ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) – ಕೇವಲ ನಾಮಫಲಕ ಬದಲಾವ ಣೆಯೇ ?
ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಬೆಂಗಳೂರು ಏಪ್ರಿಲ್ 29 ರ ಸಂಜೆ ಸುರಿದ ಮಳೆಯು, ನಗರದ ಮೂಲಸೌಕರ್ಯದ ಅಡಿಪಾಯ ಎಷ್ಟೊಂದು ದುರ್ಬಲವಾಗಿದೆ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಬೆಂಗಳೂರು ಕೇವಲ ಮಳೆನೀರು ಹರಿಯುವ ದಾರಿಯನ್ನು ಸರಿಪಡಿಸಲು ಸಾಧ್ಯವಾಗದ ಆಡಳಿತ ಯಂತ್ರವು, ಇಂದು ಹತ್ತು ಮಂದಿಯ ಸಾವಿಗೆ ಪರೋಕ್ಷ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಕಾರ್ಯವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳ ಜೊತೆ, ಹತ್ತು ಹಲವು ಸಮಸ್ಯೆಗಳು ಉದ್ಭವಿಸಿವೆ ಎಂಬುದು ಸಾರ್ವಜನಿಕರಿಂದ ತಿಳಿದು ಬಂದಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) – ಕೇವಲ ನಾಮಫಲಕ ಬದಲಾವಣೆಯೇ ? ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಅಸ್ತಿತ್ವಕ್ಕೆ ಬಂದ ಮೇಲೆ ನಗರದ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಯಾಗಬಹುದೆಂಬ ಆಸೆ ನಾಗರಿಕರದ್ದಾಗಿತ್ತು. ಆದರೆ, ವರ್ಷ ಕಳೆದರೂ ಪರಿಸ್ಥಿತಿ ಸುಧಾರಿಸುವ ಬದಲು, ಮತ್ತಷ್ಟು ನಾಗರೀಕ ಸಮಸ್ಯೆಗಳು ಬಿಗಡಾಯಿಸುತ್ತಿದೆ. GBA ಹೆಸರು ಬದಲಾದ ಮಾತ್ರಕ್ಕೆ ನಗರದ ಸ್ವರೂಪ ಬದಲಾಗುವುದಿಲ್ಲ ಎಂಬುದಕ್ಕೆ ಶಿವಾಜಿನಗರದಲ್ಲಿ ಬಿದ್ದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ, ಮತ್ತು ಬನ್ನೇರುಘಟ್ಟ ರಸ್ತೆಯ ದುರಂತಗಳೇ ಸಾಕ್ಷಿ. ಮೂಲಸೌಕರ್ಯಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ನಗರವು ಜಿಬಿಎ’ ಅಡಿಯಲ್ಲಿದ್ದರೂ ಅಭದ್ರತೆಯ ಸುಳಿಯಲ್ಲಿ ಸಿಲುಕಿಸಿದೆ ಎಂಬ ಅಂಶವನ್ನು ನಾಗರೀಕರು ಮಾತನಾಡುತ್ತಿದ್ದಾರೆ.
ಜಿಬಿಎ ಅಸ್ತಿತ್ವಕ್ಕೆ ಬಂದ ಮೇಲೆ ನಗರದಲ್ಲಿ ಸ್ಥಳೀಯ ಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯವೇ ? ನಗರದ ದುರವ್ಯವಸ್ಥೆಗೆ ಪ್ರಮುಖ ಕಾರಣ ಪಾಲಿಕೆ ಚುನಾವಣೆಗಳನ್ನು ಪದೇ ಪದೆ ಮುಂದೂಡುತ್ತಿರುವುದು. ಸ್ಥಳೀಯ ಪ್ರತಿನಿಧಿಗಳು ಇಲ್ಲದೆ ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವವರಿಲ್ಲ. ಜನಪ್ರತಿನಿಧಿಗಳಿಲ್ಲದ ಕಾರಣ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನಾಗರೀಕ ಸಮಸ್ಯೆಗಳು ಬಗೆಹರಿಸಲು ಸಾದ್ಯವಾಗಿಲ್ಲ ಎಂಬದು ಪ್ರಮುಖ ಕಾರಣ. ನಗದಲ್ಲಿ ಮೂಲಸೌಕರ್ಯ ಗುಣಮಟ್ಟ, ಮೇಲ್ವಿಚಾರಣೆ ಶೂನ್ಯವಾಗಿದೆ ಎಂದರ್ಥ. ನಮ್ಮ ನಾಯಕರು ದುರಂತದ ನಂತರ ಭೇಟಿ ನೀಡಿ, ತರಾಟೆಗೆ ತೆಗೆದುಕೊಂಡರೆ ಸಾಲದು, ಅನಾಹುತಗಳ ತಡೆಯೇ ಆಡಳಿತದ ಗುರಿಯಾಗಬೇಕು.
