ಸೋಲೆ ಗೆಲುವಿನ ಮೆಟ್ಟಿಲು
ನಮ್ಮ ದಿನನಿತ್ಯದಜೀವನದದಲ್ಲಿ ಸೋಲು,ಗೆಲುವು ಇದ್ದೇಇರುತ್ತದೆ. ಸೋಲು ಗೆಲುವು ನಮ್ಮಜೀವನದ ಅವಿಭಾಜ್ಯಅಂಗವಾಗಿರುತ್ತವೆ. ಜೀವನವು ಅನಿಶ್ಚಿತ ಆದ್ದರಿಂದ ನಾಳೆ ಏನಾಗಬಹುದೆಂದುಹೇಳಲು ಅಸಾದ್ಯ. ನಮ್ಮಲ್ಲಿಉಂಟಾಗುವ ಅನಿಶ್ಚಿತತೆಯು ಏನನ್ನಾದರೂ ಸಾಧಿಸಲೇಬೇಕೆಂಬ ಛಲದಮನೋಭಾವವನ್ನು ಹುಟ್ಟುಹಾಕುತ್ತದೆ. ಕೆಲವು ಕೌಶಲ್ಯಗಳಲ್ಲಿ ಪ್ರವೀಣತೆಯನ್ನು ಬೆಳಸಿಕೊಳ್ಳುವುದು ಅಗತ್ಯವಿದ್ದು ನಮ್ಮಜೀವನದಲ್ಲಿ ಕಷ್ಟಗಳು ಎದುರಾದಾಗ ಅವುಗಳನ್ನು ಸಮರ್ಥರೀತಿಯಲ್ಲಿಎದುರಿಸಲುಕೌಶಲ್ಯಅಗತ್ಯತೆ ಮಹತ್ವವಾದುದು. ಸಾಮಾನ್ಯವಾಗಿ ನಾವುಗಳು ಜೀವನದ ಪ್ರತೀಹಂತದಲ್ಲಿಅನೇಕರೀತಿಯ ಸೋಲುಗಳನ್ನು ಎದುರಿಸಬೇಕಾಗುತ್ತದೆಉದಾ: ಪರೀಕ್ಷೆಯಲ್ಲಿಅನುತ್ತೀರ್ಣರಾಗುವುದು, ಪ್ರೇಮದ ವಿಚಾರದಲ್ಲಿ ಸೋಲುವುದು ನಾವುಮಾಡುವ ಕೆಲಸಗಳಲ್ಲಿ ನೀರೀಕ್ಷೀಸಿದಷ್ಟು ಫಲ ಸಿಗದೆ ಇರುವುದು, ಗೆಳೆತನದಲ್ಲಿ ಪೈಪೋಟಿಉಂಟಾಗುವುದು, ಹೊಸಕೌಶಲ್ಯವನ್ನುಕಲಿಯಲು ಸಾದ್ಯವಾಗದೆಇರುವುದು, ನಮ್ಮ ಅಗತ್ಯಗಳನ್ನು ಸರಿಯಾದರೀತಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದೆಇರುವುದು ಈ ರೀತಿಯಾಗಿ ನಾವು ನಮ್ಮಜೀವನದಲ್ಲಿ ಅನೇಕ ರೀತಿಯ ಸೋಲನ್ನುಅನುಭವಿಸುತ್ತೇವೆ.
