ಮಕ್ಕಳ ಬೆಳವಣಿಗೆ ಬಾಹ್ಯ & ಅಂತರೀಕ ವಾತಾವರಣ ಮುಖ್ಯ !
ನಮ್ಮ ಮಕ್ಕಳ ಅಧವಾ ಮಗುವಿನ ಬೆಳವಣಿಗೆ, ಜೀವನದ ಯಶಸ್ಸಿಗೆ ಪೋಷರ ಪಾತ್ರ ಜೊತೆ ಶಿಕ್ಷಣ, ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯಗಳು ಅತ್ಯಗತ್ಯ. ಇವುಗಳ ಜೊತೆ ಜೊತೆ ಪೂರ್ವ ಪಾಧಾಮಿಕ ಶಿಕ್ಷಣ ಮುಖ್ಯವಾದರೆ ಮತ್ತೊಂದು ಕಡೆ ಮಕ್ಕಳನ್ನು ನೈಜ ಜಗತ್ತಿಗೆ ಸಿದ್ಧಪಡಿಸುವುದು ಪೋಷಕರ ಕರ್ತವ್ಯ ಮತ್ತು ಜವಾಬ್ಧಾರಿ. ಮಕ್ಕಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು ಕಾಲಕಾಲಕ್ಕೆ ತಕ್ಕಂತೆ ಸಮಾಜದಲ್ಲಿನ ಆಂತರೀಕ, ಬಾಹ್ಯ ಜಗತ್ತಿಗೆ ಅಗತ್ಯವಾದ ಕೌಶಲ್ಯಗಳನ್ನು ನೀಡಲು ಅಧವಾ ಅಭಿವೃದ್ಧಿಪಡಿಸಲು ಮನೆಯ ವಾತಾವರಣ ಅಂತರೀಕ (ಪೋಷಕರು, ಕುಟುಂಬ) ಮತ್ತು ಬಾಹ್ಯ ವಾತಾವರಣ (ಶಾಲೆ, ಸಹಪಾಠಿ, ಸ್ನೇಹತ್ವ) ಕಲಿಕೆಯ ಮೂಲಕ ವ್ಯಕ್ತಿತ್ವ ಹಾಗೂ ಜೀವನ ಕೌಶಲ್ಯಗಳು ಪ್ರೋತ್ಸಾಹಿಸಬೇಕುಗಾಗುತ್ತದೆ.
ಮಗುವಿನ ಬಾಲ್ಯ ವಸ್ಧೆಯಿಂದ ಪೂರ್ವ ಪ್ರೌಢವಸ್ಧೆಯ ವರೆಗೆ ನಡೆಯುವ ಸಂವಹನ, ಪೋಷಕರ ಅಂತರೀಕ ಸ್ವಾಭಾವ, ನೆರೆಹೊರೆಯವರ ಬಾಹ್ಯ ಹೊಂದಾಣಿಕೆ, ಶಾಲೆಯಲ್ಲಿ ಸಹಪಾಠಿಗಳ ಅನಿಸಿಕೆ, ಅಭಿಪ್ರಾಯಗಳು ಮಗುವಿನ ವ್ಯಕ್ತಿತ್ವ ಅಭಿವೃದ್ಧಿ ಜೊತೆ ವಿಶೇಷ ಅಧವಾ ವಿಶಿಷ್ಟ ಲಕ್ಷಣಗಳನ್ನು ನಡವಳಿಕೆ, ವರ್ತನೆಗಳು ಮತ್ತು ಭಾವನಾತ್ಮಕತೆ ಪರಿಸರದಲ್ಲಿನ ಅನುಭವಗಳಿಂದ ರೂಪಿಸುವ ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿ ಮಗುವಿನ ಬೆಳವಣಿಗೆಯು ಆತ್ಮವಿಶ್ವಾಸ, ಸಂವಹನ ಕೌಶಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸಾಮಾಜಿಕ ಸಂವಹನದಂತಹ ಕ್ಷೇತ್ರಗಳ ಮೂಲಕ ಬೆಳವಣಿಗೆಯು ಕಲಿಕೆಯ ಮೂಲಕ ಒಳಗೊಂಡಿರುತ್ತದೆ. ಮತ್ತೊಂದು ಕಡೆ ಕುಟುಂಬ ಮತ್ತು ಶಿಕ್ಷಣ ದಿಂದ ಮಕ್ಕಳ ಉದ್ದೇಶ ಪೂರ್ವಕ ಕಲಿಕಾ ಚಟುವಟಿಕೆಗಳು ಪ್ರಭಾವಿತವಾಗುತ್ತಾರೆ.
