋಚನಾ ಲಹರಿಯ ನವೀಕರಣ. ಈ ವರ್ಷ ವೂ ನಮ್ಮ ಕೈಯಲ್ಲೇ ಇದೆ ಎಂಬ ಸತ್ಯವನ್ನು ನಾವು ಅರಿಯಬೇಕಿದೆ. ಕಾಲ ಯಾರನ್ನೂ ಕಾಯುವುದಿಲ್ಲ ಎಂಬುದುಎ ಷ್ಟು ನಿಜವೋ, ಕಾಲವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಆಯ್ಕೆಗೆ ಬಿಟ್ಟಿದ್ದು ಎಂಬುದು ಅಷ್ಟೆ ಸತ್ಯ. ನಾವು ಹೆಚ್ಚಾಗಿ ಪರಿಸ್ಥಿತಿಗಳನ್ನು ಅಥವಾ ವಿಧಿಯನ್ನು ದೂರುತ್ತೇವೆ. ಆದರೆ ನಮ್ಮ ಆಲೋಚನೆಗಳು ಸರಿಯಾಗಿದ್ದರೆ, ಎಂತಹ ಕಠಿಣ ಪರಿಸ್ಥಿತಿಯನ್ನೂ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. ಹೊಸ ಆಲೋಚನೆಗಳು ಎಂದರೆ ಕೇವಲ ಹಗಲು ಗನಸುಗಳಲ್ಲ; ಅವು ಜ್ಞಾನದ ತಳಹದಿಯ ಮೇಲೆ ಕಟ್ಟಿದ ಕ್ರಿಯಾ ಯೋಜನೆಗಳು.

ಈ ಹೊಸ ವರ್ಷಕ್ಕೆ ನಾವೇನು ಮಾಡಬಹುದು?

ಈ ವರ್ಷ ನಮ್ಮ ಆಲೋಚನೆಗಳು ಹಳೆಯ ಮಡಿವಂತಿಕೆಯಿಂದ, ಕೀಳರಿಮೆಯಿಂದ ಮತ್ತು ಭಯದಿಂದ ಮುಕ್ತವಾಗಿರಬೇಕು. ನಾವು ಮಾಡುವ ಪ್ರತಿಯೊಂದು ಆಲೋಚನೆಯೂ ನಮ್ಮ ಬದುಕಿನ ಶಿಲ್ಪವನ್ನು ಕೆತ್ತುವ ಉಳಿ ಇದ್ದಂತೆ. ಈ ಆಲೋಚನೆಗಳಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎಂಬ ಅಂಶಗಳಿವೆ. ಆಯ್ಕೆ ನಮ್ಮ ಕೈಯಲ್ಲೇ ಇದೆ.

ರೂಪವಿಲ್ಲದ ಬಂಡೆಯಿದ್ದಂತೆ ಈ ವರ್ಷವೆಂಬ ಕಾಲ. ಇದನ್ನು ಸ್ವರೂಪಗೊಳಿಸುವುದು, ವಿರೂಪಗೊಳಿಸುವುದು ನಮ್ಮ ಆಲೋಚನೆ ಯಲ್ಲಿಯೇ ಇರುತ್ತದೆ. ಅಪರಾಧ, ಕೆಡುಕುಗಳನ್ನು ಇಲ್ಲವಾಗಿಸುವುದು ನಮ್ಮ ಕೈಯಲ್ಲಿ ಸಾಧ್ಯವಿಲ್ಲದಿರಬಹುದು. ಆದರೆ, ಅವುಗಳಿಗೆ ಬೆಂಬಲ ನೀಡುವುದು ಮತ್ತು ಜೊತೆಯಾಗುವುದು ನಿಲ್ಲಿಸಿದರೆ ಸಾಕಲ್ಲವೇ!

