ಶತಮಾನದ ಕವಿತೆ
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದಚಂದದ ಹೊನ್ನಿನಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತಜನನಿಯತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದಘೋ?,
ಜನನಿಗೆಜೀವವು ನಿನ್ನಾವೇಶ!
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ!
ಕಪಿಲ ಪತಂಜಲ ಗೌತಮಜಿನನುತ,
ಭಾರತಜನನಿಯತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಶಂಕರರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ.
ರನ್ನ?ಡಕ್ಷರಿ ಪೊನ್ನ,
ಪಂಪ ಲಕುಮಿಪತಿಜನ್ನ.
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ.
ನಾನಕ ರಮಾನಂದಕಬೀರರ
ಭಾರತಜನನಿಯತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ.
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಸರ್ವಜನಾಂಗದ ಶಾಂತಿಯತೋಟ,
ರಸಿಕರ ಕಂಗಳ ಸೆಳೆಯುವ ನೋಟ!
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ.
ಕನ್ನಡ ನುಡಿಕುಣಿದಾಡುವ ಗೇಹ!
ಕನ್ನಡತಾಯಿಯ ಮಕ್ಕಳ ದೇಹ!
ಜಯ ಭಾರತಜನನಿಯತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಕರ್ನಾಟಕದ ನಾಡ ಗೀತೆಯು ಹಲವು ಆಯಾಮದ ಪ್ರಶ್ನೆಗಳನ್ನು ಈ ಶತಮಾನದ ಹೊಸ್ತಿಲಲ್ಲಿ ನಮ್ಮ ಮುಂದಿಡುತ್ತಿದೆ. ನಾಡಗೀತೆ ಎಂದರೆ ನಾಡಿನ ಹಿರಿಮೆಯನ್ನು ಸಾರುವ ಸಂಕೇತಗೀತೆ. ಈ ನಾಡ ಗೀತೆಯು ರಚನೆಯಾಗುವಾಗ ನಾಡಿನ ಯಾವ ಆಯಾಮವೂ ಇರಲಿಲ್ಲ. ಕರ್ನಾಟಕವು ಇಪ್ಪತ್ತು ಪ್ರಾಂತ್ಯಗಳಲ್ಲಿ ವಿಭಾಗೀಯವಾಗಿತ್ತು. ಇಲ್ಲಿ ನಾಡಿನ ಪರಿಕಲ್ಪನೆ ಹೇಗೆ ಬರಲು ಸಾಧ್ಯ. ಆದರೆ, ಭಾರತೀಯ ಮಣ್ಣಿನಲ್ಲಿ ನೂರಾರು ಶ್ರೇಷ್ಠ ಚಿಂತನೆಗಳು ಭವಿಷ್ಯ ದರ್ಶನದಂತೆ ರಚನೆಯಾಗಿವೆ. ಕಾಳಿದಾಸನು ಭಾರತದ ನಕಾಶೆಯನ್ನೇ ಕಾವ್ಯದಲ್ಲಿ ಮೂಡಿಸಿದ್ದು ಇಂದಿಗೂ ಸಂಶೋಧನೆಗೊಳ್ಳುತ್ತಿರುವ ವಿಚಾರ. ಅರಬಿಂದೋಅವರ ಭವಿಷ್ಯದರ್ಶನವು ಅದೆಷ್ಟೋ ಸೂಕ್ಷ್ಮ ಸಂವೇದನೆಗಳಿಗೆ ಸಾಕ್ಷಿಯಾಗಿದೆ.