ನಮ್ಮ ಸಂಸ್ಕ್ರತ ಸಾಹಿತ್ಯದಲ್ಲಿ ವಿವರಿಸಿರುವಂತೆ ‘’ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಾಯ, ಗುರು ಸಾಕ್ಷಾತ್ ಪರಮ ಬ್ರಹ್ಮ, ತಸ್ಮಯಿ ಶ್ರೀ ಗುರುವೇ ನಮಃ’’ ನಮ್ಮ ಮಕ್ಕಳಿಗೆ ನಮ್ಮ ಕುಟುಂಬದ ಹಿರಿಯರನ್ನು ಮತ್ತು ಶಿಕ್ಷಕರನ್ನು ಗೌರವಿಸಲು ಕಲಿಸುವ ಈ ಶ್ಲೋಕವು, ಶಿಕ್ಷಕರು ಮತ್ತು ಮಾರ್ಗದರ್ಶಕರು ತಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ತಿಳಿಸುತ್ತದೆ. ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದಲ್ಲಿನ ರಚನಾತ್ಮಕ ವ್ಯಾಕರಣವು ಮಕ್ಕಳ ತಾರ್ಕಿಕ ತಾರ್ಕಿಕತೆಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸುತ್ತಾರೆ.
ನಮ್ಮ ಮಕ್ಕಳು ಯಾವುದನಾದರು ಸಾಧಿಸಲು ನಾವು ಮೊದಲು ಸಿದ್ದತೆ ನಡೆಸಬೇಕು. ನಮಗೆ ಮಕ್ಕಳ ಅಸಕ್ತಿಯ ಬಗ್ಗೆ ಪೂರ್ಣ ಅರಿವಿರಬೇಕು. ಪೋಷಕರಾದ ನಾವು ಮಕ್ಕಳಿಗೆ ವಿವಿಧ ಪಠ್ಯೇತರ ಚಟುವಟಿಕೆಗಳ ಬಗೆ ಹೇಳುತ್ತೇವೆ. ಅದು ಮಕ್ಕಳು ಆಸಕ್ತಿಯಿಂದ ಅನ್ವೇಷಿಸಲು, ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಮಕ್ಕಳು ವ್ಯಕ್ತಿತ್ವ, ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುತ್ತೇವೆ. ನಮ್ಮ ಮಕ್ಕಳು ಬಾಹ್ಯವಾಗಿ ಪಠ್ಯ, ಪಠ್ಯೇತರ ಕಾರ್ಯಕ್ರಮಗಳ ಜೊತೆಗೆ, ಅವರ ಪಾತ್ರ ನಿರ್ವಹಿಸುವ ಮೂಲಕ ಶಿಕ್ಷಣವನ್ನು ಬಲವಾಗಿ ಒತ್ತಿ ಹೇಳುತ್ತೇವೆ. ಮಕ್ಕಳಿಗೆ ಒಳ್ಳೆಯ ವ್ಯಕ್ತಿಯಾಗುವುದು, ಉತ್ತಮ ವಿದ್ಯಾರ್ಥಿಯಾಗುವುದರಷ್ಟೇ ಮುಖ್ಯ ಎಂದು ನಾವು ಅರ್ಥಮಾಡಿ ಕೊಂಡಿದ್ದೇವೆ. ಅದಕ್ಕಾಗಿಯೇ ನಾವು ನಮ್ಮ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆ, ಗೌರವ, ಜವಾಬ್ದಾರಿ ಮತ್ತು ಸಹಾನುಭೂತಿ, ಅಗತ್ಯ ಮೌಲ್ಯಗಳನ್ನು ಕಲಿಸಬೇಕು.