ಮಾನವ ಮೂಲತಹ ವೃದು ಸ್ವಭಾವವನು ಅವನು ಎನನ್ನು ಬೇಕಾದರು ಸಹಿಸಿಕೊಳ್ಳುತ್ತಾನೆ ಆದರೆತನಗೆ ಸೋಲು ಸಂಬವಿಸುತ್ತಿದೆಎಂದು ತಿಳಿದಾಗ ವೃದು ಸ್ವಭಾವನ್ನುತೊರೆದು ಮೃಗವಾಗಿ ರೂಪುಗೊಳ್ಳುತ್ತಾನೆ ಅಥವ ಸ್ವತ: ತನಗೆತಾನೆ ಅಪಾಯವೆಸೆಗಿಕೊಳ್ಳುತ್ತಾನೆ ,ಇತರರ ಟೀಕೆಗಳನ್ನು ಎದುರಿಸಲಾಗದೆ ಮನೆಬಿಟ್ಟುಹೋಗುವುದು, ವಿಪರೀತ ಕೋಪಮಾಡಿಕೊಳ್ಳುವುದು ಅದರಿಂದ ಅನೇಕ ರೀತಿಯ ಅನಾಹುತಗಳನ್ನು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಸೋಲನ್ನುಎದುರಿಸುವತಂತ್ರದಂತೆ ಬಳಸುತ್ತಿರುವುದು ಶೋಚನೀಯ ಸಂಗತಿಯೇ ಸರಿ ಕೆಲವರು ತಿಳಿಯದೆ ತಪ್ಪು ಮಾಡಿದರೆ ಮತ್ತೆ ಕೆಲವರು ತಿಳಿದೆ ತಪ್ಪುಮಾಡುತ್ತಾರೆ. ಹಾಗಾದರೆ ಸೋಲಿಗೆ ಪರಿಹಾರ ಸಾವು ಮಾತ್ರವೆ?ಆತ್ಮಹತ್ಯೆಯಿಂದ ಸೋಲನ್ನು ಎದುರಿಸಬಹುದೆ? ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದು ಬಹುಮುಖ್ಯವಾದಅಂಶವಾಗಿದೆ.
ನಾವೇಕೆ ಸೋಲುತ್ತೇವೆ !
ಜೀವನದಲ್ಲಿಯಾರುತಾನೆ ಸೋಲನ್ನು ಅನುಭವಿಸಿಲ್ಲ ಒಂದಲ್ಲಒಂದು ಸಂದರ್ಭದಲ್ಲಿ ಸೋಲನ್ನು ಅನುಭವಿಸಿದವರೆ ಸೋಲನ್ನು ಅನುಭವಿಸಿದವರಿಗೆ ಮಾತ್ರ ಗೆಲುವಿನ ಸವಿಯನ್ನು ಸವಿಯಲು ಸಾದ್ಯ. ಸಾಮಾನ್ಯವಾಗಿ ಸೋಲಿಗೆ ಕಾರಣವನ್ನು ಹುಡುಕುತ್ತಾಹೊರಟಾಗ ಅನೇಕ ರೀತಿಯ ಕಾರಣಗಳ ಪಟ್ಟಿಯನ್ನು ನಾವು ಗಮನಿಸಬಹುದು.
ಸಮರ್ಪಕ ಪೂರ್ವತಯಾರಿ ಇಲ್ಲದಿರುವುದು
ಬಹುಮುಖ್ಯವಾಗಿ ಎಲ್ಲರು ಗುರಿಯನ್ನು ಹೊಂದಿದವರೆ ಎಲ್ಲರಿಗೂ ಎನನ್ನಾದರು ಸಾದಿಸಬೇಕು ನಾನು ಎಲ್ಲರಿಗಿಂತ ವಿಶಿಷ್ಟವಾದುದನ್ನು ಮಾಡಬೇಕು ಎಂದು ಹಗಲುಗನಸು ಕಾಣುವವರ ಸಂಖ್ಯೆಯೆ ಹೆಚ್ಚು ನಾವುಗಳು ಮಾಡುವ ಕಾರ್ಯಕ್ಕ ಯಾವ ರೀತಿಯಾದ ತಯಾರಿಯ ಅಗತ್ಯವಿದೆ ಎಂದು ಯೋಚಿಸದೆ ಅಸಮರ್ಪಕ ಪ್ರಯತ್ನಗಳಿಂದ ತಾವು ಬಯಸಿದ ಗುರಿಯನ್ನು ಸರಿಯಾದ ರೀತಿಯಲ್ಲಿ ತಲುಪಲಾಗದೆ ಸೋಲು ಅನುಭವಿಸುತ್ತಾರೆ.
ಸಾಮರ್ಥ್ಯಕ್ಕೆ ಮೀರಿದಗುರಿ ಸಾದನೆ
ಕೆಲವು ನಮ್ಮ ಸಾಮರ್ಥ್ಯಮತ್ತು ಲೋಪದೋಷಗಳ ಬಗ್ಗೆ ಗಮನವನ್ನು ಕೊಡದೆ ತಮ್ಮ ಸಾಮರ್ಥ್ಯಕ್ಕೆ ಮೀರಿದಕಾರ್ಯಮಾಡಲು ಮುಂದಾದಾಗ ಸೋಲು ಹಿಂಬಾಲಿಸುವುದರಲ್ಲಿ ಯಾವ ಅನುಮಾನವು ಇಲ್ಲ.
