ನಮ್ಮ ಶಿಕ್ಷಣ ವ್ಯಾಪಾರಿಕರಣ ಮತ್ತು ಕಂತಿನಲ್ಲಿ ಪಾವತಿಸುವ ಶಿಕ್ಷಣ ?

" ನಮ್ಮ ಮಕ್ಕಳು ಜಗತ್ತನು ಬದಲಾಯಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವೇ ಶಿಕ್ಷಣ " ನಮ್ಮ ಭಾರತ ದೇಶವು ಶಿಕ್ಷಣದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಸುಸಂಸ್ಕೃತರಾಗಿದ್ದೇವು ಎಂದು ಇತಿಹಾಸ ಸಾರುತ್ತಿದೆ. ಭಾರತ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳು ಶಿಕ್ಷಣಕ್ಕೆ ಮಹತ್ವ ನೀಡಿದ್ದೇವು. ಕ್ರಿ.ಶ. 5 ನೇ ಶತಮಾನದ ಅವಧಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳು ಪ್ರಪಂಚದಲ್ಲೇ ಕಲಿಕೆಗೆ ಅತ್ಯುತ್ತಮ ಎಂದು ಪಾಶ್ಚಿಮಾತ್ಯರಿಂದ ಪಡೆದುಕೊಂಡಿದವು ಅದರೆ ಕೆಲವು ವಿದೇಶಿಗರ ಆಕ್ರಮಣ, ಯುದ್ಧಗಳು ಮತ್ತು ದಾಳಿಗಳಿಂದ ಪ್ರಾಚೀನ ವಿಶ್ವವಿದ್ಯಾಲಯಗಳು ನೆಲಸಮಗೊಂಡವು. ದೇಶದಲ್ಲಿ ನೂರಾರು ವರ್ಷಗಳಿಂದ ಶಿಕ್ಷಣ ಪದ್ಧತಿ ಬದಲಾಣೆ ಮುಂದುವರಿದಿದೆ. ಶಿಕ್ಷಣ ಕೆಲವು ಗುರಿಗಳನ್ನು ಸಾಧಿಸುವ ಉದ್ದೇಶ ಪೂರ್ವಕ ಚಟುವಟಿಕೆ. ಇದು ಜ್ಞಾನವನ್ನು ಪರಿವರ್ತಿಸಲು, ಕೌಶಲ್ಯ ಮತ್ತು ವಿದ್ಯಾರ್ಥಿಗಳ ಪಾತ್ರವನ್ನು ರೂಪಿಸಲು ಒಂದು ಸಾದನ. ಸಮಾಜದಲ್ಲಿ ಯಾವುದೇ ಮನುಷ್ಯ ತರ್ಕಬದ್ಧ, ಸಾಮಾನ್ಯ ಜೀವನ ನಡೆಸಲು ಶಿಕ್ಷಣ ಕಡ್ಡಾಯವಾಗಿದೆ.

ಶಿಕ್ಷಣವು ನಮಗೆ ಜ್ಞಾನವನ್ನು ಉಂಟುಮಾಡುತ್ತದೆ, ವಿದ್ಯಾರ್ಧಿಗಳ ಕನಸುಗಳನ್ನು ಬೆಳೆಸುವ ಮತ್ತು ಜವಾಬ್ದಾರಿಯುತ ಜೀವನವನ್ನು ಮೂಡಿಸುವ ಸಾಮರ್ಥ್ಯವನ್ನು ಪ್ರಸ್ತುತಪಡಿಸುತ್ತದೆ ಅದರೆ ಪ್ರಸ್ತುತ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿಲ್ಲ ಮತ್ತು ಕನಿಷ್ಠ ಸಮಯದಲ್ಲಿ ಗರಿಷ್ಟ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಇಂದಿಗೂ ಸಾದ್ಯವಾಗಿಲ್ಲ. ಸ್ವಾತಂತ್ರ ಬಂದು ಎಪ್ಪತ್ತೈದು ವರ್ಷ ಕಳೆದರೂ ಶಿಕ್ಷಣ ವಿಚಾರದಲ್ಲಿ ಭಾರತ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಶಿಕ್ಷಣವನ್ನು ಸುಧಾರಿಸಲು ಅನೇಕ ಪ್ರಯತ್ನಗಳನ್ನು ಮಾಡಿದರೂ ಉತ್ತಮ ಫಲಿತಾಂಶ ಇಲ್ಲದಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಣ ನೀಡುವಲ್ಲಿ ಖಾಸಗಿ ಸಂಸ್ಧೆಗಳು ಪಾತ್ರ ಇಡೀ ದೇಶದಲ್ಲಿಯೇ ಒಂದು ವಿಶಿಷ್ಟ ಮಾದರಿಯ ಹೆಸರು ಪಡೆದಿದೆ.  ನಮ್ಮ ಶೈಕ್ಷಣಿಕ ವ್ಯವಸ್ಧೆ ಪಠ್ಯ ಬೋಧನೆ ಹಾಗೂ ಪರೀಕ್ಷಾ ಕ್ರಮದಲ್ಲಿಯೂ ಇತರೆ ರಾಜ್ಯಗಳಿಗೆ ಮಾದರಿ ಎಂದು ಹೇಳಲಾಗಿದೆ. ನಮ್ಮ ಬದಲಾದ ಜಾಗತೀಕಮಟ್ಟಕೆ ತಕ್ಕಂತೆ ಶಿಕ್ಷಣವೂ ಒಂದು ವ್ಯಾಪಾರ ಹಾಗೂ ವ್ಯವಾಹಾರ ಉದ್ದಿಮೆಯಾಗಿ ನಾವು ಅರಿಯಬೇಕು.  ಖಾಸಗಿ ಶಾಲೆಯಲ್ಲಿ ನಾವು ಬ್ಯಾಂಕ್ ಕಂತಿನ ರೂಪದಲ್ಲಿ ಪಾವತಿಸುವ ಶಿಕ್ಷಣ ವ್ಯವಸ್ಧೆಯಾಗಿದೆ

