ಬೆಂಗಳೂರು ವಿಶ್ವ ವಿದ್ಯಾಲಯ :
ಹಸಿರು ಲೂಟಿ ಕೋರರ ಕಣ್ಣು ಜೈವಿಕ ವನದ ಮೇಲೆ !
ಬೆಂಗಳೂರು ವಿಶ್ವವಿದ್ಯಾನಿಲಯ ಡಾ. ಹೆಚ್. ನರಸಿಂಹಯ್ಯನವರ ಕಾಲದಲ್ಲಿ ಶುರುವಾಗಿ, ಬಂಜರು ತುಂಬಿದ ಬರಡು ಭೂಮಿಯಾಗಿತು. ಮಾನ್ಯ ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯಲ್ಲಿ ಬರಡು ಭೂಮಿಗೆ, ನೂರಾರು ಗಿಡಮರ ನೆಡುವ ಕಾರ್ಯ ಆರಂಭಿಸಿದ ನಂತರ ಮುನ್ನಡೆಸಿದು ನಿವೃತ್ತ ಪ್ರಾಧ್ಯಾಪಕ ಟಿ.ಜೆ.ರೇಣುಕಾ ಪ್ರಸಾದ್. ಇವರ ಜೊತೆ ಹಲವಾರು ಸ್ವಯಂ ಸೇವಕರು, ವಾಯು ವಿಹಾರಿಗಳು,ಸಂಘ ಸಂಸ್ಧೆಗಳು ಕೈಜೋಡಿಸಿದಾಗ ಸುಮಾರು 660 ಎಕರೆ ಪ್ರದೇಶದಲ್ಲಿ ನಗರದ ಅತಿ ದೊಡ್ಡ ಜೀವವೈವಿಧ್ಯ ವನ ಸೃಷ್ಟಿಯಾಯಿತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಂಚವಟಿ, ಪಂಚವಲ್ಕಲ, ಚೆಲುವಿನ ಹಣ್ಣಿನ ತೋಟ, ಮಿಯಾವಾಕಿ, ಔಷಧಿ ಗಿಡಗಳು, ಪ್ರಾಣಿ ಪಕ್ಷಿ ಸಂಕುಲಗಳು ಬದುಕಿ ಜೀವ ಉಳಿಸಿಕೊಂಡಿದ್ದು ಸದಾ ಹಸಿರು, ಜೊತೆಗೆ ನೀರಿನ ಕಟ್ಟೆ, ಕಲ್ಯಾಣಿಗಳಿಂದ ತುಂಬಿ ಬಯೋ-ಜಿಯೋ-ಹೈಡ್ರೋ ಪಾರ್ಕ್ ಹಾಗಿ (Natural indigenous diversified Forest) ಹೊರ ಹೋಮ್ಮಿದೆ.
ಪ್ರಮುಖ ಮುಖ್ಯಾಂಶ
- ಡಾ. ಹೆಚ್. ನರಸಿಂಹಯ್ಯನವರು 1964 ರಲ್ಲಿ ಪ್ರತ್ಯೇಕ ಬೆಂಗಳೂರು ವಿವಿ ಸ್ಧಾಪನೆ.
- ವಿಶ್ವವಿದ್ಯಾಲಯ ಅಂದಾಜು 1200 ಎಕರೆ ವಿಸ್ತಾರವಾದ ಭೂಮಿ,
- ವಿಶ್ವವಿದ್ಯಾಲಯದಲ್ಲಿ ಖಾಸಗಿ ವ್ಯಕ್ತಿಗಳು ಆಂದಾಜು 43 ರಿಂದ 44 ಎಕರೆ ಒತ್ತುವರಿ.
- ಪಂತರಪಾಳ್ಯ, ನಾಯಂಡಹಳ್ಳಿ, ಕೆಂಚೇನಹಳ್ಳಿ, ಮಲ್ಲತ್ತಹಳ್ಳಿ ಮತ್ತು ನಾಗರಭಾವಿ ಭಾಗದ ಸರ್ವೆ ನಂಬರ್ ಗಳಲ್ಲಿ ಒತ್ತುವರಿ ಮತ್ತು ಅತಿಕ್ರಮ ಪ್ರವೇಶ.