ಇಂತಹ ಸಂದರ್ಭದಲ್ಲಿ ಇಪ್ಪನಾಲ್ಕು ವರ್ಷದ ಸಾಹಿತ್ಯ ಸಂವೇದನೆಗಳ ಆ ಯುವಕ ಕುವೆಂಪು ಅವರಲ್ಲಿ ಈ ಸಮಗ್ರೀಯ ದೃಷ್ಟಿಕೋನ ಬಂದಿರುವುದು ಅಧ್ಯಯನದ ಶಕ್ತಿಯ ಫಲ. ಈ ಅಖಂಡ ಕರ್ನಾಟಕದ ಪರಿಕಲ್ಪನೆ ಇರದಿದ್ದರೂ ಕನ್ನಡ ನಾಡಿನ ಪರಿಕಲ್ಪನೆ ಅಂದಿನ ಹಲವರು ಮೂಡಿರುವುದು ಕಾಣಿಸುತ್ತದೆ. ಉಯಿಲಗೋಳ ನಾರಾಯಣರಾಯರು ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು? ಆ ವೇಳೆಗೆ ಬೆಳಕು ತುಂಬಿತ್ತು. ಕಾಂಗ್ರೇಸ್ ಅಧಿವೇಶನದಲ್ಲಿ ಬಾಲಕಿ ಗಂಗೂಬಾಯಿ ಹಾನಗಲ್ ಅವರ ಸ್ವರದಲ್ಲಿ ಮೂಡಿ ಕನ್ನಡ ನಾಡಿನ ಕಲ್ಪನೆ ಮೂಡಿತ್ತು. ಇದೆಲ್ಲವೂ ಇತಿಹಾಸ ಎನಿಸಿದರೂ ಶತಮಾನ ತುಂಬಿರುವ ಈ ಎರಡು ನಾಡ ಗೀತೆಗಳು ಕನ್ನಡ ನಾಡಿನ ಬೆಳಕನ್ನು ಕುರಿತು ಆಲೋಚಿಸಿದ್ದವು. ಅಂದಿನ ಕರ್ನಾಟಕದ ಹಿರಿಮೆಯನ್ನು ದಾಖಲಿಸಿದ್ದವು. ಆದರೆ, ಇದೇ ನಾಡಗೀತೆ ಈಗ ಹಿರಿಮೆಯ ವಿಚಾರದಲ್ಲಿ ವಿಶ್ವಸಮನ್ವಯದ ತೊಟ್ಟಿಲಾಗಿದೆ.
ಇಂದು ನಾಡ ಗೀತೆಯನ್ನು ಕೇಳುವ ಮನಸ್ಸುಇತಿಹಾಸದ ಒಂದು ಹಾಡನ್ನು ಕೇಳುವಂತೆ ಆನಂದಿಸುತ್ತದೆ. ಭಕ್ತಿ ಮೂಡುತ್ತದೆ, ಸ್ವಾಭಿಮಾನ ಮೂಡುತ್ತದೆ. ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ ಅವರ ಸಂಗೀತವಂತೂ ಇಂದಿಗೂ ನರನಾಡಿಗಳ ವೈಭವದ ಕುರುಹಾಗಿದೆ.ಆದರೆ, ಒಂದು ಕಾಲದ ಇತಿಹಾಸವನ್ನು ದಾಖಲಿಸಿದ ಕವಿತೆಗಳಂತೆಯೇ ಇಂದು ಕೆಲವು ಪ್ರಶ್ನೆಗಳು ನಮಗೆ ಮೂಡುತ್ತವೆ.
ರಾಷ್ಟ್ರ ಮತ್ತು ನಾಡಿನಐಕ್ಯತೆ
ನಮ್ಮ ನಾಡಗೀತೆಯನ್ನುಓದಿದರೆ ಸಾಕು, ಮೊದಲು ದೇಶ ನಂತರ ನಮ್ಮ ನಾಡಿನ ಅನಂತತೆಯ ಸಮ್ಮಿಲನ ಕಾಣುತ್ತದೆ. ದೇಶವನ್ನು ನಮ್ಮ ಕವಚ ವನ್ನಾಗಿಯೇ ಕುವೆಂಪು ಗಮನಿಸಿದ್ದರು. ಆದರೆ, ರಾಜಕೀಯವಾಗಿ ದೇಶ ಮತ್ತು ನಾಡಿನ ನಡುವೆ ಹಲವು ಅಂತರಗಳನ್ನು ಸೃಷ್ಟಿಸುತ್ತಿರುವುದನ್ನು ನಾವು ಗಮನಿಸ ಬೇಕಿದೆ. ನಮ್ಮ ತಲೆಮಾರುಗಳು ಸೃಷ್ಟಿಸಿದ ವಿಶ್ವದೊಳಗಣ ನುಡಿಯನ್ನುಅರಿಯಬೇಕಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ರಚನೆಯಾದಾಗ ಅದು ದೇಶ ಪ್ರೇಮವನ್ನು ಗಮನಿಸಿರಲಿಲ್ಲ. ನಾಡಿಗೆ ಮಾತ್ರ ಸೀಮಿತವಾಗಿ, ನಾಡಿನ ವಿಚಾರದಲ್ಲಿಯೂ ಅಖಂಡ ಚಿಂತನೆಗಳು ಕಂಡುಬರಲಿಲ್ಲ. ಈ ಕಾರಣದಿಂದಯುವಕ ಕುವೆಂಪು ಅವರಲ್ಲಿ ಸಮಗ್ರೀಯ ದೃಷ್ಟಿಕೋನ ಮೂಡಿತು. ಅದು ಅನಂತತೆಯ ಹಾದಿಗೆ ಸಾಕ್ಷಿಯಾಯಿತು.