ಈ ಮೌಲ್ಯಗಳು, ಪಾಠಗಳು, ಪಾತ್ರಾಭಿನಯ, ವ್ಯಾಯಾಮ ಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ನಮ್ಮ ಪಠ್ಯ ಕ್ರಮದಲ್ಲಿ ವಿವರಿಸಿ ಹೇಳಲಾಗುತ್ತಿದೆ. ಮಕ್ಕಳಿಗೆ ಕಲಿಕೆಗೆ ಎಂಬ ವಿಧಾನವು ವಿದ್ಯಾರ್ಥಿಗಳ ಮೌಲ್ಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ಅವರ ದೈನಂದಿನ ಜೀವನದ ಚಟುವಟಿಕೆಗಳು ಸಹ ಅನ್ವಯಿಸಲು ಅನುವು ಮಾಡಿಕೊಡುತ್ತದೆ.
ನಮ್ಮ ಮಕ್ಕಳು ಶಾಲೆಯಲ್ಲಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಪಾತ್ರವನ್ನು ಮತ್ತು ಮನೆಯಲ್ಲಿ ಪೋಷಕರೋಟಿಗೆ ಮನೆಯ ಆಗುಹೋಗುಗಳ ಬಗ್ಗೆ ಉದ್ದೇಶ ಸಹಿತವಾಗಿ ಪ್ರಜ್ಞೆಯನ್ನು ಬೆಳೆಸುವ ವ್ಯಕ್ತಿಗಳಾಗಿ ಮಾಡಲು ಪೋಷಕರು ಸಹಕಾರಿಯಾಗಿ ನಿಲ್ಲಬೇಕು. ಪೋಷಕರು ಮಕ್ಕಳಿಗೆ ಬಾಹ್ಯ ಬೆಂಬಲ ಜೊತೆ ಅಂತರ್ಗತ ಕಲಿಕೆಯ ವಾತಾವರಣವನ್ನು ಒದಗಿಸುವ ಮೂಲಕ, ಮಕ್ಕಳಿಗೆ ತಮ್ಮ ಪೂರ್ಣ ಸಾಮರ್ಥ್ಯ, ಜವಾಬ್ಧಾರಿ ತಿಳಿಸುವ ಮೂಲಕ ಜಗತ್ತಿನ ಸಕಾರಾತ್ಮಕ ಪರಿಣಾಮ ಅರಿಯಲು ಪೋಷಕರು ಸಹಕರಿಸಬೇಕು.
ಪೋಷಕರು ಮಕ್ಕಳಿಗೆ ಜೀವನ ಕೌಶಲ್ಯ ನೀಡುವುದ್ರ ಜೊತೆ ಮಾನಸಿಕ, ಸಾಮಾಜಿಕ ಸಾಮರ್ಥ್ಯ ಮತ್ತು ಪರಸ್ಪರ ಕೌಶಲ್ಯಗಳನ್ನು ಗಣನೆಗೆ ತೆಗೆದುಕೊಳ್ಳುಲು ತಿಳಿಸಬೇಕು. ಆಗ ಮಕ್ಕಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸಮಸ್ಯೆಗಳನ್ನು ಪರಿಹರಿಸಲು, ವಿಮರ್ಶಾತ್ಮಕವಾಗಿ ಮತ್ತು ಸೃಜನಾತ್ಮಕವಾಗಿ ಯೋಚಿಸಲು, ಪರಿಣಾಮಕಾರಿಯಾದ ಸಂವಹನ ನಡೆಸಲು ಸಹಕಾರಿಯಾಗುತ್ತದೆ ಈ ಮೂಲಕ ಆರೋಗ್ಯಕರ ಸಂಬಂಧಗಳನ್ನು ನಿರ್ಮಿಸಲು, ಇತರರೊಂದಿಗೆ ಸಮಾಜದಲ್ಲಿ ಸಹಾನುಭೂತಿ ಹೊಂದಲು ಸಹಾಯ ಮಾಡುತ್ತದೆ.
ವಿಶ್ವ ಆರೋಗ್ಯ (WHO) ಸಂಸ್ಧೆಯು ಮಕ್ಕಳ ವ್ಯಕ್ತಿತ್ವ ಹಾಗೂ ಜೀವನ ಬಗ್ಗೆ ಈ ರೀತಿಯಾಗಿ ವಿವರಿಸಿದೆ ಕೌಶಲ್ಯಗಳು ಕಲಿಕೆ, ಹೊಂದಾಣಿಕೆ, ಸಕಾರಾತ್ಮಕ ನಡವಳಿಕೆಯ ಸಾಮರ್ಥ್ಯಗಳು ಎಂದು ವ್ಯಾಖ್ಯಾನಿಸಿದೆ. ಇದು ಪ್ರತಿ ಮಕ್ಕಳ, ವ್ಯಕ್ತಿಗಳ ದೈನಂದಿನ ಜೀವನದ ಬೇಡಿಕೆಗಳು ಜೊತೆ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅನುವು ಮಾಡಿಕೊಡುತ್ತದೆ ಅರ್ಧೈಸಿದೆ.
ಮಕ್ಕಳು ತಮ್ಮ ದೈನಂದಿನ ಜೀವನದ ಬೇಡಿಕೆಗಳು, ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುವ ಹೊಂದಾಣಿಕೆ, ಸಕಾರಾತ್ಮಕ ವರ್ತನೆಯ ಸಾಮರ್ಥ್ಯಗಳಾಗಿವೆ. ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಎಂದರೆ ಸಾಮಾಜಿಕದತ್ತವಾಗಿ ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ. ಇದರಲ್ಲಿ ತಂಡ ನಿರ್ಮಾಣ, ಪರಸ್ಪರ ಕೌಶಲ್ಯಗಳು, ನಾಯಕತ್ವ, ಸಮಸ್ಯೆ ಪರಿಹಾರ, ಸಾರ್ವಜನಿಕ ಭಾಷಣ, ಚರ್ಚೆ, ನಾಟಕ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಸೇರಿವೆ.
ಮಗುವಿಗೆ ಕೌಶಲ್ಯಗಳು ಶೈಕ್ಷಣಿಕ, ಕ್ರೀಡೆ ಮತ್ತು ಅವರ ಭವಿಷ್ಯದ ವೃತ್ತಿ ಜೀವನದಕ್ಕೆ ಅಗತ್ಯವಿರು ಅಂಶಗಳನ್ನು ಅಭಿವೃದ್ಧಿಪಡಿಸುವುದು ಬಹಳ ಅತ್ಯಗತ್ಯ. ಉತ್ತಮ ವ್ಯಕ್ತಿತ್ವ, ಕೌಶಲ್ಯಗಳನ್ನು ಹೊಂದಿರುವ ಮಗು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಇಂತಹ ಚಟುವಟಿಕೆಗಳು ಮಕ್ಕಳು ವೈಯಕ್ತಿಕ ಜೊತೆಗೆ ವೃತ್ತಿಪರವಾಗಿ ಸಾಮಾಜಿಕ ಜವಾಬ್ಧಾರಿ ನಿಭಾಹಿಸಲು ಸಹಾಕಾರಿಯಾಗುತ್ತದೆ.
ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ (ಬಾಹ್ಯ & ಅಂತರೀಕ) ಮಕ್ಕಳನ್ನು ನೈಜ ಜಗತ್ತಿಗೆ ಸಿದ್ಧಪಡಿಸುವುದು ಪೋಷಕರ ಪ್ರಮುಖ ಕರ್ತವ್ಯವಾಗಿದೆ. ಶೈಕ್ಷಣಿಕ ಶಿಕ್ಷಣದಷ್ಟೇ ವ್ಯಕ್ತಿತ್ವ ವಿಕಸನವೂ ಬಹಳ ಮುಖ್ಯ. ಪೋಷಕರು ತಮ್ಮ ಮಕ್ಕಳ ಯಶಸ್ವಿ ಪ್ರಗತಿಗೆ ಹಾಗೂ ಮಕ್ಕಳ ದಿನನಿತ್ಯದ ಚಟುವಟಿಕೆ ಬಗ್ಗೆ ಗಮನಹರಿಸುವ ಮತ್ತು ಪ್ರಶ್ನೆ ಮಾಡುವ ಸರಿ ತಪ್ಪುಗಳ ಬಗ್ಗೆ ತಿಳಿಸಿಕೊಡಬೇಕೆ. ಮಕ್ಕಳಿಗೆ ನಿರಂತರ ಕಲಿಕೆಗೆ ಸಮಗ್ರ ಕಲಿಕಾ ವಾತಾವರಣ ಜೊತೆ ಮನೆಯ ವಾತಾವರಣವು (ಆಂತರಿಕ ) ಹಾಗೂ ಶೈಕ್ಷಣಿಕತೆಯು (ಬಾಹ್ಯ) ಪರಸ್ಪರ ಪೂರಕವಾಗಿರಬೇಕು
ಯಾವುದೇ ಮಗು ಅಧವಾ ಮಕ್ಕಳಿಗೆ ಬೆಂಬಲ ಮತ್ತು ಜವಾಬ್ದಾರಿ ಜೊತೆಗೆ, ತಮ್ಮ ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಅರಿತುಕೊಳ್ಳಲು ಪೋಷಕರು ನಿರಂತರ ಸಹಾಯ ಮಾಡಬೇಕು ಮಾಡುವ ಮೂಲಕ ಅರಿವನ್ನು ಪ್ರಜ್ನೆಯನ್ನು ಬೆಳೆಸಬೇಕು. ಮಕ್ಕಳಿಗೆ ಮಾನಸಿಕ ಮತ್ತು ಸಾಮಾಜಿಕ ಸಾಮರ್ಥ್ಯಗಳುನ್ನು ಸರಿಯಾದ ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಆರೋಗ್ಯಕರ ಸಂಬಂಧಗಳನ್ನು ನಿರ್ಮಿಸಲು ಅಗತ್ಯವಾದ ಮಾನಸಿಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಕಲಿಸಬೇಕು.
ಮಕ್ಕಳಿಗೆ ಬಾಹ್ಯವಾಗಿ ಮತ್ತು ಆಂತರೀಕವಾಗಿ ವ್ಯಕ್ತಿತ್ವ ವಿಕಸನದ ಪ್ರಮುಖ ಅಂಶಗಳು:
ಮೌಲ್ಯಗಳ ಕಲಿಕೆ ಪ್ರಾಮಾಣಿಕತೆ, ಗೌರವ, ಜವಾಬ್ದಾರಿ, ಮತ್ತು ಸಹಾನುಭೂತಿಯಂತಹ ಅಗತ್ಯ ಮೌಲ್ಯಗಳನ್ನು ಕಲಿಸುವುದು. ಈ ಮೌಲ್ಯಗಳನ್ನು ಪಾಠಗಳು, ಪಾತ್ರಾಭಿನಯ ವ್ಯಾಯಾಮಗಳು ಮತ್ತು ನಿಜ ಜೀವನದ ಉದಾಹರಣೆಗಳ ಮೂಲಕ ಮಕ್ಕಳಿಗೆ ತಿಳಿಸಬೇಕು. ತಂಡ ನಿರ್ಮಾಣ ಮತ್ತು ನಾಯಕತ್ವ ಗುಂಪು ಚಟುವಟಿಕೆಗಳು ಮತ್ತು ಪಠ್ಯೇತರ ಕಾರ್ಯಕ್ರಮಗಳ ಮೂಲಕ ಈ ಸಾಮರ್ಥ್ಯಗಳನ್ನು ಬೆಳೆಸುವುದು. ಸಾರ್ವಜನಿಕ ಭಾಷಣ ಮತ್ತು ಚರ್ಚೆ ಸಂವಹನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಠ್ಯೇತರ ಚಟುವಟಿಕೆಗಳು ಕ್ರೀಡೆ, ಕಲೆ ಮತ್ತು ಇತರ ಚಟುವಟಿಕೆಗಳು ಮಕ್ಕಳ ಆಸಕ್ತಿಗಳನ್ನು ಅನ್ವೇಷಿಸಲು ಮತ್ತು ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅನನ್ಯ ಅವಕಾಶ ನೀಡುತ್ತವೆ.