- ಬೆಂಗಳೂರು ವಿಶ್ವವಿದ್ಯಾಲಯ ತನ್ನ ಭೂಮಿಯ ಬಗ್ಗೆ ಸರಿಯಾದ ಲಿಖಿತ ದಾಖಲೆಗಳೆ ಇಲ್ಲ.
- ಬೆಂಗಳೂರು ವಿಶ್ವವಿದ್ಯಾಲಯ ಬಳಕೆಯಾಗಿರುವ ಒಟ್ಟು ಭೂಮಿ ಅಂದಾಜು 832 ಏಕರೆ.
- ಬೆಂಗಳೂರು ವಿಶ್ವವಿದ್ಯಾಲಯ ಭೂಮಿ ತನ್ನ ಅಭಿವೃದ್ಧಿಗೆ ಮಾತ್ರ ಬಳಸದೆ ಅನ್ಯ ಸಂಸ್ಥೆಗಳಿಗೆ ಭೂಮಿ ಪರಭಾರೆ.
- UVCE ಗೆ 52. 01 ಎಕರೆ ಗಿಡ ಮರಗಳನ್ನು ಹಾಳು ಮಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಚಾಲನೆ.
- ಹಾಲಿ ಇರುವಂತಹ ಕಟ್ಟಡಗಳಲ್ಲಿ ವಿದ್ಯಾರ್ಧಿಗಳ ಕೊರತೆಯಿಂದಾಗಿ ಖಾಲಿ.
- ಹಳೆಯ ಕಟ್ಟಡಗಳ ಮೇಲೆ ನೂತನ ಮರು ಕಟ್ಟಡ ನಿರ್ಮಾಣ ಮಾಡಿದರೆ ಜೈವಿಕ ವನ ರಕ್ಷಣೆ ಮಾಡಬಹುದು.
ಸರ್ಕಾರದ ವಿರುದ್ಧ ಹೋರಾಟ & ಪಾರಂಪರಿಕ ತಾಣಕ್ಕೆ ಬೇಡಿಕೆ !

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಅಧ್ಯಾಯನ ನಿರ್ಮಾಣಕ್ಕೆ 419 ಮರಗಳನ್ನು ಕಡಿಯಲು ಮುಂದಾಗಿರುವುದು ಸ್ಧಳಿಯ ಪರಿಸರವಾದಿಗಳ ಆಕ್ರೋಶಕ್ಕೆ ಗುರಿಯಾಗಿದೆ ಅಲ್ಲದೆ ಮಾಲಿನ್ಯದಿಂದ ಹದಗೆಡುತ್ತಿರುವ ಬೆಂಗಳೂರು ರಾಜಧಾನಿಗೆ ಮಾರಕವಾಗಲಿದೆ. ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಈಗಾಗಲೇ ಸುಮಾರು ಅರ್ಧದಷ್ಟು ಭಾಗದಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಈ ನಡುವೆ, ಪಿ.ಎಂ. (PM-USHA) ಉಷಾ ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ನಿರ್ಮಾಣಕ್ಕಾಗಿ ಸರ್ವೆ ನಂ. 6 ರಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಕ್ಯಾಂಪಸ್ನ ಇನ್ನಷ್ಟು ಹಸಿರು ವಾತಾವರಣ ಕಣ್ಮರೆಯಾಗುವ ಆತಂಕ ಎದುರಾಗಿದೆ.
- ಜೈವಿಕ ವನ ಉಳಿವಿಗಾಗಿ ಸಾವಿರಾರು ಸ್ದಳಿಯ ವಾಯು ವಿಹಾರಿಗಳು, ಪರಿಸರವಾದಿಗಳು, ಸಂಘ-ಸಂಸ್ಧೆಗಳು ಬೇಡಿಕೆ.