ನಮ್ಮ ಜೀವನದ ಚುಕ್ಕಾಣಿ ನಿಮ್ಮ ಕೈಯಲ್ಲೇ ಇದೆ ಎಂಬ ಭರವಸೆಯು ಆತ್ಮವಿಶ್ವಾಸದಿಂದ ಬರುತ್ತದೆ. ಆತ್ಮವಿಶ್ವಾಸವು ಅಹಂಕಾರವಲ್ಲ, ಅದು ನಮ್ಮ ಸಾಮರ್ಥ್ಯದ ಮೇಲಿರುವ ಅಚಲವಾದ ನಂಬಿಕೆ. ಅಬ್ರಹಾಂ ಲಿಂಕನ್‌ಅವರು ಅನೇಕ ಬಾರಿ ಚುನಾವಣೆಯಲ್ಲಿ ಸೋತರೂ, ದೇಶದ ಅಧ್ಯಕ್ಷರಾಗುವ ಗುರಿಯನ್ನು ಬಿಡಲಿಲ್ಲ. ಅವರ ಆಲೋಚನೆಗಳು ಸದಾ ಧನಾತ್ಮಕವಾಗಿದ್ದವು. ಹೊಸ ವರ್ಷದಲ್ಲಿ ನಾವು ಕೂಡ ಅಂತಹ ದೃಢತೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿ ಬಾರಿ ನಮಗೆ ನಿರಾಸೆಯಾದಾಗಲೂ, ವಿನ್ಸ್ ಸ್ಟನ್ ಚರ್ಚಿಲ್‌ ಅವರ ಈ ಮಾತು ನೆನಪಿಸಿಕೊಳ್ಳಬಹುದು: “Success is not final, failure is not fatal: it is the courage to continue that counts.” ಈ ಧೈರ್ಯವೇ ನಿಮ್ಮನ್ನು ಈ ವರ್ಷದ ವಿಜೇತರನ್ನಾಗಿ ಮಾಡುತ್ತದೆ. ನಾವು ಯಾವುದೋ ಒಂದು ಅದೃಶ್ಯ ಶಕ್ತಿ ಬಂದು ನಮ್ಮ ಜೀವನವನ್ನು ಬದಲಿಸುತ್ತದೆ ಎಂದು ಕಾಯಬಾರದು. ನಾವೇ ಆ ಬದಲಾವಣೆಯ ಶಕ್ತಿಯಾಗಬೇಕು. ನಮ್ಮ ದಿನಚರಿ, ನಮ್ಮ ಹವ್ಯಾಸಗಳು ಮತ್ತು ನಮ್ಮ ಆಪ್ತ ವಲಯ ಇವೆಲ್ಲವೂ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುವಂತಿರಬೇಕು.

ಹೊಸ ವರ್ಷದ ಆಲೋಚನೆಗಳಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ, ಸಮಯದ ಮೌಲ್ಯ’. ನಾವೆಲ್ಲರೂ 24 ಗಂಟೆಗಳ ಸಮಯವನ್ನು ಹೊಂದಿದ್ದೇವೆ.ಆದರೆ ಕೆಲವರು ಮಾತ್ರಅದನ್ನು ಬಳಸಿಕೊಂಡು ಇತಿಹಾಸ ಸೃಷ್ಟಿಸುತ್ತಾರೆ.

ಈ ವ್ಯತ್ಯಾಸವಿರುವುದು ನಮ್ಮ ಆಲೋಚನಾ ಕ್ರಮದಲ್ಲಿ. ನಾವು ಅನಗತ್ಯ ವಿಷಯಗಳಿಗೆ, ಚರ್ಚೆಗಳಿಗೆ ಮತ್ತು ನಕಾರಾತ್ಮಕ ಸುದ್ದಿಗಳಿಗೆ ನಮ್ಮ ಸಮಯವನ್ನು ವ್ಯಯಿಸುತ್ತೇವೆ. ಈ ವರ್ಷ ನಿಮ್ಮ ಸಮಯವನ್ನು ನಮ್ಮ ಗುರಿಗಳಿಗಾಗಿ ಬಳಸಿದರೆ ಸಮಯದ ಮೌಲ್ಯ ನಮಗೂ ಲಭಿಸುತ್ತದೆ.