          ರಾಜ್ಯದ ಶಿಕ್ಷಣದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡ ಪರಿಣಾಮವಾಗಿಯೇ ಇಂದಿನ ಎಲ್ಲಾ ಅವಾಂತರಗಳಿಗೆ ಕಾರಣವಾತು. ಬ್ಯಾಂಕಿನ ಕಂತಿನ ರೂಪದಲ್ಲಿ ನಮ್ಮ  ಮಕ್ಕಳಿಗೆ  ಶಿಕ್ಷಣವನ್ನು ಖಾಸಗಿ ಸಂಸ್ಥೆಗಳು ಪಡೆದುಕೊಳ್ಳುತ್ತಿರುವ ಪರಿಣಾಮವಾಗಿಯೇ ಇಂದು ಶಿಕ್ಷಣ ಉದ್ದೇಶವೇ  ಬುಡಮೇಲು ಆಗ ತೊಡಗಿದೆ. ಆಹಾರ, ಆರೋಗ್ಯ, ಶಿಕ್ಷಣ ಇವು ವ್ಯಕ್ತಿಯ ಮೂಲಭೂತ ಹಕ್ಕುಗಳಾಗುವ ಬದಲು ವ್ಯಾಪಾರೀಕರಣಗೊಳ್ಳುತ್ತಿವೆ ?  ನೀಡುತ್ತಿವೆ 

 

ಖಾಸಗಿ ಶಾಲೆಗಳ ಕಂತಿನ ಪಾವತಿ ಬೋದನೆ ಶಿಕ್ಷಣ ನಮಗೆ ಬೇಕೆ ?

“ನಮ್ಮ ಮಕ್ಕಳು ಜಗತ್ತನ್ನು ಬದಲಾಯಿಸಲು, ಉತ್ತಮ ಪ್ರಜೆಗಳಾಗಿ ಸದೃಢ ಸಮಾಜ ನಿರ್ಮಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವೇ ಶಿಕ್ಷಣ ”

ಜಯಭಾರತ ಜನನಿಯ ತನುಜಾತೆ ಎಂಬಂತಹ ನಾಡಿನಲ್ಲಿ ಐತಿಹಾಸಿಕ ,ಭೌಗೋಳಿಕ, ಆರ್ಥಿಕ ವೈಶಿಷ್ಟ್ಯಗಳುಂಟು, ಅನೇಕ ಬುಡಕಟ್ಟು ,ಜಾತಿ, ಮತ, ಸಂಪ್ರದಾಯ, ಇವುಗಳ ಸಮ್ಮಿಲನಗಳುಂಟು, ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ಮಾಧ್ಯಮ ಕನ್ನಡವೇ ಆಗಿರುವುದರಿಂದ  ಶಾಲೆಗಳಲ್ಲಿ  ಭಾಷಾ ಕಲಿಕೆ ಪೂರ್ಣ ಪ್ರಮಾಣದಲ್ಲಿರುವುದು ಹಾಗೂ ಅದರ ಮೇಲೆ ಹಿಡಿತ ಸಾಧಿಸುವುದು  ಮುಖ್ಯ.

ಭಾರತ ದೇಶವು ಶಿಕ್ಷಣದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿತ್ತು. ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಸುಸಂಸ್ಕೃತರಾಗಿದ್ದೆವು ಎಂಬದು ಇತಿಹಾಸ ಸಾರುತ್ತಿದೆ ಇದಕ್ಕೆ ಉದಾಹರಣೆ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳು ಅಂದಿನ ಕಾಲದಲ್ಲೇ ಶಿಕ್ಷಣಕ್ಕೆ ಮಹತ್ವ ನೀಡಿದ್ದೆವು. ಕ್ರಿ.ಶ. 5 ನೇ ಶತಮಾನದ ಅವಧಿಯಲ್ಲಿ ನಮ್ಮ ಭಾರತದ ವಿಶ್ವವಿದ್ಯಾನಿಲಯಗಳು ಪ್ರಪಂಚದಲ್ಲೇ ಕಲಿಕೆಗೆ ಅತ್ಯುತ್ತಮ ಎಂದು ಪಾಶ್ಚಿಮಾತ್ಯರಿಂದ ದಾಖಲಿಸಲ್ಲಟ್ಟಿತ್ತು, ಅದರೆ ಕೆಲವು ಸಾಂದರ್ಭಿಕವಾಗಿ ವಿದೇಶಿಗರು ಸಹ ನಮ್ಮ ಶೈಕ್ಷಣಿಕ ವ್ಯವಸ್ಧೆಯನ್ನು  ಪ್ರೋತ್ಸಾಹಿಸುತ್ತಿದ್ದರು.

ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಶಿಕ್ಷಣ ಪದ್ಧತಿ ಬದಲಾಣೆಯ ಮೂಲಕ ಕುಂಟುತ್ತಾ ಸಾಗುತ್ತಿದೆ. ನಮ್ಮ ಶಿಕ್ಷಣ ನಿರ್ಧಿಷ್ಟ ಗುರಿಗಳನ್ನು ಸಾಧಿಸುವಂತಿರಬೇಕು. ವಿದ್ಯಾರ್ಥಿಗಳ ಜ್ಞಾನವನ್ನು ಪರಿವರ್ತಿಸುವ, ಜೀವನ ಕೌಶಲ್ಯ ಮತ್ತು ಪಾತ್ರವನ್ನು ರೂಪಿಸುವ ಒಂದು ಸಾಧನವಾಗಬೇಕು. ಅದಕ್ಕೋಸ್ಕರ ನಮ್ಮ ಮಹಾತ್ಮ ಗಾಂಧಿಜೀಯವರು ‘’ Live as if you were to die tomorrow. Learn as if you were to live forever.” ಎಂದು ವಾಖ್ಯಾನಿಸಿದ್ದಾರೆ.  ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಖಾಸಗಿ ಸಂಸ್ಧೆಗಳು ಪಾತ್ರ ಒಂದು ವಿಶಿಷ್ಟ ಮಾದರಿ ಮೂಲಕ  ಹೆಸರು ಪಡೆದಿವೆ. ನಮ್ಮ ಶೈಕ್ಷಣಿಕ ವ್ಯವಸ್ಧೆ, ಪಠ್ಯ ಬೋಧನೆ ಹಾಗೂ ಪರೀಕ್ಷಾ ಕ್ರಮದಲ್ಲಿಯೂ ಇತರೆ ರಾಜ್ಯಗಳಿಗೆ ನಮ್ಮ ರಾಜ್ಯ ಮಾದರಿಯಾಗಿದೆ. ನಮ್ಮ ಬದಲಾದ ಜಾಗತಿಕ ಮಟ್ಟಕೆ ತಕ್ಕಂತೆ ಶಿಕ್ಷಣವು ಸಹ ಪ್ರಸ್ತುತ ವ್ಯಾಪಾರ, ವ್ಯವಹಾರಗಳ ರೀತಿ ಉದ್ಧಿಮೆ ಹಾಗೂ ಬ್ಯಾಂಕ್ ಗೆ ಕಂತಿನ ರೂಪದಲ್ಲಿ ಪಾವತಿಸುವಂತೆ ನಮ್ಮ ಶಿಕ್ಷಣವು ಸಹ ಮಾರ್ಪಟ್ಟಿದೆ.

ನಮ್ಮ ರಾಜ್ಯವು ಶಿಕ್ಷಣದಲ್ಲಿ ಅನುದಾನಿತ ಹಾಗೂ ಅನುದಾನರಹಿತ ಎಂಬ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡ ಪರಿಣಾಮವಾಗಿಯೇ ಇಂದಿನ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಶಿಕ್ಷಣ ಇಂದು ಕಂತಿನ ರೂಪದಲ್ಲಿ ಪಾವತಿಸಿಕೊಂಡು ನಮ್ಮ ಮಕ್ಕಳಿಗೆ  ಬೋದನೆ ನೀಡುತ್ತಿವೆ ಇದರ ಪರಿಣಾಮವಾಗಿಯೇ ಇಂದು ಶಿಕ್ಷಣದ ಉದ್ದೇಶವೇ  ಬುಡಮೇಲು ಆಗ ತೊಡಗಿದೆ.

ಪ್ರಸ್ತುತ ರಾಜ್ಯದಲ್ಲಿ ಖಾಸಗಿ ಶಾಲೆಗಳು ಶುಲ್ಕವನ್ನು ಶೇ.1೦-15 ರಷ್ಟು ಹೆಚ್ಚಳವಾಗಿಸಿ, ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿವೆ. ಕೆಲವು ಖಾಸಗಿ ಶಾಲೆಗಳು ಪೋಷಕರಿಗೆ ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಶುಲ್ಕ  ಪ್ರಮಾಣ ಹೆಚ್ಚಾಗಿದೆ ಎಂಬ ಮಾಹಿತಿ ನೀಡಿವೆ. ಖಾಸಗಿ ಶಾಲೆಗಳು ಪ್ರತಿ ವರ್ಷ ಶಾಲಾ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ, ಅನಗತ್ಯ ಪಠ್ಯ ಚಟುವಟಿಗೆ, ವಾಹನ ಶುಲ್ಕ ಹೆಚ್ಚಾಗಿರುವ ಕಾರಣ ಶಾಲಾ ಶುಲ್ಕ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ.  ಕೆಲವು ಖಾಸಗಿ ಶಾಲಾ ಸಂಘಟನೆಗಳು ತಮ್ಮ ಬೆಡಿಕೆಗಳನ್ನು ನ್ಯಾಯಾಲಯದ ಮೂಲಕ ದಾವೆ ಹೂಡಿ ಬಗೆಹರಿಸಿಕೊಳ್ಳುತ್ತಿವೆ ಇಷ್ಟಾದರೂ ಸಹ ಮತ್ತೊಂದೆಡೆ ರಾಜ್ಯದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ.