- ಕೋರ್ಟ್ ಗೆ 35 ಎಕರೆ ತೆರವು ಮಾಡಿರುವ ಬಗ್ಗೆ ಅಫೀಡೆವಿಟ್ ಸಲ್ಲಿಕೆ.
- ಪ್ರತಿ ವರ್ಷ ಅಂದಾಜು ಸುಮಾರು ₹ 16,500 ಕೋಟಿ ಮೌಲದ ಆಮ್ಲಜನಕವನ್ನು ಬೆಂಗಳೂರು ನಗರಕ್ಕೆ ಸಾರ್ವಜನಿಕರಿಗೆ ರಕ್ಷಣೆ.
- ವಿವಿ ಜೈವಿಕ ವನ ಉಳಿಯದಿದ್ದರೆ ಸರ್ಕಾರದ ವಿರುದ್ಧ ಹೋರಾಟ.
- ಸೇವ್ ಬಯೋ ಪಾರ್ಕ್’ ಉಳುವಿಗಾಗಿ ಆನ್ಲೈನ್ ನಲ್ಲಿ 25000 ಕ್ಕೂ ಹೆಚ್ಚು ಆಕ್ಷೇಪಣೆಗಳು.
- ಜ್ಞಾನ ಭಾರತಿ ಅವರಣವನ್ನು ಜೀವವೈವಿಧ್ಯ ಕಾಯ್ದೆ-2002 ರಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಲು ಮನವಿ.
- ಪರಿಸರ ಸಂರಕ್ಷಣಾ ಕಾಯ್ದೆ 1968 ರ ಉಲ್ಲಂಘನೆ.
- ರಾಜ್ಯದ ವಿವಿಧ ಜಿಲ್ಲೆಗಳಿಂದ ಪರಿಸರ ಸಂಶೋದನೆಗೆ ನೂರಾರು ವಿದ್ಯಾರ್ಧಿಗಳ ವಿವಿ ಗೆ ಬೇಟಿ.
- ವಿವಿ ಯಲ್ಲಿ ಪಂಚವಟಿ, ಪಂಚವಲ್ಕಲ, ಚೆಲುವಿನ ಹಣ್ಣಿನ ತೋಟ, ಮಿಯಾವಾಕಿ, ಔಷಧಿ ಗಿಡಗಳು, ಅಶೋಕ ಮರ, ಬಾಗೆಮರ, ತಾರೆಮರ, ಮತ್ತಿ, ತುಪರೆ ಮರ, ಹೊನ್ನೆ, ಕಕ್ಕೆ, ಬನ್ನಿ, ಹುಣಸೆ, ಕಮರ, ಬಸವನಪಾದ, ಬೇಲದಮರ, ಬೀಟೆಯಂತಹ ಮರಗಳ ನೆಲೆ, ಕೆರೆ, ಕುಂಟೆಗಳಲ್ಲಿ ಜೀವ ಜಲ ಭರ್ತಿ.
- ಸಸ್ಯ ಸಂಕುಲದ ಜೊತೆ ಪ್ರಾಣಿ, ಪಕ್ಷಿ ಸಂಕುಲಗಳ ಬದುಕಿನ ಜೀವವಾಳ.
- ನಗರದ ಸ್ಧಳಿಯ ವಿವಿಧ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ವಿವಿ ಜೈವಿಕ ವನಕ್ಕೆ ಭೇಟಿ.
- ತೆರವಾದ ಪ್ರದೇಶ ವಿವಿ ಅಭಿವೃದ್ಧಿಗೆ ಮಾತ್ರ, ಇತರೇ ಅನ್ಯ ಸಂಸ್ಥೆಗಳಿಗೆ ನೀಡಬಾರದು.
ಆದೇಶಕ್ಕೆ ಬೆಲೆ ಇಲ್ಲ !