ಒಂದೇ ಸಮಯದಲ್ಲಿ ಹಲವು ಕಾರ್ಯಗಳ ಸಾದನೆ
ಇನ್ನು ಕೆಲವರು ತಮ್ಮ ಕೈಯಲ್ಲಿ ಎಲ್ಲವೂ ಸಾಧ್ಯವಿದೆ ನಾನು ಒಂದು ಸಂದರ್ಭದಲ್ಲಿ ಎರಡು ಮೂರು ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಯಾವುದೇ ಒಂದು ಕೆಲಸಕ್ಕೆ ಅದರದೆ ಆದಂತಹ ಶ್ರಮ ಮತ್ತು ತಯಾರಿಯ ಅಗತ್ಯವಿದ್ದು ಎರಡು ಮೂರು ಕೆಲಸ ಮಾಡಲು ಮುಂದಾದಾಗ ಶ್ರಮ ವಿಭಜನೆಯಾಗಿ ಯಾವ ಕಾರ್ಯದಲ್ಲಿಯೂ ಸಂಪೂರ್ಣತೆಸಿಗದೆ ಸೋಲು ಅನುಭವಿಸುವುದು ಸಹಜ.
ಯೋಜಿಸದೆ ತೆಗೆದುಕೊಳ್ಳುವ ನಿರ್ಧಾರಗಳು
ಸಾಮನ್ಯವಾಗಿ ನಮ್ಮ ನಿರ್ಧಾರಗಳು ಬೇರೆಯವರನ್ನು ಅವಲಂಬಿಸಿರುತ್ತವೆ ಮತ್ತು ಬೇರೆಯವರ ಮಾತುಗಳನ್ನು ಅಲೊಚನೆ ಮಾಡದೆ ಓಪ್ಪಿಕೊಳ್ಳುವುದರಿಂದ ನಾವು ಸೋಲನ್ನುಅನುಭವಿಸಬೇಕಾಗುತ್ತದೆ.
ಈ ರೀತಿಯಾಗಿ ಅನೇಕ ಕಾರಣಗಳಿಂದ ನಾವು ಸೋಲನ್ನುಅನುಭವಿಸುತ್ತೇವೆ , ಸೋಲು ಮಾನವನನ್ನು ಆವರಿಸಿದಾಗ ಅವನು ಬಹಳ ದುಖ: ಮತ್ತುಅತಾಶೆಗೆ ವಳಗಾಗುತ್ತಾನೆ ತನ್ನಜೀವದಲ್ಲಿಆಸಕ್ತಿಯನ್ನು ಕಳೆದುಕೊಳ್ಳುತಾನೆ ನಕಾರಾತ್ಮಕ ಆಲೋಚನೆಗಳಿಂದ ತನ್ನಮೇಲೆತಾನೆ ಕೀಳರಿಮೆಯನ್ನು ಬೆಳಸಿಕೋಂಡು ಸಾವಿಗೆ ಶರಣಾಗುತ್ತಾನೆ.
ಜೀವನೆಂಬ ಯಾತ್ರೆಯಲ್ಲಿ ಯಾರುತಾನೆ ಸೋಲನ್ನು ಅನುಭವಿಸಿಲ್ಲ ಮಹಾನ್ ಸಾದನೆ ಮಾಡಿರುವರಲ್ಲರು ಸೋಲನ್ನು ಅನುಭವಿಸಿದವರೆ ಗೆಲುವು ಒಂದೇದಿನದಲ್ಲಿ ಬರುವಂತಹದಲ್ಲ ಸತತ ಪರಿಶ್ರಮ ಮತ್ತು ಸಾಧನೆಯಿಂದ ಮಾತ್ರ ನಾವು ಗೆಲುಮನ್ನುಕಾಣಬಹುದು. ಹಾಗಾದರೆ ನಮ್ಮ ಜೀವನದಲ್ಲಿ ಉಂಟಾಗುವ ಸೋಲನ್ನು ಹೇಗೆ ಎದುರಿಸಬಹುದು.
