ಸಾಧನೆಗೆ ವಯಸ್ಸಿನ ಹಂಗಿಲ್ಲ !
ಬದುಕು ಎನ್ನುವುದು ನಿರಂತರ ಕಲಿಕೆ ಮತ್ತು ಹೋರಾಟದ ಹಾದಿ. ಸಾಮಾನ್ಯವಾಗಿ ವಯಸ್ಸಾಯಿತು, ಇನ್ನೇನು ಮಾಡಲು ಸಾಧ್ಯ ಎನ್ನುವ ನಕಾರಾತ್ಮಕ ಚಿಂತನೆಗಳು ಅನೇಕರಲ್ಲಿ ಮನೆಮಾಡಿರುತ್ತವೆ ಆದರೆ ಕಠಿಣ ಪರಿಶ್ರಮ ಎನ್ನುವುದು ಕೇವಲ ಯೌವನದ ಲಕ್ಷಣವಲ್ಲ ಅದೊಂದು ಬದ್ಧತೆಯ ಸಂಕೇತ.

ಬದುಕಿನ ಸಾಧನೆಯ ಹಾದಿಯಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಹೊರತು ಅದೊಂದು ಅಡೆತಡೆಯಲ್ಲ ಎಂಬುದನ್ನು ಇತಿಹಾಸ ಮತ್ತು ವರ್ತಮಾನದ ಸಾಧಕರು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಕಠಿಣ ಪರಿಶ್ರಮ ಎನ್ನುವುದು ಕೇವಲ ಯೌವನದ ಲಕ್ಷಣವಲ್ಲ, ಅದೊಂದು ಮಾನಸಿಕ ಸ್ಥಿತಿ ಮತ್ತು ಬದ್ಧತೆಯ ಸಂಕೇತ. ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತು ಕೇವಲ ಪುಸ್ತಕಗಳಲ್ಲಿ ಮಾತ್ರವಲ್ಲ, ಜೀವನದ ವಾಸ್ತವದಲ್ಲೂ ಅನೇಕರು ಸಾಬೀತುಪಡಿಸಿದ್ದಾರೆ.
ಅನುಭವವೇ ಬಂಡವಾಳ ವಯಸ್ಸಾದ ನಂತರ ಕೈಗೊಳ್ಳುವ ಕಠಿಣ ಪರಿಶ್ರಮಕ್ಕೆ ಅಡಿಪಾಯವಾಗಿರುವುದು ಅನುಭವ. ಯುವಕರ ಆವೇಶದ ಜೊತೆಗೆ, ಹಿರಿಯರ ವಿವೇಕ, ತಾಳ್ಮೆ ಸೇರಿದಾಗ ಅಲ್ಲಿನ ಫಲಿತಾಂಶ ಅದ್ಭುತವಾಗಿರುತ್ತದೆ. ತಪ್ಪುಗಳನ್ನು ಕಡಿಮೆ ಮಾಡಿ, ಸರಿಯಾದ ದಿಕ್ಕಿನಲ್ಲಿ ಶ್ರಮಿಸುವ ಶಕ್ತಿ ವಯಸ್ಸಾದವರಲ್ಲಿ ಹೆಚ್ಚಾಗಿರುತ್ತದೆ.
ಬದುಕಿನ ಹೊಸತನದ ಅನ್ವೇಷಣೆ ಇಂದಿನ ಡಿಜಿಟಲ್ ಜಗತ್ತಿನಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆ. ಅಡುಗೆಯಿಂದ ಹಿಡಿದು ತಂತ್ರಜ್ಞಾನದವರೆಗೆ, ಕಲೆ, ಸಾಹಿತ್ಯದಿಂದ ಹಿಡಿದು ಕೃಷಿಯವರೆಗೆ, ಯಾವುದೇ ಕ್ಷೇತ್ರದಲ್ಲೂ ಹೊಸ ಕೌಶಲ್ಯಗಳನ್ನು ಕಲಿಯಲು ವಯಸ್ಸು ಅಡ್ಡಿಯಲ್ಲ. ಇಚ್ಛಾಶಕ್ತಿ ಇದ್ದರೆ ಎಂತಹ ಕಠಿಣ ಕೆಲಸವನ್ನೂ ಸಾಧಿಸಬಹುದು.