2017 ರ ಸಿಂಡಿಕೇಟ್ ಸಭೆಯಲ್ಲಿ ವಿವಿ ಯಲ್ಲಿ ಇರುವಂತಹ ಜಮೀನನ್ನು ಯಾರಿಗೂ ಪರಭಾರೆ ಮಾಡದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಇಲ್ಲಿರುವ ಜೀವವೈವಿಧ್ಯ ವನವನ್ನು ಉಳಿಸಿಕೊಳ್ಳುವಂತೆ ಸಿಂಡಿಕೇಟ್ ನಿರ್ಣಯಿಸಿದೆ. ಬೆಂಗಳೂರು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಕೂಡ ವಿವಿಯಲ್ಲಿರುವ ಜೀವವೈವಿಧ್ಯ ತಾಣ ರಕ್ಷಣೆ ಘೋಷಣೆ ಆದೇಶಿಸಿದೆ ಮತ್ತೊಂದು ಬಿಬಿಎಂಪಿ ಜೀವವೈವಿಧ್ಯ ನಿರ್ವಹಣಾ ಸಮಿತಿ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿರುವಂತೆ ಪ್ರತಿ ವರ್ಷ ಅಂದಾಜು ಸುಮಾರು ₹ 16,500 ಕೋಟಿ ಮೌಲ್ಯದ ಆಮ್ಲಜನಕವನ್ನು ಬೆಂಗಳೂರು ನಗರಕ್ಕೆ ನೀಡಲಿದೆ ಎಂಬ ವರದಿ ನೀಡಿದೆ.
2022 ರಲ್ಲಿ ವಿವಿ ಯ ಆವರಣದಲ್ಲಿರುವ ಬಯೊ ಪಾರ್ಕ್ ಸಂರಕ್ಷಿಸಲು ನಿರ್ಣಯ ಕೈಗೊಳ್ಳಲಾಗಿದೆ. ಜ್ಞಾನಭಾರತಿ ಆವರಣದಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ನ್ಯಾಕ್ ಕೂಡ ಹೇಳಿದೆ. ಜ್ಞಾನಭಾರತಿ ಅವರಣವನ್ನು ಜೀವವೈವಿಧ್ಯ ಕಾಯ್ದೆಯಂತೆ ‘ಪಾರಂಪರಿಕ ತಾಣ’ ಎಂದು ಘೋಷಿಸಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯ 2024ರ ಸೆಪ್ಟೆಂಬರ್ 26 ಸಮಿತಿ ರಚಿಸಿ, ಸಮಿತಿ ವರದಿ ನೀಡಿದೆ ಅದರೆ ವೈಜ್ಞಾನಿಕ ವರದಿ ರಾಜ್ಯಪಾಲರಿಗೆ ಕುಲಸಚಿವರು ವರದಿಯನ್ನು ಸಲ್ಲಿಸಿಲ್ಲ ಎಂಬ ಮಾಹಿತಿ ತಿಳಿದುಬಂದ್ದೆದೆ. ಇಂತಹ ಘಟನೆಯಿಂದ ಸರ್ಕಾರ ಮತ್ತು ಕುಲಪತಿಯಾದ ಜೈಕಾರ ವಿರುದ್ಧ ಸ್ಧಳಿಯ ವಾಯುವಿಹಾರಿಗಳು, ಪರಿಸರ ಪ್ರೇಮಿಗಳ, ಸದಸ್ಯರುಗಳ ಆಕ್ರೋಶಕೆ ಗುರಿಯಾಗಿದ್ದಾರೆ.