ಖಾಸಗಿ ಶಾಲೆಗಳು ತಮ್ಮ ಮೂಲ ಸೌಲಭ್ಯಗಳಿಗೆ ಅನುಗುಣವಾಗಿ ಶೇ.10ರಿಂದ 15ರಷ್ಟು ಶುಲ್ಕ ಹೆಚ್ಚಿಸಬಹುದು ಎಂಬ ಮಾಹಿತಿ ಆಯಾ ಶಾಲೆಗಳ ನಿರ್ಧಾರಕ್ಕೆ ಬಿಟ್ಟಿದ್ದು ಅದರೆ ಶುಲ್ಕ  ಹೆಚ್ಚಳ ಮಾಡಿದರೆ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಕಾನೂನು ರೀತಿ ಪರಿಶೀಲನೆ ನಡೆಸಿ ಕ್ರಮ ವಹಿಸಬಹುದು. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳು ಸಾಕಷ್ಟಿವೆ. ಮಗುವಿನ ಶಿಕ್ಷಣ ಪ್ರಾರಂಭವಾಗುವುದು ಮನೆಯಲ್ಲಿ ಆನಂತರ ಶಾಲೆಯಲ್ಲಿ. ನಮ್ಮ ದೇಶದಲ್ಲಿ ಶಿಕ್ಷಣ ಖಾಸಗೀಕರಣಗೊಂಡಿದೆ. ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಮತ್ತು ಇತರೆ ಸೌಲಭ್ಯಗಳನ್ನು ನೀಡುತ್ತವೆ ಎಂಬ ಮಾತು ಸುಳ್ಳು ಅದರೆ ಖಾಸಗಿ ಶಾಲೆಗಳು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ತುಂಬಾ ದುಬಾರಿಯಾಗಿವೆ.

 ನಮ್ಮ ದೇಶದ ಶಿಕ್ಷಣ ವ್ಯವಸ್ಧೆಯಲ್ಲಿ 14 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದು ಕಡ್ಡಾಯ ಗೊಳಿಸಿದೆ ಆದರೆ ಬಡ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುವ ಮೂಲಕ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಇರುವಂತಹ ನಮ್ಮ ಪ್ರಾಥಮಿಕ ಶಿಕ್ಷಣ ಅನೇಕ ಸಮಸ್ಯೆಗಳಿಂದ ಕೊಡಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರೇ ಇರುವುದಿಲ್ಲ. ಇದರಿಂದ ಮಕ್ಕಳು ಶಾಲೆ ಬಿಟ್ಟು ಅನಕ್ಷರಸ್ಥರಾಗುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಸದೃಢವಾಗಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಇನ್ನೂ ಕ್ರಮ ಕೈಗೊಂಡಿಲ್ಲ ?

Education in the most powerful weapon which you can use to change the world.” Nelson Mandela. ಹೇಳುವ ಮೂಲಕ ಶಿಕ್ಷಣವು ನಮಗೆ ಜ್ಞಾನವನ್ನು ಉಂಟುಮಾಡಿ, ವಿದ್ಯಾರ್ಥಿಗಳ ಕನಸುಗಳನ್ನು ಬೆಳೆಸುವ ಮತ್ತು ಜವಾಬ್ದಾರಿಯುತ ಜೀವನವನ್ನು ಮೂಡಿಸುವ ಸಾಮರ್ಥ್ಯವನ್ನು ಪ್ರಸ್ತುತ ಪಡಿಸುತ್ತದೆ. ಪ್ರಸ್ತುತ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿಲ್ಲ ಎಂಬದು ಕೆಲವು ಶಿಕ್ಷಣ ತಜ್ಞರ ವಾದ.  ನಮ್ಮ ಶಿಕ್ಷಣವು ಕನಿಷ್ಠ ಸಮಯದಲ್ಲಿ ಗರಿಷ್ಟ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಾದ್ಯವಾಗಿಲ್ಲ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಸಹ ಶಿಕ್ಷಣ ವಿಚಾರದಲ್ಲಿ ಭಾರತ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಶಿಕ್ಷಣವನ್ನು ಸುಧಾರಿಸಲು ಅನೇಕ ಪ್ರಯತ್ನಗಳು ಮಾಡಿದರೂ ಉತ್ತಮ ಫಲಿತಾಂಶ ಇಲ್ಲದಂತಾಗಿದೆ.

ನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಹಲವಾರು ಸಮಸ್ಯೆಗಳಿವೆ, ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕಳಪೆ ಮೂಲ ಸೌಕರ್ಯ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ವಾತಾವರಣ ಕಡಿಮೆ, ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಮೂಲ ಸೌಕರ್ಯಗಳೇ ಇಲ್ಲ, ಮಕ್ಕಳಿಗೆ ಉಪಯೋಗಿಸಲು ಸರಿಯಾದ ಶೌಚಾಲಯ, ಕುಡಿಯುವ ನೀರು ಮತ್ತು ಅಚ್ಚುಕಟ್ಟಾದ ತರಗತಿ ಕೊಠಡಿಗಳಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗಿರುವ ಕಾರಣ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸುತ್ತಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಶಾಲೆ ಬಿಡುವ ಪ್ರಮಾಣ ಹೆಚ್ಚಾಗಿದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇನ್ನೂ ಸಾದ್ಯವಾಗಿಲ್ಲ ಆದರೂ ಶಿಕ್ಷಣ ವ್ಯಾಪಾರೀಕರಣಕ್ಕೆ ಇನ್ನೂ ಕಡಿವಾಣ ಹಾಕಲು ಯಾವುದೇ ಸರ್ಕಾರದಿಂದ ಸಾದ್ಯವಾಗಿಲ್ಲ.

ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಶಿಕ್ಷಣ ಅವ್ಯವಸ್ಥೆಯಿಂದ ಕೂಡಿದೆ. ಇನ್ನೊಂದು ಸಮಸ್ಯೆ ಎಂದರೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಹಣದ ಕೊರತೆ, ಶಿಕ್ಷಣಕ್ಕೆ ಮೀಸಲಿಟ್ಟ ಹಣವು ಅವಶ್ಯಕತೆಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಶಿಕ್ಷಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವುದು ಅತ್ಯಗತ್ಯವಾದರೂ ಕೆಲವು ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವುದು ತುಂಬಾ ಕಷ್ಟಕರವಾಗಿದೆ. ಭಾರತದಲ್ಲಿ ೧೪ ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಿಕ್ಷಣವನ್ನು ಮೂರು ಹಂತಗಳಲ್ಲಿ ನಿರ್ವಹಿಸಲಾಗುತ್ತದೆ. ಭಾರತವು ೧೪ ವರ್ಷ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತಿದೆ.

ಭಾರತದಲ್ಲಿ ಹಲವಾರು ಪ್ರಯತ್ನಗಳ ಹೊರತಾಗಿಯೂ, ಶಿಕ್ಷಣ ವ್ಯವಸ್ಥೆಯು ಇನ್ನೂ ಕೆಳಮಟ್ಟದಲ್ಲಿಯೇ ಉಳಿದಿದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಅಭಿವೃದ್ಧಿ ಕೊರತೆಗೆ ಹಲವು ಕಾರಣಗಳಿವೆ. ಭಾರತದಲ್ಲಿ ಶಿಕ್ಷಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಹಣದ ಕೊರತೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಕಡಿಮೆ ಅನುದಾನದಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಈಡೇರುತ್ತಿಲ್ಲ. ಮೂಲಸೌಕರ್ಯಗಳು ಕಳಪೆಯಾಗಿರುವುದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಪಾಠ ಕಲಿಯಲು ಸಾಧ್ಯವಾಗುತ್ತಿಲ್ಲ. ಅನೇಕ ಕಾರಣಗಳಿಂದಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದರಿಂದ ನಮ್ಮ ದೇಶದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚುತ್ತಿದೆ, ಅನೇಕ ಉಪಕ್ರಮಗಳನ್ನು ತೆಗೆದುಕೊಂಡರೂ ನಾವು ನೂರಕ್ಕೆ ನೂರು ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಮುಂದುವರಿದ ದೇಶಗಳು ಶೇ.೧೦೦% ಸಾಕ್ಷರವಾಗಿವೆ ಮತ್ತು ಅದು ಅವರ ಯಶಸ್ಸಿನ ರಹಸ್ಯವಾಗಿದೆ. ನಮ್ಮ ಸರ್ಕಾರವು ಎಲ್ಲಾ ಮಕ್ಕಳಿಗೆ ೧೮ ವರ್ಷದವರೆಗೆ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಮೊದಲಿನ ೧೪ ವರ್ಷವನ್ನು ಹೆಚ್ಚಿಸಬೇಕು. ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಡೆಯಬೇಕು.

ಶುಲ್ಕಕ್ಕೆ ಕೊಡುವ ಗಮನವನ್ನು ಮಕ್ಕಳ ಸುರಕ್ಷತೆಗೆ ಏಕೆ ಕೊಡುತ್ತಿಲ್ಲ ?