ದೈಹಿಕ ಮಾನಸಿಕ ಆರೋಗ ಕಠಿಣ ಪರಿಶ್ರಮವು ಕೇವಲ ಕೆಲಸಕ್ಕೆ ಮಾತ್ರವಲ್ಲ, ನಮ್ಮನ್ನು ಕ್ರಿಯಾಶೀಲವಾಗಿಡಲು ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಸಹಕಾರಿಯಾಗಿದೆ. ನಿರಂತರವಾಗಿ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮೆದುಳಿನ ಚುರುಕುತನವನ್ನು ಕಾಪಾಡುತ್ತದೆ.
ಜಗತ್ತಿನಾದ್ಯಂತ ಹಲವರು ತಡವಾಗಿ ತಮ್ಮ ಪಯಣ ಆರಂಭಿಸಿ ಯಶಸ್ಸಿನ ಶಿಖರ ಏರಿದ್ದಾರೆ ಅವರಲ್ಲಿ ಕರ್ನಲ್ ಸ್ಯಾಂಡರ್ಸ್: ಕೆಎಫ್ಸಿ (KFC) ಸಂಸ್ಥೆಯನ್ನು ಸ್ಥಾಪಿಸುವಾಗ ಅವರಿಗೆ 60 ಕ್ಕೂ ಹೆಚ್ಚು ವಯಸ್ಸಾಗಿತ್ತು ಅವರೋಟಿಗೆ ಇತರೆ ಸಾಮಾಜಿಕ ಸಾಧಕರು 60-70 ರ ನಂತರವೂ ಸಮಾಜ ಸೇವೆಯಲ್ಲಿ ತೊಡಗಿ, ಶಿಕ್ಷಣ ಅಥವಾ ಪರಿಸರ ಸಂರಕ್ಷಣೆಯಂತಹ ಮಹಾನ್ ಕಾರ್ಯಗಳನ್ನು ಮಾಡುತ್ತಿರುವವರು ನಮ್ಮ ಕಣ್ಣ ಮುಂದೆಯೇ ಅನೇಕರಿದ್ದಾರೆ.
ನಮ್ಮ ಕರ್ನಾಟಕ ನೆಲದಲ್ಲೂ ಇಂತಹ ಅನೇಕ ಅಸಾಧಾರಣ ಸಾಧಕರಿದ್ದಾರೆ. ಅಂತಹವರಲ್ಲಿ ಸಾಲು ಮರದ ತಿಮ್ಮಕ್ಕ ಪರಿಸರ ಸೇವೆಯ ಮೂಲಕ ಜಗತ್ತಿನ ಗಮನ ಸೆಳೆದ ಇವರು, ತಮ್ಮ ಜೀವನದ ಬಹುಕಾಲವನ್ನು ಗಿಡಗಳನ್ನು ಬೆಳೆಸುವುದರಲ್ಲೇ ಕಳೆದರು. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇವರೇ ದೊಡ್ಡ ಸಾಕ್ಷಿ.
ರಾಜ್ಯದಲ್ಲಿ ಮತೊರ್ವ ಸೂಲಗಿತ್ತಿ ನರಸಮ್ಮ ತಮ್ಮ 90 ರ ಹರೆಯದ ತನಕವೂ ಸಾವಿರಾರು ಹೆರಿಗೆಗಳನ್ನು ಮಾಡಿಸಿ, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಇವರಿಗೆ ಪದ್ಮ ಶ್ರೀ ಗೌರವ ದೊರೆಯಿತು. ಅವರ ಸೇವಾ ಮನೋಭಾವಕ್ಕೆ ವಯಸ್ಸು ಕೇವಲ ಸಂಖ್ಯೆಯಾಗಿತ್ತು. ದಶರಥ ಮಾಂಝಿ (ಮೌಂಟೇನ್ ಮ್ಯಾನ್) ಇವರು ಯಾವುದೇ ದೊಡ್ಡ ಹುದ್ದೆಯಲ್ಲಿರಲಿಲ್ಲ, ಆದರೆ ತಮ್ಮ ಛಲದಿಂದ 22 ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟು, ಬರಿ ಕೈಯಿಂದ ಗುಡ್ಡವನ್ನು ಸೀಳಿ ದಾರಿ ಮಾಡಿದರು.