|
2020 ರಿಂದ ನೋಂದಣಿ ಆಗಿದ್ದ ಯೋಗ ವಿಜ್ಞಾನ ಕೇಂದ್ರದ ಜಮೀನು ರದ್ದತಿ ಮಾಡಲು ಸಿಂಡಿಕೇಟ್ ನಿರ್ಧಾರ ಮಾಡಿದ್ದು, ಕಾರ್ಯಗತ ಮಾಡದೇ ಇರುವುದು ವೈಫಲ್ಯಕ್ಕೆ ಹಿಡಿದ ಕನ್ನಡಿ. ಇದರೊಂದಿಗೆ ಇನ್ನೂ ಮೂರು ಸಂಸ್ಥೆಗಳ ನೋಂದಣಿ ರದ್ದು ಮಾಡದೇ ಇರುವುದು ಕಣ್ಣಿಗೆ ಮಣ್ಣು ಎರಚುವ ತಂತ್ರವೇ ಆಗಿದೆ. ರಾಷ್ಟ್ರೀಯ ಕಾನೂನು ಶಾಲೆ ವಿವಿಗೆ ಹೆಚ್ಚುವರಿಯಾಗಿ 7 ಎಕರೆ ಹಾಗೂ ACI 2 ಎಕರೆ ಜಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿರುವುದು ಹಸಿರು ಲೂಟಿ ಕೋರರ ಅಟ್ಟಹಾಸಕ್ಕೆ ಸಾಕ್ಷಿ. ಇವೆಲ್ಲಕ್ಕೂ ಉತ್ತರ ಪಾರಂಪರಿಕ ತಾಣವೆಂದು ಘೋಷಿಸುವುದು ಮಾತ್ರ! ಒಮ್ಮೆ ಕಾಡು, ಕಿರು ಅರಣ್ಯ ಎಂದಾದರೆ ಎಂದೆಂದಿಗೂ ನಾಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದ್ದು ಕೇಳಿಸಿಲ್ಲ, ಹಸಿರು ಲೂಟಿ ಕೋರರಿಗೆ ಜಾಣ ಕಿವುಡು ! ಸುಮಾರು 368 ಮರಗಳ ಪಾರಂಪರಿಕ ತಾಣವೆಂದು ಘೋಷಿಸಿರುವ ಸರ್ಕಾರ ಸುಮಾರು 6 ಲಕ್ಷ ಗಿಡ ಮರಗಳನ್ನು ಉಳಿಸಲು ಜೀವ ವೈವಿಧ್ಯ ಮಂಡಳಿಗೆ ಸಾಧ್ಯವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ಪ್ರಮುಖವಾಗಿ ಹಾಳುವಂತಹ ಸರ್ಕಾರಕ್ಕೆ ಇತ್ತ ಗಮನವಿಲ್ಲ, ಸಾರ್ವಜನಿಕರ ಹಿತಾಕಾಪಾಡುವುದು ಮತ್ತು ಪರಿಸರ ರಕ್ಷಣೆ ಮಾಡುವುದು ಸರ್ಕಾರ, ಜನನಾಯಕರ ಕರ್ತವ್ಯ ಮತ್ತು ಜವಾಬ್ಧಾರಿ ಅಲ್ಲವೇ ? ಪಟೇಲ್.ಎಸ್ |
ಒತ್ತುವರಿ ತೆರವು ಜಾಗದಲ್ಲಿ PM-USHA ಯೋಜನೆ ಕಟ್ಟಡ ನಿರ್ಮಾಣವಾಗಲಿ !