ಸೋಲನ್ನುಎದುರಿಸುವ ತಂತ್ರಗಳು
ಸೋಲು ನಮ್ಮನ್ನುಕಾಣದ ನೋವು ಮತ್ತು ಅವಮಾನವೆಂಬ ಪಾತಾಳ ಲೋಕಕ್ಕೆ ಕರೆದೊಯ್ಯುತ್ತದೆ ಅದರಿಂದ ಹೊರಬರಲು ಕೆಲವು ತಂತ್ರಗಳ ಅಗತ್ಯವಿದ್ದು ಅವುಗಳು ಈ ಕೆಳಕಂಡಂತಿವೆ.
- ಸೋಲೆ ಗೆಲುವಿನ ಮೆಟ್ಟಿಲು ಮರೆಯದಿರಿ,ಇಂದು ಸೋತವರು ಮಾತ್ರ ಮುಂದೆ ಗೆಲುವನ್ನು ಕಾಣಲುಸಾಧ್ಯ.
- ನಿಮ್ಮ ಸಾಮರ್ಥ್ಯಕ್ಕೆಅನುಗುಣವಾಗಿ ನಿಮ್ಮಗುರಿ ನಿರ್ಧರಿಸಿಕೊಳ್ಳಿ.
- ಯಾವುದೇ ಕಾರ್ಯವನ್ನು ಮಾಡುವಮುನ್ನ ಆಲೋಚಿಸಿ ಮುಂದುವರಿಯಿರಿ.
- ನೀವು ಹೋಗುವ ದಾರಿಯಲ್ಲಿ ಸಾಧಿಸಬೇಕೆಂಬ ಗುರಿಗೆ ಪೂರ್ವತಯಾರಿಅಗತ್ಯವಾದುದು
- ಒಂದು ಸಂದರ್ಭದಲ್ಲಿ ಒಂದು ಕಾರ್ಯವನ್ನು ಮಾತ್ರ ಮಾಡಿ
- ಇಂದು ನೀವು ಸೋಲನ್ನು ಅನುಭವಿಸುತಿದ್ದೀರ ಎಂದರೆ ನಿಮ್ಮ ಪ್ರಯತ್ನದಲ್ಲಿನ ಲೋಪದೋಷವೇ ವರತು ನಿಮ್ಮಕೈಯಲ್ಲಿ ಸಾಧ್ಯವಾಗುವುದಿಲ್ಲ ಎಂದಲ್ಲ
- ನಿರಾಶೆ, ಅಸಹಾಯಕತೆ, ಒತ್ತಡ, ಕೋಪ, ದುಖ:,ತಿರಸ್ಕಾರ ಭಾವೆ ನಮ್ಮಲ್ಲಿ ಆತ್ಮಹತ್ಯೆಯ ದಾರಿ ಮಾಡಿಕೊಡುತ್ತವೆಯೇ ಹೊರೆತು ಗೆಲುವನ್ನಲ್ಲ.
- ಸೂಕ್ತ ಸಮಯದಲ್ಲಿ ಸೂಕ್ತವೆನಿಸಿದ ಕಾರ್ಯವನ್ನು ಮಾಡಿ
- ಅಗತ್ಯಕೌಶಲ್ಯ ಅಬಿವೃದ್ದಿಗೆ ಕಾರ್ಯಸೂಚಿರೂಪಿಸುವುದು
ನಮ್ಮಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ ಧನಾತ್ಮಕ ಆಲೋಚನೆಗಳಿಗೆ ದಾರಿ ಮಾಡಿಕೊಡುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿಯಾಗಿ ಉತ್ತಮ ಭಾವನೆಯನ್ನು ನಮ್ಮಲ್ಲಿ ರೂಪಿಸಿಕೊಳ್ಳುವುದರಿಂದ ನಾವು ನಮ್ಮ ಜೀವನದಲ್ಲಿ ಉಂಟಾಗುವ ಸೋಲುಗಳನ್ನು ಗೆಲುವಿಗೆ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವಲ್ಲಿ ಯಾವ ಸಂದೇಹವು ಇಲ್ಲ.