ಪ್ರಕೃತಿ ಮತ್ತು ಆದರ್ಶ
೧೯ನೇ ಶತಮಾನವು ಪ್ರಕೃತಿ ಮತ್ತು ಆದರ್ಶವನ್ನು ಬದುಕಿನ ಭಾಗವಾಗಿ ಸ್ವೀಕರಿಸಿದ್ದರು. ಗಂಧದ ನಾಡಾಗಿಯೂ, ಚಂದದ ಬೀಡಾಗಿಯೂ ಶೋಭಿಸಲು ಕಾರಣವಾಗಿತ್ತು. ರಾಘವ ಮಧುಸೂದನರು ಕೂಡ ಹೋರಾಟ, ಸ್ವಾಭಿಮಾನ, ನಾಡು-ನುಡಿ ಮೊದಲಾದ ಆಯಾಮಗಳಿಗೆ ಮುಖ್ಯವಾಗಿದ್ದರು. ನೂರು ವರ್ಷಗಳೊಳಗೆ ಇವರೆಲ್ಲ ಧರ್ಮದ ಬಲೆಯಲ್ಲಿ ಸಿಲುಕುವ ನಮ್ಮ ವಿಶ್ವಮಾನ್ಯ ಶಿಕ್ಷಣದ ನೈತಿಕತೆಯು ಹಲವು ಆಶ್ಚರ್ಯಗಳನ್ನು ತೆರೆದಿಡುತ್ತದೆ. ಏನೇ ಆದರೂ, ನಮಗೆ ಪುರಾಣ ಕಥೆಗಳಲ್ಲಿ ಮೂಡುವಇವರೆಲ್ಲ ಮುಖ್ಯವೇ ಆಗುತ್ತಾರೆ. ಸೀತಾ, ಪಾರ್ವತಿ, ಶಿವ ಮೊದಲಾದಂತೆ ಪುರಾಣ ಪಾತ್ರಗಳು ದೈವಬಿಂಬವನ್ನೂ ಮೀರಿ ನಮ್ಮೊಳಗೆ ಪ್ರಧಾನವಾಗಬೇಕು. ಭಾರತದೇಶದ ಅತ್ಯುನ್ನತ ಚರಿತ್ರೆಯಾಗಿ ನಮ್ಮ ಪುರಾಣ ಕಥೆಗಳು ನೀಡುವ ಆದರ್ಶವು ಕನ್ನಡ ಮಣ್ಣಿಗೂ ಸೋಂಕಿದೆ. ಅದು ನಮಗೆಲ್ಲಾ ನೈತಿಕ ಸ್ಥೈರ್ಯಕ್ಕೆದಾರಿಯಾಗಬೇಕಿದೆ.