ಕುಲಪತಿ ಜೈಕಾರ್ ಅವರ ಆವೈಜಾನಿಕ ಅಭಿವೃದ್ಧಿ ಪರಿಸರಕ್ಕೆ ಮಾರಕವಾಗಲಿದೆ. ಬೆಂಗಳೂರು ವಿವಿ ಆವರಣದಲ್ಲಿನ ಸುಮಾರು 242 ಎಕರೆ ಜಮೀನು ಒತ್ತುವರಿ ಬಗ್ಗೆ ಮಾದ್ಯಮಗಳ ವರದಿ ಆಧರಿಸಿ 2020 ರಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತು. ಈ ವರದಿ ಆಧಾರದ ಮೇಲೆ ಘನ ನ್ಯಾಯಾಲಯ ನಗರ ಜಿಲ್ಲಾಧಿಕಾರಿಗೆ ಒತ್ತುವರಿಯ ಬಗ್ಗೆ ಮತ್ತು ಒತ್ತುವರಿ ತೆರವು ಮಾಡವ ಬಗ್ಗೆ ಮಾಹಿತಿ, ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ಕುಲಪತಿಯಾದ ಜೈಕಾರ 35 ಎಕರೆ ಈಗಾಗಲೇ ತೆರವಾಗಿರುವ ಬಗ್ಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ PM USHA ಯೋಜನೆಯ ಬಳಸಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರೆ ಬಯೋ ಪಾರ್ಕ್ ರಿಸರ್ವ್ ಭಾಗ-2 ರ ಕಾಡು, ಕಣಿವೆ ರಕ್ಷಣೆ ಆಸಾದ್ಯ. ಈ ಜಾಗದಲ್ಲಿ ಹಲವು ಬಗೆಯ ಮರ ಗಿಡಗಳ ಜೊತೆಗೆ ನೀಲಗಿರಿ ಅಕೇಶಿಯಾ ಇದ್ದರೂ ಇಂಗಾಲ ಹೀರಿ ಆಮ್ಲಜನಕ ನೀಡುವ ಆರೋಗ್ಯ ಧಾಮ ಎಂಬುದನ್ನು ವಿವಿ ಹಾಗೂ ಅರಣ್ಯ ಅಧಿಕಾರಿಗಳು ಮರೆಯದಿರಲಿ. ಈ ಜಾಗದಲ್ಲಿ ದೊಡ್ಡ ಕಟ್ಟಡಗಳನ್ನು ಮೇಲ್ಮುಖವಾಗಿ ವಿಸ್ತರಿಸಿ ವಿವಿ ಅಭಿವೃದ್ಧಿ ಬಯಸೋಣ.
ವಿವಿ ಯಲ್ಲಿ ಒತ್ತುವರಿ ತೆರವು ಮಾಡಿರುವ 35 ಎಕರೆ ಸಂಬಂದಪಟ್ಟ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡದ ಕುಲಪತಿ ಜೈಕಾರ್. ಕುಲಪತಿಯಾದ ಜೈಕಾರ ವೈಜ್ಞಾನಿಕ ಅಭಿವೃದ್ಧಿಯಿಂದ ಸಾವಿರಾರು ಗಿಡ-ಮರಗಳನ್ನು ಯಾತಾವತ್ ಕಾಪಾಡಬಹುದು ಎಂಬ ಸಾಮಾನ್ಯ ಪರಿಜ್ಞಾನವಿಲ್ಲ ಎಂಬುದಾಗಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
|