 ಮುಂದುರೆದು ಖಾಸಗಿ ಶಾಲೆಗಳು ವಾಹನ ಶುಲ್ಕಕ್ಕೆ ಕೊಡುವ ಗಮನವನ್ನು ಸುರಕ್ಷತೆಗೇಕೆ ಕೊಡುವುದಿಲ್ಲ. ಇದರಿಂದ ಹಲವು ನಿಯಮಗಳನ್ನು ಗಾಳಿಗೆ ತೂರಲಾಗಿದೆ.  ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸರಕಾರಗಳು ನಿರ್ಧಿಷ್ಟ ಕ್ರಮಕ್ಕೆ ಮುಂದಾಗಿಲ್ಲ ಹಾಗೆಯೇ ಖಾಸಗಿ ಶಾಲೆಗಳು ತಮ್ಮ ಶಾಲಾ ಶುಲ್ಕ ವಿವರಗಳನ್ನು ಬಹಿರಂಗವಾಗಿ ಪ್ರದರ್ಶಿಸಬೇಕು ಎಂಬುದು ಮಾನದಂಡವಾದರೂ ಯಾವುದೇ ಖಾಸಗಿ ಶಾಲೆಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಇಂತಹ ಮಾನದಂಡಗಳಿಗೆ ಮತ್ತು ಆದೇಶಗಳಿಗೆ ಖಾಸಗಿ ಶಾಲೆಗಳು ಬೆಲೆ ಕೊಡುತ್ತಿಲ್ಲ. ಕೆಲವು ಖಾಸಗಿ ಶಾಲೆಗಳ ವಾಹನ ಸುರಕ್ಷತೆ ಹಾಗೂ ಚಾಲಕ ಮತ್ತು ಚಾಲನೆಗೆ ಸಂಬಂಧಿಸಿದಂತೆ ಇರುವ ಕಾಯಿದೆಗಳ ಜಾರಿಗೆ ನಿಗಾ ವಹಿಸಲು ಪ್ರಯತ್ತಿಸುತ್ತಿಲ್ಲ. ಶಾಲೆಗಳಲ್ಲಿ  ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಖಾಸಗಿ ವಾಹನಗಳ ವಾರಸುದಾರರನ್ನೊಳಗೊಂಡ ಶಾಲಾ ವಾಹನ ಸುರಕ್ಷತಾ ಸಮಿತಿ ರಚಿಸಬೇಕು ಎಂಬುದು ಸರಕಾರಿ ಅಧಿಸೂಚನೆ  ಇದ್ದರೂ ಸಹ  ಖಾಸಗಿ ಶಾಲೆಗಳು ಪಾಲಿಸುತ್ತಿಲ್ಲ.

ಒಟ್ಟಾರೆ ನಮ್ಮ ಜನ ಪ್ರತಿನಿಧಿಗಳ, ಅಧಿಕಾರಿಗಳ ಮಕ್ಕಳು ಕೂಡ ಖಾಸಗಿ ಶಾಲೆಗೆ ಹೋಗುವುದನ್ನು ಬಿಟ್ಟು ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ಓದುವ ನಿಯಮ ಜಾರಿಯಾಗಿ ರಾಜ್ಯದಲ್ಲಿ ಆರ್‌ಟಿಇ ಮೂಲಕ ಖಾಸಗಿ ಶಾಲೆಗಳನ್ನು ಉದ್ಧರಿಸುತ್ತಿರುವ ಕಾನೂನನ್ನು ಹಿಂಪಡೆದಾಗ ಮಾತ್ರ ಸರ್ಕಾರಿ ಶಾಲೆಗಳು ತನ್ನಿಂದ ತಾನೇ ಸುಧಾರಿಸುತ್ತವೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವವರಿಗೆ ಮಾತ್ರ ಸಾಲ, ಸಬ್ಸಿಡಿ, ಪರಿಹಾರ, ಅನುದಾನ, ಉದ್ಯೋಗ  ಇತ್ಯಾದಿ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಸಿಗುವಂತಾಗಬೇಕು.  

ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಕಲ್ಪಿಸುವ ನಿರ್ಧಾರ ಕೈಕೊಂಡರೆ ಸರ್ಕಾರಿ ಶಾಲೆಗಳಲ್ಲಿ ಅತಿಹೆಚ್ಚು ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತದೆ. ಇಂತಹ ಕೆಲಸ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಸಾಧ್ಯವಾಗಬೇಕು ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇಂಥದೊಂದು ದೃಢ ನಿರ್ಧಾರ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವಂತ ಜವಾಬ್ದಾರಿ ಎಲ್ಲಾ ನಾಗರೀಕದ್ದರಾಗಿರಬೇಕು..

ನಮ್ಮ ಶಿಕ್ಷಣ ವ್ಯವಸ್ಥೆಯು ಇಂದು ಸಂಕೀರ್ಣ, ವಿಕಸನಗೊಳ್ಳುತ್ತಿರುವ ಕಲಿಕಾ ವಿಷಯಗಳ ಮೇಲೆ ಒತ್ತು ನೀಡುವುದು ಮತ್ತು ಗ್ರಾಮೀಣ-ನಗರ ಶಿಕ್ಷಣ ವಿಭಜನೆ, ಪರೀಕ್ಷೆಯ ಒತ್ತಡದಂತಹ ಸವಾಲುಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿದೆ ಆದಾಗ್ಯೂ ಕಾಲಕಾಲಕ್ಕೆ ತಕ್ಕಂತೆ ನಡೆಯುತ್ತಿರುವ ಸುಧಾರಣೆಗಳು ಮತ್ತು ಸಮಗ್ರ ಶಿಕ್ಷಣದ ಮೇಲೆ ಕೇಂದ್ರೀಕರಿಸುವುದರೊಂದಿಗೆ, ರಾಷ್ಟ್ರದ ಬೆಳವಣಿಗೆಗೆ, ಕೊಡುಗೆ ನೀಡುವ ಸುಸಂಬದ್ಧ ವಿದ್ಯಾರ್ಥಿಗಳನ್ನು ಪೋಷಿಸುವ ನಿಟ್ಟಿನಲ್ಲಿ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಣ ಅಗತ್ಯ.