ಒಟ್ಟಾರೆಯಾಗಿ, ಈ ಕೌಶಲ್ಯಗಳನ್ನು ಬೆಳೆಸುವುದರಿಂದ ಮಕ್ಕಳು ಸವಾಲುಗಳನ್ನು ಎದುರಿಸಲು, ಬಲವಾದ ಸಂಬಂಧಗಳನ್ನು ನಿರ್ಮಿಸಲು ಮತ್ತು ಹೆಚ್ಚು ತೃಪ್ತಿಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ವಿಕಸನವು ಮಕ್ಕಳಲ್ಲಿ ಸಾಮಾಜಿಕ ಮತ್ತು ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಾಗಿದೆ. ಇದು ಕೇವಲ ಶೈಕ್ಷಣಿಕ ಯಶಸ್ಸಿಗಿಂತ ಹೆಚ್ಚಾಗಿ, ಒಳ್ಳೆಯ ವ್ಯಕ್ತಿಯಾಗಲು ಬೇಕಾದ ಮೌಲ್ಯಗಳನ್ನು ಕಲಿಸುತ್ತದೆ. ವ್ಯಕ್ತಿತ್ವ ವಿಕಸನವು ಮಕ್ಕಳಲ್ಲಿ ಸಾಮಾಜಿಕ ಮತ್ತು ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಾಗಿದೆ. ಇದು ಕೇವಲ ಶೈಕ್ಷಣಿಕ ಯಶಸ್ಸಿಗಿಂತ ಹೆಚ್ಚಾಗಿ, ಒಳ್ಳೆಯ ವ್ಯಕ್ತಿಯಾಗಲು ಬೇಕಾದ ಮೌಲ್ಯಗಳನ್ನು ಕಲಿಸುತ್ತದೆ.
ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯು ಪೋಷಕರ ನಿತ್ಯ ಪ್ರಕ್ರಿಯೆಯಾಗಿದ್ದು, ಮಕ್ಕಳಿಗೆ ಆಲೋಚನೆಗಳು, ಭಾವನೆಗಳು, ನಡವಳಿಕೆಗಳು, ಸಾಮಾಜಿಕ ಜವಾಬ್ಧಾರಿಯನ್ನು ರೂಪಿಸಬೇವ ಮೂಲಕ್ಕ ಮಕ್ಕಳಿಗೆ ಆತ್ಮವಿಶ್ವಾಸ, ಸಹಾನುಭೂತಿ & ಸಂವಹನದಂತಹ ಗುಣಗಳ ಮೇಲೆ ಪ್ರಭಾವ ಬೀರುವಂತೆ ಮಾಡಾಬೇಕು. ಮಕ್ಕಳಿಗೆ ಪೋಷಕರು & ಶಿಕ್ಷಕರು ಸ್ಥಿರವಾದ ಬೆಂಬಲ, ಸಕಾರಾತ್ಮಕ ಚಟುವಟಿಕೆಗಳ ಮೂಲಕ ನಾಯಕತ್ವ, ತೆಗೆದುಕೊಳ್ಳುವಿಕೆ ಹಾಗೂ ಭಾವನಾತ್ಮಕ ಬುದ್ಧಿವಂತಿಕೆಯಂತಹ ಗುಣಗಳನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು.