ಸಮಾಜದ ಬದಲಾವಣೆ ಮತ್ತು ಸಾಂಸ್ಕೃತಿಕ ಘರ್ಷಣೆಗಳು

ಕಾಲಕಾಲಕ್ಕೆ ತಕ್ಕಂತೆ ನಾವು ಬದಲಾಗುತ್ತಿದ್ದೇವೆ. ನಮ್ಮ ಜೊತೆ ಜೊತೆ ರೂಢಿ, ಸಂಪ್ರದಾಯ, ಆಚಾರ, ವಿಚಾರ, ಬದಲಾಗುತ್ತಿವೆ. ಸಮಾಜದಲ್ಲಿ ಪರ-ವಿರೋಧ ವಾದಗಳು ಕಾಣುತ್ತಲೇ ಇರುತ್ತೇವೆ. ಇತ್ತೀಚಿ ದಿನಗಳಲ್ಲಿ ದೇವಾಲಯಗಳ ವಿಚಾರ ಹಾಗೂ ದೇವಾಲಯಗಳಲ್ಲಿ ಹತ್ಯಾಚಾರ ನಡೆಸಿದ್ದಾರೆ ಎಂಬ ವಿಚಾರವಾಗಿ ದೇಶಾದ್ಯಂತ ಚರ್ಚೆಯ ವಿಷಯವಾಗಿತ್ತು. ಒಂದು ಪ್ರತಿಷ್ಠಿತ ದೇವಾಲಯಕ್ಕೆ ಅಯಾಯ ದರ್ಮಿಯರ ಮಾನದಂಡಗಳು ಆಯಾಯ ಐತಿಹಾಸಿಕ ಪವಾಡಗಳ ಮೇಲೆ ನಿಂತಿದೆ ಎಂಬುದು ಆ ಭಕ್ತರ ವಾದ.
ರಾಜ್ಯದಲ್ಲಿ ದಿನಕಳೆದಂತೆ ಜಾತಿ-ಜಾತಿ, ಧರ್ಮ-ಧರ್ಮಗಳ ನಡೆವೆ ಹೋರಾಟ ಎಂಬ ಅಸ್ತ್ರದಿಂದ ಜನರನ್ನು ಸಂಘಟಿಸಿ ಸಾರ್ಥಕ ಬದುಕು ನಾಶವಾಗುತ್ತಿದೆ. ಸಮಾಜದ ಬಹು ಸಂಖ್ಯೆಯ ಜನರ ಭಾವನೆಗೆ, ನಂಬಿಕೆ, ಭಕ್ತಿ, ಶ್ರದ್ಧೆಗಳ ಬುಡ ಅಲುಗಾಡಿಸುವ ಪ್ರಯತ್ನ ನಡೆಯುತ್ತಿದೆ. ಭಾರತ ಬಹು ಸಂಸ್ಕೃತಿಯ ದೇಶ. ಇಲ್ಲಿ ಯಾವುದೇ ವಿಚಾರವನ್ನು, ನಂಬಿಕೆಯನ್ನು ಅನುಸರಿಸುವ ಜನರೆ ಜಾಸ್ತಿ. ಹಾಗೆ ವಿರೋಧಿಸುವವರೂ ಅಷ್ಟೇ ಸಂಖ್ಯೆಯಲ್ಲಿದ್ದಾರೆ ಅದಕ್ಕೆ ಕಾಲ, ಭಾಷೆ, ಪ್ರದೇಶಗಳ ಭೇದವೂ ಇಲ್ಲ. ಹಾಗೆ ನೋಡಿದರೆ ನಾವು ಆಸ್ತಿಕ ರಷ್ಟೇ ನಾಸ್ತಿಕರೂ ಸಮ ಎಂಬ ವಾದವನ್ನೂ ಒಪ್ಪಿಕೊಂಡಿರುವ ವಿಶಾಲ ದೇಶ ನಮ್ಮದು. ಇಂದಿನ ಯುವ ಜಾನಾಂಗಕ್ಕೆ ಎಲ್ಲಾವು ಸುಲಭವಾಗಿ ದಕ್ಕಿಸಿಕೊಳ್ಳಬೇಕು ಎನ್ನುವ ಆಲೋಚನೆ ಹೆಚ್ಚುತ್ತಿದೆ. ಮಾನಸಿಕ ಕ್ರೌರ್ಯ, ದೈಹಿಕ ಹಿಂಸೆ, ಮಾನಸಿಕ ಹಿಂಸೆ ಕಾಣುವುದಿಲ್ಲ ಹೀಗೆಯೇ ಸೂಜಿಯಿಂದ ಚುಚ್ಚುವುದೂ ಕ್ರೌರ್ಯದ ಮೊದಲ ಹೆಜ್ಜೆ ನಂತರ ಅದರ ಮುಂದುವರಿದ ಭಾಗ ಕೊಲೆಗಿಲೆ ಕಾಡತೊಡಗುತ್ತೆ.
ರಾಜ್ಯದಲ್ಲಿ ನಿರಂತರ ಏನೆಲ್ಲಾ ಘಟನೆಗಳು ಕಾಣುತ್ತಿದ್ದೇವೆ. ಧರ್ಮದ ಕಲಹ, ಜಾತಿ ಕಲಹ, ಕಳೆಪೆ ಔಷದಿಗಳ ಬಳಕೆ, ಕಳಪೆ ಕಾಮಗಾರಿ, ಸರ್ಕಾರಿ ಆಸ್ತಿ ಕಬಳಿಕೆ, ಸರ್ಕಾರದ ವಿವಿಧ ಯೋಜನೆಗಳ ಅನುದಾನ ದುರುಪಯೋಗ, ಕಲಬೆರೆಕೆ ಆಹಾರ ಪದಾರ್ಧ, ಕಲುಷಿತ ಕುಡಿಯುವ ನೀರು, ರಾಜ್ಯ ರಾಜ್ಯಗಳ ನಡುವೆ ಸಂಘರ್ಷ, ಮಾನವ ಬಾಂಬ್ಗಳ ಅಟ್ಟಹಾಸ, ಪರಾಂಪಾರಿಕ ಸತ್ಯವನ್ನು ಒಪ್ಪಿಕೊಳ್ಳದ ಮೂಲಭೂತವಾದಿಗಳು, ಬೌದ್ಧಿಕ ಭಯೋತ್ಪಾದಕತೆ, ಕೋಮುವಾದ, ಭಯೋತ್ಪಾದಕತೆ, ಉಗ್ರವಾದ, ಯುದ್ಧ, ವಿಪತ್ತುಗಳು ವಿಚಾರಗಳನ್ನು ಚರ್ಚಿಸುವ ಬದಲು ಹತ್ತಿಕ್ಕುವ ಆಕ್ರಮಣಶೀಲ ಪ್ರವೃತ್ತಿ ಸಮಾಜಕ್ಕೆ ಮಾರಕ ಎಂದು ಹೇಳಬಹುದು.

ಸಂಪ್ರದಾಯ ಮತ್ತು ಆಧುನಿಕತೆ ಸಂಘರ್ಷ: ಸಮಾಜದಲ್ಲಿ ಬದಲಾವಣೆ ಅನಿವಾರ್ಯ, ಆದರೆ ಅದರ ಜೊತೆ ಸಂಪ್ರದಾಯಗಳು ಮತ್ತು ಆಚಾರ-ವಿಚಾರಗಳ ಪರ-ವಿರೋಧ ವಾದಗಳು.
ಧರ್ಮ ಮತ್ತು ಜಾತಿ ಕಲಹ: ಧಾರ್ಮಿಕ ಸ್ಥಳಗಳ ಬಗ್ಗೆ ನಡೆಯುತ್ತಿರುವ ವಿವಾದಗಳು ಮತ್ತು ರಾಜಕೀಯ ಲಾಭಕ್ಕಾಗಿ ಜಾತಿ, ಧರ್ಮಗಳ ನಡುವೆ ಉಂಟಾಗುತ್ತಿರುವ ಹೋರಾಟಗಳು, ಸಾವು ನೋವು.
ಸಾರ್ವಜನಿಕ ಸಮಸ್ಯೆಗಳು : ಕಳಪೆ ಗುಣಮಟ್ಟದ ವಸ್ತುಗಳು, ಭ್ರಷ್ಟಾಚಾರ, ಮಾನಸಿಕ ಮತ್ತು ದೈಹಿಕ ಹಿಂಸೆಗಳು, ಮತ್ತು ಆಂತರೀಕ ಭಯೋತ್ಪಾದ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕಡಿಮೆ ಪ್ರಯತ್ನ.
ಸಂಪ್ರದಾಯದ ಹಿಂದಿನ ತತ್ವ: ದೇವಾಲಯಗಳ ನಿಯಮ, ಮಡಿ-ಮೈಲಿಗೆ, ಇತಿಹಾಸದ ಹಿಂದಿರುವ ಕಾರಣಗಳು ವ್ಯಕ್ತಿಗತವಾಗಿ ಹಾನಿಕಾರಕ, ಸಾರ್ವತ್ರಿಕ ಶಿಸ್ತಿನ ಭಾಗ ಎಂಬ ವಾದ.
ಭಾರತೀಯರ ಮನೋಭಾವ: ಭಾರತೀಯರು ಯಾವುದೇ ವಿಚಾರವನ್ನು ವಿರೋಧಿಸುವ ಮನೋಭಾವ ಇಟ್ಟುಕೊಂಡಿಲ್ಲ, ಆದರೆ ಆಧುನಿಕ ಬದಲಾವಣೆಗೆ ಹೊಂದಿಕೊಳ್ಳುತ್ತಿದ್ದಾರೆ ಎಂಬುದು.
ನಮ್ಮ ಸಂವಿಧಾನದಲ್ಲಿ ಉಲ್ಲೇಖಗೊಳ್ಳುವುದಕ್ಕಿಂತ ಸಹಸ್ರ ವರ್ಷಗಳ ಮುಂಚಿನಿಂದಲೂ ಪ್ರತಿಯೊಬ್ಬರಿಗೂ ಅವರವರ ನಂಬಿಕೆ, ಇಷ್ಠಕ್ಕೆ ಸಂಬಂಧಿಸಿದಂತೆ ಕರ್ಮ, ಧರ್ಮ, ಶ್ರದ್ಧೆಗಳಿಗೆ ಅನುಗುಣವಾಗಿ ಸಾಗುತ್ತಿರುತ್ತದೆ. ಹೀಗಾಗಿ ಕಾಲ ಕಾಲಕ್ಕೆ ಕೆಲವು ಅವಾಂತರಗಳು ಆಗುತ್ತಿದರೂ ಅದಕ್ಕೆ ಕಾರಣಕರ್ತರಾದವರು ಅರಿಯದೇ ಇದು ಸಾಮಾಜಿಕ ಕ್ರಾಂತಿ ಮತ್ತು ಸಾಮಾಜಿಕ ಬದಲಾವಣೆ ಎಂದು ನಂಬಿರುತ್ತಾರೆ. ಈ ನಿಟ್ಟಿನಲ್ಲಿ ಸಹಜವಾಗಿಯೇ ಅಂಥ ವಿಚಾರಗಳಿಗೆ ಹೆಚ್ಚಿನ ಆಧ್ಯತೆ, ಪ್ರಚಾರ ಸಿಗುತ್ತಿರುತ್ತದೆ.
ಜಾತಿ, ಧರ್ಮದ ವಿರೋಧ ಮತ್ತು ಪರ ಹೋರಾಟ ಮಾಡುತ್ತಿರುವವರು ಭಾರತೀಯ ಆಗಮಶಾಸ್ತ್ರ, ದೇವಾಲಯ ಇತಿಹಾಸಗಳ ಬಗ್ಗೆ ಯಾವತ್ತಾದರೂ ಅಧ್ಯಯನ ಮಾಡಿರುವರೇ ಎಂಬ ಪ್ರಶ್ನೆ ಕಾಡುತ್ತಿದೆ ? ಒಂದು ದೇವಸ್ಥಾನ, ಮನೆ ಅಥವಾ ಸಂಸ್ಥೆಯೇ ಇರಲಿ ಪ್ರತಿಯೊಂದು ಜಾಗಕ್ಕೂ ಅದರದೇ ಆದ ಸ್ಥಳದ ಮಹತ್ವ ನಿಯಮ ಎಂಬುದಿರುತ್ತದೆ. ಆ ನಿರ್ದಿಷ್ಟ ಸ್ಥಳದಲ್ಲಿನ ನಿರ್ದಿಷ್ಟ ನಿಯಮ ಅನುಸರಿಸುವುದರಿಂದ ಸಾಮಾಜಿಕವಾಗಿ, ಸಾರ್ವತ್ರಿಕವಾಗಿ ಯಾರಿಗೂ ಅವಮಾನ, ಅಪಚಾರ ಮಾಡಬಾರದು ಹೀಗಿರುವಾಗ ಅದಕ್ಕೆ ವಿರೋಧ ಮತ್ತು ಪರ ಎಂಬ ವಾದವನ್ನು ಸ್ವೀಕರಿಸಬೇಕು, ಬೇಡ ಎಂದು ಹೇಳುವ ನಮ್ಮದಾಗ ಬಾರದು.
ನಮ್ಮ ದೇಗುಲಗಳಿಗೆ ಗತಕಾಲದ ಪರಂಪರೆಯಲ್ಲಿ ದೈವ ಶಕ್ತಿಯನ್ನು ಗುರುತಿಸಲಾಗಿದೆ. ಒಂದು ಉದ್ಭವ ದೇವರಾದರೆ, ಇನ್ನೊಂದು ಪ್ರತಿಷ್ಠಾಪನೆ ಮೂಲಕ ದೈವಿಶಕ್ತಿಯನ್ನು ಪೂಜಿಸುವ ರೀತಿ ನಮ್ಮದು. ಈ ಎರಡೂ ವಿಧಾನದಲ್ಲಿ ಮಡಿ, ಮೈಲಿಗೆ, ಶಾಸ್ತ್ರ, ಆಚರಣೆಗಳು ಪರಂಪರಾಗತದಿಂದ ಬಂದಿರುವ ಬಳುವಳಿ. ಇದು ಸಾರ್ವತ್ರಿಕ ಶಿಸ್ತಿನ ವಿಧಾನವೇ ಹೊರತು ವ್ಯಕ್ತಿಗತವಾಗಿ ಯಾರಿಗೂ ಹಾನಿಕಾರಕವಾಗಿರುವುದಿಲ್ಲ. ವರ್ಷಾನುಗಟ್ಟಲೆ ಕಾಲ ಕಾದು ದೇವಸ್ಥಾನ ಕಟ್ಟಿಸುತ್ತಿದ್ದ ರಾಜ ಮಹಾರಾಜರು ನಾನು ಕಟ್ಟಿಸಿದ ದೇವಸ್ಥಾನದಲ್ಲಿ ನಾನೇ ಪೂಜಿಸಬೇಕು, ನಾನು ಮತ್ತು ನನ್ನ ಕುಂಟುಂಬ ಮಾತ್ರ ಗರ್ಭಗುಡಿ ಪ್ರವೇಶಿಸ ಬೇಕು ಇದನ್ನ ಯಾರೂ ತಡೆಯುವಂತಿಲ್ಲ ಎಂದು ರಾಜಾಜ್ಞೆ ಹೊರಡಿಸಿದರೆ ಜನರ ಹಕ್ಕಿನ ಮೇಲೆ ಪ್ರಹಾರ ಮಾಡಿದಂತೆ ಆಗಿದ್ದರೆ ನಮ್ಮ ದೇಗುಲಗಳ ಪಾವಿತ್ರ್ಯ ಎಲ್ಲಿ ಉಳಿಯುತ್ತಿತ್ತು.