ಜನವರಿ ಮೊದಲ ದಿನವನ್ನು ಆಚರಿಸುವ ದೇಶಗಳು ಮತ್ತು ಹಿನ್ನೆಲೆ  

ಇಂದು ಜಗತ್ತಿನ ಸುಮಾರು 190 ಕ್ಕೂ ಹೆಚ್ಚು ದೇಶಗಳು ಜನವರಿ 1 ನ್ನು ಅಧಿಕೃತ ಹೊಸ ವರ್ಷದ ದಿನವಾಗಿ ಮತ್ತು ಸಾರ್ವಜನಿಕ ರಜಾ ದಿನವಾಗಿ ಆಚರಿಸುತ್ತವೆ. ಇದು ವಿಶ್ವದ ಹಬ್ಬವೆನಿಸಿರುವುದು ವಿಶೇಷವಾಗಿದೆ.

ಭಾರತದಲ್ಲಿ ಯುಗಾದಿ, ವಿಶು ಮುಂತಾದ ಪ್ರಾದೇಶಿಕ ಹೊಸ ವರ್ಷಗಳಿದ್ದರೂ, ಜನವರಿ ೦1 ನ್ನು ರಾಷ್ಟ್ರವ್ಯಾಪಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಪದ್ಧತಿ ಭಾರತಕ್ಕೆ ಕಾಲಿಟ್ಟಿತು.

ಪಾಶ್ಚಿಮಾತ್ಯ ದೇಶಗಳು (ಅಮೆರಿಕ, ಇಂಗ್ಲೆಂಡ್, ಕೆನಡಾ): ಇಲ್ಲಿ ಜನವರಿ 1 ಹೊಸ ಆರಂಭದ ಸಂಕೇತ. ನ್ಯೂಯಾರ್ಕ್‌ನ ಟೈಮ್ಸ್‌ಸ್ಕ್ವೇರ್‌ನಲ್ಲಿ ನಡೆಯುವರ್ಷ ಬಾಲ್‌ಡ್ರಾಪ್’ ಇಡೀ ವಿಶ್ವದ ಗಮನ ಸೆಳೆಯುತ್ತದೆ. ಇಂಗ್ಲೆಂಡ್‌ನಲ್ಲಿ ಮಧ್ಯರಾತ್ರಿ ಬಿಗ್ ಬೆನ್’ ಗಡಿಯಾರದಗಂಟೆ ಬಾರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

ಜಪಾನ್‌ನಲ್ಲಿ ಇದನ್ನು ‘ಓಶೋಗಾಟ್ಸು’ ಎಂದು ಕರೆಯುತ್ತಾರೆ. ಹಿಂದೆ ಚೀನೀ ಕ್ಯಾಲೆಂಡರ್ ಬಳಸುತ್ತಿದ್ದ ಜಪಾನ್, ೧೮೭೩ರಿಂದ ಗ್ರೆಗೋರಿಯನ್‌ ಕ್ಯಾಲೆಂಡರ್ ಅಳವಡಿಸಿಕೊಂಡು ಜನವರಿ 1 ನ್ನು ಅತ್ಯಂತ ಪವಿತ್ರವಾಗಿಆಚರಿಸುತ್ತದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳ ಸಮಯದ ವಲಯದ(ಖಿime Zoಟಿe) ಪ್ರಕಾರ, ವಿಶ್ವದಲ್ಲೇ ಮೊದಲು ಹೊಸ ವ?ವನ್ನು ಸ್ವಾಗತಿಸುವ ದೇಶಗಳು ಇವು. ಸಿಡ್ನಿ ಹಾರ್ಬರ್‌ನಲ್ಲಿ ನಡೆಯುವ ಪಟಾಕಿ ಪ್ರದರ್ಶನವಿಶ್ವ ಪ್ರಸಿದ್ಧ.

ರಷ್ಯದಲ್ಲಿ ಕ್ರಿಸ್ಮಸ್‌ಗಿಂತಲೂ ಜನವರಿ 1 ರ ಆಚರಣೆಯೇ ದೊಡ್ಡದು. ಸೋವಿಯತ್‌ ಒಕ್ಕೂಟದ ಕಾಲದಲ್ಲಿ ಧಾರ್ಮಿಕ ಹಬ್ಬಗಳಿಗೆ ನಿಬಂಧವಿದ್ದಾಗ, ಹೊಸ ವರ್ಷದ ಆಚರಣೆಯು ಕೌಟುಂಬಿಕ ಮಿಲನಕ್ಕೆ ದೊಡ್ಡ ವೇದಿಕೆಯಾಯಿತು.

ದಕ್ಷಿಣ ಅಮೆರಿಕದ ಬ್ರೆಜಿಲ್‌ನಲ್ಲಿ ಜನರು ಬಿಳಿ ಬಟ್ಟೆ ಧರಿಸಿ ಸಮುದ್ರತೀರಕ್ಕೆ ಹೋಗಿ ಏಳು ಅಲೆಗಳನ್ನು ಜಿಗಿಯುವ ಮೂಲಕ ಅದೃಷ್ಟವನ್ನು ಆಹ್ವಾನಿಸುತ್ತಾರೆ.

ಆಚರಣೆಯ ಹಿಂದಿನ ವೈವಿಧ್ಯಮಯ ಉದ್ದೇಶಗಳು

ಜನವರಿ 1 ರ ಆಚರಣೆಯ ಹಿಂದೆ ಕೇವಲ ಪಾರ್ಟಿ ಅಥವಾ ಮೋಜು ಮಸ್ತಿ ಇಲ್ಲ;

ಅದರ ಹಿಂದೆಗಾಢವಾದ ನಂಬಿಕೆಗಳಿವೆ. ಅನೇಕ ದೇಶಗಳಲ್ಲಿ ಹೊಸ ವರ್ಷದ ನಿರ್ಣಯ’ (Time Zone) ತೆಗೆದುಕೊಳ್ಳುವ ಸಂಪ್ರದಾಯವಿದೆ.

ಇದು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವ ಸಂಕಲ್ಪ. ಪ್ರಾಚೀನ ಬ್ಯಾಬಿಲೋನಿಯನ್ನರು ತಾವು ಪಡೆದ ಸಾಲವನ್ನು ಮರಳಿಸುವುದಾಗಿ ಈ ದಿನ ಪ್ರತಿಜ್ಞೆ ಮಾಡುತ್ತಿದ್ದರು. ಇಂದು ನಾವು ಆರೋಗ್ಯ, ವಿದ್ಯಾಭ್ಯಾಸಅಥವಾ ವೃತ್ತಿಜೀವನಕ್ಕೆ ಸಂಬಂಧಿಸಿದ ಪಣಗಳನ್ನು ತೊಡುತ್ತೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಹೊಸ ವರ್ಷವು ಮನುಷ್ಯನ ಅಚಲವಾದ ಆಶಾವಾದದ ಪ್ರತೀಕವಾಗಿರುತ್ತದೆ. ಯಾವುದೇ ಸಂಸ್ಕೃತಿ ಅಥವಾ ದೇಶವಿರಲಿ, ಜನವರಿ 1 ಎಂಬುದು ಒಂದು ಹೊಸ ಅಧ್ಯಾಯದ ಮೊದಲ ಪುಟ.

ಹೊಸ ವರ್ಷದ ಐತಿಹಾಸಿಕ ಪಯಣ: ಒಂದು ನೋಟ New Year’s Resolution

ಕ್ರಿ.ಪೂ. 2000 (ಪ್ರಾಚೀನ ಬ್ಯಾಬಿಲೋನ್): ಹೊಸ ವರ್ಷದ ಆಚರಣೆಯ ಮೊದಲ ದಾಖಲೆ. ವಸಂತ ಋತುವಿನ ಆರಂಭದಲ್ಲಿ (ಮಾರ್ಚ್ ತಿಂಗಳಲ್ಲಿ) 11 ದಿನಗಳ ಕಾಲ ‘ಅಕಿಟು’ ಹಬ್ಬದ ಮೂಲಕ ಹೊಸ ವರ್ಷವನ್ನು ಆಚರಿಸಲಾಗುತ್ತಿತ್ತು.

ಕ್ರಿ.ಪೂ. 700 (ಪ್ರಾಚೀನ ರೋಮ್): ರೋಮ್‌ನರಾಜ ನುಮಾ ಪಾಂಪಿಲಿಯಸ್ ಹತ್ತು ತಿಂಗಳಿದ್ದ ಕ್ಯಾಲೆಂಡರ್‌ಗೆ ‘ಜನವರಿ’ ಮತ್ತು ‘ಫೆಬ್ರವರಿ’ ತಿಂಗಳುಗಳನ್ನು ಸೇರಿಸಿದನು. ಆದರೂ ಮಾರ್ಚ್ ತಿಂಗಳೇ ವರ್ಷದ ಆರಂಭವಾಗಿ ಮುಂದುವರಿಯಿತು.

ಕ್ರಿ.ಪೂ. 46 (ಜೂಲಿಯನ್‌ ಕ್ಯಾಲೆಂಡರ್): ಜೂಲಿಯಸ್ ಸೀಸರ್ ಖಗೋಳ ವಿಜ್ಞಾನದ ಆಧಾರದ ಮೇಲೆ ಹೊಸ ಕ್ಯಾಲೆಂಡರ್ ಸಿದ್ಧಪಡಿಸಿ, ಜನವರಿ 1 ನ್ನು ಅಧಿಕೃತವಾಗಿ ಹೊಸ ವರ್ಷದ ಮೊದಲ ದಿನವೆಂದು ಘೋಷಿಸಿದನು.

ಮಧ್ಯಕಾಲೀನಯುಗ (ಕ್ರಿ.ಶ. 500 – 1500 ಯುರೋಪ್‌ನ ಅನೇಕ ಭಾಗಗಳಲ್ಲಿ ಜನವರಿ 1 ರ ಆಚರಣೆಯನ್ನು ಕೈಬಿಡಲಾಯಿತು. 

ಧಾರ್ಮಿಕ ಕಾರಣಗಳಿಗಾಗಿ ಮಾರ್ಚ್ 25 ಅಥವಾ ಡಿಸೆಂಬರ್ 25 ಅನ್ನು ಹೊಸ ವರ್ಷವೆಂದು ಆಚರಿಸಲಾಗುತ್ತಿತ್ತು.       ಕ್ರಿ.ಶ. 1582 (ಗ್ರೆಗೋರಿಯನ್‌ ಕ್ಯಾಲೆಂಡರ್): ಪೋಪ್‌ಗ್ರೆಗೊರಿಘಿ III ಜೂಲಿಯನ್‌ ಕ್ಯಾಲೆಂಡರ್‌ನಲ್ಲಿದ್ದ ದೋಷಗಳನ್ನು ಸರಿಪಡಿಸಿ ಹೊಸ ಕ್ಯಾಲೆಂಡರ್‌ ಜಾರಿಗೆತಂದನು. ಜನವರಿ 1 ನ್ನು ವರ್ಷದ ಆರಂಭವೆಂದು ಪುನಃ ಸ್ಥಾಪಿಸಲಾಯಿತು

ಹೀಗೆ ಜಗತ್ತಿನ ವಿವಿಧ ದೇಶಗಳು ಹೊಸ ವರ್ಷವನ್ನು ಸಂಭ್ರಮಿಸುವ ರೀತಿಯಲ್ಲಿ ವೈವಿಧ್ಯತೆಯಿರಬಹುದು, ಆದರೆ ಎಲ್ಲರ ಉದ್ದೇಶವೂ ಒಂದೇ ಅದು ಸುಖ ಮತ್ತು ಶಾಂತಿ. ಆದರೆ ನಿಜವಾದ ಶಾಂತಿ ಸಿಗುವುದು ಬಾಹ್ಯ ಜಗತ್ತಿನಲ್ಲಲ್ಲ, ಅದು ನಮ್ಮೊಳಗಿನ ಆಲೋಚನೆಗಳಲ್ಲಿ. ನಾವುದ್ವೇಷ, ಅಸೂಯೆ ಮತ್ತು ಪ್ರತಿಕಾರವನ್ನು ಮನಸ್ಸಿನಲ್ಲಿಟ್ಟು ಕೊಂಡು ಹೊಸವರ್ಷವನ್ನು ಸ್ವಾಗತಿಸಿದರೆ, ಅದು ಹಳೆಯವರ್ಷದ ಮುಂದುವರಿಕೆಯ ಆಗಿರುತ್ತದೆ. ಬುದ್ಧನು ಹೇಳಿದಂತೆ, ನಾವು ಏನಾಗಿದ್ದೇವೆಯೋ ಅದೆಲ್ಲವೂ ನಮ್ಮ ಆಲೋಚನೆಗಳ ಫಲವೇ ಆಗಿದೆ. ಆದ್ದರಿಂದ ಈ ವರ್ಷ ನಮ್ಮ ಮನಸ್ಸನ್ನು ಒಂದು ಸುಂದರ ಉದ್ಯಾನವನ್ನಾಗಿ ಮಾಡಿ. ಅಲ್ಲಿ ಪ್ರೀತಿ, ಕರುಣೆ ಮತ್ತು ಸೃಜನಶೀಲತೆಯ ಹೂವುಗಳು ಅರಳಲಿ. ಇತರರ ಯಶಸ್ಸನ್ನು ಕಂಡು ಅಸೂಯೆ ಪಡುವ ಬದಲು, ಅದರಿಂದ ಸ್ಫೂರ್ತಿ ಪಡೆಯುವುದನ್ನು ಕಲಿಯೋಣ. ನಮ್ಮ ಆಲೋಚನೆಗಳು ವಿಶಾಲವಾದನಮ್ಮ ವ್ಯಕ್ತಿತ್ವವೂ ವಿಶಾಲವಾಗುತ್ತದೆ.

 

 

 

 

Share This Article
Facebook X Whatsapp Whatsapp LinkedIn Telegram
Leave a Comment

Leave a Reply Cancel reply

You must be logged in to post a comment.

News
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’ ಆರೋಗ್ಯ ಇಲಾಖೆ, ಪ್ರಧಾನ ಕಾರ್ಯದರ್ಶಿ ಆದೇಶಕ್ಕೂ ದಾಖಲೆ ನೀಡದ ಅಧಿಕಾರಿಗಳು.
‘ಏನಿದು ಭಾಷೆಯ ‘ರಾಜಕಾರಣ’ !
‘ಬೆಂಗಳೂರು ವಿಶ್ವವಿದ್ಯಾನಿಲಯ’ ಪಾರಂಪರಿಕ ತಾಣ ಎಂದು ಘೋಷಣೆ ಆಗಲಿ !

SEARCH

LATEST REPORTS

News
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’ ಆರೋಗ್ಯ ಇಲಾಖೆ, ಪ್ರಧಾನ ಕಾರ್ಯದರ್ಶಿ ಆದೇಶಕ್ಕೂ ದಾಖಲೆ ನೀಡದ ಅಧಿಕಾರಿಗಳು.
‘ಏನಿದು ಭಾಷೆಯ ‘ರಾಜಕಾರಣ’ !
‘ಬೆಂಗಳೂರು ವಿಶ್ವವಿದ್ಯಾನಿಲಯ’ ಪಾರಂಪರಿಕ ತಾಣ ಎಂದು ಘೋಷಣೆ ಆಗಲಿ !

EDITORIAL

CM.ಡಿಕೆ.ಶಿವಕುಮಾರ್ : ಆಡಳಿತದ ಸವಾಲು & ಜನರ ನಿರೀಕ್ಷೆಗಳು !

 ಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ :ಆಡಳಿತದ ಸವಾಲು & ಜನರ ನಿರೀಕ್ಷೆಗಳು !  ರಾಜ್ಯದಲ್ಲಿ ಇತ್ತೀಚೆಗಷ್ಟೇ…

Patel.S Patel.S June 3, 2026

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) – ಕೇವಲ ನಾಮಫಲಕ ಬದಲಾವಣೆಯೇ ?

 ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) - ಕೇವಲ ನಾಮಫಲಕ ಬದಲಾವ ಣೆಯೇ ?ಬೆಂಗಳೂರು ಇಂದು ಜಾಗತಿಕ…

Patel.S Patel.S May 3, 2026

ಅಭಿವೃದ್ಧಿಯ ಚರ್ಚೆಗಿಂತ ‘ಐಪಿಎಲ್’ ಟಿಕೆಟ್ಟೇ ಮುಖ್ಯವಾಯಿತೇ ? ದಿಕ್ಕು ತಪ್ಪುತ್ತಿದೆಯೇ ಪ್ರಜಾಪ್ರಭುತ್ವ ?

ಅಭಿವೃದ್ಧಿಯ ಚರ್ಚೆಗಿಂತ ‘ಐಪಿಎಲ್’ ಟಿಕೆಟ್ಟೇ ಮುಖ್ಯವಾಯಿತೇ ? ದಿಕ್ಕು ತಪ್ಪುತ್ತಿದೆಯೇ ಪ್ರಜಾಪ್ರಭುತ್ವ ? ಪ್ರಜಾಪ್ರಭುತ್ವದ ಪವಿತ್ರ ವೇದಿಕೆಯಾದ…

Patel.S Patel.S April 4, 2026

SPEAKING MIND

ಶ್ರಮ ಮತ್ತು ಸಮಯ: ಯಶಸ್ಸಿನ ಸುವರ್ಣ ಸೂತ್ರ

Patel.S Patel.S June 18, 2026
ಉತ್ತಮ ಹವ್ಯಾಸಗಳೇ ವ್ಯಕ್ತಿತ್ವ ವಿಕಸನದ ಮೆಟ್ಟಿಲು !
ಕ್ಷಮೆ ನಿಮಗಲ್ಲ, ಕ್ಷಮಿಸುವ ಗುಣ ನನದಲ್ಲ !

Praja Samaya

ನಮ್ಮನ್ನು ಅನುಸರಿಸಿ

ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮನ್ನು ಹುಡುಕಿ
FacebookLike
XFollow
InstagramFollow
WhatsAppFollow

About US

Praja Samaya Kannada News delivers the latest and most reliable reports from Karnataka and beyond, providing real-time updates across a wide spectrum of topics. Stay informed on political developments, the entertainment scene, sporting events, business trends, investigative report and critical crime reports from across the state.

Quick Link
  • About Us
  • Privacy Policy
  • Disclaimer
  • Terms and Condition
Top Categories
  • EDITORIAL
  • REPORTS
  • A SPEAKING MIND
  • E PAPER

Contact us

  • # 2878, 15th, &, 16th Cross Road, 2nd B Main, Banashankari II Stage, Bengaluru - 560070 Karnataka.
  • info@prajasamaya.com
  • prajasamaya@gmail.com
Press & Registration of Periodicals Act. RNI: KARKAN/2015/65859
© 2025-26 Praja Samaya News Network. All Rights Reserved. Developed By Super Traffic
Welcome Back!

Sign in to your account

Username or Email Address
Password

Lost your password?

Not a member? Sign Up