ಸಮಾಜ ಸುಧಾರಣೆ ಮತ್ತು ಸಾಹಿತ್ಯ ರಚನೆ
ಕುವೆಂಪು ನಾಡಗೀತೆಯನ್ನು ರಚಿಸುವ ಉದ್ದೇಶದಲ್ಲಿ ಸ್ಥಾನ, ಶ್ರೇಷ್ಠ ಮೊದಲಾದ ಆಯಾಮಗಳು ಇರಲಿಲ್ಲ. ಈ ಕಾರಣದಿಂದಲೇ ನಾಡಗೀತೆ ಹಲವು ಚರ್ಚೆಗಳಿಗೆ ಕಾರಣವಾಯಿತು. ಹೌದು ನಾಡಗೀತೆಯಲ್ಲಿ ಹಲವು ಹೆಸರುಗಳು ಉಲ್ಲೇಖವಾಗಿಲ್ಲ. ಅವರ ಪರಂಪರೆಯು ಮಾತ್ರ ಮರೆಯಾಗಿಲ್ಲ. ಸಮಾನ ಪರಂಪರೆಗಳನ್ನು ಸಡಿಲಿಸಿ ಇಲ್ಲಿ ಕೆಲವರನ್ನು ದಾಖಲಿಸುತ್ತಾರೆ. ತತ್ತ್ವಜ್ಞಾನಿಗಳು, ಸಿದ್ಧಾಂತ ಸ್ವರೂಪ ಶ್ರೇಷ್ಟರು ಅದೇ ಸಾಲಿನಲ್ಲಿ ನಮ್ಮ ಕನ್ನಡ ಕವಿಗಳು ಉಲ್ಲೇಖಿತರಾಗುತ್ತಾರೆ. ನಾವು ಈ ನಾಡ ಗೀತೆಯನ್ನುಅಧ್ಯಯನಕ್ಕೆ ನೀಡುವಾಗ ವಿಸ್ತೃತ ಸ್ವರೂಪವನ್ನು ಕಾಣಿಸಲು ಇಲ್ಲಿಅವಕಾಶವಿದೆ. ಕಪಿಲ, ಪತಂಜಲಿ, ಗೌತಮ, ಜಿನ ಮೊದಲಾದಂತೆ ಭಾರತೀಯ ಋಷಿ ಮುನಿಗಳು ಸಂಸ್ಕೃತದ ಮೂಲಕ ಮಣ್ಣಿನ ಗುಣವನ್ನು ದಾಖಲಿಸಿದ್ದರು. ಈ ವಿಚಾರವನ್ನು ಎಂ. ಚಿದಾನಂದ ಮೂರ್ತಿಯವರು ಅತ್ಯಂತ ವಿಸ್ತಾರವಾಗಿ ಚರ್ಚಿಸಿದ್ದಾರೆ. ಆದರೆ, ಇವರ ಜೊತೆಯಲ್ಲಿಯೇ ಚರ್ಚಿಸಬಹುದಾದ ಇನ್ನೂ ಹಲವು ಋಷಿಗಳ ಪುರಾಣ ಚರಿತ್ರೆಯನ್ನುಉಲ್ಲೇಖಿಸ ಬಹುದು. ವಸಿಷ್ಠ, ಮರೀಚಿ, ಪುಲಸ್ತ್ಯ, ಪುಲಹ, ಅತ್ರಿ, ಅಂಗೀರಸ, ಕೃತು, ಮಾರ್ಕಂಡೇಯ, ಗರ್ಗ್, ಸುಶ್ರುತ, ಚರಕ ಹೀಗೆ ಹಲವು ಹೆಸರುಗಳನ್ನು ಭಾರತೀಯ ಹಿನ್ನಲೆಯಲ್ಲಿ ಗುರ್ತಿಸಬಹುದು. ಇವೆಲ್ಲವೂ ನಾಡಗೀತೆಯ ವಿಸ್ತೃತ ಅಧ್ಯಯನದಲ್ಲಿ ತಿಳಿಸಿದಾಗ ದೇಶದ ಘನತೆಯ ಅರಿವಾಗುತ್ತದೆ. ಮೇಲ್ಕಂಡವರಲ್ಲಿ ಕರ್ನಾಟಕದಲ್ಲಿಯೂ ಬದುಕಿದವರು ಕಂಡು ಬರುತ್ತಾರೆ. ಸಂಗೀತದಲ್ಲಿ ಏಳನೇ ಚಕ್ರವನ್ನು ಋಷಿ ಚಕ್ರಎನ್ನುವರು. ಇದು ನಾಡು ಮತ್ತು ದೇಶವನ್ನು ಬೆಸೆಯುವ ವಿಚಾರ.