Tree Expert Committee ಇದರ ಬಗ್ಗೆ ಧೃಢ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜೀವ ವೈವಿಧ್ಯ ಮಂಡಳಿ ಪಾರಂಪರಿಕ ತಾಣವೆಂದು ಘೋಷಿಸಲು ಸಹಕರಿಸಬೇಕು. ಮಾನ್ಯ ಅರಣ್ಯ ಸಚಿವರು ಈ ವಿಷಯದಲ್ಲಿ ತೀವ್ರ ಆಸಕ್ತಿ ವಹಿಸಿದ್ದು, ಇದುವರೆವಿಗೆ ಕಾರ್ಯಗತ ಆಗಲು ಅಡ್ಡಿ ಆತಂಕಗಳೆ ಹೆಚ್ಚು. ವಿವಿ ಕುಲಪತಿಯ ಯಾವುದೋ ದುರ್ರುದೇಶದಿಂದ ಕಟ್ಟಡ ನಿರ್ಮಾಣ ಅನಿವಾರ್ಯತೆಯ ಬಗ್ಗೆ ಅಸಕ್ತಿ ಎದ್ದು ಕಾಣುತ್ತಿದೆ. ವಿವಿ ಯಲ್ಲಿ ಅದೆಷ್ಟೋ ಕೋರ್ಸುಗಳಿಗೆ ವಿದ್ಯಾರ್ಥಿಗಳೇ ಇಲ್ಲದೇ ಹೋದರೂ ಕಟ್ಟಡಕ್ಕೆ ಮುಂದಾಗುವುದಾರೂ ಹೇಗೆ ? ಇದರ ಹಿಂದಿನ ಉದ್ದೇಶವೇನು ? ಪ್ರತಿಯೊಂದು ವಿಭಾಗದಲ್ಲೂ ತಮ್ಮದೇ ಆದ ಸಂಶೋಧನಾ ವ್ಯವಸ್ಥೆ ಇದ್ದರೂ ರಿಸರ್ಚ್ಗಾಗಿ ಬೇರೆ ಕಟ್ಟಡ ಏಕೆ ? ಇತ್ತೀಚೆಗೆ ಅಡ್ಮಿನ್ ಕಟ್ಟಡ ನವೀಕರಣ ಮಾಡಿರುವ ಕುಲಪತಿ ಮತ್ತೊಂದು ಅಡ್ಮಿನ್ ಕಟ್ಟಡ ಏಕೆ ಬೇಕು? ಯುಜಿಸಿ ಬಂದಂತಹ ಹಣ ಸಂಬಂಧಿಸಿದ ವಿಭಾಗಗಳಿಗೆ ಹಂಚಿಕೆ ಮಾಡಿ, ಅವಶ್ಯಕತೆ ಇದ್ದಲ್ಲಿ ಒಂದೆರೆಡು ಲ್ಯಾಬ್ ಗಳನ್ನು ಹಳೆಯ ಕಟ್ಟಡಗಳ ಮೇಲೆ ಕಟ್ಟಿಕೊಂಡರೆ ಹಸಿರು & ನೀರು ಉಳಿಸಬಹುದಾಗಿತ್ತು ಇದನ್ನು ಬೆಂಗಳೂರು ವಿವಿ ಕುಲಪತಿ ಜೈಕಾರ್ ಸೂಕ್ಷ್ಮತೆಯ ಬಗ್ಗೆ ಅರಿವಿಲ್ಲವೇಕೆ ? ಪಟೇಲ್.ಎಸ್ |
ಪರಿಸರ ಉಳಿವಿಗೆ ರಾಜಕಾರಣಿಗಳ ಹಿತಾಸಕ್ತಿ ಕಡಿಮೆ !
ಹೆಚ್. ನರಸಿಂಹಯ್ಯನವರ ಕಾಲದಲ್ಲಿ ಅಡಿಪಾಯವಿಟ್ಟ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂದಿನಿಂದ ಇಂದಿನ ವರೆಗೂ ಬೆಳೆದು ನಿಂತ ಅತಿಹೆಚ್ಚು ಗಿಡ, ಮರಗಳ ಪರಿಸರವನ್ನು ಬಯೋಪಾರ್ಕ್ ಮಾಡದೆ ಯೋಗ ವಿಜ್ಞಾನ ಸಂಸ್ಥೆ , ಕೇಂದ್ರೀಯ ವಿಶ್ವವಿದ್ಯಾಲ , ನ್ಯಾಕ್, ಸಿಬಿಎಸ್ಸಿ ಮುಂತಾದ ಸಂಸ್ಥೆಗಳಿಗೆ ಮರುಗುತ್ತಿಗೆ ನೀಡಿರುವುದು ದುರಂತವೇ ಸರಿ.. ಕೆಲವು ತಿಂಗಳ ಹಿಂದೆ ವಿವಿ ಯಲ್ಲಿ ಯುವಿಸಿಇ 50 ಎಕರೆ ನೀಡಬಾರದೆಂದು ಹೋರಾಟ ನಡೆಯುತ್ತಿದೆ. ವಿವಿ ಯಲ್ಲಿ ಖಾಸಗಿಯವರು ಜಮೀನು ಒತ್ತುವರಿ ತೆರವು ಮಾಡಿಸಿ, ವಶಪಡಿಸಿಕೊಂಡಿರುವ ಸ್ದಳದಲ್ಲಿ ಕಟ್ಟಡ ನಿರ್ಮಾಣ ಮಾಡಲು ಸ್ಧಳೀಯ ನಿವಾಸಿಗಳು, ವಾಯು ವಿಹಾರಿಗಳು, ಪರಿಸರವಾದಿಗಳು, ಕೆಲವು ಮಾದ್ಯಮ ಮಿತ್ರರು, ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಬೇಡಿಕೆಯನ್ನು ವಿವಿ ಯ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಇಂತಹ ಖಾಸಗಿ ಒತ್ತವರಿ ತೆರವುಗೋಳಿಸಿರುವ ಬಗ್ಗೆ ಲಿಖಿತ ಮಾಹಿತಿಯನ್ನು ಕುಲಪತಿ ಜೈಕಾರ್ ಮರೆಮಾಚಿದ್ದಾರೆ.ಇತ್ತ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಪರಿಸರವನ್ನು ಹಾಳು ಮಾಡದೆ ವಿವಿ ಪರಿಸರವನ್ನು ಪಾರಂಪರಿಕ ತಾಣ ಮಾಡಲು ಬೇಡಿಕೆ ಮತ್ತು ಮನವಿಯನ್ನು ಇಟ್ಟಿದಾರೆ ಮುಂದುವರೆದು ಅರಣ್ಯ ಮಂತ್ರಿ ಅವರು ಸಂಬಂದಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡದೆ, ಕಡತ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದೆ. ಮತ್ತೊಂದು ಕಡೆ ಕರ್ನಾಟಕ ಜೈವವೈವಿದ್ಯ ಮಂಡಳಿಗೆ ಪಾರಂಪರಿಕ ತಾಣ ಎಂದು ಘೋಷಿಸಲು ಪ್ರಸಾವನೆಯನ್ನು ಸಲ್ಲಿಸಿದರು ಸಹ ಸಂಬಂದಪಟ್ಟಂತಹ ಮಂಡಳಿಯ ಅಧಿಕಾರಿಗಳು ಮೌನ ವಹಿಸಿದ್ದಾರೆ.
ವಿವಿ ಯಲ್ಲಿರುವ ಬಯೋ ಪಾರ್ಕ್ ಜಮೀನು ಅನ್ಯ ಶಿಕ್ಷಣ ಸಂಸ್ಧೆಗಳ ಮರುಗುತ್ತಿಗೆ ನೀಡಬಾರದು. ಅಡಳಿತ ಮಂಡಳಿ ಇನ್ನೂ ಮುಂದಾದರು ಯಾವುದೇ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು ಎಂದು ಸಂಘ ಸಂಸ್ಧೆಗಳು ಒತ್ತಾಯಿಸಿದ್ದಾರೆ. ಮತ್ತೊಂಡೆಗೆ ವಿವಿ ಯ ಬಯೋಡೈರ್ವಸಿಟಿ (ಜೈವಿಕವನ) ಪಾರಂಪರಿಕ ತಾಣ ಎಂದು ಘೋಷಣೆಯನ್ನು ಸರ್ಕಾರ ಮಾಡದಿದ್ದರೆ ಹಲವಾರು ಸಂಘ ಸಂಸ್ಥೆಗಳು ಜ್ಞಾನ ಭಾರತಿ ವಾಯುವಿಹಾರಿಗಳ ಸಂಘ, ಸ್ವಯಂ ಜಾಗೃತಿ, ಎನ್ ಜಿ ಇ ಎಫ್ ನಿವಾಸಿಗಳ ತಂಡ, ಸಿಂಹಾದ್ರಿ ಸಂಘ ಸಂಸ್ಧೆಗಳ ಪದಾದಿಕಾರಿಗಳ ಮುಂದಾಳತ್ವದಲ್ಲಿ ಸರ್ಕಾರ ವಿರುದ್ಧ ಉಗ್ರ ಹೋರಾಟ ಮಾಡಲು ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಎಂದು ಸಂಸ್ಧೆಗಳ ಸದಸ್ಯರು ಮತ್ತು ಸಾರ್ವಜನಿಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪಟೇಲ್ ಎಸ್.
ಪರ್ತಕರ್ತ