ಬೆಂಗಳೂರು ಇಂದು ಕೇವಲ ಮಳೆಗಾಲ, ಪ್ರವಾಹದಿಂದ ಮಾತ್ರವಲ್ಲ, ಬದಲಿಗೆ ದಶಕಗಳಿಂದ ನಡೆದು ಬಂದಿರುವ ‘ಭೂ-ಮಾಫಿಯಾ’ದ ಕಬಂಧ ಬಾಹುವಿನಿಂದ ನಲುಗುತ್ತಿದೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಅಸ್ತಿತ್ವಕ್ಕೆ ಬರುವ ಮುನ್ನವೇ, ನಗರದ ನೈಸರ್ಗಿಕ ಮೂಲ ಸೌಕರ್ಯಗಳನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆದಿತ್ತು. ಈಗ ಆ ಪಾಪದ ಫಲವನ್ನು ನಾಗರಿಕರು ಪ್ರಾಣದಿಂದ ತೆರುತ್ತಿದ್ದಾರೆ. ನಗರದ ರಾಜಕಾಲುವೆಗಳ ನಾಶವಾಗಿ ಬೆಂಗಳೂರಿನಲ್ಲಿ ಮಳೆ ಬಂದಾಗ ರಸ್ತೆಗಳು ಹೊಳೆಯಾಗಲು ಪ್ರಮುಖ ಕಾರಣ. ನಗರದ ಅಯ್ಧೆ ಭಾಗದಲ್ಲಿ ರಾಜಕಾಲುವೆಗಳ ಒತ್ತುವರಿ, ನೈಸರ್ಗಿಕ ಜಲಾನಯನ ಪ್ರದೇಶಗಳ ಮೇಲೆ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಬಡಾವಣೆಗಳು ನಿರ್ಮಿಸಲಾಗಿದೆ. ರಾಜಕಾಲುವೆಗಳ ಅಗಲವನ್ನು ಕಡಿಮೆ ಮಾಡುವುದು ಮತ್ತು ಅವನ್ನು ಮುಚ್ಚಿ ರಸ್ತೆಗಳನ್ನು ನಿರ್ಮಿಸುವುದು. ಇದರ ಪರಿಣಾಮ ನೀರು ಹರಿಯಲು ದಾರಿಯಿಲ್ಲದೆ, ಅದು ನೇರವಾಗಿ ನಾಗರಿಕರ ಮನೆಗಳಿಗೆ ನುಗ್ಗುತ್ತದೆ. ಇದೊಂದು ನೈಸರ್ಗಿಕ ವಿಕೋಪವಲ್ಲ, ಸಂಪೂರ್ಣವಾಗಿ ಮಾನವ ನಿರ್ಮಿತ ವಿಪತ್ತು ಎಂಬುದು ಮನಗಾಣ ಬಹುದು.
ಶಿಥಿಲಗೊಂಡ ಗೋಡೆಗಳು, ತೆರೆದ ಚರಂಡಿಗಳು, ಮತ್ತು ಅಪಾಯಕಾರಿ ವಿದ್ಯುತ್ ಸಂಪರ್ಕಗಳು – ಇವು ನಗರದ ರಸ್ತೆಗಳಲ್ಲಿ ಸಾಮಾನ್ಯ ದೃಶ್ಯಗಳಾಗಿವೆ. ಮಳೆ ಬರುವ ಮುನ್ನ ಇವುಗಳನ್ನು ಗುರುತಿಸಿ ದುರಸ್ತಿಪಡಿಸುವುದು ಜಿಬಿಎ ಯ ಕನಿಷ್ಠ ಜವಾಬ್ದಾರಿಯಾಗಿತ್ತು ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಸರ್ಕಾರಿ ಜಾಗಗಳು, ಸ್ಮಶಾನಗಳ ಭೂಮಿಯನ್ನು ಒತ್ತುವರಿ ಮಾಡಿ ವಸತಿ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದು ಸಮಾಜದ ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.