ಕವಿಗಳ ವಿಚಾರದಲ್ಲಿಯೂ ಕುವೆಂಪು ಅಂತಹ ರಾಜಕಾರಣವನ್ನೇನು ನಿರೂಪಿಸಿದೆ, ಕೆಲವರನ್ನು ಪರಂಪರೆಯ ಧಾತೃಗಳಾಗಿ ಉಲ್ಲೇಖಿಸಿದ್ದಾರೆ. ಜನ್ನ, ನಾಗವರ್ಮ, ನಾಗಚಂದ್ರಇವರೆಲ್ಲಾ ಪಂಪರ ಸಾಲಿನಲ್ಲಿಯೇ ಕಾನಿಸಬಹುದು. ಬಸವಣ್ಣನವರು ಇಡೀ ವಚನ ಸಾಹಿತ್ಯದ ಪ್ರತಿನಿಧಿಯಾಗಿ ಇಲ್ಲಿ ಕಾಣಿಸುತ್ತಾರೆ. ನೂರಾರು ವಚನಕಾರರ ಉಲ್ಲೇಖಗಳನ್ನು ಇಲ್ಲಿತರಲು ಸಾಧ್ಯವಿದೆ. ಅಲ್ಲಮ, ಅಕ್ಕ, ದಾಸಿಮಯ್ಯ ಹೀಗೆ ಚರಿತ್ರೆತೆರೆಯಲು ಬಸವಣ್ಣ ಕೀಲಿಕೈ ಅಷ್ಟೇ.ಕುಮಾರ ವ್ಯಾಸನು ದಾಸಸಾಹಿತ್ಯ, ತತ್ವಪದಕಾರರು, ಸರ್ವಜ್ಞ ಮೊದಲಾದಂತೆ ಜನನುಡಿಯ ಹಿರಿಮೆಗೆ ಸಾಕ್ಷಿ ಕನ್ನಡಿಯಾಗಿರುವುದನ್ನು ಗ್ರಹಿಸಬಹುದು.ಮೊದಲ ಮತ್ತು ಕೊನೆಯ ಸಾಲುಗಳಲ್ಲಿ ಭಾರತೀಯ ಚಿಂತನೆಗಳೊಂದಿಗೆ ನಡುವೆಕನ್ನಡದ ನಾಡ ಹಿರಿಮೆಯನ್ನು ಬಂಧನಗೊಳಿಸಿರುವ ಭಾವಕ್ಯತೆಯು ನಾಡಗೀತೆಯ ಹಿರಿಮೆ.
ಆಡಳಿತ, ಕಲೆ ,ಆಧ್ಯಾತ್ಮಗಳ ನಡುವೆ ನದಿ ವನಗಳು
ತೈಲಪ, ಹೊಯ್ಸಳರನ್ನು ನಮೂದಿಸಿದ್ದರೂ ಕದಂಬರು, ಗಂಗರು, ಚಾಳುಕ್ಯರು, ವಿಜಯನಗರ ವೈಭವ, ಮೈಸೂರು ಮೊದಲಾದ ರಾಜವಂಶಗಳ ಚರಿತ್ರೆಯನ್ನು ಮರೆಯುವಂತಿಲ್ಲ. ಮೊಘಲ್ ಆಳ್ವಿಕೆಯಾಗಲಿ, ಟಿಪ್ಪು ಆಳ್ವಿಕೆಯಾಗಲಿ ನಡೆಸಿದ ಅಭಿವೃದ್ಧಿ ಕ್ರಾಂತಿಗಳನ್ನು ಈ ನೆಪದಲ್ಲಿ ವಿಸ್ತರಿಸಲೇ ಬೇಕು. ?ಕಾರ್ಯಕಾರಣ ಸಂಬಂಧ?ದಂತೆ ನಮ್ಮ ರಾಜವಂಶಗಳ ನೈತಿಕ, ಸಮಾಜಿಕ ಬದ್ಧತೆಯನ್ನು ನಾಡಗೀತೆಯ ನೆಪದಲ್ಲಿ ವಿಸ್ತರಿಸಬಹುದು. ಹೇಳುವುದಕ್ಕಿಂತ ಮಾಡುವುದು ಲೇಸು. ರಾಜರುತಮ್ಮ ಸಾಧನೆಯಲ್ಲಿ ಶ್ರೀಸಾಮಾನ್ಯವಾದ ಒಂದೊಂದು ಸಾಲನ್ನು ಮಾತ್ರ ಶಾಸನವನ್ನಾಗಿಸಿದರು. ಯಾವುದನ್ನು ಜನಗಳ ಮುಂದೆಒಪ್ಪಿಸಲಿಲ್ಲ. ಇಂತಹ ಆಡಳಿತವು ಇಂದಿನ ರಾಜಕಾರಣಕ್ಕೆ ತುರ್ತಾಗಿ ಬೇಕಿದೆ. ಡಂಕಣ, ಜಕಣ ಇವರ ಶಿಲ್ಪ ಕಲಾ ಕೊಡುಗೆಯು ಅಮರವಾದುದು. ಬೇಲೂರು, ಹಳೇಬೀಡುಗಳ ವೈಭವವು ಇಂದಿಗೂ ಮಾದರಿಯಾಗಿ ಕಣ್ಣಮುಂದಿದೆ. ಈ ಮಾದರಿಯನ್ನು ನೆಪವಾಗಿಸಿಕೊಂಡು ನಾಡು ಮತ್ತು ದೇಶಗಳ ಕಲಾ ವೈಭವವನ್ನು ವಿವರಿಸಬಹುದು. ನಮ್ಮ ಭಾರತೀಯ ನೋಟಗಳಲ್ಲಿ ಐದು ನೋಟಗಳು ಕರ್ನಾಟಕದ ಶಿಲ್ಪಿಗಳ ಕೊಡುಗೆಯನ್ನು ವಿಜೃಂಭಿಸುವ ಸಾಧನೆಯು ನಮಗೆ ಇಂದಿಗೂ ಹಿರಿಮೆ ಎನಿಸುತ್ತದೆ. ಚೈತನ್ಯರು, ಪರಮಹಂಸರು ಶಿಷ್ಯ ವಿವೇಕಾನಂದರು ಈ ಭಾರತೀಯ ಪ್ರತಿ ಮನಮನವನ್ನೂ ಪ್ರತಿನಿಧಿಸುವ ಆಧ್ಯಾತ್ಮಚಿಂತಕರು. ಇವರ ಸಾಧನೆಯ ಜೊತೆಗೆ ಅರವಿಂದರವರೆಗೂ ವಿಸ್ತರಿಸಬಹುದಾದ ಹಲವು ಚಿಂತನೆಗಳಿವೆ.
ವಿಶ್ವಮಾನವ ಸಂದೇಶ ಮತ್ತು ಕನ್ನಡ ಮನ
ನಾಡ ಗೀತೆಯು ಪರಿಪೂರ್ಣವಾಗಿ ವಿಶ್ವಮಾನವ ಸಂದೇಶದ ಹಿನ್ನಲೆಯಲ್ಲಿ ರಚನೆಯಾಗಿದೆ. ಕುವೆಂಪು ಈ ವಿಚಾರವನ್ನು ?ಸರ್ವಜನಾಂಗದ ತೋಟ? ಎಂದಿದ್ದಾರೆ. ಇಲ್ಲಿ ಸಾಮರಸ್ಯವೇ ಪ್ರಧಾನವಾಗಿದೆ. ಕನ್ನಡಿಗರು ಸದಾ ರಸಿಕರು. ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸುವ, ಒಳಿತನ್ನೇ ಆಲೋಚಿಸುವ ಆರೋಗ್ಯ ಮನಸ್ಸು ಉಳ್ಳವರು. ಇಲ್ಲಿಎಲ್ಲಾ ಧರ್ಮಗಳು ಉದ್ಯಾನದಂತೆ ಕಂಗೊಳಿಸುತ್ತವೆ. ಆದರೆ, ಇದೇ ಧರ್ಮಗಳ ನಡುವೆ ವೈಷಮ್ಯ ಬೆಳೆದರೆ, ಜನಕನಿಗೆ ಹೋಲಿಸಬಹುದಾದ ದೊರೆಗಳು ಅತ್ಯಂತಕೆಡುಕಿನ ಆಡಳಿತ ಮಾಡಿದರೆ, ಕನ್ನಡ ಭಾಷೆಯ ಈ ಮನೆಯು, ಇಲ್ಲಿನ ಮಕ್ಕಳ ದೇಹವು ಹೇಗೆ ಆನಂದಿಸಲು ಸಾಧ್ಯ. ವಿಶ್ವಮಾನವ ಸಂದೇಶವು ಪ್ರತಿಯೊಬ್ಬರೂ ಓದಿ, ಅಳವಡಿಸಿಕೊಳ್ಳಬೇಕಾದ ಧರ್ಮ ಸಾರ. ಆಗ ಮಾತ್ರ ನಾಡ ಗೀತೆಗೆ ಅರ್ಥಬರುತ್ತದೆ.
ಈ ಹಿನ್ನಲೆಯಲ್ಲಿ ನಾಡ ಗೀತೆಯನ್ನು ವರ್ತಮಾನದೊಂದಿಗೆ ವಿಸ್ತರಿಸಬಹುದು.