ಪ್ರಜಾ ಸಮಯ ನ್ಯೂಸ್ ಇತರೆ ಪತ್ರಿಕೆಗಳಿಗಿಂತ ವಿಶಿಷ್ಟ, ವಿಭಿನ್ನ ದೃಷ್ಟಿಕೋನವನ್ನು ಹೊಂದಿದೆ. ಪತ್ರಿಕೆ ವಸ್ತುನಿಷ್ಠ, ತನಿಖಾ ವರದಿಯ ಜೊತೆಗೆ, ಶಿಕ್ಷಣ, ಕೃಷಿ, ಉದ್ಯೋಗ, ಕ್ರೀಡೆ, ಕಲೆ ಮತ್ತು ಸಾಹಿತ್ಯ ಹಾಗೂ ರಾಜಕೀಯ ವಿಶ್ಲೇಃಷಣೆ, ವಿಶೇಷ ಅಂಕಣ ಬರಹಗಳು, ಯುವ ಜನತೆ, ವಿದ್ಯಾರ್ಥಿಗಳಿಗೆ ಪ್ರೇರಾಣಾತ್ಮಕ ಲೇಖನಗಳ ಜೊತೆಗೆ ಜೀವನ ಕೌಶಲ್ಯ, ನಾಡು-ನುಡಿ, ಅಂಕಿ ಅಂಶವುಳ ವರದಿಯನ್ನು ನೇರ ವಾಗಿ ಜನರ ಮುಂದಿಡುವ ಗುರಿ. ಪತ್ರಿಕೆಯು ನೇರನೋಟವುಳ್ಳ ಪರಿಣಾಮಾತ್ಮಕ, ಕ್ರಿಯಾಶೀಲತೆಯ ದಿಕ್ಕಿನ ಕಡೆ ಹೆಚ್ಚೆ ಸಾಗುತ್ತಾ, ನಮ್ಮನ್ನು ಆಳುವ ಸರ್ಕಾರಗಳು ಎಚ್ಚರ ತಪ್ಪಿದಾಗ ಸರ್ಕಾರದ ತಪ್ಪುಗಳನ್ನು ನೇರ- ನಿಷ್ಟುರವಾಗಿ ಪ್ರಾಮಾಣಿಕ ವರದಿಯನ್ನು ನೀಡುವ, ಸರ್ಕಾರಗಳನ್ನು ಎಚ್ಚರಿಸುವ ಮೂಲಕ, ಅಧಿಕಾರಿಗಳಿಗೆ ಛಾಟಿ ಬೀಸಲು ಹಿಂಜರಿಯುವುದಿಲ್ಲ. ಭ್ರಷ್ಟರ ಬೆನ್ನತ್ತಿ , ಸರ್ಕಾರದ ಯಾವುದೇ ಸರಿ-ತಪ್ಪುಗಳನ್ನು ಜನರೆದುರು ಪ್ರಮಾಣಿಕವಾಗಿ ಸಾದರಪಡಿಸುವ ಎದೆಗಾರಿಕೆಯೇ ನಮ್ಮ ಮೂಲ ಮಂತ್ರ. ರಾಜ್ಯ /ದೇಶ ಪ್ರೇಮದ ವಿಷಯಗಳಲ್ಲಿ ನೈಜ, ದಾಖಲೆಗಳ, ಸತ್ಯಾಂಶವುಳ್ಳ ತನಿಖಾ ವರದಿಗಳನ್ನು ಪ್ರಕಟಿಸುವ ಪ್ರಯತ್ನ. ಈ ವಿಷಯದಲ್ಲಿ ಯಾರ ಹಂಗಿಗೂ-ದಮ್ಮಿಗೂ, ದಲ್ಲಾಳಿಗಳ ಜೊತೆ ರಾಜಿಯಾಗದೆ ಪ್ರಾಮಾಣಿಕತೆಯಿಂದ ಜನತೆಗೆ ತಾಜ ಸುದ್ಧಿ, ನೈಜ, ವಾಸ್ತವ ಸುದ್ದಿಗಳ ವಿಡಿಯೋ ವರದಿಗಳನ್ನು ಬಿತ್ತರಿಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ

 

‘ಪ್ರಜೆಗಳಿಂದ ಜಾತ್ಯಾತೀತವಾದ ಮಾಜವನ್ನು ರಳಿಸುವ ತ್ನ’