ಬೆಂಗಳೂರು ಕೇವಲ ಒಂದು ನಗರವಲ್ಲ, ಅದೊಂದು ಭಾವನೆ. ಆ ಭಾವನೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ. ಜಿಬಿಎ ಕೇವಲ ಕಾಗದದ ಮೇಲಿನ ಪ್ರಾಧಿಕಾರವಾಗದೆ, ಜನರ ಜೀವ ರಕ್ಷಿಸುವ ಜವಾಬ್ದಾರಿಯುತ ವ್ಯವಸ್ಥೆಯಾಗಬೇಕಿದೆ. ಹೆಸರು ಬದಲಿಸಿದಷ್ಟು ಸುಲಭವಾಗಿ ಸಮಸ್ಯೆಗಳು ಮಾಯವಾಗುವುದಿಲ್ಲ, ಅದಕ್ಕೆ ಬದ್ಧತೆಯ ಆಡಳಿತ ಮತ್ತು ದೃಢ ನಿರ್ಧಾರಗಳ ಅವಶ್ಯಕತೆಯಿದೆ. ಇನ್ನು ಮುಂದಾದರೂ ಆಡಳಿತ ಎಚ್ಚೆತ್ತುಕೊಳ್ಳಲಿ, ನಾಗರಿಕರ ಜೀವಕ್ಕೆ ಬೆಲೆ ಸಿಗಲಿ. ಬೆಂಗಳೂರು ಕೇವಲ ಕಟ್ಟಡಗಳ ಸಮೂಹವಲ್ಲ, ಅದೊಂದು ಭಾವನೆ. ಆ ಭಾವನೆಯನ್ನು ಉಳಿಸಿಕೊಳ್ಳಬೇಕಾದರೆ, ನಾಗರಿಕರ ಬದುಕಿನ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಬೇಕು. ಹೆಸರು ಬದಲಿಸಿದಷ್ಟು ಸುಲಭವಾಗಿ ಸಮಸ್ಯೆಗಳು ಮಾಯವಾಗುವುದಿಲ್ಲ, ಅದಕ್ಕೆ ಬದ್ಧತೆಯ ಆಡಳಿತ ಬೇಕು. ಇನ್ನು ಮುಂದಾದರೂ ಈ ದುರಂತಗಳು ಮರುಕಳಿಸದಿರಲಿ.
ಒಟ್ಟಾರೆ ಬೆಂಗಳೂರು ಕೇವಲ ಒಂದು ಆರ್ಥಿಕ ಕೇಂದ್ರವಲ್ಲ; ಅದೊಂದು ನಂಬಿಕೆ. ಈ ನಂಬಿಕೆಯನ್ನು ಮಣ್ಣುಪಾಲು ಮಾಡಲು ಬಿಡಬೇಡಿ. ಹೆಸರು ಬದಲಾವಣೆಯ ಸಂಭ್ರಮದ ಹಿಂದಿನ ಅಸಲಿ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಲಿ. ಇನ್ನು ಮುಂದಾದರೂ ಆಡಳಿತವು ‘ಬೆಂಕಿ ಬಿದ್ದಾಗ ಬಾವಿ ತೋಡುವ’ ಕೆಲಸ ಮಾಡದೆ, ಮುನ್ನೆಚ್ಚರಿಕೆಯ ಆಡಳಿತವನ್ನು (Proactive Governance) ನೀಡಲಿ. ನಮ್ಮ ತೆರಿಗೆಯ ಹಣ, ನಮ್ಮ ಪ್ರಾಣವನ್ನು ರಕ್ಷಿಸುವ ಮೂಲಸೌಕರ್ಯಗಳಿಗೆ ವಿನಿಯೋಗವಾಗಲಿ.”