ಇಂತಹ ಸಾಧಕರಿಂದ ನಾವು ಕಲಿಯಬೇಕಾದದ್ದು ಏನು, ನಮ್ಮೊಟಿಗೆ ಬೆಳಸಿಕೊಳ್ಳಬೇಕಾದುದ್ದು ಎಂದರೆ ಸಮಯ ಪಾಲನೆಗಿಂತ ನಿರಂತರತೆ ಮುಖ್ಯವಾಗಿದು, ಯಶಸ್ಸು ಸಿಗುವವರೆಗೆ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆಯೇ ಎಂಬುದು ಮುಖ್ಯ. ಪ್ರತಿ ಅನುಭವವೂ ಕಲಿಕೆಯೇ, ಇವರೆಲ್ಲರೂ ತಮ್ಮ ಹಿಂದಿನ ವೃತ್ತಿಗಳಲ್ಲಿ ಕಲಿತ ಪಾಠಗಳನ್ನು ತಮ್ಮ ಮುಖ್ಯ ಸಾಧನೆಗೆ ಬಳಸಿಕೊಂಡರು. ಬದಲಾಗಿ ಸೋಲಿಗೆ ಹೆದರದಿರುವುದನ್ನು ದೂರ ವಿಟ್ಟು ಇವರೆಲ್ಲರೂ ತಮ್ಮ ಆರಂಭಿಕ ದಿನಗಳಲ್ಲಿ ಅನೇಕ ವಿಫಲತೆಗಳನ್ನು ಕಂಡವರೇ, ಆದರೆ ಅದನ್ನು ಸೋಲು ಎಂದು ಭಾವಿಸದೆ ಮುಂದಿನ ಹೆಜ್ಜೆಗೆ ಮೆಟ್ಟಿಲನ್ನಾಗಿ ಮಾಡಿಕೊಂಡರು.
ಸಾಧನೆಯ ಹಾದಿಯಲ್ಲಿ ನಾವು ಎಲ್ಲಿಂದ ಶುರು ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಹೇಗೆ ಮುಂದುವರಿಯುತ್ತೇವೆ, ಎಷ್ಟು ಬದ್ಧತೆಯಿಂದ ಪರಿಶ್ರಮ ಪಡುತ್ತೇವೆ ಎಂಬುದು ಮುಖ್ಯ. ನಾವು ಎಲ್ಲಿಂದ ಅಥವಾ ಯಾವ ವಯಸ್ಸಿನಲ್ಲಿ ಪಯಣವನ್ನು ಶುರು ಮಾಡುತ್ತೇವೆ ಎಂಬುದು ಮುಖ್ಯವಲ್ಲ. ನಮ್ಮ ಗುರಿಯೆಡೆಗಿನ ಬದ್ಧತೆ ಮತ್ತು ನಾವು ಪಡುವ ಪ್ರಾಮಾಣಿಕ ಪರಿಶ್ರಮ ಮಾತ್ರ ನಮ್ಮನ್ನು ಯಶಸ್ಸಿನ ಶಿಖರಕ್ಕೇರಿಸುತ್ತದೆ.
ಕೊನೆಯದಾಗಿ ನಾನು ಹೇಳಬಯಸುವುದಿಷ್ಟೇ, ಹೊಸತನ್ನು ಕಲಿಯಲು ನೀವು ಎಂದಿಗೂ ಅತೀ ಚಿಕ್ಕವರಲ್ಲ ಅಥವಾ ಅತೀ ದೊಡ್ಡವರಲ್ಲ ನಿಮ್ಮ ಕನಸುಗಳನ್ನು ಬೆನ್ನಟ್ಟಿ ಸಮಯವನ್ನು ಗೌರವಿಸಿ. ಇಂದು ನೀವು ಮಾಡುವ ಸಣ್ಣ ಪ್ರಯತ್ನ ನಾಳೆ ಇತಿಹಾಸವಾಗಬಹುದು. ನಮ್ಮ ಸಮಾಜದಲ್ಲಿ ಒಂದು ಸಾಮಾನ್ಯ ನಂಬಿಕೆ ಇದೆ ಓದುವುದಕ್ಕೆ ಒಂದು ವಯಸ್ಸು, ಕೆಲಸ ಮಾಡಲು ಒಂದು ವಯಸ್ಸು, ಸಾಧಿಸಲು ಒಂದು ವಯಸ್ಸು ಎಂದು ಆದರೆ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಇತಿಹಾಸ ಸೃಷ್ಟಿಸಿದವರು ಈ ವಯಸ್ಸಿನ ಚೌಕಟ್ಟನ್ನು ಎಂದೋ ಮೀರಿ ನಿಂತಿದ್ದಾರೆ.
“ವಯಸ್ಸು ದೇಹಕ್ಕಿರಲಿ, ನಿಮ್ಮ ಉತ್ಸಾಹಕ್ಕಲ್ಲ.” !