‘ಪ್ರಜಾ ಸಮಯ’ ಮಾಸ ಪತ್ರಿಕೆ ಇತರೆ ಮಾಸ ಪತ್ರಿಕೆಗಳಿಗಿಂತ ವಿಶಿಷ್ಟ, ವಿಭಿನ್ನ, ವಸ್ತುನಿಷ್ಠ ವಿಷಯವನ್ನು ಒಳಗೊಂಡ, ವಾಸ್ತವ ಸ್ಥಿತಿಗತಿಯ ಮುಖ್ಯಾಂಶಗಳ ಶಿಕ್ಷಣ, ಕೃಷಿ, ಉದ್ಯೋಗ, ಕ್ರೀಡೆ, ಕಲೆ ಮತ್ತು ಸಾಹಿತ್ಯ, ರಾಜಕೀಯ ವಿಶ್ಲೇಷಣೆ, ವಿಶೇಷ ಲೇಖಕರ ಅಂಕಣ ಬರಹಗಳು, ಯುವ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಲೇಖನ, ಜೀವನ ಕೌಶಲ್ಯ, ನಾಡು-ನುಡಿ, ವಸ್ತು ನಿಷ್ಠ ಅಂಕಿ ಅಂಶವುಳ್ಳ ತನಿಖಾ ವರದಿ, ನುರಿತ ಆರೋಗ್ಯ ತಜ್ಞರಿಂದ ಆರೋಗ್ಯಕ್ಕೆ ಸಂಬಂಧಿಸಿದ ಲೇಖನ, ಸಂವಾದ ಕಾರ್ಯ ಕ್ರಮ, ರಾಜಕೀಯ ಸಂದರ್ಶನ ವರದಿ, ದೇಶಿಯ ಕಲೆ, ಸಾಹಿತ್ಯ, ಯೋಗ, ದೇಶಿಯ ಶೈಲಿಯ ಉಡುಗೆ-ತೊಡುಗೆ, ಕ್ರೀಡೆ, ಸಿನಿರಂಜನೆ, ಹಾಸ್ಯ, ಮಕ್ಕಳ ಮನೋಭಿವೃದ್ಧಿಗಾಗಿ ಬರಹಗಳು, ಸಾಧು-ಸಂತರ ಸಾಧನೆಗಳು, ಸಾಹಿತಿಗಳು, ಚಿಂತಕರು, ದಾರ್ಶನಿಕರು, ವಿಮರ್ಶಕರು, ವಿಚಾರವಂತರು, ಕವಿಗಳು, ಉಪನ್ಯಾಸಕರ ಚಿಂತನ-ಮಂಥನ ಮಾಲೆಯನ್ನು ಓದುಗರ ಮನಮುಟ್ಟುವಂತೆ ತಲುಪಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನ..


ಪ್ರಜಾ ಸಮಯ ನೇರ ನೋಟವುಳ್ಳ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಸಕಾರಾತ್ಮಕ, ಪರಿಣಾಮಾತ್ಮಕ, ವಿಚಾರಶೀಲ ಮತ್ತು ಕ್ರಿಯಾಶೀಲತೆಯ ದಿಕ್ಕಿನ ಹೆಜ್ಜೆ ಹಾಕುತ್ತಾ ಸಾಗುತ್ತಿದೆ, ಸಮಾಜದಲ್ಲಿ ಜ್ಯಾತ್ಯಾತೀತ ಆಧಾರದ ಮೇಲೆ, ನಮ್ಮನಾಳುವ ಸರ್ಕಾರದ ಸರಿ-ತಪ್ಪುಗಳನ್ನು ಸಮಾಜಕ್ಕೆ ತೋರಿಸುವ ಎದೆಗಾರಿಕೆಯೆ ನಮ್ಮ ಮೂಲ ಮಂತ್ರ, ಭ್ರಷ್ಟರ ಬೆನ್ನತ್ತಿ ಶಕ್ತಿಶಾಲಿ, ಸದೃಢ ಯವಕರನ್ನು ರಾಜ್ಯದ/ದೇಶದ ಭಾವನಾತ್ಮಕ, ಕ್ರಿಯಾತ್ಮಕ ಚಿಂತನೆಯುಳ್ಳ ತನಿಖಾ ವರದಿಯ ಮೂಲಕ ನಾಡಿನ ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಬದುಕು-ಬರಹ ನಿಂತಿದೆ.

ನೈಜತೆವುಳ್ಳ,ಆಧಾರ ಸಹಿತ ವರದಿಗಳನ್ನು ಪ್ರಕಟಿಸುವ ಪ್ರಯತ್ನದಲ್ಲಿ ಸದೃಢ ಸಮಾಜ ನಿರ್ಮಿಸಲು ಯಾರ ಹಂಗಿಗೂ ದಮ್ಮಿಗೂ ದಲ್ಲಾಳಿಗಳ ಜೊತೆ ರಾಜಿಯಾಗದೆ ಸಾಗುತ್ತಾ, ಸಮಸ್ತ ನಾಡಿನ ಬಂಧುಗಳಿಗೆ ತಾಜ ಸುದ್ದಿಗಳನ್ನು ತಲುಪಿಸುವ ಸಣ್ಣ ಪ್ರಯತ್ನದಲ್ಲಿ ನಮ್ಮ ನೇರ ನಡೆಯ ದಿಟ್ಟ ಪಡೆಯ, ಹೊಸ ಹೆಜ್ಜೆ ಕಡೆ ಮುನ್ನುಡಿ. ರಾಜ್ಯದ ನಿಮ್ಮಂತಹ ನೂರಾರು ಸಾವಿರಾರು ಹಿರಿಯ, ಕಿರಿಯ ಸಾಹಿತಿಗಳು ಹಾಗೂ ಯುವಕ ಯುವತಿಯರ ಬರಹಗಳಿಗೆ ಸ್ವಾಗತಿಸುತ್ತೇವೆ. ಪ್ರಸ್ತುತವಾಗಿ ಜನತೆಗೆ ಬೇಕಾಗಿರುವ ನೈಜ, ಸತ್ಯ ಸಾರಾಂಶವುಳ್ಳ ವಿಡಿಯೋ ವರದಿಗಳನ್ನು ನಿಮ್ಮಗೆ ತಲುಪಿಸುವ ಮೂಲಕ ಪ್ರಜಾ ಸಮಯ ನಿರಂತರ ಪ್ರಯತ್ನದ ಕಡೆ ಸಾಗಲು ಬಯಸುತ್ತಾ.

ಸಂಪಾದಕರು

ಎಸ್.ಪಟೇಲ್

 

 

You cannot copy content of this page