ಭಾರತಿಯರಾದ ನಾವು ಅನೇಕ ವಿಚಾರಣೆಗಳನ್ನು, ಧಾರ್ಮಿಕವಾದ ನಂಬಿಕೆಗಳನ್ನು ವಿರೋಧಿಸುವ ಮನೋಭಾವ ಇಟ್ಟುಕೊಂಡಿಲ್ಲ. ಆದರೆ ಬದಲಾಗುತ್ತಿರುವ ಬದಲಾವಣೆಗೆ ನಾವೂ ಬಾಗಿದೇವೆ ಎಂಬುದು ಸತ್ಯ. ಪ್ರಸ್ತುತ ದಿನಗಳಲ್ಲಿ ಉಂಟಾಗುತ್ತಿರುವ ಹಿಂಸೆ, ಯುದ್ಧಗಳು ನಡೆದಿರುವುದರ ಹಿಂದಿನ ಪ್ರೇರಣೆಯಿಂದಲ್ಲ ಬದಲಾಗಿ ಭೂಮಿಯ ಮೇಲೆ ನಮ್ಮನ್ನು ನಾವು ಅತಿಕ್ರಮಿಸುವುದರಿಂದ ಆಗಿರುವ ಅನಾಹುತಗಳೇ ಮಣ್ಣು, ಹೆಣ್ಣು, ಹೊನ್ನು ಸೇರಿದಂತೆ ಆಕ್ರಮಿಸುವ ಪ್ರವೃತ್ತಿಯಿಂದಲೇ ಎಂಬುದು ಸತ್ಯ. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಾವು ವ್ಯಾಮೋಹಗಳನ್ನು ಹದ್ದು ಬಸ್ತಿನಲ್ಲಿಡುವ ಬೇಕು.
ಅಂತಿಮವಾಗಿ, ವೈವಿಧ್ಯಮಯ ರಾಷ್ಟ್ರವಾಗಿ, ಭಾರತೀಯರು ಐತಿಹಾಸಿಕವಾಗಿ ವಿಭಿನ್ನ ದೃಷ್ಟಿ ಕೋನಗಳ ಸಹಿಷ್ಣುತೆಯನ್ನು ಹೊಂದಿದೆ ಆದಾಗ್ಯೂ, ನಾವು ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿದ್ದೇವೆ, ಅದು ತನ್ನದೇ ಆದ ಸವಾಲುಗಳೊಂದಿಗೆ ಬೆಳೆಯುತ್ತಿದೆ. ಇಂದು ನಾವು ಎದುರಿಸುತ್ತಿರುವ ಸಂಘರ್ಷಗಳು ಸಂಪನ್ಮೂಲಗಳ ಕೊರತೆಯಿಂದಲ್ಲ, ಬದಲಾಗಿ ಮಾನವ ಅತಿಕ್ರಮಣ ಮತ್ತು ಆಕ್ರಮಣಶೀಲತೆಯ ಪ್ರವೃತ್ತಿಯಿಂದ ಉಂಟಾಗಿದೆ. ಭೂಮಿ, ಅಧಿಕಾರ ಮತ್ತು ಸಂಪತ್ತಿನ ಮೇಲಿನ ಅತೃಪ್ತ ಬಯಕೆಯು ನಮ್ಮ ಅನೇಕ ಆಧುನಿಕ ಸಮಸ್ಯೆಗಳ ನಮ್ಮ ಹೃದಯ ಭಾಗದಲ್ಲಿದೆ. ಸಾಮರಸ್ಯದ ಸಮಾಜವನ್ನು ನಿರ್ಮಿಸಲು, ನಾವು ಈ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗೀಳುಗಳನ್ನು ನಿಯಂತ್ರಿಸಬೇಕು ಎಂಬ ಅರಿವು ನಮ್ಮಗೆ ಬೇಕಷ್ಟೆ ?!
ಪಟೇಲ್.ಎಸ್.